ಈ ದುಬಾರಿ ದುನಿಯಾದಲ್ಲಿ ಮನೆ, ಕಾರು, ಬಂಗಾರ (Home, Car, Gold) ಯಾವುದೇ ಖರೀದಿಸಬೇಕೆಂದರೂ ಸಾಲ ಮಾಡಲೇಬೇಕಿ. ಕಾರಣ ದಿನಹೋದಂತೆ ಪ್ರತಿಯೊಂದರ ಬೆಲೆಯೂ ದುಬಾರಿಯಾಗುತ್ತಿದೆ. ಅತ್ತ ಜನರ ಸಂಬಳವನ್ನು ಹೋಲಿಸಿದ್ರೆ, ಜೀವನ ಸಾಗಿಸೋದೆ ಕಷ್ಟವೆನಿಸಿದೆ. ಅದಕ್ಕಾಗಿ ಸರಿಯಾದ ಹೂಡಿಕೆ ಪ್ಲಾನ್, ಖರ್ಚು, ಮುಂತಾದವುಗಳ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕಬೇಕು. ಸಾಮಾನ್ಯ ಬಹುತೇಕ ದಂಪತಿ ಇಂದಿನ ದಿನದಲ್ಲಿ ಜೊತೆಯಾಗಿ ಇಎಂಐ, ಸಾಲ ಮಾಡಿಕೊಂಡು ಮನೆ, ಕಾರು, ಬಂಗಾರ ಖರೀದಿ ಮಾಡುತ್ತಾರೆ.

ಆದರೆ ಸಾಲ ಮರುಪಾವತಿ ವೇಳೆ, ಇಎಂಐ ಪಾವತಿಸುವಾ ಸರಿಯಾದ ಯೋಜನೆ ಇಲ್ಲದಿದ್ದರೆ, ಹಣಕಾಸಿನ ವಿಷಯದಲ್ಲಿ ಕುಟುಂಬದ ನಡುವೆ ಭಿನ್ನಾಭಿಪ್ರಾಯಗಳು ಮೂಡಬಹುದು. ಸಾಮಾನ್ಯವಾಗಿ ಹೆಚ್ಚಿನವರು ಹಣದ ವಿಷಯದಲ್ಲೇ ಜಗಳ ಮಾಡಿಕೊಂಡಿರುವುದನ್ನು ನೋಡಿರಬಹುದು. ಆದರೆ ಕೆಲವು ಟ್ರಿಕ್ಸ್ ಮೂಲಕ ದಂಪತಿ ಯಾವುದೇ ಜಗಳಗಳಿಲ್ಲದೇ, ಇಎಂಐ ಪಾವತಿ ಮಾಡಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ ಓದಿ.
ಪರಸ್ಪರ ಕೂತು ಚರ್ಚಿಸಿ:
ಇಬ್ಬರೂ ಕೂತು ಒಮ್ಮೆ ಆದಾಯ, ಖರ್ಚು, ಸಾಲಗಳು, ಕ್ರೆಡಿಟ್ ಸ್ಕೋರ್, ಭವಿಷ್ಯದ ಪ್ಲಾನ್‌ಗಳ ಬಗ್ಗೆ ಮಾತನಾಡಿಕೊಳ್ಳಬೇಕು. ಆ ನಂತರ ಸಾಲಗಳಿದ್ದರೆ ಅದನ್ನು ತೀರಿಸೋದು ಹೇಗೆ? ಮುಂದಿನ ಸಕ್ಸಸ್‌ಗಾಗಿ ಜೊತೆಗೂಡಿ ಏನು ಮಾಡ್ಬೇಕು? ಎಂಬುದನ್ನೆಲ್ಲಾ ಚರ್ಚಿಸಬೇಕು.
ಆದಾಯದ ಮೇಲೆ ಇಎಂಐ ಲೆಕ್ಕ ಹಾಕಿ:
ಇಬ್ಬರ ಆದಾಯವನ್ನು ಲೆಕ್ಕ ಹಾಕಿ. ಅಂದರೆ ಇಬ್ಬ ಆದಾಯವನ್ನು ಒಟ್ಟು ಮಾಡಿ, ನಂತರ 30-40% ಗಿಂತ ಹೆಚ್ಚು ಇಎಂಐಗೆ ಹಾಕಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
- ಪತಿ ತಿಂಗಳ ಆದಾಯ: 80,000
- ಪತ್ನಿ ತಿಂಗಳ ಆದಾಯ: 60,000
- ಒಟ್ಟು 1,40,000
- ಇಎಂಐಗೆ ಗರಿಷ್ಠ 42,000-56,000 ಮಾತ್ರ (30-42%). ಈ ಮೂಲಕ ಸಾಲದ ಒತ್ತಡವನ್ನು ಕಮ್ಮಿ ಮಾಡಬಹುದು.
ತಿಂಗಳ ಒಂದು ದಿನ ಮೀಸಲಿಡಿ:
ಪ್ರತೀ ತಿಂಗಳು ಒಂದು ದಿನ ನಿಮ್ಮ ಹಣಕಾಸು ಸಂಬಂಧಿತ ಚರ್ಚೆಗಾಗಿ ನಿಗದಿಪಡಿಸಿದೆ. ಅಲ್ಲಿ ಇಎಂಐ ಪಾವತಿ, ಖರ್ಚುಗಳು, ಉಳಿತಾಯ, ಯೋಜನೆಗಳ ಬಗ್ಗೆ ಚರ್ಚೆ ಮಾಡಿ. ಈ ಸಮಯದಲ್ಲಿ ಒಂದೊಳ್ಳೆ ಜಾಗವನ್ನು ಸೆಟ್ ಮಾಡಿಕೊಂಡು ಚರ್ಚೆ ಮಾಡಿದರೆ ಉತ್ತಮ. ತಾಳ್ಮೆಯಿಂದ, ಖುಷಿಯಿಂದ ಚರ್ಚಿಸಿ. ಕೋಪಕ್ಕೆ ಜಾಗ ನೀಡಬೇಡಿ.
ಎಮರ್ಜೆನ್ಸಿ ಫಂಡ್ ಕ್ರಿಯೇಟ್ ಮಾಡಿ:
ಅಂದರೆ ನೀವು ಪ್ರತೀ ತಿಂಗಳು ಇಎಂಐ ಪಾವತಿಸುವ ಜೊತೆಗೆ ಎಮರ್ಜೆನ್ಸಿ ಫಂಡ್ ಮಾಡಬೇಕು. ಇದು ಕಮ್ಮಿ ಅಂದರೂ 3-6 ತಿಂಗಳು ಜೀವನ ಸಾಗಿಸುವಷ್ಟಿರಬೇಕು. ಇದು ಇಎಂಐ ತಪ್ಪಿದಾ ಅಥವಾ ಆದಾಯ ಕಮ್ಮಿಯಾದಾಗ ಬಳಸಲು ಸಹಾಯಕವಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications