ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ರೈತರ ಬೆನ್ನೆಲುಬಿನಂತೆ ಆರ್ಥಿಕವಾಗಿ ಸಹಾಯಕ್ಕೆ ಬರುತ್ತದೆ. ಭಾರತ ಸರ್ಕಾರ (India) ಜಾರಿಗೆ ತಂದ ಈ ಯೋಜನೆ, ಸಣ್ಣ ಮತ್ತು ಬಡ ರೈತ ಕುಟುಂಬಗಳಿಗೆ (Farmers) ಆರ್ಥಿಕವಾಗಿ ಬೆಂಬಲ ನೀಡುತ್ತದೆ. 2018ರ ಡಿಸೆಂಬರ್ 1 ರಿಂದ ಈ ಯೋಜನೆ ಜಾರಿಗೆ ಬಂದಿದ್ದು, ಅಂದಿನಿಂದ 2026 ರವರೆಗೂ ವರ್ಷಕ್ಕೆ 6 ಸಾವಿರ ರೂ.ತೆ ರೈತರ ಖಾತೆಗೆ ಸರ್ಕಾರದಿಂದ ಹಣ ಜಮಾ ಆಗುತ್ತಲೇ ಇದೆ. ಈಗಾಗಲೇ 2000 ರೂ.ನಂತರ 21 ಕಂತುಗಳನ್ನು ಪೂರೈಸಿದ್ದು, ಸದ್ಯ ಎಲ್ಲರೂ 22 ನೇ ಪಿಎಂ ಕಿಸಾನ್ ಕಂತಿಗಾಗಿ ಕಾಯುತ್ತಿದ್ದಾರೆ.

ಹೌದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22 ನೇ ಕಂತಿನ ಹಣ ಬಿಡುಗಡೆ ಯಾವಾಗ ಆಗುತ್ತೆ ಎಂಬುದೇ ಎಲ್ಲರ ಪ್ರಶ್ನೆ? ಇದೀಗ ಕೊನೆಗೂ ಈ ಪ್ರಶ್ನೆಗೆ ಸರ್ಕಾರ ಉತ್ತರ ಕೊಟ್ಟಿದ್ದು, ಪಿಎಂ ಕಿಸಾನ್ ಹಣ ಬಿಡುಗಡೆ ಬಗ್ಗೆ ದಿನಾಂಕವನ್ನು ಘೋಷಣೆ ಮಾಡಿದೆ.
ಯಾವಾಗ ಬರುತ್ತೆ 22 ನೇ ಕಂತಿನ ಹಣ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22 ನೇ ಕಂತಿನ ಹಣ ಬಿಡುಗಡೆ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ಅಪ್‌ಡೇಟ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 13, 2026 ರಂದು ಅಸ್ಸಾಂನ ಗುವಾಹಟಿಗೆ ಭೇಟಿ ನೀಡಲಿದ್ದು, ಇದೇ ಸಂದರ್ಭದಲ್ಲಿ ಮುಂದಿನ 22ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.
ಕೋಟಿ ಜನರಿಗೆ, ಕೋಟಿ ಕೋಟಿ ಹಣ
ಪಿಎಂ ಕಿಸಾನ್ ಯೋಜನೆಯಡಿ ದೇಶಾದ್ಯಂತ 9.32 ಕೋಟಿ ಅರ್ಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,000 ಹಣ ಜಮಾ ಆಗಲಿದೆ. ಸುಮಾರು 19,000 ಕೋಟಿ ರೂಪಾಯಿ ವರ್ಗಾವಣೆಯಾಗಲಿದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದಿಂದ ಕಠಿಣ ಕ್ರಮ
ಇತ್ತೀಚೆಗೆ ಬಿಪಿಎಲ್ ಕಾರ್ಡ್‌ಗಳನ್ನು ಬಳಸಿಕೊಂಡು ಪಿಎಂ ಕಿಸಾನ್ ಹಣದಲ್ಲಿ ಅಕ್ರಮ ನಡೆಯುತ್ತಿರುವ ಘಟನೆಗಳು ವರದಿಯಾಗಿದೆ. ಅಲ್ಲದೇ ಅನರ್ಹರೂ ಕೂಡಾ ಅರ್ಹರ ಪಟ್ಟಿಯಲ್ಲಿ ಸೇರಿದ್ದು, ಇದರ ಕಾರ್ಯಾಚರಣೆಗೂ ಸರ್ಕಾರ ಮುಂದಾಗಿದೆ. ಆ ಪ್ರಕಾರ ಇತ್ತೀಚೆಗೆ ಅರ್ಹರ ಪಟ್ಟಿಯಲ್ಲಿ ಭಾರೀ ಕಡಿತ ಕಂಡುಬಂದಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಈಗಾಗಲೇ ಪರಿಶೀಲನೆಯ ನಂತರ ಬರೋಬ್ಬರಿ 1.13 ಕೋಟಿಗೂ ಅಧಿಕ ಹೆಸರುಗಳನ್ನು ಅರ್ಹರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದಕ್ಕೆ ಮುಖ್ಯ ಕಾರಣಗಳು ಇ-ಕೆವೈಸಿ ಪೂರ್ಣಗೊಳಿಸದೇ ಇರುವುದು ಮತ್ತು ಅನರ್ಹರು ಆಗಿದ್ದಾರೆ.
ನಿಮ್ಮ ಹೆಸರೂ ಪಟ್ಟಿಯಲ್ಲಿದ್ಯಾ ಎಂದು ಹೀಗೆ ಚೆಕ್ ಮಾಡಿ:
- ಮೊದಲಿಗೆ pmkisan.gov.in ಪೋರ್ಟಲ್ ಓಪನ್ ಮಾಡಿ.
- Beneficiary List ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ನಂತರ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಗ್ರಾಮ ಸೆಲೆಕ್ಟ್ ಮಾಡಬೇಕು.
- ಆ ನಂತರ Get Report ಮೇಲೆ ಕ್ಲಿಕ್ ಮಾಡಬೇಕು.
- ಇನ್ನು ಪೇಮೆಂಟ್ ಸ್ಟೇಟಸ್ ಚೆಕ್ ಮಾಡಬೇಕೆಂದರೆ Beneficiary Status ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಆಧಾರ್ ನಂಬರ್, ಬ್ಯಾಂಕ್ ನಂಬರ್, ಮೊಬೈಲ್ ನಂಬರ್ ಆಡ್ ಮಾಡಿ ಚೆಕ್ ಮಾಡಬಹುದು.


Click it and Unblock the Notifications