ಇಂದಿನ ಆಧುನಿಕ ಯುಗದಲ್ಲಿ ಹಣದ ಅಗತ್ಯ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಕೂಡ ಉಳಿತಾಯ ಮಾಡುವುದು ಅತ್ಯಗತ್ಯ. ನೀವು ಮಾಸಿಕವಾಗಿ ಎಷ್ಟೇ ವೇತನವನ್ನು ಪಡೆಯುತ್ತಿದ್ದರೂ ತಿಂಗಳಿಗೆ ಇಂತಿಷ್ಟಾದರೂ ಉಳಿತಾಯ ಮಾಡುವುದನ್ನು ಅಭ್ಯಾಸ ಮಾಡಲೇಬೇಕಿರುತ್ತದೆ. ಇನ್ನು ಇತ್ತೀಚಿಗಿನ ದಿನಗಳಲ್ಲಿ ಮ್ಯೂಚ್‌ವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯಲ್ಲಿಯೂ ಏರಿಕೆ ದಾಖಲಾಗುತ್ತಲೇ ಇದೆ.
ಅದರಲ್ಲೂ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಯೋಜನೆಯು 61,646 ಕೋಟಿ ರೂ.ಗಳ ನಿರ್ವಹಣೆಯ ಆಸ್ತಿಯನ್ನು ಹೊಂದಿದೆ. ಅದರಲ್ಲೂ ಇದು ಕೈಗಾರಿಕೆಗಳು, ಸಾಮಗ್ರಿಗಳು, ಹಣಕಾಸುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ. ಅಲ್ಲದೆ ಉನ್ನತ ಮೌಲ್ಯಗಳ HDFC ಬ್ಯಾಂಕ್, MCX, ಕಿರ್ಲೋಸ್ಕರ್ ಬ್ರದರ್ಸ್, ಅಪರ್, ಟ್ಯೂಬ್ ಇನ್ವೆಸ್ಟ್‌ಮೆಂಟ್‌ಗಳು ಮುಂತಾದವುಗಳು ಕೂಡ ಇವುಗಳಲ್ಲಿ ಸೇರಿದೆ. 2010ರ ಸೆಪ್ಟೆಂಬರ್ ತಿಂಗಳಲ್ಲಿ ಇದನ್ನು ಪ್ರಾರಂಭಿಸಲಾಗಿತ್ತು.

ಮ್ಯೂಚುಯಲ್ ಫಂಡ್ ಯೋಜನೆ
ಇನ್ನು ನಿವೃತ್ತಿ ಬಳಿಕ ಆದಾಯದ ಮೂಲ ಯಾವುದು ಎಂದು ಹೆಚ್ಚಿನವರು ಆತಂಕದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅದರಲ್ಲೂ ಇತರರ ವಿಚಾರಕ್ಕೆ ಬರುವುದಾದರೆ ಯಾವುದೇ ಗುರಿ ಸಾಧನೆಗಾಗಿ ಉತ್ತಮ ಕಾರ್ಪಸ್ ಬಯಸುವ ಹೂಡಿಕೆದಾರರಿಗೆ ತಮ್ಮ ಗುರಿ ಈಡೇರಿಕೆಗೆ ಮ್ಯೂಚ್‌ವಲ್ ಫಂಡ್‌ಗಳು ಉತ್ತಮ ಹಾಗೂ ಸೂಕ್ತವಾದ ಮಾರ್ಗವಾಗಿದೆ. ಹಿಂದೆಯೇ ಇಂತಹ ಎಂಎಫ್ ಯೋಜನೆಗಳು ಉತ್ತಮ ಆದಾಯವನ್ನೇ ನೀಡಿದೆ. ವ್ಯಕ್ತಿಗಳಿಗೆ ಕೋಟಿ ರೂ. ಮೌಲ್ಯದ ಕಾರ್ಪಸ್ ಅನ್ನು ಮಾಡಲು ನೆರವು ನೀಡಿದೆ.
ಸದ್ಯ ಅನೇಕ ಇಂತಹ ಯೋಜನೆಗಳು ಇದ್ದರೂ ಕೆಲವೊಂದು ಯೋಜನೆಗಳ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ. ಇವುಗಳು ಕಳೆದ ಕೆಲವು ವರ್ಷಗಳಲ್ಲಿ ಒಂದು ಕೋಟಿ ರೂ.ಗಿಂತ ಹೆಚ್ಚಿನ ಕಾರ್ಪಸ್ ರಚಿಸಲು ನೆರವು ನೀಡಿದೆ. ಸೆಪ್ಟೆಂಬರ್ 2010 ರಲ್ಲಿ ಪ್ರಾರಂಭವಾದ ಈ ಯೋಜನೆಯು ಪ್ರಾರಂಭವಾದಾಗಿನಿಂದ 22.22 ಶೇಕಡಾ ಆದಾಯವನ್ನು ನೀಡಿದೆ. ಯೋಜನೆಯು NIFTY ಸ್ಮಾಲ್‌ಕ್ಯಾಪ್ 250 TRI ಅನ್ನು ಅದರ ಮಾನದಂಡವಾಗಿ ಹೊಂದಿದೆ.
ಕೋಟ್ಯಾಧಿಪತಿ ಮ್ಯೂಚುವಲ್ ಫಂಡ್ ಯೋಜನೆ
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್
ಈ ಯೋಜನೆಯು ಪ್ರಸಕ್ತ ವರ್ಷದ ನವೆಂಬರ್ 30ರ ಪ್ರಕಾರ 61,646 ಕೋಟಿ ಮೌಲ್ಯದ ನಿರ್ವಹಣೆಯ ಅಡಿಯಲ್ಲಿ ಸ್ವತ್ತುಗಳನ್ನು ಹೊಂದಿದೆ. ಇದು ಓಪನ್-ಎಂಡೆಡ್ ಇಕ್ವಿಟಿ ಯೋಜನೆಯಾಗಿದ್ದು, ಪ್ರಮುಖವಾಗಿ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತದೆ ಮತ್ತು ಕಳೆದ 14 ವರ್ಷಗಳಲ್ಲಿ ಹೂಡಿಕೆದಾರರ ಸಂಪತ್ತನ್ನು ಹಲವಾರು ಬಾರಿ ದುಪ್ಪಟ್ಟು ಮಾಡಿದೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ರಿಟರ್ನ್ಸ್
ಇದು ಕಳೆದ 1 ವರ್ಷದಲ್ಲಿ, ಯೋಜನೆಯು 31.10 ಪ್ರತಿಶತ ಆದಾಯವನ್ನು ನೀಡಿದೆ. ಕಳೆದ 3 ವರ್ಷಗಳಲ್ಲಿ 29.26 ಶೇ., ಕಳೆದ 5 ವರ್ಷಗಳಲ್ಲಿ 35.76 ಪರ್ಸೆಂಟ್ ರಿಟರ್ನ್ಸ್ ಒಟ್ಟಾರೆ ನೋಡುವುದಾದರೆ ಕಳೆದ 10 ವರ್ಷಗಳಲ್ಲಿ ಇದು 22.33 ರಷ್ಟು ಲಾಭವನ್ನು ನೀಡಿದೆ. ಉದಾಹರಣೆಗೆ ಹೇಳುವುದಾದರೆ ಒಂದು ವೇಳೆ ಯಾರಾದರೂ 14 ವರ್ಷಗಳವರೆಗೆ ಯೋಜನೆಯಲ್ಲಿ ರೂ 9000 ಮಾಸಿಕ SIP ಮಾಡಿದ್ದರೆ, ಅವರ ಹೂಡಿಕೆಯು 25.95 ಪ್ರತಿಶತ ವಾರ್ಷಿಕ ಆದಾಯದೊಂದಿಗೆ ರೂ 1,14,70,364 ಕ್ಕೆ ಏರಿಕೆಯಾಗುತ್ತದೆ.
ಯೋಜನೆಯ ದಾಖಲೆಗಳ ಪ್ರಕಾರ ಒಂದು ವೇಳೆ ಅದರಲ್ಲಿ ಕಳೆದ 5 ವರ್ಷಗಳಲ್ಲಿ ರೂ 10,000 ಹೂಡಿಕೆಯನ್ನು ಮಾಡಿರುತ್ತಿದ್ದರೆ ಮೊತ್ತವು 45,838 ರೂ.ಗೆ ಬೆಳೆದಿರುತ್ತದೆ. ಅದೇ ರೀತಿ ಕಳೆದ 14 ವರ್ಷಗಳಲ್ಲಿ 176,052 ರೂ.ಗೆ ಹೆಚ್ಚಳವಾಗಿರುತದೆ. ಅದರಲ್ಲೂ ಮುಖ್ಯವಾಗಿ ಈ ಮೊತ್ತವು 66,365 ರೂ.ಗಳ ಬೆಂಚ್ ಮಾರ್ಕ್ ಗುರಿಗಿಂತಲೂ ಹೆಚ್ಚಾಗಿದೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಪೋರ್ಟ್‌ಪೋಲಿಯೊ
ಇದು ಸ್ಮಾಲ್ ಕ್ಯಾಪ್ MF ಯೋಜನೆಯು 61,646 ಕೋಟಿ ರೂ.ಗಳ ನಿರ್ವಹಣೆಯ ಅಡಿಯಲ್ಲಿ ಆಸ್ತಿಯನ್ನು ಹೊಂದಿದೆ. ಇದು ಕೈಗಾರಿಕೆಗಳು, ಸಾಮಗ್ರಿಗಳು, ಹಣಕಾಸುಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿದೆ. ಯೋಜನೆಯ ಪೋರ್ಟ್‌ಫೋಲಿಯೊದಲ್ಲಿನ ಉನ್ನತ ಸ್ಟಾಕ್‌ಗಳಲ್ಲಿ HDFC ಬ್ಯಾಂಕ್, MCX, ಕಿರ್ಲೋಸ್ಕರ್ ಬ್ರದರ್ಸ್, ಅಪರ್, ಟ್ಯೂಬ್ ಇನ್ವೆಸ್ಟ್‌ಮೆಂಟ್‌ಗಳು ಕೂಡ ಸೇರಿವೆ.
ಇನ್ನು ಅಂತಿಮ ಮಾತು ಏನೆಂದರೆ ಯಾವುದರಲ್ಲೂ ಹೂಡಿಕೆ ಮಾಡುವ ಮುನ್ನ ಆರ್ಥಿಕ ತಜ್ಞರ ಬಳಿ ಸೂಕ್ತ ರೀತಿಯಲ್ಲಿ ಸಲಹೆ ಪಡೆದುಕೊಳ್ಳುವುದು ಕೂಡ ಜಾಣತನವಾಗಿದ್ದು, ಮುಖ್ಯವಾಗಿ ಅಗತ್ಯ ಕೂಡ ಆಗಿರುತ್ತದೆ. ಹಾಗಾಗಿ ಈ ವಿಚಾರದಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕಿದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications