ಮಕ್ಕಳ ಭವಿಷ್ಯ ಸುಂದರವಾಗಿರಬೇಕು, ಭದ್ರವಾಗಿರಬೇಕು ಎಂದು ಪ್ರತಿ ಪೋಷಕರು ಬಯಸುವುದು ಸಹಜ. ಇದಕ್ಕಾಗಿಯೇ ಕೇಂದ್ರ ಸರ್ಕಾರ NPS ವಾತ್ಸಲ್ಯ ಯೋಜನೆಯನ್ನು ಆರಂಭಿಸಿರುವುದು ನಿಮಗೆಲ್ಲಾ ತಿಳಿದಿರುವ ವಿಚಾರವೇ..ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾದ NPS ವಾತ್ಸಲ್ಯ ಯೋಜನೆಯು ಪೋಷಕರಿಗೆ ತಮ್ಮ ಮಕ್ಕಳ ಆರ್ಥಿಕ ಸ್ಥಿರತೆಗಾಗಿ ಯೋಜನೆ ರೂಪಿಸಲು ಸಹಾಯ ಮಾಡುತ್ತದೆ
ಈ ಯೋಜನೆಯು 0-18 ವರ್ಷ ವಯಸ್ಸಿನ ಭಾರತೀಯ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟವಾದ ಪಿಂಚಣಿ ಯೋಜನೆಯಾಗಿದೆ. ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯುವ ಮೂಲಕ, ಅವರು ನಿವೃತ್ತಿಗಾಗಿ ಉಳಿತಾಯ ಮಾಡಲು ಒಂದು ಉತ್ತಮ ಆರಂಭವನ್ನು ನೀಡಬಹುದು. ನಿಮ್ಮ ಮಗು 60 ವರ್ಷ ವಯಸ್ಸಿನವರಾಗುವ ವೇಳೆಗೆ 100 ಕೋಟಿ ರೂಪಾಯಿಗಳ ಬೃಹತ್ ನಿವೃತ್ತಿ ನಿಧಿಯನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎಂದರೇನು?
ಎನ್‌ಪಿಎಸ್ ವಾತ್ಸಲ್ಯ ಯೋಜನೆಯು ಭಾರತದಲ್ಲಿ ಮಕ್ಕಳಿಗಾಗಿ ಒಂದು ವಿಶೇಷ ಉಳಿತಾಯ ಯೋಜನೆಯಾಗಿದ್ದು, ಇದು ನಿವೃತ್ತಿಗಾಗಿ ತಯಾರಿ ನಡೆಸಲು ಅವರಿಗೆ ಸಹಾಯ ಮಾಡುತ್ತದೆ. NPS ವಾತ್ಸಲ್ಯ ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PERDA) ಸಂಸ್ಥೆಯಿಂದ ನಿರ್ವಹಿಸಲಾಗುವ ಯೋಜನೆ. ಮತ್ತು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಹಣಕಾಸು ಅಭ್ಯಾಸಗಳನ್ನು ಕಲಿಸುತ್ತದೆ. ಈ ಯೋಜನೆಯಡಿ ಭಾರತದ ಯಾವುದೇ ನಾಗರಿಕರು ತಮ್ಮ ಮಕ್ಕಳ ಹೆಸರಿನಲ್ಲಿ ಸ್ಕೀಮ್ ಅಕೌಂಟ್ ತೆರೆಯಬಹುದು. ಆ ಮಗು 18 ವರ್ಷ ವಯಸ್ಸಾಗುವವರೆಗೂ ಯೋಜನೆ ಚಾಲನೆಯಲ್ಲಿರುತ್ತದೆ. ವಯಸ್ಕ ಮಟ್ಟಕ್ಕೆ ಬಂದ ಬಳಿಕ ಅಕೌಂಟ್ ಅನ್ನು ಮುಂದುವರಿಸಬಹುದು ಅಥವಾ ಅಂತ್ಯಗೊಳಿಸಬಹುದು.
NPS ವಾತ್ಸಲ್ಯ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 1,000 ಸಾವಿರ ರೂ. ಹೂಡಿಕೆ ಅಗತ್ಯವಾಗಿದೆ. ಅದಕ್ಕಿಂತ ಹೆಚ್ಚಿಗೆ ಎಷ್ಟು ಬೇಕಾದರೂ ಹೂಡಿಕೆ ಮಾಡಲು ಅವಕಾಶ ಇದೆ ಇಲ್ಲಿ ಗರಿಷ್ಠ ಮಿತಿಯಿಲ್ಲ. ಖಾತೆಯನ್ನು ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ತೆರೆಯಬಹುದು ಮತ್ತು ಪೋಷಕರು/ಹೆತ್ತವರು ನಿರ್ವಹಿಸಬಹುದು. ಅಪ್ರಾಪ್ತ ವಯಸ್ಕರು ಮಾತ್ರ ಫಲಾನುಭವಿಗಳಾಗಿರುತ್ತಾರೆ.
NPS ವಾತ್ಸಲ್ಯ ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳು ಯಾವುವು?
• ಮಗುವಿನ ವಯಸ್ಸಿನ ಪುರಾವೆ: ಇದು ಮಗುವಿನ ಜನನ ಪ್ರಮಾಣಪತ್ರ, ಶಾಲೆಯಿಂದ ಬಿಡುಗಡೆ ಪ್ರಮಾಣಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ, ಪ್ಯಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಆಗಿರಬಹುದು.
• ಪೋಷಕರು ಅಥವಾ ಪಾಲಕರ ಗುರುತಿನ ಮತ್ತು ವಿಳಾಸದ ಪುರಾವೆ: ಪೋಷಕರು ಅಥವಾ ಪಾಲಕರು ತಮ್ಮ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ, NREGA ಉದ್ಯೋಗ ಕಾರ್ಡ್ ಅಥವಾ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ದಾಖಲೆಯನ್ನು ಸಲ್ಲಿಸುವ ಮೂಲಕ ತಮ್ಮ KYC ಅನ್ನು ಪೂರ್ಣಗೊಳಿಸಬೇಕು.
• ಪೋಷಕರು ಅಥವಾ ಪಾಲಕರ PAN ಕಾರ್ಡ್: ಇದು ಕಡ್ಡಾಯವಾಗಿದೆ.
NPS ವಾತ್ಸಲ್ಯದಲ್ಲಿ ಹೂಡಿಕೆ ಆಯ್ಕೆಗಳು
ಭಾರತದಲ್ಲಿ NPS ವಾತ್ಸಲ್ಯವು ಹೂಡಿಕೆದಾರರಿಗೆ ಎರಡು ರೀತಿಯ ಹೂಡಿಕೆ ಆಯ್ಕೆಗಳನ್ನು ನೀಡುತ್ತದೆ, ಸಕ್ರಿಯ ಆಯ್ಕೆಯ ಹೂಡಿಕೆ ಮತ್ತು ಸ್ವಯಂ ಆಯ್ಕೆಯ ಹೂಡಿಕೆ. ಇಲ್ಲಿ, ನಾವು ಸಕ್ರಿಯ ಆಯ್ಕೆಯೊಂದಿಗೆ ಹೋಗುತ್ತೇವೆ.
ಮಗುವಿಗೆ 18 ವರ್ಷ ತುಂಬಿದ ನಂತರ ಮುಂದೆ ಏನು ಮಾಡಬಹುದು?
ಅವರನ್ನು NPS ಶ್ರೇಣಿ - I ಗೆ ವರ್ಗಾಯಿಸಬಹುದು
ಅಪ್ರಾಪ್ತ ವಯಸ್ಕರಿಗೆ 18 ವರ್ಷ ತುಂಬಿದ ದಿನಾಂಕದಿಂದ ಮೂರು ತಿಂಗಳೊಳಗೆ ಹೊಸ KYC ಅನ್ನು ಮಾಡಲಾಗುತ್ತದೆ.
NPS ವಾತ್ಸಲ್ಯ: 100 ಕೋಟಿ ರೂಪಾಯಿ ನಿವೃತ್ತಿ ನಿಧಿಗಾಗಿ ಮಾಸಿಕ ಹೂಡಿಕೆ ಎಷ್ಟಿರಬೇಕು? ಅದರ ಲೆಕ್ಕಾಚಾರ
100 ಕೋಟಿ ರೂಪಾಯಿ ನಿವೃತ್ತಿ ನಿಧಿಗಾಗಿ ಮಾಸಿಕ ಹೂಡಿಕೆ 5,500 ರೂ.ಗಳಾಗಿರುತ್ತದೆ. NPS ಕ್ಯಾಲ್ಕುಲೇಟರ್ ಪ್ರಕಾರ ಲೆಕ್ಕಾಚಾರ ಹೀಗಿದೆ. ಇಲ್ಲಿ ವಾರ್ಷಿಕ ಆದಾಯದ ಶೇಕಡಾ 6.75 ಮತ್ತು ವಾರ್ಷಿಕವಾಗಿ ಶೇಕಡಾ 5 ರಷ್ಟು ಹೆಚ್ಚಳವನ್ನು ತೆಗೆದುಕೊಂಡಿದ್ದೇವೆ.ನೀವು ಈ ಯೋಜನೆಯಲ್ಲಿ ಮಾಸಿಕ ರೂ. 5,500 ಹೂಡಿಕೆ ಮಾಡಿದರೆ. ನಿಮ್ಮ ಮಗುವಿಗೆ 60 ವರ್ಷ ತುಂಬುವ ಹೊತ್ತಿಗೆ, ಅವರ ನಿವೃತ್ತಿ ನಿಧಿ 100 ಕೋಟಿ ರೂ.ಗಳನ್ನು ಹೊಂದಿರುತ್ತದೆ. ಒಟ್ಟು ಹೂಡಿಕೆಯು 2,33,36,525 ರೂ.ಗಳಾಗಿರುತ್ತದೆ, ಅಂದಾಜು ಬಂಡವಾಳ ಲಾಭಗಳು 98,40,14,537 ರೂ.ಗಳಾಗಿರುತ್ತದೆ ಮತ್ತು ಮುಕ್ತಾಯ ಮೊತ್ತವು 1,00,73,51,062 ರೂ.ಗಳಾಗಿರುತ್ತದೆ. ಹೀಗಾಗಿ ನಿಮ್ಮ ಮಗುವಿಗೆ ಸಿಗುವ ಮಾಸಿಕ ಪಿಂಚಣಿ 22,66,540 ರೂ.ಗಳಾಗಿರುತ್ತದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications