ಭಾರತ ಸರ್ಕಾರ (India) ರೈತರ ಆರ್ಥಿಕ ಅಭಿವೃದ್ಧಿಗಾಗಿ ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಕೂಡಾ ಒಂದು. ದೇಶದಾದ್ಯಂತ ಭೂಹಿಡುವಳಿದಾರ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ವಾರ್ಷಿಕವಾಗಿ 6000 ರೂ.ನಂತೆ ರೈತರ (Farmers) ಖಾತೆಗೆ ಜಮಾ ಮಾಡಲಾಗುತ್ತದೆ. ಅದೇ ರೀತಿ ಇದೀಗ ಈ ಯೋಜನೆಯ 22ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎಂಬ ಪ್ರಶ್ನೆ ಮತ್ತೆ ಉದ್ಭವಿಸಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ನೋಂದಾಯಿತ ರೈತರು ಇದೀಗ 22ನೇ ಕಂತಿನ ಹಣ ಬಿಡುಗಡೆಗಾಗಿ ಕಾತುರದಿಂದ ಕಾದು ಕುಳಿತಿದ್ದಾರೆ. ಈ ಬಾರಿಯ ₹2,000 ಮೊತ್ತವು ಫೆಬ್ರವರಿ ಕೊನೆಯ ವಾರದಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಹಲವು ವರದಿಗಳಲ್ಲಿ ತಿಳಿಸಲಾಗಿದೆ. ಭಾರತ ಸರ್ಕಾರವು ನಡೆಸುವ ಈ ಮಹತ್ವದ ಯೋಜನೆಯು ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ಹಣವನ್ನು ಕಳುಹಿಸುತ್ತದೆ.
ಇನ್ನು ಪಿಎಂ ಕಿಸಾನ್ ಯೋಜನೆಯ ಸೌಲಭ್ಯಗಳನ್ನು ಪಡೆಯಬೇಕೆಂದರೆ, ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಮತ್ತು ಆಧಾರ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಇಲ್ಲಿ ಕಡ್ಡಾಯವಾಗಿದೆ. ಒಂದು ಸಣ್ಣ ಮಾಹಿತಿಯ ವ್ಯತ್ಯಾಸವೂ ಸಹ ಬರುವ ಕಂತಿನ ಹಣದಲ್ಲಿ ವಿಳಂಬವಾಗಬಹುದು.
ಪಿಎಂ ಕಿಸಾನ್ ಹಣ ಹೀಗೆ ಚೆಕ್ ಮಾಡಿ
ಇದೇ ಹಿನ್ನೆಲೆಯಲ್ಲಿ, ಕಂತು ಸಮಯಕ್ಕೆ ಸರಿಯಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅನೇಕ ರೈತರು ತಮ್ಮ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿಕೊಳ್ಳುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಸ್ಥಿತಿಯನ್ನು ಚೆಕ್ ಮಾಡಲು, ಫಲಾನುಭವಿಗಳು ಅಧಿಕೃತ ಪೋರ್ಟಲ್ ಮೂಲಕ ಅಂದರೆ https://pmkisan.gov.in ಗೆ ಭೇಟಿ ನೀಡಬಹುದು. ಅಲ್ಲಿ, ಹೋಮ್‌ಪೇಜ್‌ನಲ್ಲಿ ನೀವು "Beneficiary List" (ಫಲಾನುಭವಿಗಳ ಪಟ್ಟಿ) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನಂತರ, ಡ್ರಾಪ್‌ಡೌನ್ ಮೆನುವಿನಿಂದ ನಿಮ್ಮ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು, "Submit" ಬಟನ್ ಒತ್ತಬೇಕು. ಅಲ್ಲಿ ನಿಮಗೆ ಹಣ ಬರುತ್ತಾ? ಇಲ್ವಾ? ಎಂದು ನೋಡಬಹುದು. ಪರ್ಯಾಯವಾಗಿ, ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ "Know Your Status (KYS)" (ನಿಮ್ಮ ಸ್ಥಿತಿ ತಿಳಿಯಿರಿ) ವೈಶಿಷ್ಟ್ಯವನ್ನು ಬಳಸಿಕೊಂಡು ಕಂತು ಪಾವತಿ ಬಗ್ಗೆ ಸರಿಯಾದ ಮಾಹಿತಿ ಪಡೆಯಬಹುದು.
ಇನ್ನು ಪಿಎಂ ಕಿಸಾನ್ 22ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎಂಬ ಮಾಹಿತಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಲಾಗಿಲ್ಲ. ಫೆಬ್ರವರಿ ಅಂತ್ಯದೊಳಗೆ ಹಣ ಜಮಾ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನೂ ಕೆಲವು ವರದಿಗಳಲ್ಲಿ ಮಾರ್ಚ್ ಮೊದಲ ವಾರದಲ್ಲಿ ಜಮಾ ಆಗಬಹುದು ಎಂದು ಹೇಳಲಾಗಿದೆ.


Click it and Unblock the Notifications