ತೀರಾ ಅಗತ್ಯದ ಹಣಕಾಸು ಅಗತ್ಯಗಳಿಗೆ ಪರ್ಸನಲ್ ಲೋನ್ ಪಡೆಯುವುದು ಮೊದಲ ಆದ್ಯತೆ ಆಗಿರುತ್ತದೆ. ಯಾವುದೇ ಅಡಮಾನದ ಅಗತ್ಯ ಇಲ್ಲದೆ ದೊರೆಯುವ ಸಾಲ ಇದು. ಉಳಿದ ಸೆಕ್ಯೂರ್ಡ್ ಲೋನ್ ಗೆ ಹೋಲಿಸಿದಲ್ಲಿ ಪರ್ಸನಲ್ ಲೋನ್ ಬಡ್ಡಿ ದರವು ತುಸು ಹೆಚ್ಚು. ಆದರೆ ಈಗಲೂ ಅಡಮಾನ ಮಾಡುವುದಕ್ಕೆ ಏನೂ ಇಲ್ಲದವರ ಪಾಲಿಗೆ ಈ ಸಾಲವು ಅತ್ಯುತ್ತಮ ಆಯ್ಕೆ.
ಸ್ಥಿರವಾದ ಆದಾಯ, ಉತ್ತಮ ಕ್ರೆಡಿಟ್ ಸ್ಕೋರ್ ಇದ್ದಲ್ಲಿ ಸ್ವಲ್ಪ ಬಡ್ಡಿ ದರವು ಹೆಚ್ಚೇ ಇದ್ದರೂ ಪರ್ಸನಲ್ ಲೋನ್ ಆಯ್ಕೆ ಮಾಡಿಕೊಳ್ಳಬಹುದು. ಸೆಪ್ಟೆಂಬರ್ 10, 2020ಕ್ಕೆ ಅನ್ವಯ ಆಗುವಂತೆ ಬ್ಯಾಂಕ್ ಆಫ್ ಇಂಡಿಯಾದದಿಂದ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕನಿಷ್ಠ ಬಡ್ಡಿ ದರವಾದ ವಾರ್ಷಿಕ 7.4% ವಿಧಿಸುತ್ತದೆ. ಇನ್ನು ಯೂನಿಯನ್ ಬ್ಯಾಂಕ್ ನಿಂದ ವಾರ್ಷಿಕ ದರ 8.9% ಇದೆ.
ಅಡಮಾನ ಮಾಡುವ ಅಗತ್ಯ ಇಲ್ಲ
ಆದರೆ, ಈ ಎರಡೂ ಬಡ್ಡಿ ದರಕ್ಕೂ ಕೆಲವು ನಿಬಂಧನೆಗಳನ್ನು ಸಾಲ ನೀಡುವ ಸಂಸ್ಥೆಗಳು ಹಾಕಿವೆ. ನೆನಪಿಟ್ಟುಕೊಳ್ಳಿ, ಪರ್ಸನಲ್ ಪಡೆಯುವುದಕ್ಕೆ ಚಿನ್ನ, ಸೆಕ್ಯೂರಿಟೀಸ್ ಯಾವುದನ್ನೂ ಅಡಮಾನ ಮಾಡುವ ಅಗತ್ಯ ಇಲ್ಲ. ಜತೆಗೆ ಪರ್ಸನಲ್ ಲೋನ್ ಶೀಘ್ರವಾಗಿ ವಿತರಣೆ ಆಗುತ್ತದೆ. ಪ್ರೀ ಅಪ್ರೂವ್ಡ್ ಲೋನ್ ಆದಲ್ಲಿ ಅತ್ಯಂತ ಕಡಿಮೆ ಅಥವಾ ಯಾವುದೇ ದಾಖಲಾತಿ ಇಲ್ಲದೆ ಸಾಲ ಮಂಜೂರಾಗುತ್ತದೆ.
ಅತ್ಯುತ್ತಮ ಆಫರ್ ಗಳು
750- 800ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಇದ್ದವರಿಗೆ ಸಾಲವನ್ನು ನೀಡುವಾಗ ಅತ್ಯುತ್ತಮ ಆಫರ್ ಗಳು ದೊರೆಯುತ್ತವೆ. ಹೆಚ್ಚಿನ ಮೊತ್ತದ ಸಾಲ ಹಾಗೂ ಕಡಿಮೆ ಬಡ್ಡಿ ದರ ಎರಡೂ ಅನುಕೂಲ ದೊರೆಯುತ್ತದೆ. ದೇಶದ ಟಾಪ್ ಟೆನ್ ಬ್ಯಾಂಕ್ ಗಳಲ್ಲಿ ಪರ್ಸನಲ್ ಲೋನ್ ವಾರ್ಷಿಕ ಬಡ್ಡಿ ದರ ಹೀಗಿದೆ:
ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ
* ಯೂನಿಯನ್ ಬ್ಯಾಂಕ್ 8.90%- 12%
* ಪಂಜಾಬ್ ನ್ಯಾಷನಲ್ ಬ್ಯಾಂಕ್ 8.95%- 11.80%
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9.60%- 13.85%
* ಬ್ಯಾಂಕ್ ಆಫ್ ಬರೋಡಾ 10.25%- 15.60%
* ಎಚ್ ಡಿಎಫ್ ಸಿ ಬ್ಯಾಂಕ್ 10.75%- 21.30%
* ಕೊಟಕ್ ಮಹೀಂದ್ರಾ ಬ್ಯಾಂಕ್ >=10.75%
* ಐಸಿಐಸಿಐ ಬ್ಯಾಂಕ್ 11.25%- 21%
* ಕೆನರಾ ಬ್ಯಾಂಕ್ 11.25%- 13.90%
* ಬ್ಯಾಂಕ್ ಆಫ್ ಇಂಡಿಯಾ 11.35%- 12.35%
* ಆಕ್ಸಿಸ್ ಬ್ಯಾಂಕ್ 12%- 24%


Click it and Unblock the Notifications