ಬೆಂಗಳೂರು, ಜನವರಿ 12: ರಾಮ ಮತ್ತು ಕೃಷ್ಣ ಇಬ್ಬರು ಹಿಂದೂ ಧರ್ಮದ ಪುರಾಣ ಪುರುಷರು. ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಅವರನ್ನು ಹಿಂದೂಗಳು ದೇವರೆಂದು ನಂಬುತ್ತಾರೆ.
ಮಹಾಭಾರತ ಮತ್ತು ರಾಮಾಯಣದ ಕೇಂದ್ರ ಕಥೆಯು ಕೆಡುಕಿನ ಮೇಲೆ ಒಳಿತಿನ ವಿಜಯದ ಸುತ್ತ ಅಡಗಿದೆ. ರಾಮಾಯಣದ ಕಥೆಯಲ್ಲಿ ಭಗವಾನ್ ರಾಮನು ರಾವಣನನ್ನು ಜಯಿಸಲು ವಾನರರ ಸೈನ್ಯವನ್ನು ಮುನ್ನಡೆಸುತ್ತಾರೆ, ಆದರೆ ಮಹಾಭಾರತದ ಕಥೆಯಲ್ಲಿ ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಕೌರವರನ್ನು ಸೋಲಿಸಲು ಪಾಂಡವರಿಗೆ ಮಾರ್ಗದರ್ಶನ ನೀಡಿದರು.ರಾಮಾಯಣ ಮತ್ತು ಮಹಾಭಾರತದ ಮೂಲಕ ನಾಯಕತ್ವದ ಪಾಠಗಳನ್ನು ಭಗವಾನ್ ರಾಮ ಮತ್ತು ಕೃಷ್ಣ ನಮಗೆ ತುಂಬ ಅದ್ಭುತವಾಗಿ ವಿವರವಾಗಿ ಕಲಿಸುತ್ತಾರೆ.

ಭಗವಾನ್ ರಾಮನಿಂದ ನಾಯಕತ್ವದ ಪಾಠಗಳು
ಭಗವಾನ್ ರಾಮನು ತನ್ನ ಸೈನ್ಯದ ನಿಜವಾದ ನಾಯಕ ಮತ್ತು ತಾನೇ ಮುಂದೆ ನಿಂತು ಹೋರಾಡುವಲ್ಲಿ ಯಶಸ್ವಿಯಾಗಿದ್ದರು. ರಾಮಾಯಣದ ಕಾಳಗದ ಸಮಯದಲ್ಲಿ ತಂತ್ರಗಾರಿಕೆಯನ್ನು ನಿರ್ಧರಿಸುವಲ್ಲಿ ಅವರು ಸರ್ವೋಚ್ಚ ನಾಯಕರಾಗಿದ್ದರು. ಗುರಿಗಳನ್ನು ಪೂರೈಸಲು ಅವರು ತಮ್ಮ ತಂಡವನ್ನು ನಿರ್ದೇಶಿಸಿದರು. ಅವರ ಆದೇಶವನ್ನು ಅವರ ತಂಡವು ಅಷ್ಟೇ ಸಂತೋಷದಿಂದ ಯಾವುದೇ ವಿರೋಧವಿಲ್ಲದೆ ಅನುಸರಿಸುತಿತ್ತು.
ರಾಮಾಯಣದ ಹೋರಾಟದ ಸಮಯದಲ್ಲಿ ರಾಮನ ನಾಯಕತ್ವದ ಶೈಲಿ ಅನನ್ಯವಾಗಿತ್ತು. ಅವರು ಕೌಶಲ್ಯರಹಿತ ಹೋರಾಟಗಾರರು ಮತ್ತು ಯಾವಾಗಲೂ ಯಾರದಾದರೂ ನಿರ್ದೇಶನಕ್ಕಾಗಿ ಕಾಯುತ್ತಿದ್ದ. ಸರಿಯಾದ ದಿಕ್ಕುಗಳನ್ನು ಹುಡುಕುತ್ತಿದ್ದ ವಾನರ ಸೈನ್ಯವನ್ನು ಮುನ್ನಡೆಸುತ್ತಿದ್ದರು. ಅವನ ಸೈನ್ಯವು ಅವನ ಉದ್ದೇಶಕ್ಕಾಗಿ ಹೋರಾಡುತ್ತಿತ್ತು. ಭಗವಾನ್ ರಾಮನು ತನ್ನ ತಂಡಕ್ಕೆ ದಾರಿ ತೋರಿಸುತ್ತ ಮತ್ತು ಕಠಿಣ ಸಮಯದಲ್ಲಿ ಧೈರ್ಯಗೆಡದೆ ಏನು ಮಾಡಬೇಕೆಂದು ಅವರಿಗೆ ನಿರ್ದೇಶಿಸಿದನು.
ಭಗವಾನ್ ರಾಮ:
ಕೌಶಲ್ಯವುಳ್ಳ ಯೋಧನಾಗಿದ್ದನು
ತಾನೇ ಮುಂದೆ ನಿಂತು ತನ್ನ ತಂಡವನ್ನು ಮುನ್ನೆಡೆಸುತ್ತಿದ್ದನು
ಪ್ರತಿಯೊಬ್ಬರಿಗೂ ಅವರ ಕೌಶಲ್ಯ ಮತ್ತು ಅವರ ನಿಪುಣತೆಯ ಅನುಗುಣವಾಗಿ ನಿರ್ದಿಷ್ಟ ಕೆಲಸಗಳನ್ನು ವಹಿಸುತ್ತಿದ್ದನು
ಕಷ್ಟದ ಸಮಯದಲ್ಲಿ ತಂಡಕ್ಕೆ ಉತ್ತಮ ದಾರಿಯನ್ನು ತೋರಿಸುತ್ತಿದ್ದನು
ಶ್ರೀ ರಾಮನು ತನ್ನ ಒಳ್ಳೆಯ ಉದ್ದೇಶಕ್ಕಾಗಿ ತಂಡದಲ್ಲಿರುವವರಿಗೆ ಪ್ರೇರಣೆ ಹಾಗು ಸ್ಫೂರ್ತಿ ನೀಡುತ್ತಿದ್ದನು.
ಶ್ರೀಕೃಷ್ಣನಿಂದ ನಾಯಕತ್ವದ ಪಾಠಗಳು
ಶ್ರೀಕೃಷ್ಣನು ರಾಮನಿಗಿಂತ ಸಂಪೂರ್ಣವಾಗಿ ಭಿನ್ನನಾಗಿದ್ದನು. ಮಹಾಭಾರತದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ತಾನು ಯಾವುದೇ ಆಯುಧವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅವನು ಯಾವುದೇ ಯುದ್ಧವನ್ನು ಮಾಡುವುದಿಲ್ಲ. ಅಲ್ಲಿ ಅರ್ಜುನನಿಗೆ ಸಾರಥಿಯಾಗಿ ಇರುತ್ತೇನೆ ಎಂದು ಹೇಳಿದ್ದನು.ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದಂತೆ ಯುದ್ಧದಲ್ಲಿ ಕೇವಲ ಸಾರಥಿಯಾಗಿ ಮತ್ತು ಮಾರ್ಗದರ್ಶಿಯಾಗಿ ಉಳಿದುಕೊಳ್ಳುತ್ತಾನೆ.
ಅವರು ಎಂದಿಗೂ ಯುದ್ಧದಲ್ಲಿ ಹೋರಾಡಲಿಲ್ಲ ಮತ್ತು ಯಾವುದೇ ಆಯುಧವನ್ನು ತೆಗೆದುಕೊಂಡಿಲ್ಲ. ಅವರು ಪಾಂಡವರ ಮಾರ್ಗದರ್ಶಕರಾಗಿದ್ದರು. ತನ್ನ ತಂಡದಲ್ಲಿ ಅತ್ಯುತ್ತಮ ಬಿಲ್ಲುಗಾರ ಅರ್ಜುನನಿದ್ದಾನೆ ಎಂದು ಶ್ರೀಕೃಷ್ಣನಿಗೆ ತಿಳಿದಿತ್ತು. ಕೃಷ್ಣ ಪಾಂಡವರ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. ಅರ್ಜುನನ ಮನಸ್ಸಿನಲ್ಲಿದ್ದ ಅನೇಕ ಗೊಂದಲಗಳನ್ನು ಮರೆಮಾಡಿ ಅವನನ್ನು ಮುನ್ನೆಡೆಸುವುದು ಅವನ ಮುಖ್ಯ ಕೆಲಸವಾಗಿತ್ತು. ಮಹಾಭಾರತದ ಯುದ್ಧದಲ್ಲಿ ಭಗವದ್ಗೀತೆಯನ್ನು ಉಪದೇಶಿಸುವ ಮೂಲಕ ಅರ್ಜುನನಿಗೆ ವಿಭಿನ್ನ ದೃಷ್ಟಿಕೋನವನ್ನು ತೋರಿಸಲು ಸಾಧ್ಯವಾಯಿತು.
ಶ್ರೀಕೃಷ್ಣ -
ಯಾವುದೇ ಯುದ್ಧದಲ್ಲಿ ಹೋರಾಡುವುದಿಲ್ಲ
ಅತ್ಯುತ್ತಮ ವೃತ್ತಿಪರರೊಂದಿಗೆ ಕಾರ್ಯನಿರ್ವಹಿಸಿಕೊಳ್ಳುತ್ತಾರೆ.
ಯುದ್ಧದಲ್ಲಿ ಸಾರಥಿಯಾಗಿ ಮತ್ತು ಮಾರ್ಗದರ್ಶಿಯಾಗಿ ತಂಡವನ್ನು ಮುನ್ನೆಡೆಸುತ್ತಾರೆ
ತಂಡದ ಸದಸ್ಯರಿಗೆ ಮುನ್ನೆಡೆಸುವಂತೆ ಅವರ ಜೊತೆ ನಿಂತು ಮಾರ್ಗದರ್ಶನ ನೀಡುತ್ತಾರೆ
ಒಳ್ಳೆಯ ಸದುದ್ದೇಶವಿರುವ ತಂಡಕ್ಕೋಸ್ಕರ ಹೋರಾಡುತ್ತಾರೆ
ತಂಡದ ಎಲ್ಲ ಅನುಮಾನ,ಸಂದೇಶಗಳನ್ನು ನಿವಾರಿಸಿ ಮಾರ್ಗದರ್ಶನ ನೀಡುತ್ತಾರೆ
ಭಗವಾನ್ ಕೃಷ್ಣ ಮತ್ತು ಭಗವಾನ್ ರಾಮನ ಬಗ್ಗೆ ತಿಳಿದ ನಂತರ, ಇದು ನಿಮ್ಮನ್ನು ನೀವು ಮೌಲ್ಯಮಾಪನ ಮಾಡಿಕೊಳ್ಳುವ ಸಮಯ, ನಿಮ್ಮನ್ನು ನೀವೇ ನೋಡಿಕೊಂಡು ಮತ್ತು ನೀವು ಯಾವ ರೀತಿಯ ನಾಯಕ ಎಂದು ನಿರ್ಧರಿಸಿ.
ನೀವು ಯಾವ ರೀತಿಯ ನಾಯಕರಾಗುತ್ತೀರ?
ನೀವೇ ಯೋಧರಾಗಿ ಮತ್ತು ಮುಂಭಾಗದಿಂದ ತಂಡವನ್ನು ಮುನ್ನಡೆಸುವ ನಾಯಕರಾಗುತ್ತೀರಾ ಅಥವಾ ನಿಮ್ಮ ತಂಡವನ್ನು ನೀವು ಹಿಂದೆ ನಿಂತು ಮಾರ್ಗದರ್ಶನ ನೀಡಿ ಮುನ್ನಡೆಸಲು ನೀವು ಅನುಮತಿಸುತ್ತೀರಾ?
ನಿಮ್ಮ ತಂಡದಲ್ಲಿ ನೀವು ಕೌಶಲ್ಯರಹಿತ ವೃತ್ತಿಪರರನ್ನು ಹೊಂದಿದ್ದೀರಾ ಅಥವಾ ನೀವು ಉತ್ತಮ ವೃತ್ತಿಪರರೊಂದಿಗೆ ಕೆಲಸ ಮಾಡುತ್ತಿದ್ದೀರಾ?
ನಿಮ್ಮ ತಂಡಕ್ಕೆ ನೀವು ನೇರವಾಗಿ ಮಾರ್ಗಗಳನ್ನು ತೋರಿಸುತ್ತೀರಾ ಅಥವಾ ನೀವು ಅವರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತೀರಾ ಇದರಿಂದ ಅವರು ತಮ್ಮದೇ ಆದ ಪರಿಹಾರವನ್ನು ಕಂಡುಕೊಳ್ಳಬಹುದು.
ಇಂದಿನ ಯುವ ಪೀಳಿಗೆಗೆ ಕೃಷ್ಣ ಅವರಂತಹ ನಾಯಕರು ಬೇಕು. ಕೆಲಸಗಳು ಹೇಗೆ ನಡೆಯುತ್ತಿವೆ ಎಂದು ಹೇಳುವ ಯಾರನ್ನೂ ಅವರು ಬಯಸುವುದಿಲ್ಲ, ಆದರೆ ಅವರು ತಮ್ಮ ಕೆಲಸದ ಅರ್ಥವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ನಿಮ್ಮ ತಂಡದ ಸದಸ್ಯರನ್ನು ನೋಡಿ ಅವರು ಅರ್ಜುನ್‌ನಂತಿದ್ದರೆ, ಅವರು ನುರಿತವರಾಗಿದ್ದರೆ ಮತ್ತು ಯಾರಾದರೂ ತಮ್ಮ ಅನುಮಾನವನ್ನು ಸ್ಪಷ್ಟಪಡಿಸಲು ಮತ್ತು ಅವರಿಗೆ ಮಾರ್ಗದರ್ಶನ ನೀಡಬೇಕೆಂದು ಅವರು ಬಯಸುತ್ತಾರೆ. ನಿಮ್ಮ ತಂಡದ ಸದಸ್ಯರು ಕೌಶಲ್ಯರಹಿತರಾಗಿದ್ದರೆ, ನೀವು ಭಗವಾನ್ ರಾಮನ ನಾಯಕತ್ವ ಶೈಲಿಯನ್ನು ಅನ್ವಯಿಸುವುದು ಸೂಕ್ತವಾಗಿದೆ.
More From GoodReturns

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications