ಈ ಹೊಸ ವರ್ಷಕ್ಕೆ EPFO 5 ಹೊಸ ಯೋಜನರಗಳನ್ನ ತರುತ್ತಿದೆ. EPFO ಪಿಂಚಿಣಿದಾರರಿಗಾಗಿ ಈ ಹೊಸ ಬದಲಾವಣೆಗಳನ್ನ ತರುತ್ತಿದೆ. ಪಿಎಫ್‌ನ ಈ ಹೊಸ ಬದಲಾವಣೆಯಿಂದ ನೀವು ದೇಶದ ಯಾವುದೇ ಬ್ಯಾಂಕ್‌ನಿಂದ ನಿಮ್ಮ ಪಿಂಚಣಿಯನ್ನು ನೀವು ಹಿಂಪಡೆಯಬಹುದು. ಈ ಹೊಸ ಬದಲಾವಣೆ ಈ ಹೊಸ ವರ್ಷಕ್ಕೆ ಬರಲಿದ್ದು, ನಿವೃತ್ತಿ ನಿಧಿ ಸಮಸ್ಥೆಯು ತನ್ನ ಚಂದಾದಾರರಿಗಾಗಿ ಅನೇಕ ಸೌಲಭ್ಯಗಳನ್ನ ಪ್ರಾರಂಭ ಮಾಡುತ್ತಿದೆ.
ಪಿಎಫ್ ಖಾತಾದಾರರಿಗೆ ಹೆಚ್ಚಿನ ಅನುಕೂಲಗಳನ್ನ ನೀಡುವುದು ಈ ಪಿಎಫ್ ಹೊಸ ನಿಯಮದ ಉದ್ದೇಶವಾಗಿದೆ. ಅಲ್ಲದೆ ಈ ಹೊಸ ನಿಯಮದಿಂದಾಗಿ ನೀವು ನಿಮ್ಮ ನಿವೃತ್ತಿಯ ನಿಧಿಯನ್ನ ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯವಾಗುತ್ತದೆ. ಈ ಬದಲಾವಣೆಗಳು ಸರ್ಕಾರಿ ಹಾಗು ಖಾಸಗಿ ವಲಯದ ಉದ್ಯೋಗಿಗಳಿಗೆ ಸಹಾಯಕವಾಗಲಿದೆ.

ಪಿಎಫ್‌ನ ಐದು ಹೊಸ ನಿಯಮಗಳ ಬಗ್ಗೆ ತಿಳಿಯಿರಿ
ಎಟಿಎಂನಿಂದ ಪಿಎಫ್ ಹಣ ತೆಗೆಯುವ ಸೌಲಭ್ಯ
ಇಪಿಎಫ್‌ಒ ಸದಸ್ಯರಿಗಾಗಿ ಅವರಿಗೆ ಅನುಕೂಲ ಕಲ್ಪಿಸಲು ಇಪಿಎಫ್‌ಒ ಎಟಿಎಂ ಕಾರ್ಡ್‌ಗಳನ್ನ ನೀಡಲು ನಿರ್ಧರಿಸಿದೆ. ಈ ಮೂಲಕ ಅದು ದಿನದ 24 ಗಂಟೆಗಳು ಕೂಡ ಹಣ ಹಿಂಪಡೆಯುವ ಸೌಲಭ್ಯವನ್ನ ನೀಡಲಿದೆ. ಇನ್ನು ಈ ಎಟಿಎಂ ಹಿಂಪಡೆಯುವ ಸೌಲಭ್ಯವು 2025-26 ರ ಹಣಕಾಸು ವರ್ಷದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಹೊಸ ನಿಯಮಗಳ ಜೊತೆಗೆ ಚಂದಾದಾರರು 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಕೂಡ ಹಣವನ್ನು ಸುಲಭವಾಗಿ ಪಡೆಯಲು ಇದು ಸಹಾಯ ಮಾಡುತ್ತದೆ. ಇದು ಚಂದಾದಾರರ ಸಮಯವನ್ನು ಉಳಿಸುತ್ತದೆ. ಅವರೇನಾದ್ರು ಬ್ಯಾಂಕ್ ಖಾತೆಗೆ ಹೋಗಿ ಹಣವನ್ನ ಪಡೆಯುತ್ತಾರೆ ಎಂದರೆ ಅದಕ್ಕಾಗಿ ಅವರಿಗೆ ಸುಮಾರು 7 ರಿಂದ 10 ದಿನಗಳು ಬೇಕಾಗುತ್ತದೆ. ಆದ್ರೆ ಈ ಮೂಳಕ ಅವರು ಸುಲಭವಾಗಿ ಹಣವನ್ನ ಹಿಂಪಡೆಯಬಹುದು.
ಉದ್ಯೋಗಿ ಕೊಡುಗೆ ಮಿತಿ ಬದಲಾಗಬಹುದು
ಇದರ ಜೊತೆಗೆ ಮುಂಬರು ವರ್ಷದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯನ್ನ ತರಲಿದೆ. ಉದ್ಯೋಗಿಗಳಿಗೆ ಇಪಿಎಫ್ ಕೊಡುಗೆ ಮಿತಿಯಲ್ಲಿನ ಬದಲಾವಣೆಯನ್ನ ತರುವ ಮೂಲಕ ನೌಕರಿಗೆ ನೆರವಾಗಲಿದೆ. ಸಧ್ಯ ಈಗ ಉದ್ಯೋಗಿಗಳು ತಮ್ಮ ಮೂಲ ವೇತನದ 12% ಅನ್ನು ಪ್ರತಿ ತಿಂಗಳು ಇಪಿಎಫ್ ಖಾತೆಗೆ ನೀಡುತ್ತಾರೆ. ಅದರಲ್ಲೂ ಇಪಿಎಫ್‌ಒ ನಿಗದಿಪಡಿಸಿದ 15,000 ರೂ ಬದಲಿಗೆ ಉದ್ಯೋಗಿಗಳು ಅವರ ನಿಜವಾದ ಸಂಬಳದ ಆಧಾರದ ಮೇಲೆ ಕೊಡುಗೆ ನೀಡಲು ಸರ್ಕಾರವು ನಿರ್ಧರಿಸಿದೆ.
ಒಮ್ಮೆ ಈ ನೀತಿಯನ್ನು ಜಾರಿ ಆದ್ರೆ, ಉದ್ಯೋಗಿಗಳು ತಮ್ಮ ನಿವೃತ್ತಿಯ ವರೆಗೆ ದೊಡ್ಡ ಮೊತ್ತವನ್ನ ಸಂಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ಪ್ರತಿ ತಿಂಗಳು ಅವರು ಹೆಚ್ಚಿನ ಪಿಂಚಣಿಯನ್ನ ಪಡೆಯಲು ಸಹಾಯವಾಗುತ್ತದೆ.
EPFO IT ಸಿಸ್ಟಮ್ ಅಪ್‌ಗ್ರೇಡ್
EPFO ತನ್ನ IT ಮೂಲಸೌಕರ್ಯವನ್ನು ನವೀಕರಣೆ ಮಾಡುತ್ತಿದೆ. ಇದು PF ಹಕ್ಕುದಾರರು ಹಾಗೆ ಫಲಾನುಭವಿಗಳು ಅವರ ಠೇವಣಿಗಳನ್ನು ಸುಲಭವಾಗಿ ಪಡೆಯಲು ಇದು ಸಹಾಯ ಮಾಡಿಕೊಡುತ್ತದೆ. ಈ ನವೀಕರಣವು ಜೂನ್ 2025 ರೊಳಗೆ ಆಗುವ ನಿರೀಕ್ಷೆಯಿದೆ. ಒಮ್ಮೆ IT ಮೂಲಸೌಕರ್ಯವನ್ನು ಅಪ್‌ಡೇಟ್ ಮಾಡಿದರೆ, ಸದಸ್ಯರ ಹಕ್ಕುಗಳು ಮೊದಲಿಗಿಂತ ವೇಗವಾಗಿ ಬಗೆಹರಿಯುತ್ತವೆ. ಇದಲ್ಲದೆ, ಇದು ಪಾರದರ್ಶಕತೆಯನ್ನು ಹೆಚ್ಚಿಸಿ, ವಂಚನೆಯ ಪ್ರಕರಣಗಳನ್ನು ಇದು ಕಡಿಮೆ ಮಾಡುತ್ತದೆ.
ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಸೌಲಭ್ಯ
ಅಲ್ಲದೆ ಇಪಿಎಫ್‌ಒ ತನ್ನ ಸದಸ್ಯರಿಗೆ ಈಕ್ವಿಟಿಯಲ್ಲಿ ಹೂಡಿಕೆ ಮಾಡಲು ಕೂಡ ಅವಕಾಶವನ್ನ ಮಾಡಿಕೊಡುತ್ತದೆ. ಈ ಆಯ್ಕೆಯಿಂದ ಪಿಎಫ್ ಖಾತೆದಾರರು ತಮ್ಮ ಹಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು. ನಿವೃತ್ತಿ ನಿಧಿ ಸಂಸ್ಥೆಯು ನೇರ ಈಕ್ವಿಟಿ ಹೂಡಿಕೆಯನ್ನು ಅನುಮತಿಸಿದರೆ, ಪಿಎಫ್ ಬಳಕೆದಾರರು ಹೆಚ್ಚಿನ ಆದಾಯವನ್ನ ಕೂಡ ನಿರೀಕ್ಷಿಸಬಹುದು.
ಸುಲಭ ಪಿಂಚಣಿ ಹಿಂಪಡೆಯುವಿಕೆ
ಇಪಿಎಫ್ಒ ಪಿಂಚಣಿದಾರರಿಗಾಗಿ ಪ್ರಮುಖ ಬದಲಾವಣೆಗಳನ್ನ ತರುತ್ತಿದೆ. ಹೊಸ ನಿಯಮದ ಪ್ರಕಾರ, ಪಿಂಚಣಿದಾರರು ಯಾವುದೇ ಹೆಚ್ಚುವರಿ ಪರಿಶೀಲನೆಯಿಲ್ಲದೆ ತಮ್ಮ ಪಿಂಚಣಿಯನ್ನು ದೇಶದ ಯಾವುದೇ ಬ್ಯಾಂಕ್‌ನಿಂದ ಹಿಂಪಡೆಯಲು ಅನುವು ಮಾಡಿ ಕೊಡುತ್ತದೆ. ಈ ಕ್ರಮವು ಸದಸ್ಯರಿಗೆ ತುಂಬಾ ಅನುಕೂಲವಾಗಲಿದೆ. ಹಾಗೆ ಅವರು ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕಿನಿಂದ ಹಿಂಪಡೆಯಲು ಸಾಧ್ಯವಿರುವುದರಿಂದ ಅವರ ಸಮಯವನ್ನು ಕೂಡ ಅದು ಉಳಿಸುತ್ತದೆ.
EPFO ಬಗ್ಗೆ ಇಲ್ಲಿದೆ ವಿವರ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿದೆ. 1952 ರಲ್ಲಿ ಸ್ಥಾಪಿತವಾದ ಇದು ನೌಕರರ ಭವಿಷ್ಯ ನಿಧಿ (ಇಪಿಎಫ್) ಅನ್ನು ನಿರ್ವಹಿಸುತ್ತದೆ, ಇದು ಉದ್ಯೋಗಿಗಳಿಗೆ ಅವರ ನಿವೃತ್ತಿ ವರ್ಷಗಳಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಇಪಿಎಫ್ ಒಂದು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಪ್ರತಿ ತಿಂಗಳು ಉದ್ಯೋಗಿಯ ವೇತನದ ನಿಗದಿತ ಶೇಕಡಾವಾರು ಮೊತ್ತವನ್ನು ಕೊಡುಗೆ ನೀಡುತ್ತಾರೆ.
ಇದು ಬಡ್ಡಿಯೊಂದಿಗೆ ಕಾಲಾನಂತರದಲ್ಲಿ ಸಂಗ್ರಹಗೊಳ್ಳುತ್ತದೆ. EPF ಜೊತೆಗೆ, EPFO ನೌಕರರ ಪಿಂಚಣಿ ಯೋಜನೆ (EPS) ಮತ್ತು ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ನಂತಹ ಇತರ ಯೋಜನೆಗಳನ್ನು ಸಹ ನೋಡಿಕೊಳ್ಳುತ್ತದೆ. ನಿವೃತ್ತಿ ಪ್ರಯೋಜನಗಳನ್ನು ಒದಗಿಸುವ ಮೂಲಕ ಮತ್ತು ಖಾತೆಗಳ ಸುಗಮ ನಿರ್ವಹಣೆ ಮತ್ತು ಹಿಂಪಡೆಯುವಿಕೆಗೆ ಅನುಕೂಲವಾಗುವಂತೆ ವಿವಿಧ ಆನ್‌ಲೈನ್ ಸೇವೆಗಳನ್ನು ನೀಡುವ ಮೂಲಕ ಕಾರ್ಮಿಕರ ಕಲ್ಯಾಣವನ್ನು ಖಾತ್ರಿಪಡಿಸುವಲ್ಲಿ EPFO ಪ್ರಮುಖ ಪಾತ್ರ ವಹಿಸುತ್ತದೆ. ಇದು ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದೆ, ಭಾರತದಾದ್ಯಂತ ಲಕ್ಷಾಂತರ ಉದ್ಯೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ.


Click it and Unblock the Notifications