ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme) ಕೂಡಾ ಒಂದು. ಆದರೆ ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆ ಭಾರೀ ಸದ್ದು ಮಾಡಿತ್ತು. ಕಾರಣ ರೈತರಿಗೆ ಹಣ ಜಮಾ ಆಗುವಲ್ಲಿ ವಿಳಂಬ. ಆದ್ರೆ ಇದೀಗ ಕೊನೆಗೂ ಹಲವು ತಿಂಗಳಿಂದ ಕಾದು ಕುಳಿತಿದ್ದ ರೈತರಿಗೆ ಇಂದು ಪಿಎಂ ಕಿಸಾನ್ ಹಣ ಜಮಾ ಆಗಿದೆ. ಹಾಗಿದ್ರೆ ಪಿಎಂ ಕಿಸಾನ್ ಯೋಜನೆಯ 2 ಸಾವಿರ ಹಣ ನಿಮ್ಮ ಖಾತೆಗೂ ಜಮಾ ಆಗಿದ್ಯಾ? ಇಲ್ವಾ? ಎಂದು ನೋಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಟ್ರಿಕ್ಸ್.

ನವೆಂಬರ್ 19, 2025 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ಪಿಎಂ ಕಿಸಾನ್ 21ನೇ ಕಂತಿನ ಹಣ ಜಮಾ ಮಾಡಿದ್ದಾರೆ. ಸುಮಾರು 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂಪಾಯಿ ಮೌಲ್ಯದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತನ್ನು ಬಿಡುಗಡೆ ಮಾಡುವ ಮೂಲಕ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಈ ಹಿಂದೆ, ಆಗಸ್ಟ್ ತಿಂಗಳಲ್ಲಿ 20ನೇ ಕಂತಿನ ಹಣವನ್ನು ದೇಶದ ಎಲ್ಲಾ ರೈತರಿಗೆ ಬಿಡುಗಡೆ ಮಾಡಲಾಗಿತ್ತು. ಇದು 9.8 ಕೋಟಿ ರೈತರಿಗೆ, ಅದರಲ್ಲೂ 2.4 ಕೋಟಿ ಮಹಿಳಾ ರೈತರಿಗೆ ಜಮಾ ಆಗಿತ್ತು. ಒಟ್ಟಾರೆಯಾಗಿ, ಈ ಯೋಜನೆಯ ಒಟ್ಟು 20 ಕಂತುಗಳಲ್ಲಿ ಪ್ರಧಾನಿ ಮೋದಿ ಅವರು 3,90,000 ಕೋಟಿ ರೂಪಾಯಿಗಳಿಗಿಂತ ಅಧಿಕ ಹಣವನ್ನು ರೈತರ ಖಾತೆಗೆ ವಿತರಿಸಿದ್ದಾರೆ. ಇದೀಗ 21ನೇ ಕಂತಿನ ಹಣವನ್ನೂ ಬಿಡುಗಡೆ ಮಾಡಿದ್ದಾರೆ.
ಇದೀಗ 21ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣ ಬಿಡುಗಡೆಯಾಗುತ್ತಿದ್ದಂತೆ, ರೈತರೂ ಕೂಡಾ ತಮ್ಮ ಖಾತೆಗೆ ಹಣ ಬಂದಿದ್ಯಾ? ಎಂದು ಚೆಕ್ ಮಾಡುತ್ತಿದ್ದಾರೆ. ಹಾಗಿದ್ರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ 2 ಸಾವಿರ ಹಣ ಜಮಾ ಆಗಿದ್ಯಾ ಎಂದು ಸಿಂಪಲ್ ಆಗಿ ಹೀಗೆ ಚೆಕ್ ಮಾಡಿ.
ಪಿಎಂ-ಕಿಸಾನ್ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಿ:
- ಪಿಎಂ-ಕಿಸಾನ್‌ನ ಅಧಿಕೃತ ಪೋರ್ಟಲ್ ನಿಮಗೆ ಹಣ ಜಮಾ ಆಗಿದೆಯಾ? ಇಲ್ವಾ? ಎಂಬ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.
- ಇದಕ್ಕಾಗಿ, pmkisan.gov.in ವೆಬ್‌ಸೈಟ್ ಓಪನ್ ಮಾಡಿ.
- ನಂತರ ಹೋಮ್ ಪೇಜ್‌ನಲ್ಲಿ 'Know Your Status' ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ, ಪಿಎಂ-ಕಿಸಾನ್ ಐಡಿ ಅಥವಾ ನೋಂದಾಯಿತ ಮೊಬೈಲ್ ನಂಬರ್ ನಮೂದಿಸಬೇಕು.
- ಕ್ಯಾಪ್ಚಾ ನಮೂದಿಸಿ 'Get Status' ಕ್ಲಿಕ್ ಮಾಡಿ.
- ಆ ನಂತರ ನೀವು 21ನೇ ಕಂತು ಜಮಾ ಆಗಿದ್ಯಾ? ಜಮಾ ದಿನಾಂಕ ಮತ್ತು ಫಲಾನುಭವಿ ಸ್ಥಿತಿಯನ್ನು ನೀವು ನೋಡಬಹುದು.
ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್ ಯೂಸ್ ಮಾಡಿ:
- ಮೊಬೈಲ್ ಮೂಲಕ ಮಾಹಿತಿ ಪಡೆಯಬೇಕೆಂದರೆ, ರೈತರು ಪಿಎಂ ಕಿಸಾನ್ ಅಧಿಕೃತ ಆಪ್ ಬಳಸಬಹುದು.
- ಗೂಗಲ್ ಪ್ಲೇ ಸ್ಟೋರ್‌ನಿಂದ ಪಿಎಂ-ಕಿಸಾನ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ಆಪ್ ಓಪನ್ ಮಾಡಿದಾಗ 'Beneficiary Status' ಆಯ್ಕೆಮಾಡಿ.
- ಅಲ್ಲಿ ನೀವು ಆಧಾರ್ ಅಥವಾ ಮೊಬೈಲ್ ನಂಬರ್ ನಮೂದಿಸಬೇಕು.
- ಆಗ ನೀವು ಪಿಎಂ ಕಿಸಾನ್ ಯೋಜನೆಯ ನಿಮ್ಮ ಸಂಪೂರ್ಣ ಸ್ಟೇಟಸ್ ಚೆಕ್ ಮಾಡಬಹುದು.
ಇನ್ನು ಪ್ರತೀ ಬಾರಿ ಪಿಎಂ ಕಿಸಾನ್ ಯೋಜನೆಯ ಹಣ ನೇರವಾಗಿ ನಿಮ್ಮ ಪಿಎಂ-ಕಿಸಾನ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್‌ಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ರೈತರಿಗೆ ಹಣ ಜಮಾ ಆದ ಬಗ್ಗೆ ಬ್ಯಾಂಕಿನಿಂದ SMS ಬರುತ್ತದೆ. ಒಂದು ವೇಳೆ SMS ಬರದಿದ್ದರೆ, ನಿಮ್ಮ ಹತ್ತಿರದ ಬ್ರಾಂಚ್‌ಗೆ ಹೋಗಿ ಪಾಸ್‌ಬುಕ್ ಕೊಟ್ಟು ಟ್ರಾನ್ಸಾಕ್ಷನ್ ಹಿಸ್ಟರಿ ಚೆಕ್ ಮಾಡಬಹುದು ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಚೆಕ್ ಮಾಡಬಹುದು.


Click it and Unblock the Notifications