ಮುಹೂರ್ತ ಟ್ರೇಡಿಂಗ್: ದೀಪಾವಳಿ ಹೂಡಿಕೆಗೆ ಬೆಸ್ಟ್ ಆಯ್ಕೆ ಯಾವುದು? ಸ್ಟಾಕ್, ಇಟಿಎಫ್ ಅಥವಾ ಚಿನ್ನ?

ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ನವೆಂಬರ್ 8ರ ಭಾನುವಾರ ನಡೆಯಲಿರುವ ಮುಹೂರ್ತ ಟ್ರೇಡಿಂಗ್‌ಗೆ ಶೇರು ಮಾರುಕಟ್ಟೆ ಸಜ್ಜಾಗಿದೆ. ಈ ದಿನದಂದು ನೇರವಾಗಿ ಷೇರುಗಳನ್ನು ಖರೀದಿಸಬೇಕೋ, ಇಂಡೆಕ್ಸ್ ಇಟಿಎಫ್‌ (ETF), ಇಕ್ವಿಟಿ ಮ್ಯೂಚುವಲ್ ಫಂಡ್ ಎಸ್‌ಐಪಿ (SIP) ಆರಂಭಿಸಬೇಕೋ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಬೇಕೋ ಎಂಬ ಲೆಕ್ಕಾಚಾರದಲ್ಲಿ ಹೂಡಿಕೆದಾರರಿದ್ದಾರೆ. ಷೇರು ವಿನಿಮಯ ಕೇಂದ್ರಗಳ ಪ್ರಕಾರ, ಮಧ್ಯಾಹ್ನ 2:05 ರಿಂದ 2:20 ರವರೆಗೆ ಪ್ರಿ-ಓಪನ್ ಸೆಷನ್ ಹಾಗೂ 2:20 ರಿಂದ 3:30 ರವರೆಗೆ ಮುಖ್ಯ ಟ್ರೇಡಿಂಗ್ ನಡೆಯಲಿದೆ. ಈ ವಿಶೇಷ ಸಮಯದಲ್ಲಿ ಲಿಕ್ವಿಡಿಟಿ (ಶೇರುಗಳ ವಹಿವಾಟು) ಕಡಿಮೆಯಿರುವುದರಿಂದ ಶೇರು ದರಗಳಲ್ಲಿ ಏರಿಳಿತ ಹೆಚ್ಚಿರಬಹುದು.

ನೀವು ಮಾಡುತ್ತಿರುವ ಹೂಡಿಕೆ ಬರಿ ಸಾಂಕೇತಿಕವೇ ಅಥವಾ ನಿಮ್ಮ ದೀರ್ಘಾವಧಿ ಪ್ಲಾನ್‌ನ ಭಾಗವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಿ. ಬೆಲೆಗಳಲ್ಲಿ ಏರಿಳಿತವಿರುವುದರಿಂದ 'ಮಾರ್ಕೆಟ್ ಆರ್ಡರ್' ಬದಲಿಗೆ 'ಲಿಮಿಟ್ ಆರ್ಡರ್' ಬಳಸುವುದು ಸೂಕ್ತ. ನೀವು ವಿಶೇಷ T+0 ಪೈಲಟ್ ವ್ಯವಸ್ಥೆ ಆಯ್ದುಕೊಳ್ಳದಿದ್ದರೆ, ಸಾಮಾನ್ಯ T+1 ನಿಯಮದಂತೆ ನಿಮ್ಮ ಶೇರುಗಳು ಹಾಗೂ ಹಣ ಸೋಮವಾರವೇ ಕ್ರೆಡಿಟ್ ಆಗಲಿವೆ. ಹೆಚ್ಚಿನ ಸಣ್ಣ ಹೂಡಿಕೆದಾರರಿಗೆ T+1 ಸೆಟಲ್‌ಮೆಂಟ್ ವ್ಯವಸ್ಥೆಯೇ ಅನ್ವಯಿಸುತ್ತದೆ.

ಮುಹೂರ್ತ ಟ್ರೇಡಿಂಗ್: ಹೂಡಿಕೆಗೆ ಬೆಸ್ಟ್ ಆಯ್ಕೆ ಯಾವುದು?

ಮುಹೂರ್ತ ಟ್ರೇಡಿಂಗ್ ಸಮಯ ಮತ್ತು ಸೆಟಲ್‌ಮೆಂಟ್ ಮಾಹಿತಿ

ಎನ್‌ಎಸ್‌ಇ (NSE) ಮತ್ತು ಬಿಎಸ್‌ಇ (BSE) ನವೆಂಬರ್ 8ರಂದು ಒಟ್ಟು 70 ನಿಮಿಷಗಳ ಕಾಲ ಈಕ್ವಿಟಿ ಕ್ಯಾಶ್ ಮಾರ್ಕೆಟ್ ತೆರೆಯಲಿವೆ. ಮಧ್ಯಾಹ್ನ 2:05 ರಿಂದ ಪ್ರಿ-ಓಪನ್ ಸೆಷನ್‌ನಲ್ಲಿ ಬೆಲೆಗಳು ನಿಗದಿಯಾಗಲಿವೆ. ಇನ್ನು ಭಾನುವಾರ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಅದೇ ದಿನದ ಎನ್‌ಎವಿ (NAV) ಸಿಗುವುದಿಲ್ಲ. ಸೆಬಿ (SEBI) ನಿಯಮದಂತೆ, ಮಧ್ಯಾಹ್ನ 3 ಗಂಟೆಯೊಳಗೆ ಫಂಡ್‌ಗೆ ಹಣ ತಲುಪುವ ಮುಂದಿನ ಕೆಲಸದ ದಿನದ (Business Day) NAV ಅನ್ವಯವಾಗುತ್ತದೆ.

ಷೇರುಗಳು vs ಇಟಿಎಫ್ vs ಮ್ಯೂಚುವಲ್ ಫಂಡ್ vs ಚಿನ್ನ: ವೆಚ್ಚ ಮತ್ತು ತೆರಿಗೆ ವಿವರ

ಹೂಡಿಕೆ ರಂಗನವೆಂಬರ್ 8ರಂದು ಲಿಕ್ವಿಡಿಟಿಅಂದಾಜು ವೆಚ್ಚಗಳುಸೆಟಲ್‌ಮೆಂಟ್/NAVತೆರಿಗೆ ನಿಯಮಗಳು
ನೇರ ಷೇರುಗಳು (Direct stocks)ಲಾರ್ಜ್ ಕ್ಯಾಪ್ ಹೊರತುಪಡಿಸಿ ಉಳಿದವುಗಳಲ್ಲಿ ಕಡಿಮೆ ವಹಿವಾಟುಬ್ರೋಕರೇಜ್; ಖರೀದಿ/ಮಾರಾಟಕ್ಕೆ STT 0.1%; ಖರೀದಿಗೆ ಸ್ಟಾಂಪ್ ಡ್ಯೂಟಿ 0.015%; ಮಾರಾಟ ಮಾಡುವಾಗ DP ಶುಲ್ಕT+1STCG 20%; ₹1.25 ಲಕ್ಷಕ್ಕಿಂತ ಹೆಚ್ಚಿನ ಗಳಿಕೆಗೆ LTCG 12.5% (ಸೆಕ್ಷನ್ 112A)
ಇಂಡೆಕ್ಸ್ ಇಕ್ವಿಟಿ ಇಟಿಎಫ್ (Index equity ETF)ನಿಫ್ಟಿ/ಸೆನ್ಸೆಕ್ಸ್ ಇಟಿಎಫ್‌ಗಳಲ್ಲಿ ಉತ್ತಮ ಲಿಕ್ವಿಡಿಟಿಎಕ್ಸ್‌ಪೆನ್ಸ್ ರೇಷಿಯೋ; STT 0% (ಖರೀದಿ)/0.001% (ಮಾರಾಟ); ಸ್ಟಾಂಪ್ ಡ್ಯೂಟಿ 0.015% (ಖರೀದಿ); ಮಾರಾಟಕ್ಕೆ DP ಶುಲ್ಕT+1ಇಕ್ವಿಟಿ ತೆರಿಗೆ ಶ್ರೇಣಿ: STCG 20%; ₹1.25 ಲಕ್ಷಕ್ಕಿಂತ ಹೆಚ್ಚಿನ ಗಳಿಕೆಗೆ LTCG 12.5%
ಇಕ್ವಿಟಿ ಮ್ಯೂಚುವಲ್ ಫಂಡ್ (ಲಂಪ್-ಸಮ್/SIP)ಎಎಮ್‌ಸಿ ಮೂಲ; ಇಂಟ್ರಾಡೇ ಟ್ರೇಡಿಂಗ್ ಇರುವುದಿಲ್ಲಎಕ್ಸ್‌ಪೆನ್ಸ್ ರೇಷಿಯೋ; ಖರೀದಿಗೆ 0.005% ಸ್ಟಾಂಪ್ ಡ್ಯೂಟಿ; ರಿಡೀಮ್ ಮಾಡುವಾಗ 0.001% STTಮಧ್ಯಾಹ್ನ 3 ಗಂಟೆಯೊಳಗೆ ಫಂಡ್‌ಗೆ ಹಣ ತಲುಪುವ ಮುಂದಿನ ಕೆಲಸದ ದಿನದ NAVಮೇಲೆ ತಿಳಿಸಿದ ಇಕ್ವಿಟಿ ತೆರಿಗೆ ದರಗಳೇ ಅನ್ವಯಿಸುತ್ತವೆ
ಗೋಲ್ಡ್ ಇಟಿಎಫ್ (Gold ETF)ಸಾಧಾರಣ; ಪ್ರಮುಖ ಫಂಡ್‌ಗಳಲ್ಲಿ ಉತ್ತಮ ವಹಿವಾಟುಎಕ್ಸ್‌ಪೆನ್ಸ್ ರೇಷಿಯೋ; ಖರೀದಿಗೆ ಸ್ಟಾಂಪ್ ಡ್ಯೂಟಿ 0.015%; STT ಇರುವುದಿಲ್ಲT+1ನಿಗದಿತ ಮ್ಯೂಚುವಲ್ ಫಂಡ್ ನಿಯಮ; ಗಳಿಕೆಯು ಇನ್‌ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗೆ ಅನುಗುಣವಾಗಿ ಲೆಕ್ಕಚಾರ
ಡಿಜಿಟಲ್ ಗೋಲ್ಡ್ (Digital gold)ಪ್ಲಾಟ್‌ಫಾರ್ಮ್ ಆಧಾರಿತ ಲಿಕ್ವಿಡಿಟಿ; ದರಗಳಲ್ಲಿ ವ್ಯತ್ಯಾಸವಿರಬಹುದುಖರೀದಿ ಮೇಲೆ 3% GST; ಸ್ಟೋರೇಜ್/ಎಕ್ಸಿಟ್ ಶುಲ್ಕಗಳು ಇರಬಹುದುಪ್ಲಾಟ್‌ಫಾರ್ಮ್‌ಗೆ ಅನುಗುಣವಾಗಿರುತ್ತದೆಭೌತಿಕ ಚಿನ್ನದ ನಿಯಮಗಳು: 24 ತಿಂಗಳ ನಂತರ LTCG 12.5%; ಇಲ್ಲವಾದರೆ STCG ಸ್ಲ್ಯಾಬ್

ತೆರಿಗೆ ಹಾಗೂ ಶುಲ್ಕದ ನಿಯಮಗಳ ಮೂಲ: ಎನ್‌ಎಸ್‌ಇ ಹೂಡಿಕೆದಾರರ ಶುಲ್ಕಗಳು (STT, ಸ್ಟಾಂಪ್ ಡ್ಯೂಟಿ), ಸೆಬಿ/ಎಎಂಎಫ್‌ಐ (ಮ್ಯೂಚುವಲ್ ಫಂಡ್ ಸ್ಟಾಂಪ್ ಡ್ಯೂಟಿ, NAV ಕಟ್-ಆಫ್), ಆದಾಯ ತೆರಿಗೆ/ಸಿಬಿಡಿಟಿ (ಜುಲೈ 23, 2024 ರ ನಂತರದ ಬಂಡವಾಳ ಗಳಿಕೆ ತೆರಿಗೆ ನಿಯಮಗಳು) ಮತ್ತು ಸಿಬಿಐಸಿ (ಆಭರಣ/ಡಿಜಿಟಲ್ ಚಿನ್ನದ ಮೇಲೆ 3% GST). ಯಾವುದೇ ಆರ್ಡರ್ ಮಾಡುವ ಮೊದಲು ನಿಮ್ಮ ಬ್ರೋಕರ್ ನೀಡುವ ಡಿಪಿ, ಎಕ್ಸ್‌ಚೇಂಜ್ ಮತ್ತು ಶಾಸನಬದ್ಧ ಶುಲ್ಕಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.

ಮುಹೂರ್ತ ಟ್ರೇಡಿಂಗ್‌ ವೇಳೆ ವಹಿವಾಟು ನಡೆಸಲು ಪ್ರಮುಖ ಸಲಹೆಗಳು

ಒಂದು ಗಂಟೆಯ ಈ ವಿಶೇಷ ಸೆಷನ್‌ನಲ್ಲಿ 'ಲಿಮಿಟ್' ಅಥವಾ 'IOC' ಆರ್ಡರ್‌ಗಳನ್ನು ಬಳಸಿ; ಯಾವುದೇ ಕಾರಣಕ್ಕೂ ಲೆವರೇಜ್ (ಮಾರ್ಜಿನ್) ಪಡೆಯಬೇಡಿ. ಎಸ್‌ಐಪಿ (SIP) ಆರಂಭಿಸುವ ಮುನ್ನ ಯುಪಿಐ/ಇ-ಮ್ಯಾಂಡೇಟ್ ಪರಿಶೀಲಿಸಿ, ಇವುಗಳ ಮಾಹಿತಿ ಸೋಮವಾರವೇ ಅಪ್‌ಡೇಟ್ ಆಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅಂದೇ ಸಂಜೆ ಬ್ರೋಕರ್ ರಿಪೋರ್ಟ್ ಜೊತೆಗೆ ಕಾಂಟ್ರಾಕ್ಟ್ ನೋಟ್ ಹಾಗೂ ಡಿಮ್ಯಾಟ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿ. ತಕ್ಷಣಕ್ಕೆ ಹಣ ಅಥವಾ ಯೂನಿಟ್‌ಗಳು ಬೇಕಿದ್ದಲ್ಲಿ, T+0 ಸೌಲಭ್ಯವನ್ನು ನಂಬಿಕೊಳ್ಳದೇ T+1 ಸೆಟಲ್‌ಮೆಂಟ್ ಅನ್ನೇ ಪ್ಲಾನ್ ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+