ಸಂಪತ್ತನ್ನು ಹೆಚ್ಚಿಸಲು ಯಾರಿಗೆ ತಾನೆ ಮನಸ್ಸಿಲ್ಲ ಹೇಳಿ..ಆದರೆ ಈ ಸಂಪತ್ತಿ ಸೃಷ್ಟಿಸಲು ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ದೀರ್ಘಕಾಲದವರೆಗೆ ಹೂಡಿಕೆ ಮಾಡುವುದು ಮುಖ್ಯ. ಹಣಕಾಸು ಸಲಹೆಗಾರರು ಹೇಳುವ ಪ್ರಕಾರ, ಸಂಯುಕ್ತ ಹೂಡಿಕೆಯು ಹೆಚ್ಚು ಲಾಭವನ್ನು ತರುತ್ತದೆ.
ಇದರರ್ಥ ನೀವು ದೀರ್ಘಾವಧಿಯವರೆಗೆ ಆಸ್ತಿ ವರ್ಗದಲ್ಲಿ ಹೂಡಿಕೆ ಮಾಡಿದಾಗ, ನಂತರದ ವರ್ಷಗಳಲ್ಲಿ ಹೂಡಿಕೆಯ ಮೇಲಿನ ಲಾಭ (ROI) ಆರಂಭಿಕ ವರ್ಷಗಳಿಗಿಂತ ಹೆಚ್ಚಾಗಿರುತ್ತದೆ. ದೀರ್ಘಾವಧಿಯ ಹೂಡಿಕೆಯ ಪ್ರಮುಖ ಅನುಕೂಲವೆಂದರೆ "ಸಂಯುಕ್ತ ಬಡ್ಡಿ". ಅಂದರೆ, ಗಳಿಸಿದ ಬಡ್ಡಿಯನ್ನು ಮತ್ತೆ ಹೂಡಿಕೆ ಮಾಡಿದಾಗ, ಅದರ ಮೇಲೆ ಮತ್ತೆ ಬಡ್ಡಿ ಗಳಿಸುತ್ತೀರಿ. ಮೊದಲ ಕೆಲವು ವರ್ಷಗಳಲ್ಲಿ ಉತ್ಪತ್ತಿಯಾಗುವ ಆದಾಯವು ಆರಂಭಿಕ ಹೂಡಿಕೆಗೆ ಸೇರಿಸಲ್ಪಡುತ್ತದೆ, ಹೀಗಾಗಿ ನಂತರದ ವರ್ಷಗಳಲ್ಲಿ ಮೂಲವು ಹೆಚ್ಚಾಗುತ್ತದೆ.

ಕಾಲಾವಧಿಯ ಕಾರಣದಿಂದಾಗಿ ಹೂಡಿಕೆಯ ಮೊತ್ತದಲ್ಲಿನ ಹೆಚ್ಚಳವು ಸಂಯುಕ್ತ ಬಡ್ಡಿಯ ಪರಿಣಾಮವಾಗಿದೆ. ಇದು ಎಷ್ಟು ಪ್ರಸಿದ್ಧ ಮತ್ತು ಪ್ರಬಲವಾದ ಸಾಧನವೆಂದರೆ, ಇದನ್ನು ರೂಪಕ ಪದವಾಗಿ 'ಮ್ಯಾಜಿಕ್' ಎಂದೂ ಕರೆಯುತ್ತಾರೆ. ಸಂಯುಕ್ತ ಬಡ್ಡಿಯು ದೀರ್ಘಾವಧಿಯಲ್ಲಿ ಹಣವನ್ನು ವೇಗವಾಗಿ ಬೆಳೆಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಎಷ್ಟು ಶಕ್ತಿಯುತವಾಗಿದೆ ಎಂದರೆ, ಐನ್‌ಸ್ಟೈನ್ ಅವರಂತಹ ಮಹಾನ್ ವಿಜ್ಞಾನಿಯೂ ಇದನ್ನು "ವಿಶ್ವದ ಎಂಟನೇ ಅದ್ಭುತ" ಎಂದು ಕರೆದಿದ್ದಾರೆ.
ಸಂಯುಕ್ತ ಬಡ್ಡಿಯ ಶಕ್ತಿಯನ್ನು ತೋರಿಸಲು, ನಾವು "ಇನ್ವೆಸ್ಕೊ ಇಂಡಿಯಾ ಕಾಂಟ್ರಾ ಫಂಡ್" ಎಂಬ ಮ್ಯೂಚುವಲ್ ಫಂಡ್ ಯೋಜನೆಯನ್ನು ಆರಿಸಿಕೊಳ್ಳೋಣ. 2007 ರಿಂದ ಪ್ರಾರಂಭವಾದ ಇನ್ವೆಸ್ಕೊ ಇಂಡಿಯಾ ಕಾಂಟ್ರಾ ಫಂಡ್ ಎಂಬ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಕಡಿಮೆ ಮೌಲ್ಯದ, ಆದರೆ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ.
ಒಂದು ಲಕ್ಷ ರೂಪಾಯಿಗಳನ್ನು "ಇನ್ವೆಸ್ಕೊ ಇಂಡಿಯಾ ಕಾಂಟ್ರಾ ಫಂಡ್" ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ರೆ ಅದು ಎರಡು ವರ್ಷಗಳ ನಂತರ, ಹೂಡಿಕೆಯ ಮೌಲ್ಯ 1.06 ಲಕ್ಷ ರೂಪಾಯಿಗಳಿಗೆ ಏರಿಕೆ ಕ ಂಡಿತ್ತು. ಮೂರು ವರ್ಷಗಳ ನಂತರ, ಹೂಡಿಕೆಯ ಮೌಲ್ಯ 1.58 ಲಕ್ಷ ರೂಪಾಯಿಗಳಿಗೆ ಏರಿತ್ತು. ಐದು ವರ್ಷಗಳ ನಂತರ, ಹೂಡಿಕೆಯ ಮೌಲ್ಯ 2.39 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿತ್ತು. ಏಳು ವರ್ಷಗಳ ನಂತರ, ಹೂಡಿಕೆಯ ಮೌಲ್ಯ 2.48 ಲಕ್ಷ ರೂಪಾಯಿಗಳಿಗೆ ಏರಿತು. 10 ವರ್ಷಗಳ ನಂತರ, ಹೂಡಿಕೆಯ ಮೌಲ್ಯ 3.62 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.
ಒಟ್ಟಾರೆ 2007 ರಲ್ಲಿ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದವರು ಈಗ 11.57 ಲಕ್ಷ ರೂಪಾಯಿಗಳನ್ನು ಹೊಂದಿದ್ದಾರೆ, ಇದು ವಾರ್ಷಿಕವಾಗಿ ಶೇಕಡಾ 14.70 ರಷ್ಟು ಲಾಭವನ್ನು ನೀಡಿದೆ.
ಇದು ವಿರುದ್ಧ ಹೂಡಿಕೆ ತಂತ್ರವನ್ನು ಅನುಸರಿಸುವ ಒಂದು ಮ್ಯೂಚುವಲ್ ಫಂಡ್ ಯೋಜನೆಯಾಗಿದ್ದು, ಹೆಚ್ಚಿನ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. ಮ್ಯೂಚುಯಲ್ ಫಂಡ್ ಯೋಜನೆಯ ಒಟ್ಟು ಆಸ್ತಿ ಗಾತ್ರ ₹ 16,292 ಕೋಟಿ (ಇತ್ತೀಚಿನ AMFI ದತ್ತಾಂಶದ ಪ್ರಕಾರ ). ಈ ಯೋಜನೆಯು 97.5 ಪ್ರತಿಶತವನ್ನು ಈಕ್ವಿಟಿಯಲ್ಲಿ ಮತ್ತು ಉಳಿದ ಭಾಗವನ್ನು ನಗದು ರೂಪದಲ್ಲಿ ಹೊಂದಿದೆ. ಈ ಯೋಜನೆಯ ಪ್ರಮುಖ ಪಾಲುದಾರ ಷೇರುಗಳೆಂದರೆ HDFC ಬ್ಯಾಂಕ್ , ICICI ಬ್ಯಾಂಕ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್, M&M, ಅಪೊಲೊ ಆಸ್ಪತ್ರೆಗಳು, ಜೊಮಾಟೊ, NTPC ಮತ್ತು L&T ಆಗಿದೆ.
Disclaimer:
The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications