ಇಂದಿನಿಂದ ಭಾರತದಲ್ಲಿ ಹೊಸ ಜಿಎಸ್‌ಟಿ ದರಗಳು ಜಾರಿಗೆ ಬಂದಿವೆ. ದಿನನಿತ್ಯದ ಆಹಾರ ಪದಾರ್ಥಗಳಿಂದ ಹಿಡಿದು ಕಾರುಗಳು, ಮೊಬೈಲ್ ಫೋನ್‌ಗಳು, ಗೃಹೋಪಯೋಗಿ ಸಾಧನಗಳವರೆಗೆ, ಜಿಎಸ್‌ಟಿ 2.0 ಪ್ರತಿಯೊಬ್ಬರ ಜೀವನದ ಮೇಲೂ ಪ್ರಭಾವ ಬೀರುತ್ತಿದೆ. ಹಬ್ಬದ ಕಾಲಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಜನರು ಹೊಸ ವಸ್ತುಗಳ ಖರೀದಿಗೆ ತಯಾರಾಗುತ್ತಿರುವುದು ಸಹಜ. ವಿಶೇಷವಾಗಿ ನವರಾತ್ರಿ, ಧನ್ ತೇರಸ್ ಮೊದಲಾದ ದಿನಗಳಲ್ಲಿ ಚಿನ್ನ ಖರೀದಿಯ ಕ್ರೇಜ್ ಇನ್ನಷ್ಟು ಹೆಚ್ಚಾಗುತ್ತದೆ.

ಚಿನ್ನದ ಮೇಲಿನ GST ದರ ಯಥಾಸ್ಥಿತಿಯಲ್ಲಿ:
ಚಿನ್ನದ ಮೇಲಿನ ಜಿಎಸ್‌ಟಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಚಿನ್ನದ ಮಾರುಕಟ್ಟೆ ಅತಿ ಸೂಕ್ಷ್ಮವಾಗಿರುವುದರಿಂದ ಜಿಎಸ್‌ಟಿ ಕೌನ್ಸಿಲ್ ಚಿನ್ನದ ಮೇಲಿನ ತೆರಿಗೆ ದರವನ್ನು ಶೇಕಡಾ 3 ರಷ್ಟೇ ಉಳಿಸಲು ತೀರ್ಮಾನಿಸಿದೆ. ಅಂದರೆ, ಈಗ ಚಿನ್ನ ಖರೀದಿಸುವಾಗ ರೂ. 3% ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತದೆ.
ಮೇಕಿಂಗ್ ಶುಲ್ಕ ಮತ್ತು ಎರಡು ಹಂತದ ತೆರಿಗೆ:
ಚಿನ್ನದ ಆಭರಣ ಖರೀದಿಸುವಾಗ ಕೇವಲ ಚಿನ್ನದ ಮೇಲಿನ GST ಮಾತ್ರವಲ್ಲದೆ, ತಯಾರಿಕೆ ಶುಲ್ಕದ ಮೇಲೂ ತೆರಿಗೆ ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ನೀವು 10 ಗ್ರಾಂ 22 ಕ್ಯಾರೆಟ್ ಚಿನ್ನದ ಉಂಗುರ ಖರೀದಿಸಿದರೆ, ಮೊದಲು ಚಿನ್ನದ ತೂಕಕ್ಕೆ ರೂ. 3% ಜಿಎಸ್‌ಟಿ ಅನ್ವಯಿಸುತ್ತದೆ. ಅದಲ್ಲದೆ, ಆಭರಣ ತಯಾರಿಕೆಗಾಗಿ ವ್ಯಾಪಾರಿಗಳು ವಸೂಲಿ ಮಾಡುವ ಮೇಕಿಂಗ್ ಶುಲ್ಕದ ಮೇಲೆ ರೂ. 5% ತೆರಿಗೆ ವಿಧಿಸಲಾಗುತ್ತದೆ. ಈ ಎರಡು ಹಂತದ ತೆರಿಗೆ ಪದ್ದತಿಯನ್ನು ಹೊಸ ಜಿಎಸ್‌ಟಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಮುಂದುವರೆಸಲಾಗಿದೆ.
ಇತ್ತೀಚಿನ ಚಿನ್ನದ ದರ ವಿವರ:
ನವರಾತ್ರಿಯ ಮೊದಲ ದಿನದಂತೆಯೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಸೆಪ್ಟೆಂಬರ್ 22, 2025ರ ಮಾರುಕಟ್ಟೆ ದರ ಪ್ರಕಾರ:
10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ. 1,12,580
10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ. 1,03,200
ಈ ಬೆಲೆ ಏರಿಕೆ ಹಬ್ಬದ ಖರೀದಿದಾರರಲ್ಲಿ ಸ್ವಲ್ಪ ಒತ್ತಡವನ್ನುಂಟುಮಾಡಿದರೂ, ಚಿನ್ನದ ಮೇಲಿನ ಜನರ ಪ್ರೀತಿ ಎಂದಿಗೂ ಕಡಿಮೆಯಾಗಿಲ್ಲ.
ಡಿಜಿಟಲ್ ಚಿನ್ನದ ಮೇಲಿನ GST:
ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಡಿಜಿಟಲ್ ಚಿನ್ನದ ಖರೀದಿ ಹೆಚ್ಚು ಜನಪ್ರಿಯವಾಗುತ್ತಿದೆ. ಇದು ಸುರಕ್ಷಿತವಾಗಿರುವುದಲ್ಲದೆ, ಆನ್‌ಲೈನ್ ಮೂಲಕ ತಕ್ಷಣ ಖರೀದಿ ಮಾಡಲು ಅನುಕೂಲಕರವಾಗಿದೆ. ಆದರೆ, ಡಿಜಿಟಲ್ ಚಿನ್ನದ ಮೇಲೂ ರೂ. 3% ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತದೆ. ಆದ್ದರಿಂದ, ಭೌತಿಕ ಚಿನ್ನವಾಗಲಿ ಅಥವಾ ಡಿಜಿಟಲ್ ಚಿನ್ನವಾಗಲಿ, ತೆರಿಗೆ ದರದಲ್ಲಿ ಯಾವುದೇ ವಿನಾಯಿತಿ ಇಲ್ಲ.
ಈ ನವರಾತ್ರಿಯಲ್ಲಿ ಅಥವಾ ಧನ್ ತೇರಸ್ ಸಂದರ್ಭದಲ್ಲಿ ಚಿನ್ನ ಖರೀದಿಸಲು ಯೋಚಿಸುತ್ತಿರುವವರು ಜಿಎಸ್‌ಟಿ ದರ ಹಾಗೂ ಮೇಕಿಂಗ್ ಶುಲ್ಕದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೊಂದಿರಬೇಕು. ರೂ. 3% ಜಿಎಸ್‌ಟಿ ಮತ್ತು ರೂ. 5% ಮೇಕಿಂಗ್ ಶುಲ್ಕ ಸೇರಿ ಒಟ್ಟಾರೆಯಾಗಿ ಖರ್ಚು ಎಷ್ಟು ಆಗಬಹುದು ಎಂಬುದನ್ನು ಪೂರ್ವಭಾವಿಯಾಗಿ ಲೆಕ್ಕ ಹಾಕಿಕೊಂಡರೆ ಖರೀದಿಯ ಅನುಭವ ಸುಗಮವಾಗುತ್ತದೆ.


Click it and Unblock the Notifications