ಭಾರತೀಯ ಜೀವವಿಮಾ ನಿಗಮ (LIC) ವು ಭಾರತದಲ್ಲಿನ ಅತ್ಯಂತ ದೊಡ್ಡ ಜೀವ ವಿಮೆ ಸೇವೆ ಒದಗಿಸುವ ಸಂಸ್ಥೆಯಾಗಿದ್ದು, ಇದು ಪ್ರತಿಯೊಂದು ವರ್ಗದ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳನ್ನು ರೂಪಿಸಿತ್ತದೆ. ಇಂತಹ ಯೋಜನೆಗಳಲ್ಲಿ ಜೀವನ್ ಶಿರೋಮಣಿ ಕೂಡ ಒಂದು. ಈ ಯೋಜನೆಯನ್ನು ಉತ್ತಮ ಆದಾಯ ಹೊಂದಿರುವ ಮತ್ತು ತಮ್ಮ ಹೂಡಿಕೆಯ ಬಗ್ಗೆ ಭದ್ರತೆಯ ಆದ್ಯತೆಯನ್ನು ಬಯಸುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ ಎನ್ನಬಹುದು.
ಎಲ್ಐಸಿಯ ಈ ಜೀವನ್ ಶಿರೋಮಣಿ ಪಾಲಿಸಿಯಲ್ಲಿ, ಹೂಡಿಕೆದಾರರು 4 ವರ್ಷಗಳವರೆಗೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗಿರುತ್ತದೆ ಜೊತೆಗೆ ಇದರಲ್ಲಿ ಕನಿಷ್ಠ 1 ಕೋಟಿ ರೂ ವಿಮಾ ಮೊತ್ತದ ಗ್ಯಾರಂಟಿಯೂ ಇದೆ. ಹಾಗೆಂದು ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ರೀತಿಯ ಮಿತಿ ಇರೋದಿಲ್ಲ. ಹಾಗಿದ್ರೆ ಈ ಯೋಜನೆಯಲ್ಲಿ ಬೇರೆ ಏನೆಲ್ಲಾ ವಿಶೇಷತೆ ಇದೆ ಎಂದು ತಿಳಿಯೋಣ.

4 ವರ್ಷಗಳವರೆಗೆ ಎಷ್ಟು ಪ್ರೀಮಿಯಂ ಪಾವತಿಸಬೇಕು?
ಜೀವನ್ ಶಿರೋಮಣಿ ಪಾಲಿಸಿ ಎಂಬುದು ಲಿಂಕ್ ಆಗಿರದ, ವೈಯಕ್ತಿಕ ಜೀವ ವಿಮಾ ಪಾಲಿಸಿಯಾಗಿದ್ದು, ಇದರಲ್ಲಿ ಉಳಿತಾಯದ ಅವಕಾಶವೂ ಇದೆ. ಈ ಯೋಜನೆಯಲ್ಲಿ ನೀವು 4 ವರ್ಷಗಳ ಕಾಲ ತಿಂಗಳಿಗೆ ₹94,000 ಠೇವಣಿ ಮಾಡಬೇಕಾಗುತ್ತದೆ. ಈ ಪ್ರೀಮಿಯಂ ಅನ್ನು ಪ್ರತಿ ತಿಂಗಳು, ಮೂರು ತಿಂಗಳು, ಆರು ತಿಂಗಳು ಅಥವಾ ವಾರ್ಷಿಕವಾಗಿ ಠೇವಣಿ ಮಾಡಬಹುದು. ಈ ಯೋಜನೆಯನ್ನು ಪಡೆಯಲು, ಪಾಲಿಸಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯಸ್ಸಿನ ಮಿತಿ ಪಾಲಿಸಿಯ ಅವಧಿಯನ್ನು ಅವಲಂಬಿಸಿರುತ್ತದ. : 14 ವರ್ಷಗಳ ಪಾಲಿಸಿಗೆ 55 ವರ್ಷಗಳು, 16 ವರ್ಷಗಳ ಪಾಲಿಸಿಗೆ 51 ವರ್ಷಗಳು, 18 ವರ್ಷಗಳ ಪಾಲಿಸಿಗೆ 48 ವರ್ಷಗಳು ಮತ್ತು 20 ವರ್ಷಗಳ ಪಾಲಿಸಿಗೆ 45 ವರ್ಷಗಳು ಆಗಿರುತ್ತದೆ.
ಹಣ ವಾಪಸ್ ಹೇಗೆ?
ಜೀವನ್ ಶಿರೋಮಣಿ ಪಾಲಿಸಿಯು ಒಂದು ವಿಧದ ಮನಿ ಬ್ಯಾಕ್ ಯೋಜನೆಯಾಗಿದೆ. ಈ ಪಾಲಿಸಿಯ ಒಂದು ಮುಖ್ಯ ಲಕ್ಷಣವೆಂದರೆ, ಪಾಲಿಸಿ ಅವಧಿಯಲ್ಲಿ ನಿರ್ದಿಷ್ಟ ಸಮಯಾಂತರಗಳಲ್ಲಿ ಪಾಲಿಸಿದಾರರಿಗೆ ಹಣವನ್ನು ಹಿಂತಿರುಗಿಸಲಾಗುತ್ತದೆ. ಇದನ್ನು "ಸರ್ವೈವಲ್ ಬೆನಿಫಿಟ್" ಎಂದು ಕರೆಯಲಾಗುತ್ತದೆ.
ನೀವು 14 ವರ್ಷಗಳ ಯೋಜನೆಯನ್ನು ಖರೀದಿಸಿದರೆ, 10 ಮತ್ತು 12 ನೇ ವರ್ಷದಲ್ಲಿ ನೀವು ಮೂಲ ವಿಮಾ ಮೊತ್ತದ 30% ಅನ್ನು ಪಡೆಯುತ್ತೀರಿ. ನೀವು 16 ವರ್ಷಗಳ ಪಾಲಿಸಿಯನ್ನು ಖರೀದಿಸಿದರೆ, 12 ಮತ್ತು 14 ನೇ ವರ್ಷದಲ್ಲಿ ನೀವು ಮೂಲ ವಿಮಾ ಮೊತ್ತದ 35% ಅನ್ನು ಪಡೆಯುತ್ತೀರಿ. ನೀವು 18 ವರ್ಷಗಳ ಅವಧಿಯ ಪಾಲಿಸಿಯನ್ನು ಖರೀದಿಸಿದರೆ, 14 ಮತ್ತು 16 ನೇ ವರ್ಷದಲ್ಲಿ ನೀವು ಮೂಲ ವಿಮಾ ಮೊತ್ತದ 40% ಅನ್ನು ಪಡೆಯುತ್ತೀರಿ. ಮತ್ತು ನೀವು 20 ವರ್ಷಗಳ ಅವಧಿಯ ಪಾಲಿಸಿಯನ್ನು ಖರೀದಿಸಿದರೆ, ನೀವು 16 ಮತ್ತು 18 ನೇ ವರ್ಷದಲ್ಲಿ ಮೂಲ ವಿಮಾ ಮೊತ್ತದ 45% ಅನ್ನು ಪಡೆಯುತ್ತೀರಿ. ಅವಧಿ ಮುಗಿದ ನಂತರ, ಉಳಿದ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಲಾಗುತ್ತದೆ.
ಸಾಲ ಸೌಲಭ್ಯ
ಈ ಪಾಲಿಸಿಯನ್ನು ಖರೀದಿಸಿದ ಒಂದು ವರ್ಷದ ನಂತರ ಮತ್ತು ನೀವು ಕನಿಷ್ಠ ಒಂದು ಪೂರ್ಣ ವರ್ಷದ ಪ್ರೀಮಿಯಂ ಅನ್ನು ಪಾವತಿಸಿದ್ದರೆ, ನೀವು ಕೆಲವು ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಸಾಲವನ್ನು ಪಡೆಯಬಹುದು. ಇದರೊಂದಿಗೆ, ಡೆತ್ ಬೆನಿಫಿಟ್ ಗಳನ್ನು ಸಹ ನೀಡಲಾಗುತ್ತದೆ. ಪಾಲಿಸಿಯ ಸರೆಂಡರ್ ಮೌಲ್ಯದ ಆಧಾರದ ಮೇಲೆ ಗ್ರಾಹಕರು ಸಾಲವನ್ನು ಪಡೆಯಬಹುದು. ಪಾಲಿಸಿ ಸಾಲವು ಕಾಲಕಾಲಕ್ಕೆ ನಿರ್ಧರಿಸಲಾದ ಬಡ್ಡಿದರದಲ್ಲಿ ಲಭ್ಯವಿರುತ್ತದೆ. ಪಾಲಿಸಿದಾರನಿಗೆ ಗಂಭೀರ ಕಾಯಿಲೆ ಇರುವುದು ಪತ್ತೆಯಾದರೆ, ಅವರು ವಿಮಾ ಮೊತ್ತದ 10% ರಷ್ಟು ಏಕ ಮೊತ್ತದ ಪಾವತಿಯನ್ನು ಪಡೆಯುತ್ತಾರೆ. ಇದಲ್ಲದೆ, ಮರಣ ಪ್ರಯೋಜನಗಳನ್ನು ಸಹ ಪಾಲಿಸಿಯಲ್ಲಿ ಸೇರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು https://licindia.in/ ಗೆ ಭೇಟಿ ನೀಡಬಹುದು. ಹೀಗಾಗಿ ಜೀವನ್ ಶಿರೋಮಣಿ ಪಾಲಿಸಿಯು ಕೇವಲ ವಿಮೆ ಮತ್ತು ಮನಿ ಬ್ಯಾಕ್ ಸೌಲಭ್ಯವನ್ನು ಮಾತ್ರವಲ್ಲದೆ, ಅಗತ್ಯವಿದ್ದಾಗ ಸಾಲವನ್ನು ಪಡೆಯುವ ಅವಕಾಶವನ್ನೂ ನೀಡುತ್ತದೆ.
Disclaimer:
The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications