NPS vs UPS: ನಿಮ್ಮ ನಿವೃತ್ತಿಯ ವೇಳೆಗೆ ನಿಮಗೆ ಯಾವ ಪಿಂಚಣಿ ಯೋಜನೆ ಸೂಕ್ತ ಎಂದು ಅರಿಕೊಳ್ಳವುದು ತುಂಬಾನೇ ಮುಖ್ಯ. ಅದರಲ್ಲೂ ಸರ್ಕಾರಿ ಪಿಂಚಣಿ ಯೋಜನೆಗಳನ್ನು ಆರಿಸಿಕೊಳ್ಳುವುದು ಸ್ವಲ್ಪ ಕಷ್ಟನೇ. ಕೇಂದ್ರ ಸರ್ಕಾರಿ ನೌಕರರು ಎನ್‌ಪಿಎಸ್ (NPS) ಅಥವಾ ಯುಪಿಎಸ್ (UPS) ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯುಪಿಎಸ್ ಖಾತರಿಯ ನಿವೃತ್ತಿ ಪಿಂಚಣಿ ನೀಡುತ್ತದೆ. ಎನ್‌ಪಿಎಸ್ ಮಾರುಕಟ್ಟೆ ಆಧಾರಿತ ಮತ್ತು ಹೆಚ್ಚಿನ ಲಾಭ ತರಬಹುದು. ಸರ್ಕಾರಿ ನೌಕರರು ನಿವೃತ್ತಿಗಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಥವಾ ಯುನಿವರ್ಸಲ್ ಪಿಂಚಣಿ ಯೋಜನೆ (ಯುಪಿಎಸ್) ಮಾಡಿಕೊಳ್ಳಬೇಕೇ ಎಂದು ಯೋಚಿಸುತ್ತಿದ್ದೀರಾ ಹಾಗಿದ್ದರೆ ನಿಮ್ಮ ಸುರಕ್ಷಿತ ನಿವೃತ್ತಿ ಪಿಂಚಣಿಗೆ ಯಾವುದು ಉತ್ತಮ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ಇಲ್ಲಿದೆ.

ಎನ್‌ಪಿಎಸ್ ನಿವೃತ್ತಿ ಯೋಜನೆ
ಎನ್‌ಪಿಎಸ್ ಒಂದು ರೀತಿಯ ವ್ಯವಸ್ಥೆಯಾಗಿದ್ದು, ಇದರಲ್ಲಿ ನೌಕರ ಮತ್ತು ಸರ್ಕಾರ ಇಬ್ಬರೂ ನಿವೃತ್ತಿ ನಿಧಿಗೆ ಸ್ವಲ್ಪ ಹಣವನ್ನು ನೀಡುತ್ತಾರೆ. ಈ ಹಣವನ್ನು ಷೇರು ಮಾರುಕಟ್ಟೆ ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎನ್‌ಪಿಎಸ್‌ನಿಂದ ಬರುವ ಆದಾಯವು ಮಾರುಕಟ್ಟೆ ಹೇಗಿದೆಯೋ ಅದರ ಮೇಲೆ ನಿಂತಿರುತ್ತದೆ. ಇದು ನಿವೃತ್ತಿಯ ನಂತರ ಸಿಗುವ ಪಿಂಚಣಿ ಮೊತ್ತದಲ್ಲಿ ವ್ಯತ್ಯಾಸ ಸಹ ಉಂಟುಮಾಡಬಹುದು.
ಎನ್‌ಪಿಎಸ್‌ನಲ್ಲಿ, ನಿವೃತ್ತಿಯ ನಂತರ ಸ್ವಲ್ಪ ಹಣವನ್ನು ದೊಡ್ಡ ಮೊತ್ತವಾಗಿ ನೀಡಲಾಗುತ್ತದೆ. ಉಳಿದ ಹಣವನ್ನು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಆದರೆ ಈ ಪಿಂಚಣಿ ಹಣದುಬ್ಬರ ಹೆಚ್ಚಾದಂತೆ ಹೆಚ್ಚಾಗುವುದಿಲ್ಲ.
ಯುಪಿಎಸ್ ನಿವೃತ್ತಿ ಯೋಜನೆ
ಯುಪಿಎಸ್ ನಿವೃತ್ತಿಯ ನಂತರ ಸ್ಥಿರವಾದ ಪಿಂಚಣಿ ನೀಡುತ್ತದೆ. ಇದು ಪ್ರತಿ ತಿಂಗಳು ಖಚಿತವಾದ ಆದಾಯವನ್ನು ಖಾತರಿಪಡಿಸುತ್ತದೆ. ಇದು ಹಣದುಬ್ಬರಕ್ಕೆ ಅನುಗುಣವಾಗಿ ಕಾಲಕ್ರಮೇಣ ಹೆಚ್ಚಾಗುತ್ತದೆ. ಇದರರ್ಥ ಬೆಲೆಗಳು ಏರಿದರೂ ನಿವೃತ್ತ ನೌಕರರ ಕೈಯಲ್ಲಿರುವ ಹಣದ ಮೌಲ್ಯ ಒಂದೇ ಆಗಿರುತ್ತದೆ. ಮಾರುಕಟ್ಟೆ ಏರಿಳಿತಗಳ ಬಗ್ಗೆ ಚಿಂತಿಸದೆ ನೆಮ್ಮದಿಯಿಂದ ಇರಲು ಬಯಸುವವರಿಗೆ ಇದು ತುಂಬಾ ಮುಖ್ಯವಾಗಿದೆ. ಮಾರುಕಟ್ಟೆಗಳು ಸರಿಯಾಗಿ ಕೆಲಸ ಮಾಡದಿದ್ದರೂ ಸಹ ಖಚಿತವಾದ ಪಿಂಚಣಿ ಸಿಗುವುದು ಅನೇಕ ಸರ್ಕಾರಿ ನೌಕರರಿಗೆ ಇಷ್ಟವಾಗುತ್ತದೆ.
ಮಾರುಕಟ್ಟೆಗಳು ಚೆನ್ನಾಗಿ ಕೆಲಸ ಮಾಡಿದರೆ ಎನ್‌ಪಿಎಸ್ ಹೆಚ್ಚು ಆದಾಯ ಸಿಗುತ್ತದೆ. ಆದರೆ ಮಾರುಕಟ್ಟೆ ಕುಸಿದರೆ ಕಡಿಮೆ ಆದಾಯ ಬರುವ ಸಾಧ್ಯತೆಯೂ ಕೂಡ ಕಡಿಮೆ ಇರುತ್ತದೆ. ಯುಪಿಎಸ್ ಹಣದುಬ್ಬರದೊಂದಿಗೆ ಹೆಚ್ಚಾಗುವ ಸ್ಥಿರ ಪಿಂಚಣಿ ನೀಡುವುದರಿಂದ ನಿವೃತ್ತರಿಗೆ ನೆಮ್ಮದಿ ಮತ್ತು ಭದ್ರತೆಯನ್ನು ನೀಡುತ್ತದೆ. ಹೆಚ್ಚು ಆದಾಯ ಬೇಕು ಆದರೆ ಅಪಾಯ ತೆಗೆದುಕೊಳ್ಳಲು ಇಷ್ಟವಿಲ್ಲದ ಸರ್ಕಾರಿ ನೌಕರರಿಗೆ ಯುಪಿಎಸ್ ಉತ್ತಮ ಆಯ್ಕೆಯಾಗಿದೆ.
ಪಿಂಚಣಿ ನಿಯಮಿತವಾಗಿ ಬರುತ್ತದೆ ಮತ್ತು ಬೆಲೆ ಏರಿಕೆ ಆದರೂ ಹಣ ಸಿಗುತ್ತದೆ ಎಂದು ತಿಳಿದುಕೊಂಡು, ನಿವೃತ್ತರು ತಮ್ಮ ಖರ್ಚುಗಳನ್ನು ಯೋಜಿಸಲು ಇದು ಸಹಾಯ ಮಾಡುತ್ತದೆ. ಇದು ನಿವೃತ್ತಿ ಜೀವನವನ್ನು ಸುಲಭ ಮತ್ತು ನೆಮ್ಮದಿಯಿಂದ ಇರುವಂತೆ ಮಾಡುತ್ತದೆ.
ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು..?
ಕೇಂದ್ರ ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ನಂತರ, ಖಚಿತ ವೇತನವನ್ನು ಪಡೆಯುತ್ತಾರೆ. ಅದರಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನಿವೃತ್ತಿ ಯೋಜನೆ (NPS) ಅಡಿಯಲ್ಲಿ ಏಕೀಕೃತ ನಿವೃತ್ತಿ ಯೋಜನೆಯನ್ನು (UPS) ಪರಿಚಯಿಸಿದೆ. ಒಬ್ಬ ನೌಕರ ಏಕೀಕೃತ ನಿವೃತ್ತಿ ಯೋಜನೆಗೆ ಸೇರಿದ ಬಳಿಕ, ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ.


Click it and Unblock the Notifications