2026-27ನೇ ಸಾಲಿನ ಕೇಂದ್ರ ಬಜೆಟ್ (Union Budget 2026-27) ಮಂಡನೆ ಆಗಿಯೂ ಆಯ್ತು, ಹಲವು ಯೋಜನೆಗಳನ್ನೂ ಘೋಷಿಸಲಾಗಿದೆ. ಈ ಮಧ್ಯೆ ಫೆಬ್ರವರಿ 1 ರಿಂದ ಹಲವು ಸೇವೆಗಳ ನಿಯಮಗಳು ಬದಲಾವಣೆಯಾಗಿದೆ. ಫೆಬ್ರವರಿ 2026 ರಿಂದ ಬ್ಯಾಂಕಿಂಗ್ (Banking), ಕ್ರೆಡಿಟ್ ಕಾರ್ಡ್, ವಾಹನ ಹಾಗೂ ಆಸ್ತಿ ಸಂಬಂಧಿಸಿ ಹಲವು ನಿಯಮಗಳು ಬದಲಾಗಲಿದೆ ಎಂದು ವರದಿಯಾಗಿದೆ. ಈ ಪರಿಣಾಮ ಕ್ರೆಡಿಟ್ ಕಾರ್ಡ್ ರಿವಾರ್ಡ್, IMPS (Immediate Payment Service) ಶುಲ್ಕಗಳು, KYC ಮತ್ತು ಆಧಾರ್ ಆಧಾರಿತ ಆಸ್ತಿ ನೋಂದಣಿಯಲ್ಲಿ ಪ್ರಮುಖ ಪರಿಷ್ಕರಣೆಗಳು ಜಾರಿಯಾಗುವ ಸಾಧ್ಯತೆ ಇದೆ.

ಐಸಿಐಸಿಐ ಬ್ಯಾಂಕ್‌ನಿಂದ ಮಹತ್ವದ ನಿರ್ಧಾರ
ICICI ಬ್ಯಾಂಕ್ ಫೆಬ್ರವರಿ 1 ರಿಂದ ತನ್ನ ರಿಟೇಲ್ ಕ್ರೆಡಿಟ್ ಕಾರ್ಡ್‌ನಲ್ಲಿ ಬದಲಾವಣೆ ತರಲಿದೆ. ಇನ್‌ಸ್ಟೆಂಟ್ ಪ್ಲಾಟಿನಂ ಕಾರ್ಡ್‌ಗಳ ಮೂಲಕ BookMyShow ನಲ್ಲಿ ಪಡೆಯುತ್ತಿದ್ದ ಉಚಿತ ಚಲನಚಿತ್ರ ಸೌಲಭ್ಯ ರದ್ದಾಗಲಿದೆ ಎನ್ನಲಾಗಿದೆ. ಇತರೆ ಕ್ರೆಡಿಟ್ ಕಾರ್ಡ್‌ಗಳು ನಿರ್ದಿಷ್ಟ ತ್ರೈಮಾಸಿಕ ವೆಚ್ಚದ ಮಿತಿಯೊಂದಿಗೆ ಈ ಪ್ರಯೋಜನ ಮುಂದುವರಿಸಲಿವೆ.
ಸಾರಿಗೆ ವಹಿವಾಟುಗಳಿಗೆ (ರೈಲು, ಸಾರ್ವಜನಿಕ ಸಾರಿಗೆ) ರಿವಾರ್ಡ್ ಪಾಯಿಂಟ್‌ಗಳಲ್ಲಿ ಇನ್ಮೇಲೆ ಮಿತಿ ಹೇರಲಿದೆ. Rubyx, Sapphiro, Emeralde ಕಾರ್ಡ್‌ಗಳಿಗೆ ತಿಂಗಳಿಗೆ ₹20,000, Coral, Platinum, ಆಯ್ದ ಕೋ-ಬ್ರಾಂಡ್ ಕಾರ್ಡ್‌ಗಳಿಗೆ ತಿಂಗಳಿಗೆ ₹10,000 ವರೆಗೆ ಪಾಯಿಂಟ್‌ಗಳು ಲಭ್ಯವಾಗಲಿದೆ.
ICICI ಬ್ಯಾಂಕ್, HPCL ಸೂಪರ್ ಸೇವರ್ ಸೇರಿದಂತೆ ಆಯ್ದ ಕಾರ್ಡ್‌ಗಳ ಮೇಲೆ, ತಿಂಗಳಿಗೆ ₹40,000 ವರೆಗಿನ ವಿಮಾ ವಹಿವಾಟುಗಳಿಗೂ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವುದನ್ನು ಮುಂದುವರಿಸಲಿದೆ.
ಎಸ್‌ಬಿಐ ಗ್ರಾಹಕರಿಗೆ ಶಾಕ್!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫೆಬ್ರವರಿ 15 ರಿಂದ ಆನ್‌ಲೈನ್ IMPS ಸೇವಾ ಶುಲ್ಕಗಳನ್ನು ಪರಿಷ್ಕರಿಸಲಿದೆ. ಇಂಟರ್ನೆಟ್/ಮೊಬೈಲ್ ಬ್ಯಾಂಕಿಂಗ್/YONO ಮೂಲಕ ₹25,000 ವರೆಗೆ ವರ್ಗಾವಣೆ ಉಚಿತವಾಗಿರುತ್ತದೆ. ₹25,000-₹1 ಲಕ್ಷಕ್ಕೆ ₹2+GST, ₹1-₹2 ಲಕ್ಷಕ್ಕೆ ₹6+GST, ಹಾಗೂ ₹2-₹5 ಲಕ್ಷಕ್ಕೆ ₹10+GST ಶುಲ್ಕ ವಿಧಿಸುವುದಾಗಿ ಹೇಳಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್
HDFC ಬ್ಯಾಂಕ್ ಫೆಬ್ರವರಿ 1 ರಿಂದ ತನ್ನ ಇನ್ಫಿನಿಯಾ ಮೆಟಲ್ ಕ್ರೆಡಿಟ್ ಕಾರ್ಡ್‌ನ ರಿವಾರ್ಡ್ ಪಾಯಿಂಟ್‌ಗಳ ರಿಡಿಂಪ್ಶನ್ ನಿಯಮ ಪರಿಷ್ಕರಿಸಿದೆ. ಈ ಕಾರ್ಡ್‌ನ ರಿವಾರ್ಡ್ ಪಾಯಿಂಟ್‌ಗಳನ್ನು ತಿಂಗಳಿಗೆ ಗರಿಷ್ಠ ಐದು ಬಾರಿ ರಿಡೀಮ್ ಮಾಡಲು ಅವಕಾಶವಿದೆ.
ಪಿಎನ್‌ಬಿ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗ್ರಾಹಕರಿಗೆ ಆರ್‌ಬಿಐ ಮಾರ್ಗಸೂಚಿಗಳಂತೆ KYC ನವೀಕರಿಸಲು ಸೂಚಿಸಲಾಗಿದೆ. ಹಳೆಯ KYC ಖಾತೆಗಳನ್ನು ಫೆಬ್ರವರಿ 2, 2026 ರೊಳಗೆ ನವೀಕರಿಸದಿದ್ದರೆ, ಅಕೌಂಟ್ ಬಳಕೆದಾರರಿಗೆ ಹಲವು ತೊಂದರೆಗಳಾಗಲಿದೆ ಎನ್ನಲಾಗಿದೆ.
ಫಾಸ್ಟ್ಯಾಗ್ ಹೊಸ ನಿಯಮ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫೆಬ್ರವರಿ 1 ರಿಂದ FASTag ನ 'ನೋ ಯುವರ್ ವೆಹಿಕಲ್' (KYV) ಪ್ರಕ್ರಿಯೆ ರದ್ದುಗೊಳಿಸಿದೆ. FASTag ನೀಡುವಾಗ ವಾಹನ ವಿವರ ಪರಿಶೀಲನೆಯ ಸಂಪೂರ್ಣ ಜವಾಬ್ದಾರಿ ಬ್ಯಾಂಕುಗಳಿಗಿರುತ್ತದೆ.


Click it and Unblock the Notifications