ನವದೆಹಲಿ, ಆಗಸ್ಟ್ 13: ಕೊರೋನಾ ನಂತರ ಮೂನ್ ಲೈಟಿಂಗ್ ದೊಡ್ಡ ಸದ್ದು ಮಾಡಿತ್ತು. ಮೂನ್ ಲೈಟಿಂಗ್ ಮಾಡುತ್ತಿದ್ದವರ ಮೇಲೆ ಅನೇಕ ಕಂಪನಿಗಳು ಕಠಿಣ ಕ್ರಮ ತೆಗೆದುಕೊಂಡಿದ್ದವು.
ರೆಗ್ಯುಲರ್ ಜಾಬ್ ಜೊತೆಗೆ ಯಾವುದೇ ಹೆಚ್ಚುವರಿ ಕೆಲಸ ಮಾಡಿದರೆ ಅದನ್ನು ಮೂನ್‌ಲೈಟಿಂಗ್ ಅಂತ ಹೇಳಲಾಗುತ್ತದೆ. ಸರಳವಾಗಿ ಹೇಳಬೇಕು ಎಂದರೆ 9 ಗಂಟೆಗಳವರೆಗೆ ನೀವು ಒಂದು ಕಂಪನಿಗೆ ಕೆಲಸ ಮಾಡುತ್ತೀರಿ. ಅದು ಮುಗಿದ ಮೇಲೆ ಇನ್ನೊಂದು ಕಂಪನಿಗೆ ಕೆಲಸ ಮಾಡುತ್ತೀರಿ. ಇದನ್ನೇ ಮೂನ್‌ಲೈಟಿಂಗ್ ಎಂದು ಕರೆಯಲಾಗುತ್ತದೆ. ಇದರಿಂದ ಗಳಿಸಿದ ಹಣವನ್ನ ಮೂನ್‌ಲೈಟಿಂಗ್‌ನಿಂದ ಬಂದ ಆದಾಯ ಎಂದು ಕರೆಯಲಾಗುತ್ತದೆ. ಆದಾಯ ತೆರಿಗೆಯಲ್ಲಿ ಮೂನ್‌ಲೈಟಿಂಗ್‌ಗೆ ಪ್ರತ್ಯೇಕ ವಿಭಾಗ ಇಲ್ಲ. ಆದರೆ, ಪ್ರತ್ಯೇಕ ವಿಭಾಗ ಇಲ್ಲ ಎಂದ ಮಾತ್ರಕ್ಕೆ ಅದಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ ಎಂದಲ್ಲ. ಹೆಚ್ಚುವರಿ ಆದಾಯದ ಮೇಲೆ ಹಾಕುವ ತೆರಿಗೆ ಕೆಲಸದ ರೀತಿಯ ಮೇಲೆ ಅವಲಂಬಿಸಿರುತ್ತೆ.

ಇದನ್ನು ಸಂಬಳದ ಆದಾಯ ಎಂದೇ ಪರಿಗಣಿಸಲಾಗುತ್ತದೆ. ಪ್ರೊಫೆಷನಲ್ ಫೀ ಅಥವಾ ಬ್ಯುಸಿನೆಸ್ ಇನ್‌ಕಮ್ ಎಂಬುದನ್ನು ಆಧರಿಸಿರುತ್ತದೆ. ಮೂನ್‌ಲೈಟಿಂಗ್ ಆದಾಯವು ಸ್ಯಾಲರಿ ರೂಪದಲ್ಲಿದ್ದರೆ, ನೀವು ಅದನ್ನು ನಿಮ್ಮ ಮೂಲ ಕಂಪನಿಯ ಆದಾಯದ ಜೊತೆಗೆ ಸ್ಯಾಲರಿ ವಿಭಾಗದಲ್ಲಿ ತೋರಿಸಬಹುದು.
ಕಡಿತ ಮತ್ತು ವಿನಾಯಿತಿಯ ನಂತರ, ಮೂನ್‌ಲೈಟಿಂಗ್‌ನ ಆದಾಯವನ್ನ ಸ್ಲಾಬ್ ರೇಟ್‌ಗೆ ಅನುಗುಣವಾಗಿ ವಿಧಿಸಲಾಗುತ್ತೆ. ಸ್ಟಾಂಡರ್ಡ್ ಡಿಡಕ್ಷನ್, 80ಸಿ, 80ಡಿ, ರೀತಿ ಕ್ಲೇಮ್ ಕೂಡ ಮಾಡಬಹುದು. ಎರಡನೇ ಉದ್ಯೋಗದ ಗಳಿಕೆ ಫ್ರೀಲಾನ್ಸ್ ಕೆಲಸ ಅಥವಾ ಪ್ರೊಫೆಷನಲ್ ಫೀ ಇಂದ ಬಂದ ಹಣವಾಗಿದ್ದರೆ ಬ್ಯುಸಿನೆಸ್ ಮತ್ತು ಪ್ರೊಫೆಷನ್ ವಿಭಾಗದಲ್ಲಿ ಇದರ ಆದಾಯವನ್ನು ದಾಖಲಿಸಬೇಕು. ಇದು ಬ್ಯುಸಿನೆಸ್ ಅಥವಾ ಪ್ರೊಫೆಷನ್‌ನಿಂದ ಬಂದ ಆದಾಯದ ಹಾಗೆ ಈ ಗಳಿಕೆಗೂ ತೆರಿಗೆ ವಿಧಿಸಲಾಗುತ್ತದೆ.
ಮೂನ್‌ಲೈಟಿಂಗ್ ಆದಾಯವನ್ನು ಸಂಬಳದ ರೂಪದಲ್ಲಿ ಪಡೆದರೆ, ಅದನ್ನು ಐಟಿಆರ್ 1 ಫಾರ್ಮ್‌ನಲ್ಲಿ ತೋರಿಸಬೇಕು. ಆದರೆ, ಆದಾಯ 50 ಲಕ್ಷ ಅಥವಾ ಹೆಚ್ಚಾದರೆ ಅಥವಾ ಕ್ಯಾಪಿಟಲ್ ಗೇನ್ಸ್ ಇದ್ದರೆ, ಆಗ ಐಟಿಆರ್ 2 ಫಾರ್ಮ್ ಸಲ್ಲಿಸಬೇಕು. ಇದೇ ರೀತಿ, ಬ್ಯುಸಿನೆಸ್ ಅಥವಾ ಪ್ರೊಫೆಷನಲ್ ಫೀ ರೂಪದಲ್ಲಿ ಹೆಚ್ಚುವರಿ ಆದಾಯ ಇದ್ದರೆ, ತೆರಿಗೆದಾರರು ಪ್ರಿಸಂಪ್ಟಿವ್ ಟ್ಯಾಕ್ಸೇಶನ್ ಸ್ಕೀಮ್ ಅನ್ನ ಆಯ್ಕೆ ಮಾಡಿಕೊಂಡಿದ್ದರೆ, ಆಗ ಐಟಿಆರ್ 4 ಫಾರ್ಮ್ ಸಲ್ಲಿಸಬೇಕಾಗುತ್ತದೆ. ಪ್ರೊಫೆಷನಲ್ ಫೀ ಇಂದ ಒಟ್ಟು ಆದಾಯ 50 ಲಕ್ಷಕ್ಕಿಂತ ಹೆಚ್ಚಿದ್ದರೆ, ಅದನ್ನ ಐಟಿಆರ್ 3 ಫಾರ್ಮ್‌ನಲ್ಲಿ ತೋರಿಸಬೇಕು.
ಫ್ರೀಲಾನ್ಸರ್‌ಗಳು ಮತ್ತು ಕನ್ಸಲ್ಟಂಟ್‌ಗಳು ಪ್ರಿಸಂಪ್ಟಿವ್ ಟ್ಯಾಕ್ಸ್ ಸ್ಕೀಮ್ ಅನ್ನು ಆದಾಯ ತೆರಿಗೆ ಕಾಯ್ದೆ ಪ್ರಕಾರ ಆಯ್ಕೆ ಮಾಡಿಕೊಳ್ಳಬಹುದು. ಸೆಕ್ಷನ್ 44ಎಡಿಎ ಪ್ರಕಾರ, 50 ಲಕ್ಷಕ್ಕಿಂತ ಹೆಚ್ಚು ಒಟ್ಟು ಆದಾಯ ಮೀರದಿದ್ದರೆ ಅಂತಹ ಪ್ರೊಫೆಷನಲ್‌ಗಳಿಗೆ ಈ ಸ್ಕೀಮ್ ಅನ್ವಯ ಆಗುತ್ತದೆ. ಈ ಸ್ಕೀಮ್ ಅಡಿಯಲ್ಲಿ ವೃತ್ತಿಪರರು ತಮ್ಮ 50% ಒಟ್ಟು ಆದಾಯವನ್ನು ಪ್ರಿಸಂಪ್ಟಿವ್ ಆದಾಯ ಅಂತ ತೋರಿಸಬಹುದು. ಲೆಕ್ಕಾಚಾರ ಆ ಮೊತ್ತದ ಮೇಲೆಯೇ ಮಾಡಲಾಗುತ್ತದೆ. ಲೀಗಲ್, ಮೆಡಿಕಲ್, ಇಂಜಿನಿಯರಿಂಗ್, ಟೆಕ್ನಿಕಲ್ ಕನ್ಸಲ್ಟನ್ಸಿ, ಆರ್ಕಿಟೆಕ್ಟ್ ಗಳು ಮತ್ತು ಇತರ ವೃತ್ತಿಯವರು ಈ ಸ್ಕೀಮ್‌ನಲ್ಲಿ ಬರುತ್ತಾರೆ ಎಂದು ಸಿಬಿಡಿಟಿ ತಿಳಿಸಿದೆ.
ಮೂನ್‌ಲೈಟಿಂಗ್ ಸರ್ವೀಸ್‌ಗಳಿಗೆ ಕಂಪನಿಗಳು ಅಥವಾ ವೆಂಡರ್‌ಗಳು ಪಾವತಿ ಮಾಡುವಾಗ ತೆರಿಗೆ ಕಡಿತ ಮಾಡಲಾಗುತ್ತದೆ. ಈ ಮೊತ್ತವನ್ನ ಸರ್ಕಾರಕ್ಕೆ ನೀಡಲಾಗುತ್ತದೆ. ಅಂದರೆ, ನೀವು ಈ ಚಟುವಟಿಕೆಯಲ್ಲಿ ಹಣ ಗಳಿಸುತ್ತಿದ್ದೀರಿ ಎಂದು ಸರ್ಕಾರಕ್ಕೆ ಗೊತ್ತಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಮೂನ್‌ಲೈಟಿಂಗ್ ಆದಾಯವನ್ನು ಮುಚ್ಚಿಡುವುದರ ಬದಲಿಗೆ, ನಿಮ್ಮ ತೆರಿಗೆ ರಿಟರ್ನ್‌ನಲ್ಲಿ ನೀವು ಅದನ್ನ ಘೋಷಣೆ ಮಾಡಿಕೊಂಡು, ತೆರಿಗೆ ಕಟ್ಟಬೇಕು, ಇಲ್ಲವಾದರೆ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು ಎಚ್ಚರ!
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications