ಪೋಷಕರಾದವರು ಮಕ್ಕಳ ಶಿಕ್ಷಣಕ್ಕಾಗಿ, ಜೀವನಕ್ಕಾಗಿ, ಮದುವೆಗಾಗಿ ಅಂತ ಬಹುತೇಕ ಕಡೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೂಡಿಕೆ ಮಾಡೋದೆ ಒಂದು ರೂಢಿಯಾಗಿಬಿಟ್ಟಿದೆ. ಅದೇ ಕಾರಣದಿಂದ ಪೋಸ್ಟ್ ಆಫೀಸ್, ಬ್ಯಾಂಕ್, ಎಲ್‌ಐಸಿ (Post Office, Bank, LIC) ಹೀಗೆ ಹಲವು ಸಂಸ್ಥೆಗಳು ಉಳಿತಾಯ ಯೋಜನೆಗಳನ್ನು ಆರಂಭಿಸಿದೆ. ಅಲ್ಲದೇ ಆಕರ್ಷಕ ಬಡ್ಡಿಯನ್ನೂ ನೀಡುತ್ತಿದೆ.

ದಶಕಗಳಿಂದ ಭಾರತದ ವಿಶ್ವಾಸಾರ್ಹ ಸಂಸ್ಥೆಯೆಂದು ಗುರುತಿಸಿಕೊಂಡು ಬಂದಿರುವ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC), ಮಕ್ಕಳ ಭವಿಷ್ಯಕ್ಕಾಗಿ "ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್" ಅನ್ನು ಲಾಂಚ್ ಮಾಡಿದೆ. ಸಣ್ಣ ಹೂಡಿಕೆಯೊಂದಿಗೆ ಸುಮಾರು ₹19 ಲಕ್ಷಗಳ ನಿಧಿ ಸಂಗ್ರಹಿಸಿಟ್ಟುಕೊಳ್ಳಲು ಈ ಪ್ಲಾನ್ ಬೆಸ್ಟ್ ಆಗಿದೆ. ಮಕ್ಕಳ ಶಿಕ್ಷಣ ಮತ್ತು ಮದುವೆಯಂತಹ ಸಂದರ್ಭಗಳಲ್ಲಿ ಇದು ಪ್ರಯೋಜನಕ್ಕೆ ಬರಲಿದೆ.
ನಷ್ಟದ ಭಯವಿಲ್ಲದೇ, ಆದಾಯ ಸಿಗಲೇಬೇಕು ಎಂದು ಬಯಸುವ ಪೋಷಕರಿಗೆ ಇದು ಬೆಸ್ಟ್ ಪ್ಲಾನ್ ಆಗಿದೆ. ಇದು ನಾನ್-ಲಿಂಕ್ಡ್, ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದ್ದು, ಹಣ ಮಾರುಕಟ್ಟೆ ಏರಿಳಿತಗಳಿಗೆ ಒಳಪಡುವುದಿಲ್ಲ. 0 ರಿಂದ 12 ವರ್ಷದ ಮಕ್ಕಳಿಗೆ, ನವಜಾತ ಶಿಶುಗಳ ಹೆಸರಲ್ಲೂ ಇದನ್ನು ತೆರೆಯಬಹುದು. ಜೀವ ವಿಮೆ, ಮನಿ-ಬ್ಯಾಕ್ ಮತ್ತು ಬೋನಸ್‌ಗಳ ಜೊತೆಗೆ ಗ್ರಾಹಕರು ಇಲ್ಲಿ ಆದಾಯ ಗಳಿಸಬಹುದು.
ಜಸ್ಟ್ 150 ಉಳಿಸಿ, 14 ಲಕ್ಷ ಪಡೆಯಿರಿ!
ಪ್ರತಿದಿನ ಕೇವಲ ₹150 (ಮಾಸಿಕ ₹4,500, ವಾರ್ಷಿಕ ₹55,000) ಉಳಿಸುವುದರಿಂದ ನೀವು ಈ ಎಲ್‌ಐಸಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 25 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ, ನಿಮ್ಮ ಹೂಡಿಕೆ ಹಣ ₹14 ಲಕ್ಷಗಳಾಗುತ್ತದೆ. ಪಾಲಿಸಿ ಅವಧಿ ಪೂರ್ಣಗೊಂಡಾಗ, LIC ಬೋನಸ್‌ಗಳು ಹಾಗೂ ಬಡ್ಡಿಯನ್ನು ಸೇರಿಸಿ ಒಟ್ಟು ಸುಮಾರು ₹19 ಲಕ್ಷಗಳವರೆಗೆ ಹಣ ಪಡೆಯಬಹುದು. ಇದನ್ನು ನಂತರ ಮಕ್ಕಳ ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳು ಅಥವಾ ಮದುವೆ ಖರ್ಚಿಗಾಗಿ ಬಳಸಬಹುದು..
ಇನ್ನು ಈ ಯೋಜನೆಗಾಗಿ LIC ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಹೀಗೆ ವಿವಿಧ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಅವಕಾಶದಿಂದ ಮಧ್ಯಮ ಆದಾಯದ ಕುಟುಂಬಗಳಿಗೂ ಹೂಡಿಕೆ ಮಾಡಲು ಸುಲಭವಾಗುತ್ತದೆ. ಶಿಸ್ತುಬದ್ಧ ಉಳಿತಾಯಕ್ಕಾಗಿ, ದೀರ್ಘಾವಧಿಯ ಹೂಡಿಕೆ ನಿರ್ವಹಿಸಲು ಇದು ಸಹಕಾರಿಯಾಗಲಿದೆ.
ಎಲ್‌ಐಸಿಯ ಈ ಹೊಸ ಯೋಜನೆಯನ್ನು 0 ರಿಂದ 12 ವರ್ಷದ ವಯಸ್ಸಿನ ಮಕ್ಕಳಿಗಾಗಿ ತೆರೆಯಬಹುದು. ಇನ್ನು ಈ ಪಾಲಿಸಿಯನ್ನು ಮಗುವಿಗೆ 25 ವರ್ಷ ತುಂಬುವವರೆಗೆ ವಿಸ್ತರಿಸಬಹುದು. ಅಂದರೆ ನೀವು 5 ವರ್ಷದ ಮಗುವಿನ ಹೆಸರಲ್ಲಿ ಖಾತೆ ತೆರೆದರೆ, ಮುಕ್ತಾಯದ ಅವಧಿ 20 ವರ್ಷಗಳು ಮಾತ್ರ. ಅದರಲ್ಲೂ ಮಗುವಿಗೆ 18 ವರ್ಷವಾದಗ ಮೊದಲ ಹಣ ನಡಲಾಗುತ್ತಾರೆ. ಅಂದರೆ ಅದು ಮೂಲಕ ವಿಮಾ ಮೊತ್ತದ 20% ದಷ್ಟಿರುತ್ತದೆ. ಇನ್ನು ಎರಡನೇ ಮತ್ತು ಮೂರನೇ ಹಣವನ್ನು 20 ವರ್ಷ ಮತ್ತು 22ನೇ ವರ್ಷದಲ್ಲಿ ನೀಡಲಾಗುತ್ತದೆ. ಒಟ್ಟು ಹಣವನ್ನು ಮಾತ್ರ ಮಗುವಿಗೆ 25 ವರ್ಷ ತುಂಬಿದಾಗ ಹಿಂತಿರುಗಿಸಲಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications