ದೇಶದ ನಾಗರಿಕರ ಅನುಕೂಲಕ್ಕಾಗಿ ಸರ್ಕಾರ ಸದಾ ಏನಾದರೊಂದು ಯೋಜನೆಗಳನ್ನು ಜಾರಿಗೆ ತರುತ್ತಕೇ ಇರುತ್ತದೆ. ಅದರಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಕೂಡಾ ಒಂದು. ಸರ್ಕಾರಿ ಸ್ವಾಮ್ಯದ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಈ ಯೋಜನೆ ನೀಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಕೇವಲ ₹20 ರೂ. ವಾರ್ಷಿಕ ಪ್ರೀಮಿಯಂನೊಂದಿಗೆ ₹2 ಲಕ್ಷದವರೆಗೆ ಆಕಸ್ಮಿಕ ಸಾವು, ಗಾಯ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ರಕ್ಷಣೆ ನೀಡುತ್ತದೆ. 18-70 ವರ್ಷದೊಳಗಿನ ಬ್ಯಾಂಕ್/ಅಂಚೆ ಖಾತೆದಾರರು ಯಾರೂ ಕೂಡಾ ಈ ಯೋಜನೆಯನ್ನು ತೆರೆಯಬಹುದು. ಸಾಮಾಜಿಕವಾಗಿ ಜನರ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಜನಸಾಮಾನ್ಯರಿಗೆ ಕೈಗೆಟುಕುವಂತೆ ವಿಮಾ ಸೌಲಭ್ಯ (Vima Benefits) ನೀಡುವುದು ಇದರ ಮುಖ್ಯ ಉದ್ದೇಶ.

ಸಾಮಾನ್ಯವಾಗಿ ಆರೋಗ್ಯ ವಿಮೆ ಮಾಡಬೇಕೆಂದರೆ ಲಕ್ಷಾಂತರ ರೂಪಾಯಿ ವ್ಯಯ ಮಾಡಬೇಕಾಗುತ್ತದೆ. ಅದರಲ್ಲೂ ಬಡವರಿಗಂತೂ ಹೂಡಿಕೆ ಮಾಡೋದೆ ಒಂದು ಸವಾಲು. ಆದರೆ ಅಂಥವರಿಗಾಗಿ ಕೇಂದ್ರ ಸರ್ಕಾರ, ಜನ ಸುರಕ್ಷಾ ಯೋಜನೆಗಳ ಅಡಿಯಲ್ಲಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆ ಮೂಲಕ ಕಡಿಮೆ ಬೆಲೆಗೆ ಅಪಘಾತ ಹಾಗೂ ಜೀವ ವಿಮೆ ಎರಡನ್ನೂ ಪಡೆಯಬಹುದು. ಹಾಗಿದ್ರೆ ಇದರ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಏನಿದು ಪಿಎಂ ಸುರಕ್ಷಾ ಬಿಮಾ ಯೋಜನೆ?
PMSBY ವಾರ್ಷಿಕವಾಗಿ ನವೀಕರಿಸಬಹುದಾದ ಒಂದು ವರ್ಷದ ವೈಯಕ್ತಿಕ ಅಪಘಾತ ವಿಮಾ ಕವರ್ ಆಗಿ ಕೆಲಸ ಮಾಡುತ್ತದೆ. ಅಪಘಾತದಿಂದಾಗುವ ಸಾವು ಅಥವಾ ಅಂಗವೈಕಲ್ಯಕ್ಕೆ ರಕ್ಷಣೆ ನೀಡುತ್ತದೆ. ಆಕಸ್ಮಿಕ ಮರಣ, ಎರಡೂ ಕಣ್ಣು/ಕೈ/ಕಾಲುಗಳ ಸಂಪೂರ್ಣ ನಷ್ಟ, ಅಥವಾ ಒಂದು ಕಣ್ಣು ಮತ್ತು ಒಂದು ಕೈ/ಕಾಲಿನ ನಷ್ಟಕ್ಕೆ ₹2 ಲಕ್ಷದವರೆಗೆ ಪರಿಹಾರ ಒದಗಿಸುತ್ತದೆ. ಒಂದು ಕಣ್ಣು ಅಥವಾ ಒಂದು ಕೈ/ಕಾಲಿನ ಸಂಪೂರ್ಣ ನಷ್ಟಕ್ಕೆ ₹1 ಲಕ್ಷದವರೆಗೆ ದೊರೆಯುತ್ತದೆ.
₹20 ರೂ. ವಾರ್ಷಿಕ ಪ್ರೀಮಿಯಂನ PMSBY, ದೇಶದ ಅತ್ಯಂತ ಕೈಗೆಟುಕುವ ವಿಮೆಯೆಂದು ಗುರುತಿಸಿಕೊಂಡಿದೆ. ಸಾರ್ವಜನಿಕ ವಲಯದ ಹಾಗೂ ಇತರ ಅನುಮೋದಿತ ವಿಮಾ ಕಂಪನಿಗಳು, ಬ್ಯಾಂಕುಗಳು/ಅಂಚೆ ಕಚೇರಿಗಳ ಸಹಯೋಗದಲ್ಲಿ PMSBY ಕಾರ್ಯನಿರ್ವಹಿಸುತ್ತದೆ. ಬ್ಯಾಂಕುಗಳು ಯಾವುದೇ ಅನುಮೋದಿತ ವಿಮಾದಾರರೊಂದಿಗೆ ಸೇರಿಕೊಳ್ಳಬಹುದು. ಪಾಲ್ಗೊಳ್ಳುವ ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿರುವ 18-70 ವರ್ಷ ವಯಸ್ಸಿನ ಎಲ್ಲಾ ವ್ಯಕ್ತಿಗಳು ಈ ಯೋಜನೆಗೆ ಅರ್ಹರು. ಬಹು ಖಾತೆಗಳಿದ್ದರೂ, ಒಂದರ ಮೂಲಕ ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶವಿದೆ.
ಅರ್ಜಿ ಸಲ್ಲಿಸುವುದು ಹೇಗೆ?
- PMSBY ಗೆ ನೋಂದಾಯಿಸಿಕೊಳ್ಳಲು, ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಬ್ರಾಂಚ್‌ಗೆ ಭೇಟಿ ನೀಡಬೇಕು ಅಥವಾ ಅಧಿಕೃತ ವೆಬ್‌ಸೈಟ್ https://janasuraksha.gov.in/forms-PMSBY.aspx ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
- ಅರ್ಜಿಯನ್ನು ಡೌನ್‌ಲೋಡ್ ಮಾಡಿದ ಬಳಿಕ, ಅಭ್ಯರ್ಥಿಯ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ಡಾಕ್ಯುಮೆಂಟ್‌ಗಳನ್ನು ಬ್ಯಾಂಕಿಗೆ ನೀಡಬೇಕು.
- ದಾಖಲೆಗಳನ್ನು ಸಬ್‌ಮಿಟ್ ಮಾಡಿದ ಬಳಿಕ, ವಿಮಾ ಯೋಜನೆಯ ಸ್ವೀಕೃತಿ ರಶೀದಿಯನ್ನು ಪಡೆಯುತ್ತಾರೆ.
ಇನ್ನು PMSBY ಯೋಜನೆಯ ವಾರ್ಷಿಕವಾಗಿ ಕೇವಲ 20 ರೂ. ಪ್ರೀಮಿಯಂನೊಂದಿಗೆ ವಿಮಾ ಪರಿಹಾರ ಒದಗಿಸುತ್ತದೆ. PMSBY ಯೋಜನೆಯ ಅಡಿಯಲ್ಲಿ, ಪ್ರೀಮಿಯಂ ಅನ್ನು ಪಾಲಿಸಿದಾರರ ಬ್ಯಾಂಕ್ ಖಾತೆಯಿಂದ ಆಟೋಮೆಟಿಕ್ ಆಗಿ ಡೆಬಿಟ್ ಮಾಡಲಾಗುತ್ತದೆ. ಈ ವಿಮಾ ಕವರ್ ಜೂನ್ 1 ರಿಂದ ಮೇ 31 ರೆವರೆಗೆ ಒಂದು ವರ್ಷದ ಅವಧಿಗೆ ಇರುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications