ಅಂತೂ ಹಳೇ ವರ್ಷ ಮುಗಿದು, ಹೊಸ ವರ್ಷದ ಆಗಮನವಾಗಿದೆ. 2026ಕ್ಕೆ ಸ್ವಾಗತ ಹೇಳಿದ ಜನರಿಗೆ, ಆರಂಭದಲ್ಲೇ ಶಾಕ್ ಮೇಲೆ ಶಾಕ್ ಕಾದಿದೆ. ಜನವರಿ 1, 2025 ರಿಂದ ಹಲವು ನೀತಿ ಮತ್ತು ನಿಯಮಗಳು ಬದಲಾವಣೆಯಾಗಲಿದೆ. ಇದೀಗ ಹೊಸ ವರ್ಷದ, ಹೊಸ ನಿಯಮಗಳು ರೈತರು, ಉದ್ಯೋಗಿಗಳು, ಯುವಕರು ಮತ್ತು ಸಾಮಾನ್ಯ ಜನರ ಮೇಲೆ ಭಾರೀ ಪರಿಣಾಮ ಬೀರಲಿದೆ. ಅದರಲ್ಲೂ ಬ್ಯಾಂಕಿಂಗ್ ನಿಯಮಗಳು, ಇಂಧನ ಬೆಲೆಗಳು ಮತ್ತು ವಿವಿಧ ಸರ್ಕಾರಿ ಯೋಜನೆಗಳಲ್ಲಿ ಮಹತ್ವದ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

PAN-ಆಧಾರ್ ಲಿಂಕ್ ಕಡ್ಡಾಯ:
PAN ಮತ್ತು ಆಧಾರ್ ಅನ್ನು ಇನ್ನೂ ಲಿಂಕ್ ಮಾಡದಿದ್ದರೆ, ಬ್ಯಾಂಕಿಂಗ್ ಮತ್ತು ಸರ್ಕಾರಿ ಸೇವೆಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಆದ್ರೆ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಬಹುದು. ಇದು ಟ್ಯಾಕ್ಸ್ ಫೈಲಿಂಗ್, ರಿಟರ್ನ್ಸ್ ಮತ್ತು ಪ್ರಮುಖ ಬ್ಯಾಂಕಿಂಗ್ ಸೇವೆಗಳಿಗೆ ಅಡ್ಡಿಯಾಗಬಹುದು.
8ನೇ ವೇತನ ಆಯೋಗ ಜಾರಿ:
ಡಿಸೆಂಬರ್ 31, 2025ಕ್ಕೆ 7ನೇ ವೇತನ ಆಯೋಗದ ಅವಧಿ ಕೊನೆಗೊಂಡಿದೆ. ಆ ಹಿನ್ನೆಲೆ ಜನವರಿ 1, 2026ರಿಂದ ಹೊಸ 8ನೇ ಆಯೋಗ ಜಾರಿಗೆ ಬರಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ ಸಂಬಳ ಮತ್ತು ಪಿಂಚಣಿಯಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು.
ವಾರಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್
ಪ್ರಸ್ತುತ 15 ದಿನಗಳಿಗೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗುತ್ತಿದೆ. ಆದ್ರೆ ಇದೀಗ ವರದಿ ಪ್ರಕಾರ ಕ್ರೆಡಿಟ್ ಬ್ಯೂರೋಗಳು ಇನ್ಮೇಲೆ ಪ್ರತಿ ವಾರವೂ ಗ್ರಾಹಕರ ಡೇಟಾವನ್ನು ಅಪ್ಡೇಟ್ ಮಾಡಲಿದೆ. ಇದರಿಂದ ಸಾಲ ಪಡೆಯುವ ಅರ್ಹತೆಗಳಿಗೆ ಮತ್ತಷ್ಟು ಸುಲಭವಾಗಲಿದೆ.
ಎಲ್‌ಪಿಜಿ ಮತ್ತು ಇಂಧನ ಬೆಲೆ ಪರಿಷ್ಕರಣೆ
ದೇಶೀಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಹಾಗೂ ಏವಿಯೇಶನ್ ಟರ್ಬೈನ್ ಫ್ಯುಯಲ್ (ATF) ಬೆಲೆಗಳು ಪರಿಷ್ಕರಣೆಯಾಗಿದ್ದು, ಬೆಲೆ ಕೂಡಾ ಏರಿಕೆಯಾಗಿದೆ.
ಐಟಿಆರ್ ಪರಿಷ್ಕರಣೆ ಮಾಡಲಾಗುವುದಿಲ್ಲ
ಇಂದಿನಿಂದ ತೆರಿಗೆದಾರರು AY2025-26 ರ ಐಟಿಆರ್ ಫೈಲ್ ಅನ್ನು ಪರಿಷ್ಕರಣೆ ಮಾಡಿ ಮತ್ತೆ ಸಲ್ಲಿಸಲಾಗುವುದಿಲ್ಲ. ಪರಿಷ್ಕೃತ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿತ್ತು. ಅದೇ ರೀತಿ ಇದೀಗ ಗಡುವು ಮುಗಿದಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications