ಅಕ್ಟೋಬರ್ 1ರಿಂದ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳು ಸಾಮಾನ್ಯ ಜನರ ದಿನನಿತ್ಯದ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಗೃಹ ಸಾಲದ ಇಎಂಐ, ಅಡುಗೆ ಅನಿಲ ಬೆಲೆ, ರೈಲು ಟಿಕೆಟ್ ಬುಕಿಂಗ್, ಪಿಂಚಣಿ ಶುಲ್ಕ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಗಳಿವೆ. ಹೀಗಾಗಿ ಈ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ.

ಆರ್‌ಬಿಐ ರೆಪೊ ದರ ಮತ್ತು ಎಂಪಿಸಿ ಸಭೆ:
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ತಿಂಗಳಲ್ಲಿ ಮುಖ್ಯ ಸಭೆ ನಡೆಸಲಿದೆ. ಆರ್ಥಿಕ ತಜ್ಞರ ಅಭಿಪ್ರಾಯಕ್ಕೆ ಅನುಸಾರ, ರೆಪೊ ದರ ಶೇ. 0.25 ರಷ್ಟು ಕಡಿಮೆಯಾಗಬಹುದು. ರೆಪೊ ದರ ಕಡಿಮೆ ಆದರೆ, ಬ್ಯಾಂಕುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕುತ್ತದೆ. ಇದರಿಂದ ನಿಮ್ಮ ಗೃಹ ಸಾಲ, ವಾಹನ ಸಾಲ ಅಥವಾ ಇತರೆ ಸಾಲಗಳ ಎಂಐಗಳ ಬಡ್ಡಿ ಕಡಿಮೆಯಾಗುತ್ತೆ ಮತ್ತು ಮಾಸಿಕ ಇಎಂಐ ಕಡಿಮೆಯಾಗಲು ಸಾಧ್ಯ.
ಯುಪಿಐ P2P ವೈಶಿಷ್ಟ್ಯ ರದ್ದು:
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ತನ್ನ 'P2P ಪುಲ್' ವೈಶಿಷ್ಟ್ಯವನ್ನು ಅಕ್ಟೋಬರ್ 1ರಿಂದ ನಿಲ್ಲಿಸಲಿದೆ. ಈ ವೈಶಿಷ್ಟ್ಯದ ಮೂಲಕ ನೀವು ಸ್ನೇಹಿತರು ಅಥವಾ ಕುಟುಂಬದವರಿಂದ ಹಣ ಪಡೆಯುತ್ತಿರಿ. ಭದ್ರತಾ ಕಾರಣಕ್ಕಾಗಿ, ಮುಂದಿನ ದಿನದಿಂದ ನೀವು ಯುಪಿಐ ಮೂಲಕ ಹಣ ಕಳುಹಿಸಬಹುದು, ಆದರೆ ಪಡೆಯಲು ಸಾಧ್ಯವಿಲ್ಲ.
ರೈಲು ಟಿಕೆಟ್ ಬುಕಿಂಗ್‌ನಲ್ಲಿ ಆಧಾರ್ ಆದ್ಯತೆ:
ಭಾರತೀಯ ರೈಲ್ವೆ ಅಕ್ಟೋಬರ್ 1ರಿಂದ ಆಧಾರ್ ಹೊಂದಿರುವ ಪ್ರಯಾಣಿಕರಿಗೆ ವಿಶೇಷ ಆದ್ಯತೆ ನೀಡಲಿದೆ. ಆಧಾರ್ ದೃಢೀಕರಿಸಿದ ಪ್ರಯಾಣಿಕರು ಟಿಕೆಟ್ ಬುಕಿಂಗ್‌ನಲ್ಲಿ ಸಾಮಾನ್ಯ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಬುಕ್ ಮಾಡಬಹುದು. ಇದರಿಂದ ಟಿಕೆಟ್ ಲಭ್ಯತೆಯ ಸಮಸ್ಯೆ ಎದುರಿಸುತ್ತಿರುವವರಿಗೆ ಸಹಾಯವಾಗುತ್ತದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಬದಲಾವಣೆ:
ಪ್ರತಿ ತಿಂಗಳ ಮೊದಲ ದಿನ ಅನಿಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಅಕ್ಟೋಬರ್ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಸಿಲಿಂಡರ್ ಬೆಲೆ ಬದಲಾವಣೆಯಿಂದ ಅಡುಗೆ ಅನಿಲ ಖರೀದಿಯ ಮೇಲೆ ಪರಿಣಾಮ ಬೀರುತ್ತದೆ.
ಪಿಂಚಣಿ ಶುಲ್ಕಗಳಲ್ಲಿ ಬದಲಾವಣೆ:
ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಯೂನಿಫೈಡ್ ಪಿಂಚಣಿ ಯೋಜನೆ (UPS), ಮತ್ತು ಅಟಲ್ ಪಿಂಚಣಿ ಯೋಜನೆಗಳ ಶುಲ್ಕಗಳಲ್ಲಿ ಅಕ್ಟೋಬರ್ 1ರಿಂದ ಬದಲಾವಣೆಗಳಿವೆ. ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕೇಂದ್ರೀಯ ದಾಖಲೆ ಏಜೆನ್ಸಿಗಳ ಶುಲ್ಕವನ್ನು ಪರಿಷ್ಕರಿಸಿದೆ. ಇ-ಪಿಆರ್‌ಎಎನ್ ಕಿಟ್‌ಗೆ 18 ರೂ., ಸರ್ಕಾರಿ ನೌಕರರಿಗೆ ಭೌತಿಕ ಪಿಆರ್‌ಎಎನ್ ಕಾರ್ಡ್‌ಗೆ 40 ರೂ. ಶುಲ್ಕ ವಿಧಿಸಲಾಗಿದೆ. ಈ ಬದಲಾವಣೆಗಳಿಂದ ಪಿಂಚಣಿ ಖಾತೆ ನಿರ್ವಹಣೆ ಸುಲಭವಾಗುತ್ತದೆ ಮತ್ತು ವೆಚ್ಚ ಕಡಿಮೆಯಾಗುತ್ತದೆ.
ಈ ನಿಯಮಗಳು ನೇರವಾಗಿ ಜನಸಾಮಾನ್ಯರ ಜೀವನವನ್ನು ಪ್ರಭಾವಿಸುತ್ತವೆ. ಈ ಬದಲಾವಣೆಗಳನ್ನು ತಿಳಿದುಕೊಂಡು, ನಿಮ್ಮ ಹಣಕಾಸು, ಪಿಂಚಣಿ ಹಾಗೂ ದಿನನಿತ್ಯದ ವ್ಯವಹಾರಗಳನ್ನು ಸುಗಮವಾಗಿ ನಿರ್ವಹಿಸಬಹುದು.
(Disclaimer: The views and recommendations expressed are solely those of the individual analysts or entities and do not reflect the views of Goodreturns.in or Greynium Information Technologies Private Limited (together referred as "we"). We do not guarantee, endorse or take responsibility for the accuracy, completeness or reliability of any content, nor do we provide any investment advice or solicit the purchase or sale of securities. All information is provided for informational and educational purposes only and should be independently verified from licensed financial advisors before making any investment decisions.)
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications