ದುಡಿಯೋ ಟೈಮಲ್ಲಿ ದುಡೀಬೇಕು, ನಿವೃತ್ತಿ ಪಡೆಯೋ ಸಮಯದಲ್ಲಿ ಆರಾಮದಾಯಕ ಜೀವನ ನಡೆಸ್ಬೇಕು ಅನ್ನೋದು ಹಲವರ ಕನಸು. ಅದಕ್ಕಂತನೇ ಹೆಚ್ಚಿನವರು ತಾವು ದುಡಿದ ಸ್ವಲ್ಪ ಹಣವನ್ನು ಸೇವಿಂಗ್ಸ್ ಮಾಡುತ್ತಾರೆ. ಇನ್ನು ನಿವೃತ್ತಿ ಯೋಜನೆಗಳನ್ನು (Retirement Plans) ಆರಂಭಿಸಲು 30ರ ವಯಸ್ಸು ಅತ್ಯಂತ ಸೂಕ್ತ ಎಂದು ಹಲವರು ಹೇಳುತ್ತಾರೆ. ಏಕೆಂದರೆ ಈ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುವುದರಿಂದ (Investment) ಉತ್ತಮ ಆದಾಯವನ್ನು ಪಡೆಯಬಹುದು. ಪ್ರತಿ ತಿಂಗಳು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿಯಾದ ಬಳಿಕ ಆರಾಮದಾಯಕ ಜೀವನ ನಡೆಸಬಹುದು.

ಹೆಚ್ಚಿನವರು ನಿವೃತ್ತಿ ಪ್ಲಾನ್‌ಗಳನ್ನು 40 ಅಥವಾ 50ರ ವಯಸ್ಸಿನಲ್ಲಿ ಆರಂಭಿಸಬೇಕು ಅಂದುಕೊಂಡಿರುತ್ತಾರೆ. ಆದರೆ, ಸದ್ಯದ ಪರಿಸ್ಥಿತಿಗಳನ್ನು ನೋಡಿದ್ರೆ 30ರ ವಯಸ್ಸಿನಲ್ಲಿಯೇ ನಿವೃತ್ತಿ ಯೋಜನೆಗಳನ್ನು ನಿರ್ಮಿಸಿದರೆ, ನಿಮ್ಮಷ್ಟು ಬುದ್ಧಿವಂತರು ಯಾರೂ ಇಲ್ಲ ಅಂತಾರೆ ಹಣಕಾಸು ತಜ್ಞರು.
ನಿವೃತ್ತಿಯಲ್ಲಿ ಆರ್ಥಿಕವಾಗಿ ಸಬಲರಾಗಿರಬೇಕೆಂದರೆ, ನಿವೃತ್ತಿ ಯೋಜನೆಗಳನ್ನು ಎಷ್ಟು ಬೇಗ ಆರಂಭಿಸುತ್ತೇವೋ, ಅಷ್ಟು ಒಳ್ಳೆಯದು. ವರ್ಷ ಕಳೆದಂತೆ ನೀವು ಮಾಡಿದ ಹೂಡಿಕೆಗೆ ಹೆಚ್ಚು ಹೆಚ್ಚು ಬಡ್ಡಿ ಸಿಗುತ್ತದೆ. ಆದ್ದರಿಂದ 30ನೇ ವಯಸ್ಸಲ್ಲಿ ಹೂಡಿಕೆ ಮಾಡಲು ಶಕ್ತಿಯೂ ನಿಮ್ಮಲ್ಲಿರುವುದರಿಂದ ಉತ್ತಮ ಎನ್ನಲಾಗುತ್ತದೆ.
30ರ ವಯಸ್ಸಿನಲ್ಲಿ ನಿವೃತ್ತಿ ಯೋಜನೆಯಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ರೆ ನೀವು ಮುಂದಿನ 25-30 ವರ್ಷಗಳಲ್ಲಿ ಉತ್ತಮ ಲಾಭ ಪಡೆಯಬಹುದು. ಇನ್ನು 30 ರಲ್ಲಿ ಹೂಡಿಕೆ ಶುರು ಮಾಡಿದ್ರೆ ಹೆಚ್ಚು ಹಣ ಹೂಡಿಕೆ ಮಾಡಬೇಕೆಂಬ ಅವಕಾಶವಿರುವುದಿಲ್ಲ. ಏಕೆಂದರೆ ಹೂಡಿಕೆಗೆ ದೀರ್ಘಾವಧಿಯವರೆಗೆ ಸಮಯವಿರುತ್ತದೆ.
ಉದಾಹರಣೆಗೆ 30ರ ವಯಸ್ಸಿನಲ್ಲಿ ಪ್ರತಿ ತಿಂಗಳು ₹5,000 ಹೂಡಿಕೆ ಮಾಡಿ, ಸರಾಸರಿ 10% ಆದಾಯ ಪಡೆಯಬಹುದಾದರೆ, 60ನೇ ವಯಸ್ಸಿಗೆ ಈ ಮೊತ್ತ ₹1 ಕೋಟಿಗೂ ಹೆಚ್ಚಾಗಬಹುದು ಎನ್ನಲಾಗಿದೆ. ಅಂದರೆ, ಕಡಿಮೆ ಹೂಡಿಕೆಯೊಂದಿಗೆ ದೊಡ್ಡ ಸಂಪತ್ತನ್ನು ನಿರ್ಮಿಸಲು ಹಣದ ಜೊತೆಗೆ ಬುದ್ಧಿವಂತಿಕೆಯೂ ಬೇಕಾಗುತ್ತದೆ.
ನಿವೃತ್ತಿ ಯೋಜನೆ ಆರಂಭಿಸುವುದು ಹೇಗೆ?
1. ಗುರಿ ಸೆಟ್ ಮಾಡಿಕೊಳ್ಳಿ: ನಿವೃತ್ತಿಯ ನಂತರ ಯಾವ ರೀತಿಯ ಜೀವನ ನಡೆಸಬೇಕೆಂದು ಮೊದಲೇ ಪ್ಲಾನ್ ಮಾಡಿಕೊಳ್ಳಿ. ಅಂದರೆ ಎಲ್ಲಾದರೂ ಟ್ರಾವೆಲ್ ಪ್ಲಾನ್, ವ್ಯವಹಾರ ಶುರು ಮಾಡೋದು ಅಥವಾ ಮನೆಯಲ್ಲಿಯೇ ಇರೋದು. ಈ ರೀತಿ ಯಾವುದಾದರೂ ಪ್ಲಾನ್ ಮಾಡಿಕೊಳ್ಳಿ. ಇದರಿಂದ ನೀವು ನಿಮ್ಮ ನಿವೃತ್ತಿ ಟೈಮಲ್ಲಿ ಎಷ್ಟು ಹಣ ಬರಬೇಕೆಂದು ಮೊದಲೇ ಅಂದಾಜಿಸಬಹುದು.
2. ಖರ್ಚು ಮತ್ತು ಉಳಿತಾಯವನ್ನು ಲೆಕ್ಕಾಚಾರ ಮಾಡಿ: ಈಗಲೇ ನೀವು ನಿಮ್ಮ ಆದಾಯ ಮತ್ತು ಖರ್ಚಿನ ಬಗ್ಗೆ ಗಮನದಲ್ಲಿಟ್ಟುಕೊಳ್ಳಿ. ಇದು ನಿಮ್ಮ ಹೂಡಿಕೆ ಯೋಜನೆಗೆ ಸಹಕಾರಿ. ಕನಿಷ್ಠ ಆದಾಯದ 20% ಅನ್ನು ನಿವೃತ್ತಿ ಹೂಡಿಕೆಗೆ ಮೀಸಲಿಟ್ಟರೆ ಉತ್ತಮ.
3. ಬೆಸ್ಟ್ ನಿವೃತ್ತಿ ಯೋಜನೆಗಳನ್ನು ಆಯ್ಕೆ ಮಾಡಿ: ಇನ್ನು ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಐಡಿಯಾ ಮಾಡ್ಬೇಡಿ. ಬೇರೆ ಬೇರೆ ನಿವೃತ್ತಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ. ಎಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂದು ಅರ್ಥ ಮಾಡಿಕೊಳ್ಳಿ.
EPF/PPF: ಸುರಕ್ಷಿತ ಮತ್ತು ಲಾಭದ ಹೂಡಿಕೆಗೆ ಇದು ಸೂಕ್ತ.
ಮ್ಯೂಚುಯಲ್ ಫಂಡ್ SIPಗಳು: ಇಕ್ವಿಟಿಯಲ್ಲಿ ನಿಯಮಿತ ಹೂಡಿಕೆಯು ದೀರ್ಘಾವಧಿಯಲ್ಲಿ ಉತ್ತಮ ಆದಾಯ ತರುವಲ್ಲಿ ಸಹಕಾರಿ.
NPS (National Pension System): ತೆರಿಗೆ ಪ್ರಯೋಜನಗಳು ಮತ್ತು ಪಿಂಚಣಿ ಲಾಭ ಪಡೆಯಬೇಕೆಂದುಕೊಂಡವರಿಗೆ ಇದು ಸೂಕ್ತ.
ಚಿನ್ನ ಅಥವಾ ರಿಯಲ್ ಎಸ್ಟೇಟ್: ಸುರಕ್ಷತೆಯ ದೃಷ್ಟಿಯಿಂದ ಚಿನ್ನ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಬೆಸ್ಟ್.
4. ವಿಮೆ ಮತ್ತು ತುರ್ತು ನಿಧಿ (Emergency Fund)ನಲ್ಲಿ ಹೂಡಿಕೆ: ನಿವೃತ್ತಿ ಯೋಜನೆ ರೂಪಿಸುವವರು ಆರೋಗ್ಯ ಮತ್ತು ಜೀವ ವಿಮೆ ಬಗ್ಗೆ ಕಡೆಗಣಿಸಬೇಡಿ.
ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಅಲ್ಲದೇ ಹಣಕಾಸು ತಜ್ಞರನ್ನು ಸಂಪರ್ಕಿಸಿ, ಮಾಹಿತಿಯನ್ನು ಪಡೆಯಿರಿ.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications