ಹೊಸ ವರ್ಷದ ತಯಾರಿ ಈಗಾಗಲೇ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ 2024 ರ ಮೊದಲಾರ್ಧದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಿಗದಿಪಡಿಸಲಾಗಿದೆ. ವರ್ಷಾಂತ್ಯಕ್ಕೂ ಮುನ್ನವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
ಬೆಲೆ ಇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಘೋಷಣೆ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಪ್ರತಿ ಲೀಟರ್‌ಗೆ ಹತ್ತು ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ. ಏಪ್ರಿಲ್ ಮತ್ತು ಮೇ 2024 ರ ಲೋಕಸಭಾ ಚುನಾವಣೆಯ ಮೊದಲು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ, ಪೆಟ್ರೋಲಿಯಂ ಸಚಿವಾಲಯವು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ 8 ರಿಂದ 10 ರೂಪಾಯಿಗಳವರೆಗಿನ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಪ್ರಧಾನಿ ಮೋದಿಯವರ ಅನುಮೋದನೆಗಾಗಿ ಈಗ ಕಾಯಲಾಗುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಯು 10 ರೂಪಾಯಿ ಇಳಿಕೆಯಾಗಬಹುದು. ಈ ಹಿಂದೆ ಎರಡೂ ಇಂಧನಗಳ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಕ್ರಮವಾಗಿ 8 ರೂಪಾಯಿ ಮತ್ತು ಆರು ರೂಪಾಯಿಯಷ್ಟು ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಕೇಂದ್ರವು ನಿರ್ಧರಿದೆ. ಇದಾದ ಸುಮಾರು ಎರಡು ವರ್ಷಗಳ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ.
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿಯುತ್ತಿದ್ದು, ಭಾರತದಲ್ಲಿ ಇಂಧನ ಬೆಲೆಯನ್ನು ಕೂಡಾ ಕಡಿಮೆ ಮಾಡಬೇಕು ಎಂಬ ಬೇಡಿಕೆಯಿದೆ. ಪ್ರಸ್ತುತ, ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 96.71 ರೂಪಾಯಿ ಮತ್ತು 89.62 ರೂಪಾಯಿ ಆಗಿದೆ. ಆದರೂ ಮುಂಬೈ ಮತ್ತು ಬೆಂಗಳೂರಿನಂತಹ ಕೆಲವು ದೊಡ್ಡ ನಗರಗಳಲ್ಲಿ ಇಂಧನ ಬೆಲೆಗಳು 100 ರೂಪಾಯಿಗಿಂತ ಹೆಚ್ಚಿದೆ.
ಭಾರತದ ಹಲವಾರು ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 110 ರೂಪಾಯಿ ಮೀರಿದೆ. ಪ್ರಾಥಮಿಕವಾಗಿ ಕೋವಿಡ್-19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ಮಾರುಕಟ್ಟೆಯ ಬದಲಾವಣೆಗಳಿಂದಾಗಿ ಕಚ್ಚಾ ತೈಲದ ಬೆಲೆ ಅಧಿಕವಾಗಿದೆ.
ಇಂದಿನ ಪೆಟ್ರೋಲ್ ದರ ಪರಿಶೀಲಿಸಿ
ನವದೆಹಲಿ: 96.72 ರೂಪಾಯಿ
ಕೋಲ್ಕತ್ತಾ: 106.03 ರೂಪಾಯಿ
ಮುಂಬೈ: 106.31 ರೂಪಾಯಿ
ಚೆನ್ನೈ: 102.63 ರೂಪಾಯಿ
ಗುರುಗ್ರಾಮ: 97.04 ರೂಪಾಯಿ
ನೋಯ್ಡಾ: 96.65 ರೂಪಾಯಿ
ಬೆಂಗಳೂರು: 101.94 ರೂಪಾಯಿ
ಭುವನೇಶ್ವರ: 103.19 ರೂಪಾಯಿ
ಚಂಡೀಗಢ: 96.20 ರೂಪಾಯಿ
ಹೈದಾರಾಬಾದ್: 109.66 ರೂಪಾಯಿ
ಜೈಪುರ: 108.48 ರೂಪಾಯಿ
ಲಕ್ನೋ: 96.47 ರೂಪಾಯಿ
ಪಾಟ್ನಾ: 107.24 ರೂಪಾಯಿ
ತಿರುವನಂತಪುರಂ: 109.42 ರೂಪಾಯಿ
ಡಿಸೇಲ್ ಬೆಲೆ ಎಷ್ಟಿದೆ ಪರಿಶೀಲಿಸಿ
ನವದೆಹಲಿ: 89.62 ರೂಪಾಯಿ
ಕೋಲ್ಕತ್ತಾ: 92.76 ರೂಪಾಯಿ
ಮುಂಬೈ: 94.27 ರೂಪಾಯಿ
ಚೆನ್ನೈ: 94.24 ರೂಪಾಯಿ
ಗುರುಗ್ರಾಮ: 89.91 ರೂಪಾಯಿ
ನೋಯ್ಡಾ: 89.82 ರೂಪಾಯಿ
ಬೆಂಗಳೂರು: 87.89 ರೂಪಾಯಿ
ಭುವನೇಶ್ವರ: 94.76 ರೂಪಾಯಿ
ಚಂಡೀಗಢ: 84.26 ರೂಪಾಯಿ
ಹೈದಾರಾಬಾದ್: 97.82 ರೂಪಾಯಿ
ಜೈಪುರ: 93.72 ರೂಪಾಯಿ
ಲಕ್ನೋ: 89.66 ರೂಪಾಯಿ
ಪಾಟ್ನಾ: 94.04 ರೂಪಾಯಿ
ತಿರುವನಂತಪುರಂ: 98.24 ರೂಪಾಯಿ


Click it and Unblock the Notifications