ಜೂನ್ ತಿಂಗಳಿಂದಲೇ ಈ 8 ಕ್ರಮ ಅನುಸರಿಸಿ..ನಿಮ್ಮ ಆರ್ಥಿಕ ಸ್ಥಿತಿಯನ್ನು ಆರೋಗ್ಯವಾಗಿರಿಸಿ! ಈ ಬಗ್ಗೆ ಪೂರ್ತಿ ಓದಿ

2025ನೇ ವರ್ಷದ ಮೊದಲ ಅರ್ಧ ಭಾಗ ಇನ್ನೇನು ಮುಗಿಯುವ ಹಂತ ಬಂದಿದೆ. ಹೀಗಾಗಿ ನಿಮ್ಮ ಹಣಕಾಸು ಯೋಜನೆಗಳನ್ನು ನೀವು ಪರಿಶೀಲಿಸಲು ಇದೇ ಸೂಕ್ತ ಸಮಯ. ಹೊಸ ಬಜೆಟ್, ತೆರಿಗೆ ಯೋಜನೆಗಳು, ಮಾರುಕಟ್ಟೆಯ ಅಸ್ಥಿರತೆ ಮತ್ತು ಜೀವನದ ಅನಿಶ್ಚಿತತೆ ಎಲ್ಲವನ್ನೂ ನೀವು ಈಗಿನಿಂದಲೇ ಪರಿಶೀಲಿಸಬೇಕು. ಈ ಹಂತದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ, ಉಳಿದ 2025ರಲ್ಲಿ ಆರ್ಥಿಕವಾಗಿ ಹೆಚ್ಚು ಸಬಲವಾಗಿರಲು ಸಾಧ್ಯ.

ಆರ್ಥಿಕ ಸ್ಥಿತಿ ಗಟ್ಟಿಯಾಗಿಸಲು ಇಲ್ಲಿವೆ 8 ಸೂತ್ರಗಳು..!

1. ತೆರಿಗೆ ಯೋಜನೆಗಳ ಪರಿಶೀಲನೆ:

2024-25ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಸಮಯ ಆರಂಭವಾಗಿದೆ. ಫಾರ್ಮ್ 16, ಬ್ಯಾಂಕ್ ಸ್ಟೇಟ್ಮೆಂಟ್‌ಗಳು ಮತ್ತು ಹೂಡಿಕೆ ದಾಖಲೆಗಳಂತಹ ಪ್ರಮುಖ ದಾಖಲೆಗಳು ನಿಮ್ಮ ಬಳಿಯಲ್ಲಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದುವರೆಗಿನ ತೆರಿಗೆ ಉಳಿತಾಯ ಹೂಡಿಕೆಗಳನ್ನು ಪರಿಶೀಲಿಸಿ. ಸೆಕ್ಷನ್ 80C, 80D, NPS ಮತ್ತು ಇತರ ಯೋಜನೆಗಳಲ್ಲಿ ಹೆಚ್ಚು ಬಳಸಿದರಾ ಎಂಬುದನ್ನು ಗಮನಿಸಿ.

2. ಬಜೆಟ್ ಮರುಪರಿಶೀಲನೆ:

ಮಾಸಿಕ ಖರ್ಚು ಮತ್ತು ಉಳಿತಾಯದ ಮೇಲೆ ಮತ್ತೊಮ್ಮೆ ಕಣ್ಣೋಡಿ ಹಾಕಿ. ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ, ಅತಿಥಿ ವೆಚ್ಚಗಳಿಗೆ ಅಗತ್ಯವಾದ ತುರ್ತು ನಿಧಿಗೆ ಹಣವನ್ನು ಕಟ್ಟಿ ಹಾಕಿ. ಹಣದ ಹರಿವನ್ನು ತಿಳಿದಾಗ, ಉಳಿತಾಯ ಹೆಚ್ಚಿಸಲು ಸಾಧ್ಯವಾಗುತ್ತದೆ.

3. ಆದಾಯ ಮತ್ತು ವೆಚ್ಚ ಮೌಲ್ಯಮಾಪನ:

ಜನವರಿ-ಜೂನ್ ಅವಧಿಯಲ್ಲಿ ನಿಮ್ಮ ಸಂಬಳ ಅಥವಾ ಇತರ ಆದಾಯದ ಮಾರ್ಗಗಳಲ್ಲಿ ಬದಲಾವಣೆ ಆಗಿದ್ದರೆ, ಅದರ ಪ್ರಕಾರ ಹೊಸ ಬಜೆಟ್ ರೂಪಿಸಬೇಕಾಗುತ್ತದೆ. ಹೆಚ್ಚಿದ ಆದಾಯವನ್ನು ಎಲ್ಲಿಗೆ ಹಂಚಬೇಕು ಎಂಬ ಯೋಜನೆ ಕೂಡ ಅಗತ್ಯ.

4. ಸಾಲ ನಿರ್ವಹಣೆ:

ಕ್ರೆಡಿಟ್ ಕಾರ್ಡ್, ಪರ್ಸನಲ್ ಲೋನ್ ಅಥವಾ ಇಎಂಐ ಇತ್ಯಾದಿಗಳನ್ನು ಪುನರ್‌ಅವಲೋಕನ ಮಾಡಿ. ಹೆಚ್ಚಿನ ಬಡ್ಡಿದರದ ಸಾಲಗಳಿಗೆ ಮೊದಲ ಆದ್ಯತೆ ನೀಡಿ. ಹೊಸ ಸಾಲ ತೆಗೆದುಕೊಳ್ಳುವುದು ಬೇಡ ಎನಿಸಿದರೂ ಪರಿಗಣಿಸಿ.

5. ಕ್ರೆಡಿಟ್ ವರದಿ ಪರಿಶೀಲನೆ:

700 ಕ್ಕಿಂತ ಕಡಿಮೆ ಸ್ಕೋರ್ ಇದ್ದರೆ, ಅದನ್ನು ಸುಧಾರಿಸಲು ಕ್ರಮ ಕೈಗೊಳ್ಳಿ. ಸರಿಯಾದ ಪಾವತಿಗಳಿಗೆ ಪ್ರಾಮುಖ್ಯತೆ ನೀಡಿ. ಹೊಸ ಸಾಲದ ಅರ್ಜಿಗೆ ಸಕಾರಾತ್ಮಕ ಪರಿಣಾಮ ಬೀರುವ ಕ್ರೆಡಿಟ್ ಸ್ಕೋರ್ ಸ್ಥಿರವಾಗಿರಲಿ.

6. ತುರ್ತು ನಿಧಿ ಸ್ಥಿತಿ:

ಅಪಘಾತ, ಉದ್ಯೋಗ ನಷ್ಟ ಅಥವಾ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಬಳಸಬಹುದಾದ 3-6 ತಿಂಗಳ ತುರ್ತು ನಿಧಿ ನಿರ್ಮಾಣ ಮಾಡಿದೀರಾ ಎಂಬುದನ್ನು ಪರಿಶೀಲಿಸಿ. ಇದು ನಿಮ್ಮ ಹೂಡಿಕೆಗಳನ್ನು ಮುಟ್ಟದೆ ಬಿಕ್ಕಟ್ಟನ್ನು ಎದುರಿಸಲು ನೆರವಾಗುತ್ತದೆ.

7. ವಿಮಾ ವಿಮರ್ಶೆ:

ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಆರೋಗ್ಯ ವಿಮೆಯನ್ನು ಬಹುಮಟ್ಟಿಗೆ ಅಗತ್ಯವನ್ನಾಗಿಸಿವೆ. ಜೀವ ವಿಮೆ ಯೋಜನೆಗಳ ವಿಮಾ ಮೊತ್ತ ಹಾಗೂ ಷರತ್ತುಗಳನ್ನು ಮರುಪರಿಶೀಲಿಸಿ. ಫ್ಯಾಮಿಲಿ ಫ್ಲೋಟರ್ ಅಥವಾ ಕ್ರಿಟಿಕಲ್ ಇಲ್ಲ್ನೆಸ್ ಕವರ್ ಕೂಡ ಪರಿಗಣಿಸಬಹುದು.

8. ಹೂಡಿಕೆ ಮೌಲ್ಯಮಾಪನ:

ಮ್ಯೂಚುವಲ್ ಫಂಡ್ಸ್, ಷೇರು ಹೂಡಿಕೆಗಳು, ಬಾಂಡ್ ಗಳು ಮತ್ತು ಚಿನ್ನದಲ್ಲಿನ ಹಂಚಿಕೆ ಪರಿಶೀಲಿಸಿ. ನಿಮ್ಮ ಅಪಾಯ ಸಹಿಷ್ಣುತೆ ಮತ್ತು ಗುರಿಗಳಿಗೆ ಅನುಗುಣವಾಗಿ ಹೂಡಿಕೆ ಪುನರ್ ಹಂಚಿಕೆ ಮಾಡಿಕೊಳ್ಳಿ. SIP ಅಥವಾ ELSS ಹೂಡಿಕೆಗಳ ಪ್ರಗತಿಯನ್ನು ಕೂಡ ವಿಮರ್ಶಿಸಿ.

ಅಂದಹಾಗೆ ಈಗ ವರ್ಷದ ಎರಡನೇ ಭಾಗಕ್ಕೆ ಪ್ರವೇಶಿಸುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ಹಣಕಾಸಿನ ಆರೋಗ್ಯವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವುದರಿಂದ ಮುಂದಿನ ಸಮಯವನ್ನು ಸುಸ್ಥಿರವಾಗಿ ಸಾಗಿಸಲು ನೆರವಾಗುತ್ತದೆ. ತೆರಿಗೆ ಉಳಿತಾಯ, ಸಾಲ ತಗ್ಗಿಸುವುದು, ಕ್ರೆಡಿಟ್ ಸ್ಕೋರ್ ಸುಧಾರಣೆ ಮತ್ತು ಸ್ಮಾರ್ಟ್ ಹೂಡಿಕೆಗಳ ಮೂಲಕ ನಿಮ್ಮ ಆರ್ಥಿಕ ಗುರಿಗಳನ್ನು ಪೂರೈಸಲು ಇದು ಸೂಕ್ತ ಸಮಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+