ಮನೆಗಾಗಿ, ಚಿನ್ನ, ವಿದ್ಯಾಭ್ಯಾಸ, ವ್ಯವಹಾರಕ್ಕಾಗಿ ಹಲವರು ಸಾಲ ಮಾಡುತ್ತಾರೆ. ಆದರೆ ಸಾಲ ಮಾಡುವ ಮುನ್ನ ಕಡಿಮೆ ಬಡ್ಡಿಯಲ್ಲಿ ಯಾವ ಬ್ಯಾಂಕ್ ಸಾಲ (Bank Loan) ನೀಡುತ್ತೆ ಎಂದು ಹೆಚ್ಚಿನವರು ಹುಡುಕುತ್ತಾರೆ. ಆದ್ರೆ ಮಹಿಳೆಯರಿಗಾಗಿ ಹಲವಾರು ಕಡೆಗಳಲ್ಲಿ ವೈಯಕ್ತಿಕ ಸಾಲಗಳನ್ನು (Personal Loan) ಕಡಿಮೆ ಬಡ್ಡಿದರದಲ್ಲಿ ಪಡೆಯಬಹುದು. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

2025ರಲ್ಲಿ ಮಹಿಳೆಯರಿಗಾಗಿರುವ ವೈಯಕ್ತಿಕ ಸಾಲಗಳು ಶೇ. 9.99ರಷ್ಟು ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿವೆ. ಇವು 8 ವರ್ಷಗಳ ಅವಧಿ, ಕಡಿಮೆ ದಾಖಲೆ ಮತ್ತು ತಕ್ಷಣ ಡಿಜಿಟಲ್ ಮೂಲಕ ಪಡೆಯಬಹುದಾದ ಅವಕಾಶವನ್ನು ಹೊಂದಿದೆ. ಶಿಕ್ಷಣ, ವ್ಯವಹಾರ, ಆರೋಗ್ಯ ಅಥವಾ ವೈಯಕ್ತಿಕ ಅಗತ್ಯಗಳಿಗಾಗಿ ತ್ವರಿತ ಸಾಲ ಬಯಸುವ ಸಂಬಳ ಪಡೆಯುವ ಮಹಿಳೆಯರು, ಉದ್ಯಮಿಗಳು ಮತ್ತು ವೃತ್ತಿಪರರಿಗೆ ಈ ಸಾಲಗಳು ಅನುಕೂಲವಾಗಲಿದೆ
2025ರಲ್ಲಿ, ಖಾಸಗಿ ಸಂಸ್ಥೆಗಳು ಮತ್ತು ಸರ್ಕಾರಿ ಯೋಜನೆಗಳು ಮಹಿಳೆಯರಿಗಾಗಿ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಹಿಳೆಯರಿಗಾಗಿ ವೈಯಕ್ತಿಕ ಸಾಲ ಪಡೆಯಲು ಹಲವು ಆಯ್ಕೆಗಳಿವೆ. ಖಾಸಗಿ ವಲಯ ಮತ್ತು NBFCಗಳು ಮಹಿಳೆಯರಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ಹಲವು ವಿಶೇಷ ಪ್ರಯೋಜನಗಳೊಂದಿಗೆ ನೀಡುತ್ತಿವೆ.
ಬಡ್ಡಿ ದರಗಳು ಶೇ. 9.99 ರಿಂದ ಶೇ. 16.5 ರವರೆಗೆ ಇರುತ್ತದೆ. ಗರಿಷ್ಠ ಸಾಲದ ಮೊತ್ತ ₹55 ಲಕ್ಷಗಳವರೆಗೆ ಲಭ್ಯವಿದೆ. ಪ್ರೊಸೆಸಿಂಗ್ ಶುಲ್ಕಗಳು ಸಾಮಾನ್ಯವಾಗಿ ಸಾಲದ ಮೊತ್ತದ ಶೇ. 3 ರಿಂದ ಶೇ. 4 ರಷ್ಟಿರುತ್ತವೆ.
ಡಿಜಿಟಲ್ ಮೂಲಕ ತ್ವರಿತ ಸಾಲ ಪಡೆಯಿರಿ!
ಮರುಪಾವತಿ ಅವಧಿಯು ಕೆಲವು NBFC (Non-Banking Financial Company) ಗಳಲ್ಲಿ 8 ವರ್ಷಗಳವರೆಗೆ (96 ತಿಂಗಳುಗಳು) ಇರುತ್ತದೆ. ಸಾಲಕ್ಕೆ ಅರ್ಜಿ ಹಾಕಿದ ಅರ್ಹ ಅರ್ಜಿದಾರು ಬರೀ 5 ನಿಮಿಷಗಳಲ್ಲಿ ಸಾಲ ಪಡೆಯಬಹುದು. ಅದಕ್ಕಾಗಿ ನೀವು ಸಂಪೂರ್ಣ ಡಿಜಿಟಲ್ ಅರ್ಜಿ ಸಲ್ಲಿಸಬೇಕು. ಡಿಜಿಟಲ್ KYC ಯೊಂದಿಗೆ 100% ಕಾಗದರಹಿತ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ.
ಉದಾಹರಣೆಗೆ, ಪುಣೆಯಲ್ಲಿರುವ 32 ವರ್ಷದ IT ಉದ್ಯೋಗಿಯೊಬ್ಬರು ತಿಂಗಳಿಗೆ ₹60,000 ಸಂಪಾದಿಸುತ್ತಿದ್ದರೆ, 5 ವರ್ಷಗಳ ಅವಧಿಯ ಸಾಲಕ್ಕೆ, ಶೇ. 10.50 ಬಡ್ಡಿ ದರದಲ್ಲಿ ₹4 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. CIBIL ಸ್ಕೋರ್ 735 ಇದ್ದರೆ, ಅವರಿಗೆ ತಕ್ಷಣದ ಅನುಮೋದನೆ ಸಿಗುತ್ತದೆ. ಅಲ್ಲದೇ ₹8,599 EMI ಪಾವತಿಸಬೇಕಾಗುತ್ತದೆ.
ಸರ್ಕಾರದಿಂದ ಹಲವು ಯೋಜನೆ!
ಸರ್ಕಾರವು ಮಹಿಳೆಯರಿಗಾಗಿ ಹಲವಾರು ರೀತಿಯಲ್ಲಿ ಸಾಲ ನೀಡುತ್ತದೆ. ಅವುಗಳಲ್ಲಿ ಕೆಲವು ಮುದ್ರಾ ಯೋಜನಾ ಸಾಲ (PMMY), ಅನ್ನಪೂರ್ಣ ಮತ್ತು ದೇನಾ ಶಕ್ತಿ ಯೋಜನೆಗಳು ಪ್ರಮುಖವಾಗಿವೆ.
ಪ್ರಧಾನಮಂತ್ರಿ ಮುದ್ರಾ ಯೋಜನೆ: ಮುದ್ರಾ ಯೋಜನೆಯ (PMMY) ಅಡಿಯಲ್ಲಿ ₹10,000 ದಿಂದ ₹10 ಲಕ್ಷದವರೆಗೆ ಸಾಲ ಪಡೆಯಬಹುದು. ಬಡ್ಡಿ ದರಗಳು ಶೇ. 8.5 ರಿಂದ ಶೇ. 12 ರವರೆಗೆ ಇರುತ್ತದೆ (MCLR ಗೆ ಲಿಂಕ್ ಆಗಿದೆ). ಇದಕ್ಕಾಗಿ ಯಾವುದೇ ಅಡಮಾನ ಇಡುವ ಅಗತ್ಯವಿಲ್ಲ, 3 ದಿನಗಳಲ್ಲಿ ಅನುಮೋದನೆ ದೊರೆಯುತ್ತದೆ ಹಾಗೂ 7 ವರ್ಷಗಳವರೆಗೆ ಮರುಪಾವತಿ ಅವಧಿ ಸಿಗುತ್ತದೆ.
ಅನ್ನಪೂರ್ಣ ಯೋಜನೆ-ದೇನಾ ಶಕ್ತಿ ಯೋಜನೆ: ಅನ್ನಪೂರ್ಣ ಯೋಜನೆಯಲ್ಲಿ ಆಹಾರ ಸಂಬಂಧಿತ ವ್ಯವಹಾರಗಳಿಗೆ ₹50,000ದವರೆಗೆ ಸಾಲ ನೀಡಲಾಗುತ್ತದೆ. ದೇನಾ ಶಕ್ತಿ ಯೋಜನೆಯಲ್ಲಿ ಮಹಿಳಾ ಉದ್ಯಮಿಗಳಿಗೆ ₹20 ಲಕ್ಷದವರೆಗೆ ಸಾಲ ಸಿಗುತ್ತದೆ. ಪ್ರಮಾಣಿತ ದರಗಳಿಗಿಂತ ಶೇ. 0.25 ರಿಂದ ಶೇ. 0.50 ರಷ್ಟು ಬಡ್ಡಿ ರಿಯಾಯಿತಿಯನ್ನೂ ಪಡೆಯಬಹುದು. ವೆ.
ಖಾಸಗಿ/NBFC ಮತ್ತು ಸರ್ಕಾರಿ ಯೋಜನೆಗಳ ನಡುವಿನ ಪ್ರಮುಖ ವ್ಯತ್ಯಾಸಗಳೇನು:
ಖಾಸಗಿ/NBFCಗಳು ಶೇ. 9.99-16.5 ಬಡ್ಡಿದರ, ₹55 ಲಕ್ಷ ಗರಿಷ್ಠ ಮೊತ್ತ, 8 ವರ್ಷಗಳವರೆಗೆ ಅವಧಿ, ಶೇ. 3-4% ಪ್ರೊಸೆಸಿಂಗ್ ಶುಲ್ಕ ಮತ್ತು 5 ನಿಮಿಷದಿಂದ 24 ಗಂಟೆಗಳಲ್ಲಿ ಸಾಲಕ್ಕೆ ಅನುಮೋದನೆ ನೀಡುತ್ತವೆ. ಆದರೆ, ಸರ್ಕಾರಿ ಯೋಜನೆಗಳು ಶೇ. 8.5-12 ಬಡ್ಡಿದರ, ₹10-20 ಲಕ್ಷ ಗರಿಷ್ಠ ಮೊತ್ತ, 7 ವರ್ಷಗಳವರೆಗೆ ಅವಧಿ, ಶೂನ್ಯ ಅಥವಾ ನಾಮಮಾತ್ರದ ಪ್ರೊಸೆಸಿಂಗ್ ಶುಲ್ಕ ಮತ್ತು 3 ರಿಂದ 7 ದಿನಗಳಲ್ಲಿ ಸಾಲಕ್ಕೆ ಅನುಮೋದನೆ ನೀಡುತ್ತವೆ.


Click it and Unblock the Notifications