ಸಾಲ (Loan) ಪಡೆಯೋದು ಎಷ್ಟು ಕಷ್ಟವೋ, ಸಾಲ ತೀರಿಸೋದು ಕೂಡಾ ಅಷ್ಟೇ ಕಷ್ಟ. ಅದೆಷ್ಟೋ ಒತ್ತಡಗಳ ಮಧ್ಯ, ಸಾಲ ತೀರಿಸೋದು ಸವಾಲಾಗಿಬಿಟ್ಟಿದೆ. ಆದರೆ ಚಿನ್ನ ಖರೀದಿಗಾಗಿ, ಕಾರು, ಬೈಕ್ ಖರೀದಿಗಾಗಿ, ವಿದ್ಯಾಭ್ಯಾಸಕ್ಕಾಗಿ ಎಷ್ಟೋ ಮಂದಿ ವೈಯಕ್ತಿಕ ಸಾಲ (Personal Loan) ಪಡೆಯುತ್ತಾರೆ. ವೈಯಕ್ತಿಕ ಸಾಲಗಳು ತುರ್ತು ಸಂದರ್ಭಗಳಲ್ಲಿ ದೊಡ್ಡ ಆಧಾರವಾಗಿ ನಿಲ್ಲುತ್ತವೆ. ಆದರೆ, ಅವುಗಳ ಹೆಚ್ಚಿನ ಬಡ್ಡಿ ದರವು ಹಲವೊಮ್ಮೆ ಆರ್ಥಿಕ ಹೊರೆಗೂ ಕಾರಣವಾಗಬಹುದು. ಅದೆಷ್ಟೋ ಜನರಿಗೆ ತಗೊಂಡ ಸಾಲವನ್ನು ಬೇಗನೆ ತೀರಿಸಬೇಕೆಂಬುದು ಹಲವರ ಆಸೆ. ಆದರೆ ಅದಕ್ಕೆ ಕೆಲವೊಂದು ಟ್ರಿಕ್ಸ್ ಯೂಸ್ ಮಾಡಬೇಕು.

ಪ್ರಿ-ಪೇಮೆಂಟ್ ಮಾಡಿ: ನಿಮಗೆ ಯಾವುದಾದರೂ ಬೋನಸ್, ಪ್ರೋತ್ಸಾಹಧನ ಅಥವಾ ಅನಿರೀಕ್ಷಿತವಾಗಿ ಯಾವುದಾದರೂ ಹಣ ಬಂದರೆ, ಅದನ್ನು ಸಾಲ ಪಾವತಿಸಲು ಬಳಸಿ. ಸಾಲದ ಅಸಲು ಮೊತ್ತದ ಒಂದು ಭಾಗವನ್ನು ಮುಂಚಿತವಾಗಿ ಪಾವತಿಸುವುದರಿಂದ ಬಡ್ಡಿದರಲ್ಲಿ ಭಾರೀ ಕಡಿಮೆಯಾಗುತ್ತದೆ.
ಇಎಂಐ ಮೊತ್ತವನ್ನು ಹೆಚ್ಚಿಸಿ: ವರ್ಷದಿಂದ ವರ್ಷಕ್ಕೆ ನಿಮ್ಮ ಸಂಬಳ ಹೆಚ್ಚಾಗುತ್ತಿದ್ದಂತೆ, ಸಾಲದ ಇಎಂಐ ಪಾವತಿಯನ್ನೂ ಹೆಚ್ಚಿಸಬೇಕು. ಮಾಸಿಕ ಪಾವತಿ ಮೊತ್ತದಲ್ಲಿ ಸಣ್ಣ ಏರಿಕೆಯೂ ಕೂಡಾ ಸಾಲದ ಮರುಪಾವತಿ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಸಾಲವನ್ನು ಬೇಗ ಮುಗಿಸಿ: ಪ್ರಸ್ತುತ ನೀವು ಸಾಲ ಪಡೆದಿರುವ ಬ್ಯಾಂಕ್‌ಗಿಂತ ಕಡಿಮೆ ಬಡ್ಡಿ ದರದಲ್ಲಿ ಇತರ ಬ್ಯಾಂಕುಗಳು ಸಾಲ ನೀಡುತ್ತಿದ್ದರೆ, 'ಲೋನ್ ಬ್ಯಾಲೆನ್ಸ್ ವರ್ಗಾವಣೆ' ಟ್ರಿಕ್ಸ್ ಯೂಸ್ ಮಾಡಿ. ಇದು ಮಾಸಿಕ ಮರುಪಾವತಿಯನ್ನು ಕಡಿಮೆ ಮಾಡುವುದಲ್ಲದೆ, ಸಾಲವನ್ನು ವೇಗವಾಗಿ ಮುಗಿಸಲು ಸುಲಭವಾಗಲಿದೆ. ಆದರೂ, ಪ್ರೊಸೆಸಿಂಗ್ ಶುಲ್ಕಗಳು ಮತ್ತು ಇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡ ನಂತರವೇ ಈ ನಿರ್ಧಾರ ಕೈಗೊಳ್ಳಿ.
ಹೆಚ್ಚುವರಿ ಸಾಲ ಪಾವತಿಸಿ: ವರ್ಷಕ್ಕೊಮ್ಮೆ ಕನಿಷ್ಠ ಒಂದು ನಿರ್ದಿಷ್ಟ ಮೊತ್ತವನ್ನು ಸಾಲಕ್ಕೆ ಹೆಚ್ಚುವರಿಯಾಗಿ ಪಾವತಿಸಲು ಟ್ರೈ ಮಾಡಿ. ಇದರಿಂದಲೂ ನೀವು ಸಾಲ ಬೇಗನೆ ಮುಗಿಸಬಹುದು.
ಖರ್ಚುಗಳನ್ನು ನಿಯಂತ್ರಿಸಿ: ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಆ ಹಣವನ್ನು ಸಾಲ ಮರುಪಾವತಿಗಾಗಿ ಮೀಸಲಿಡಿ. ನೀವು ಉಳಿತಾಯ ಮಾಡಿದ ಹಣವನ್ನು ಸಾಲವನ್ನು ತೀರಿಸಲು ಸುಲಭವಾಗಬಹುದು. ಇದು ಸಾಲಮುಕ್ತರಾಗಲು ನೆರವಾಗುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications