ರೈತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Scheme) ಕೂಡಾ ಒಂದು. ಈಗಾಗಲೇ 2025 ರ ಎರಡು ಕಂತಿನ ಹಣ ರೈತರ ಖಾತೆಗೆ ಜಮಾ ಆಗಿದೆ. ಆದ್ರೆ ಕೊನೆಯ ಪಿಎಂ ಕಿಸಾನ್ ಕಂತು ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ. 21ನೇ ಪಿಎಂ ಕಿಸಾನ್ ಸಮ್ಮಾನ್ ಕಂತಿಗಾಗಿ ಇಡೀ ದೇಶದ ರೈತರು ಕಾದುಕುಳಿತಿದ್ದಾರೆ.

ಇದೀಗ ಕೊನೆಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 21ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.
ಯಾವಾಗ ಪಿಎಂ ಕಿಸಾನ್ ಹಣ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 21ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19, 2025 ರಂದು ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ದೇಶದ ಲಕ್ಷಾಂತರ ರೈತ ಕುಟುಂಬಗಳಿಗೆ ನವೆಂಬರ್ 19 ರಂದು ಹಣ ಜಮಾ ಆಗಲಿದೆ. ಈ ಕಂತಿನ ಅಡಿಯಲ್ಲಿ, ಅರ್ಹ ರೈತರು ₹2,000 ಪಡೆಯಲಿದ್ದಾರೆ. ಈ ಮೂಲಕ ವರ್ಷಾಂತ್ಯದಲ್ಲಿ 21ನೇ ಕಂತಿನ ಹಣ ಜಮಾ ಆಗಲಿದ್ದು, ಇದನ್ನು ಪ್ರತಿ ವರ್ಷ ಮೂರು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ.
2019 ರಲ್ಲಿ ಪ್ರಾರಂಭವಾದ PM-KISAN ಯೋಜನೆಯಿಂದ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ವಾರ್ಷಿಕವಾಗಿ ₹6,000 ಧನಸಹಾಯ ಸರ್ಕಾರದಿಂದ ಪಡೆಯಬಹುದು. ಇದನ್ನು ತಲಾ ₹2,000 ದಂತೆ ಮೂರು ಕಂತುಗಳಲ್ಲಿ ಪ್ರತೀ ಬಾರಿ ನೀಡಲಾಗುತ್ತದೆ. ಈ ಯೋಜನೆಯು ಕೃಷಿಗೆ ಹೆಚ್ಚು ಪ್ರೋತ್ಸಾಹ, ಬೆಳೆ-ಸಂಬಂಧಿತ ವೆಚ್ಚಗಳಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ..
ಒಂದು ವೇಳೆ ನೀವೂ ಕೂಡಾ ಈ ಯೋಜನೆಯ ಫಲಾನುಭವಿಗಳಾಗಬೇಕೆಂದರೆ, ಆಧಾರ್ ಆಧಾರಿತ ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಅತ್ಯಗತ್ಯ. ಎಲ್ಲಾ ಫಲಾನುಭವಿಗಳಿಗೆ ಇ-ಕೆವೈಸಿ ಕಡ್ಡಾಯ ಎಂದು ಸರ್ಕಾರ ಈ ಮೊದಲೇ ಸರ್ಕಾರ ಹೇಳಿಕೊಂಡು ಬಂದಿದೆ. ಆದ್ದರಿಂದ ರೈತರು ಪಿಎಂ-ಕಿಸಾನ್ ಪೋರ್ಟಲ್ ಮೂಲಕ ಒಟಿಪಿ (OTP) ಆಧಾರಿತ ಇ-ಕೆವೈಸಿ ಅಪ್ಡೇಟ್ ಮಾಡಬಹುದು ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲೂ ಬಯೋಮೆಟ್ರಿಕ್ ದೃಢೀಕರಣವನ್ನು ನೀಡಿ ಕೆವೈಸಿ ಅಪ್ಡೇಟ್ ಮಾಡಬಹುದು.
ಇ-ಕೆವೈಸಿ ಪೂರ್ಣಗೊಳಿಸಿದ, ತಮ್ಮ ಭೂಮಿ ಮತ್ತು ಬ್ಯಾಂಕ್ ವಿವರಗಳನ್ನು ನೀಡಿ, ಈ ಯೋಜನೆಗೆ ಅರ್ಹರೆಂದು ಇದೇ ತಿಂಗಳು ಪಿಎಂ ಕಿಸಾನ್ ಯಾವುದೇ ಸಮಸ್ಯೆಯಿಲ್ಲದೇ ಜಮಾ ಆಗಲಿದೆ.
PM-KISAN ಯೋಜನೆಗೆ ಯಾರು ಅರ್ಹರು?
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು ಮತ್ತು ಸಕ್ರಿಯ ರೈತರಾಗಿರಬೇಕು. ಸಣ್ಣ ಅಥವಾ ಅತಿ ಸಣ್ಣ ರೈತ ಕುಟುಂಬಕ್ಕೆ ಸೇರಿರಬೇಕು.
- ಕನಿಷ್ಠ ಐದು ಎಕರೆ ಕೃಷಿಯೋಗ್ಯ ಭೂಮಿಯನ್ನು ಹೊಂದಿರಬೇಕು.
- ರಾಜಕೀಯ ಹುದ್ದೆಯನ್ನು ಹೊಂದಿರಬಾರದು ಅಥವಾ ಕೆಲವು ಉನ್ನತ ಶ್ರೇಣಿಯ ಸರ್ಕಾರಿ ಅಥವಾ ಯಾವುದೇ ಹುದ್ದೆಗಳಲ್ಲಿ ಸೇವೆ ಸಲ್ಲಿಸಬಾರದು.


Click it and Unblock the Notifications