ಇತ್ತೀಚೆಗೆ ವೈಯಕ್ತಿಕ ಸಾಲ ಅನ್ನೋದು ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸ್ತಿದೆ ಎಂದರೆ ತಪ್ಪಾಗಲ್ಲ. ವೈಯಕ್ತಿಕ ಸಾಲ ಇಲ್ಲದೇ ಈಗಿನ ಬದುಕಿಲ್ಲ ಎನ್ನುವಂತಾಗಿದೆ. ಆದರೆ ಎಷ್ಟೋ ಜನರಿಗೆ ಒಂದೇ ತಲೆನೋವು. ಕ್ರೆಡಿಟ್ ಸ್ಕೋರ್ ಜಾಸ್ತಿ ಇಲ್ಲ, ಹೀಗಾಗಿ ಲೋನ್ ಸಿಗಲ್ಲ ಅನ್ನೋದು. ಇನ್ನೂ ಎಷ್ಟೋ ಜನಕ್ಕೆ ಕ್ರೆಡಿಟ್ ಸ್ಕೋರ್ ಎಷ್ಟಿರಬೇಕು ಅನ್ನೋದರ ಬಗ್ಗೆ ಸರಿಯಾಗಿ ತಿಳಿದಿರಲ್ಲ. ಹಾಗಾದರೆ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕು ಅಂದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ನಿಜಕ್ಕೂ ಎಷ್ಟಿರಬೇಕು ಗೊತ್ತಾ?

ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಮೊದಲಿಗೆ ಪರಿಶೀಲಿಸುವ ಅಂಶವೇ ಈ ಸ್ಕೋರ್. ನಿಮ್ಮ ಹಣಕಾಸಿನ ಶಿಸ್ತು, ಪಾವತಿ ಇತಿಹಾಸ, ಸಾಲ ಬಳಕೆ ಇತ್ಯಾದಿಗಳ ಆಧಾರದ ಮೇಲೆ ಈ ಸ್ಕೋರ್ 300 ರಿಂದ 900 ರವರೆಗೆ ಇರುತ್ತದೆ.
750 ಕ್ರೆಡಿಟ್ ಸ್ಕೋರ್ ಇದ್ದರೆ?
ಅಂದಾಜು 750 ಅಥವಾ ಅದಕ್ಕಿಂತ ಹೆಚ್ಚಾದ ಕ್ರೆಡಿಟ್ ಸ್ಕೋರ್ ಇರುವವರು ವೇಗವಾಗಿ ಸಾಲ ಪಡೆಯಲು ಹೆಚ್ಚು ಅವಕಾಶ ಹೊಂದಿರುತ್ತಾರೆ. ಆದರೆ ಇತ್ತೀಚಿನ ಡಿಜಿಟಲ್ ಸಾಲದ ಪರಿಕಲ್ಪನೆ ಬೆಳೆಯುತ್ತಿದ್ದಂತೆ, ಕೆಲವು ಸಾಲದಾತ ಸಂಸ್ಥೆಗಳು 650ರಿಂದ 750ರ ಮಧ್ಯೆ ಸ್ಕೋರ್ ಹೊಂದಿದವರಿಗೂ ಅವಕಾಶ ನೀಡುತ್ತಿವೆ, ವಿಶೇಷವಾಗಿ ಅವರಿಗೆ ಸ್ಥಿರ ಆದಾಯ ಅಥವಾ ಉತ್ತಮ ಪಾವತಿ ಇತಿಹಾಸವಿದ್ದರೆ.
650ಕ್ಕಿಂತ ಕೆಳಗಿನ ಸ್ಕೋರ್ ಇದ್ದರೆ?
ಸಾಲದ ಮಂಜೂರಿಗೆ ಬಡ್ಡಿದರ ಹಾಗೂ ಷರತ್ತುಗಳು ಕ್ರೆಡಿಟ್ ಸ್ಕೋರ್ ಮೇಲೆ ನೇರ ಪರಿಣಾಮ ಬೀರುತ್ತವೆ. 750ಕ್ಕಿಂತ ಮೇಲಿನ ಸ್ಕೋರ್ ಇರುವವರಿಗೆ ಕಡಿಮೆ ಬಡ್ಡಿದರ, ಹೆಚ್ಚು ಸಾಲ ಮೌಲ್ಯ, ಕಡಿಮೆ ಪ್ರೊಸೆಸಿಂಗ್ ಶುಲ್ಕ ಇತ್ಯಾದಿಗಳ ಸೌಲಭ್ಯ ಸಿಗಬಹುದು. ಆದರೆ 650ಕ್ಕಿಂತ ಕೆಳಗಿನ ಸ್ಕೋರ್ ಇದ್ದರೆ ಸಾಲ ಮಂಜೂರಿಗೆ ಸಾಧ್ಯತೆ ಕಡಿಮೆಯಾಗಬಹುದು.
ಕ್ರೆಡಿಟ್ ಸ್ಕೋರ್ ಸುಧಾರಣೆಗೆ ನೀವು ತೆಗೆದುಕೊಳ್ಳಬೇಕಾದ ಕೆಲವು ಸರಳ ಹೆಜ್ಜೆಗಳು ಇವೆ. ಮೊದಲಿಗೆ ಎಲ್ಲ ಬಿಲ್ಲುಗಳು ಹಾಗೂ ಇಎಮೈಗಳನ್ನು ಸಮಯಕ್ಕೆ ಪಾವತಿಸಿ. ಕ್ರೆಡಿಟ್ ಕಾರ್ಡ್ ಬಳಕೆಯ ಪ್ರಮಾಣವನ್ನು ಶೇ 30 ಕ್ಕಿಂತ ಕಡಿಮೆ ಇಡಿ. ಹಠಾತ್ ಸಾಲ ಅಥವಾ ಕಾರ್ಡ್ ಅರ್ಜಿಗಳನ್ನು ಒಂದೇ ವೇಳೆಯಲ್ಲಿ ಅನೇಕ ಬಾರಿ ಸಲ್ಲಿಸಬೇಡಿ. ನಿಮ್ಮ ಕ್ರೆಡಿಟ್ ವರದಿಯನ್ನು ನಿಯಮಿತವಾಗಿ ಪರಿಶೀಲಿಸಿ. ದೋಷಗಳು ಕಂಡುಬಂದರೆ ತಕ್ಷಣ ತಿದ್ದಿಸಿಕೊಳ್ಳಿ.
ಹೆಚ್ಚಿನ ಬ್ಯಾಂಕುಗಳು ಕನಿಷ್ಠ 700 ಸ್ಕೋರ್ ಇರುವವರನ್ನಾದರೂ ಆರಿಸುತ್ತವೆ. ಆದರೆ 750ಕ್ಕಿಂತ ಮೇಲಾಗಿರುವ ಸ್ಕೋರ್ ಇದ್ದರೆ ನೀವು ಉತ್ತಮ ಷರತ್ತುಗಳಲ್ಲಿ ಸಾಲ ಪಡೆಯಬಹುದು. ಕೆಲವೊಮ್ಮೆ 685 ಸ್ಕೋರ್ ಕೂಡ ಸಾಲಕ್ಕೆ ಯೋಗ್ಯವಿರಬಹುದು ಆದರೆ ಬಡ್ಡಿದರ ಹೆಚ್ಚಾಗಬಹುದು.
ಕ್ರೆಡಿಟ್ ಸ್ಕೋರ್ ಮಾತ್ರವಲ್ಲ, ಬ್ಯಾಂಕುಗಳು ನಿಮ್ಮ ಉದ್ಯೋಗದ ಸ್ಥಿರತೆ, ಆದಾಯದ ಪ್ರಮಾಣ, ಹಿಂದೆ ತೆಗೆದುಕೊಂಡ ಸಾಲಗಳ ಇತಿಹಾಸ, ಇಎಮೈ ಪಾವತಿ ಪ್ರಾಮಾಣಿಕತೆ ಮೊದಲಾದ ಅಂಶಗಳನ್ನೂ ಗಮನದಲ್ಲಿಡುತ್ತವೆ. ಈ ಎಲ್ಲ ಅಂಶಗಳು ಒಟ್ಟುಗೂಡಿದಾಗ ಮಾತ್ರ ನಿಮ್ಮ ಸಾಲ ಮಂಜೂರಿಗೆ ಸಾಧ್ಯವಾಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications