ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮುಂದಿನ ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ಸುಮಾರು ಹತ್ತು ರೂಪಾಯಿವರೆಗೆ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಚಾಲಕರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.
ತೈಲ ಕಂಪನಿಗಳಿಗೆ ಮೂರನೇ ತ್ರೈಮಾಸಿಕದಲ್ಲಿ 75,000 ಕೋಟಿ ರೂಪಾಯಿಗಳಷ್ಟು ದಾಖಲೆಯ ಲಾಭದ ನಿರೀಕ್ಷೆಯ ನಡುವೆ ಈ ವರದಿಯಾಗಿದೆ. 2024ರಲ್ಲಿ ಚುನಾವಣೆಯು ನಡೆಯಲಿದೆ. ಇದಕ್ಕೂ ಮುನ್ನ ಬೆಲೆ ಇಳಿಕೆಯು ಸಾಧ್ಯತೆ ಅಧಿಕವಾಗಲಿದೆ.

ಗಮನಾರ್ಹವಾದ ಮಾರುಕಟ್ಟೆ ಪಾಲನ್ನು ಹೊಂದಿರುವ ಮೂರು ಸರ್ಕಾರಿ-ಆಡಳಿತ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳಯ) 2023-24 ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಗಣನೀಯ ನಿವ್ವಳ ಲಾಭವನ್ನು ತೋರಿಸಿವೆ. ಇದು 2022-23 ರ ಸಂಪೂರ್ಣ ಹಣಕಾಸು ವರ್ಷಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಶೇಕಡ 4,917 ರಷ್ಟು ಹೆಚ್ಚಳವಾಗಿದೆ.
ಏಪ್ರಿಲ್ 2022 ರಿಂದ ಪೆಟ್ರೋಲ್ ಬೆಲೆಯು ಸ್ಥಿರವಾಗಿದೆ. ಈ ನಿಟ್ಟಿನಲ್ಲಿ ಒಎಂಸಿಗಳು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ. ಪ್ರತಿ ಲೀಟರ್‌ಗೆ ಸುಮಾರು ಐದರಿಂದ ಹತ್ತು ರೂಪಾಯಿವರೆಗೆ ಕಡಿತವನ್ನು ಮಾಡಲು ಸಾಧ್ಯವೇ ಎಂದು ಪರಿಶೀಲನೆ ಮಾಡುವ ಸಾಧ್ಯತೆಯಿದೆ. ಈ ನಡುವೆ ಅಂತರರಾಷ್ಟ್ರೀಯ ತೈಲ ಬೆಲೆಯಲ್ಲಿ ಏರಿಕೆಯ ನಿರೀಕ್ಷೆಯಿದ್ದು, ಇದಕ್ಕೂ ತಯಾರಿ ನಡೆಯಲಿದೆ ಎಂದು ವರದಿ ಹೇಳಿದೆ.
"ಇಂಧನಗಳ ಮಾರಾಟದ ಮೇಲಿನ ಹೆಚ್ಚಿನ ಮಾರ್ಕೆಟಿಂಗ್ ಮಾರ್ಜಿನ್‌ನಿಂದಾಗಿ, ಮೂರು ಒಎಂಸಿಗಳು (ತೈಲ ಮಾರುಕಟ್ಟೆ ಕಂಪನಿಗಳು) ಮೊದಲ ತ್ರೈಮಾಸಿಕ ಮತ್ತು ಎರಡನೇ ತ್ರೈಮಾಸಿಕದ (ಹಣಕಾಸು ವರ್ಷ 2023-24) ರಲ್ಲಿ ಗಮನಾರ್ಹ ನಿವ್ವಳ ಲಾಭವನ್ನು ಪ್ರಕಟಿಸಿದವು. ಮೂರನೇ ತ್ರೈಮಾಸಿಕದಲ್ಲಿ ಪ್ರವೃತ್ತಿಯು ಮುಂದುವರಿಯುತ್ತದೆ," ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
"ಈ ತಿಂಗಳ ಅಂತ್ಯದ ವೇಳೆಗೆ ಫಲಿತಾಂಶದ ನಂತರ, ಅವರು ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಲೀಟರ್‌ಗೆ ಐದು ರೂಪಾಯಿ ಮತ್ತು ಹತ್ತು ರೂಪಾಯಿಯ ನಡುವೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಇದು ಅಂತರರಾಷ್ಟ್ರೀಯ ತೈಲ ಬೆಲೆಗಳ ಭವಿಷ್ಯದ ಏರಿಕೆಯ ಪ್ರಭಾವ ಸ್ವಲ್ಪ ಕಡಿಮೆ ಮಾಡಲಿದೆ. ಕಂಪನಿಗಳು ತಮ್ಮ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತವೆ," ಎಂದು ವರದಿಯಾಗಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ (ಬಿಪಿಸಿಎಲ್) ಇತ್ತೀಚಿನ ತ್ರೈಮಾಸಿಕಗಳಲ್ಲಿ ಗಮನಾರ್ಹ ಲಾಭವನ್ನು ಕಂಡಿದೆ. ಕಚ್ಚಾ ಬೆಲೆ ಇಳಿಕೆ ಮ್ತು ಅಧಿಕ ಗ್ರಾಸ್ ರಿಫೈನಿಂಗ್ ಮಾರ್ಜಿನ್ (ಜಿಆರ್‌ಎಂ) ಯಶಸ್ಸಿಗೆ ಕಾರಣವಾಗಿದೆ.


Click it and Unblock the Notifications