ಬ್ಯಾಂಕ್ ಅಕೌಂಟ್‌ನಿಂದ ಹಿಡಿದು, ಮೊಬೈಲ್ ಸಿಮ್ ಖರೀದಿಸುವವರೆಗೂ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಂತಹ ದಾಖಲೆ ಬೇಕೇಬೇಕು. ಅದರಲ್ಲೂ ಇಂದು ಪ್ಯಾನ್ ಕಾರ್ಡ್ ಎನ್ನುವಂತಹದ್ದು ಬಹುಮುಖ್ಯ ದಾಖಲೆಯಾಗಿದೆ. ಆದ್ರೆ ಇದೀಗ ಸರ್ಕಾರ ಪ್ಯಾನ್ ಕಾರ್ಡ್ ಸಂಬಂಧಿಸಿ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಭಾರತ ಸರ್ಕಾರವು ಪರ್ಮನೆಂಟ್ ಅಕೌಂಟ್ ನಂಬರ್ (PAN Card) ಅರ್ಜಿ ಪ್ರಕ್ರಿಯೆ ಸಂಬಂಧಿಸಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಹೌದು, ಭಾರತ ಸರ್ಕಾರ ಜಾರಿಗೆ ತಂದಿರುವ ಹೊಸ ಬದಲಾವಣೆಗಳು, 2026ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಪ್ಯಾನ್ ಕಾರ್ಡ್‌ಗೆ ಹೊಸ ನಿಯಮ
ಪರ್ಮನೆಂಟ್ ಅಕೌಂಟ್ ನಂಬರ್ (PAN) ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. 2026ರ ಏಪ್ರಿಲ್ 1ರಿಂದ ದೇಶಾದ್ಯಂತ PAN ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಹೊಸ ನಿಯಮಗಳು ಜಾರಿಯಾಗಲಿದ್ದು, ಪ್ರಸ್ತುತ ಇರುವ ಅರ್ಜಿ ವಿಧಾನ ಸಂಪೂರ್ಣ ಬದಲಾಗಲಿದೆ. ಈ ಗಡುವು ಮೀರಿದ ನಂತರ ಪ್ಯಾನ್ ಪಡೆಯುವುದು ಮತ್ತಷ್ಟು ಕಠಿಣವಾಗಲಿದೆ.
ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ
ಏಪ್ರಿಲ್ 1, 2026 ರಿಂದ ಕೇವಲ ಆಧಾರ್ ಕಾರ್ಡ್ ಆಧಾರಿತ PAN ಅರ್ಜಿಗಳನ್ನು ಇನ್ನು ಮುಂದೆ ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ, ನಾಗರಿಕರು ಮಾರ್ಚ್ 31ರೊಳಗೆ ತಮ್ಮ ಆಧಾರ್ ಕಾರ್ಡ್ ಬಳಸಿ ಪ್ಯಾನ್‌ಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಮನವಿ ಮಾಡಿದೆ. ಸರ್ಕಾರಿ ಬೆಂಬಲಿತ ಕಾಮನ್ ಸರ್ವೀಸಸ್ ಸೆಂಟರ್ಸ್ (CSC) ಸಹ ಈ ನಿಯಮ ಬದಲಾವಣೆ ಕುರಿತು X ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ.
ಮಾರ್ಚ್ 31, 2026 ರವರೆಗೆ ಆಧಾರ್ ಕಾರ್ಡ್ ಮಾತ್ರ ಸಲ್ಲಿಸಿ, ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇದು ತುಂಬಾ ಸುಲಭ ಮತ್ತು ವೇಗವಾದ ವಿಧಾನವಾಗಿದೆ. ಆಧಾರ್ ಸಂಖ್ಯೆಯನ್ನು ಬಳಸಿ ವೇಗವಾಗಿ ಪ್ಯಾನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆದರೆ ಏಪ್ರಿಲ್ 1, 2026 ರಿಂದ ಪ್ಯಾನ್ ಕಾರ್ಡ್‌ಗೆ ಆಧಾರ್ ಒಂದೇ ಸಾಕಾಗುವುದಿಲ್ಲ. ಹೊಸ ಪ್ಯಾನ್ ಅರ್ಜಿಗಳಿಗೆ ಆಧಾರ್ ಜೊತೆಗೆ ಹೆಚ್ಚುವರಿ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ. ಅದರಲ್ಲೂ ಜನ್ಮ ದಿನಾಂಕದ ಪುರಾವೆ ಸಲ್ಲಿಸಲೇಬೇಕು.
ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬಹುದು?
ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿಗೆ ಬಂದಾಗ, ಅರ್ಜಿದಾರರಿಗೆ ಹೊಸ PAN ಅರ್ಜಿ ನಮೂನೆ ಬೇಕಾಗುತ್ತದೆ. ಆಧಾರ್ ವಿವರಗಳ ಜೊತೆಗೆ, ಜನ್ಮದಿನದ ಪುರಾವೆಯಾಗಿ ಹೆಚ್ಚುವರಿ ದಾಖಲೆ ಸಲ್ಲಿಸುವುದು ಕಡ್ಡಾಯ. ಆಧಾರ್, ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ 12-ಅಂಕಿಯ ಗುರುತಿನ ಸಂಖ್ಯೆ ಕೂಡಾ ಮುಖ್ಯವಾಗಿದೆ. ಅಲ್ಲದೇ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಕೂಡಾ ಸಲ್ಲಿಸಬೇಕಾಗಬಹುದು.
ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಇನ್ಮುಂದೆ ಹಳೆಯ ಪ್ರಕ್ರಿಯೆಗಳು ಸ್ವೀಕಾರಾರ್ಹವಾಗುವುದಿಲ್ಲ. ಆದ್ದರಿಂದ ಇನ್ನೂ ಪ್ಯಾನ್ ಕಾರ್ಡ್ ಹೊಂದಿಲ್ಲದವರು ಅಥವಾ ಹೊಸ ಅರ್ಜಿ ಸಲ್ಲಿಸಬೇಕಾದರವರು ಮಾರ್ಚ್ 31, 2026 ರೊಳಗೆ ಆಧಾರ್ ಕಾರ್ಡ್ ಮಾತ್ರ ನೀಡಿ, ಅರ್ಜಿ ಸಲ್ಲಿಸಬಹುದು. ನಂತರ ಹೆಚ್ಚು ದಾಖಲೆಗಳು ಮತ್ತು ಸಮಯವೂ ತೆಗೆದುಕೊಳ್ಳುತ್ತದೆ.


Click it and Unblock the Notifications