ಜನಸಾಮಾನ್ಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ (Government) ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಕರ್ನಾಟಕದಲ್ಲಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ, ಗೃಹಲಕ್ಮಿ ಯೋಜನೆ, ಶಕ್ತಿ ಯೋಜನೆಯೆಂದ ಎರಡು ವಿಶೇಷ ಯೋಜನೆಗಳನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ ಜಾರಿಗೆ ತಂದಿತ್ತು. ಅದೇ ರೀತಿ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ 2017ರಲ್ಲಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯನ್ನು (Pradhan Mantri Matru Vandana Yojana) ಜಾರಿಗೆ ತಂದಿತ್ತು. ಈ ಯೋಜನೆಯಿಂದ ದೇಶದ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆಯುವಂತಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಈ ನಿರ್ಧಾರದ ಹಿಂದಿನ ಸರ್ಕಾರದ ಉದ್ದೇಶ ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಮತ್ತು ಸ್ವಾವಲಂಬಿಗಳಾಗಿ ಮಾಡುವುದು. ಅದೇ ಸಾಲಿನಲ್ಲಿ ಗರ್ಭಿಣಿ ಮಹಿಳೆಯರಿಗಾಗಿ ಜಾರಿಗೆ ತಂದ "ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ" ಕೂಡಾ ಒಂದು.
ಕೇಂದ್ರ ಸರ್ಕಾರ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ, ಫಲಾನುಭವಿಗಳು ಒಟ್ಟು11,000 ರೂಪಾಯಿವರೆಗೆ ಆರ್ಥಿಕ ನೆರವು ಪಡೆಯುತ್ತಾರೆ.
ಗರ್ಭಧಾರಣೆ ಸಮಯದಲ್ಲಿ ಮತ್ತು ಹೆರಿಗೆ ನಂತರದ ಸಮಯದಲ್ಲಿ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಮಹಿಳೆಯರ ಖಾತೆಗೆ 11 ಸಾವಿರ ರೂ.!
ಮೋದಿ ಸರ್ಕಾರದಿಂದ ಗರ್ಭಿಣಿ ಮಹಿಳೆಯರ ಖಾತೆಗೆ 11,000 ರೂಪಾಯಿಗಳನ್ನು ಜಮಾ ಮಾಡುತ್ತದೆ. ಈ ಮೊತ್ತವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಮೂಲಕ, ಫಲಾನುಭವಿ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ.
ತಾಯಿ, ಮಗುವಿನ ಆರೈಕೆಗೆ ಕೇಂದ್ರದ ನಿರ್ಧಾರ!
ಇನ್ನು ಮಾತೃ ವಂದನಾ ಯೋಜನೆಯ ಮುಖ್ಯ ಉದ್ದೇಶ, ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯ ಮತ್ತು ಆರೈಕೆ. ಆದ್ದರಿಂದ ನಿಮ್ಮ ಮನೆಯ ಗರ್ಭಿಣಿ ಮಹಿಳೆಯರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕೆಂದರೆ ಕೆಳಗೆ ನೀಡಿರುವ ಮಾಹಿತಿ ಓದಿ.
ಯೋಜನೆಯ ನಿಯಮ:
ಮಾತೃ ವಂದನಾ ಯೋಜನೆಯ ಅಡಿಯಲ್ಲಿ, ಮೊದಲ ಬಾರಿಗೆ ತಾಯಿಯಾಗುವ ಮಹಿಳೆಯರಿಗೆ 5,000 ರೂಪಾಯಿಗಳ ಹಣವನ್ನು ನೀಡಲಾಗುತ್ತದೆ. ಇನ್ನು ಈ ಹಣವನ್ನು 3 ಕಂತುಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಮೊದಲಿನ ಕಂತಿನಲ್ಲಿ 1 ಸಾವಿರ ರೂಪಾಯಿ ಮತ್ತು ಇನ್ನುಳಿದ ಎರಡು ಕಂತುಗಳಲ್ಲಿ 2 ಸಾವಿರದಂತೆ ಜಮಾ ಮಾಡಲಾಗುತ್ತದೆ.
ಒಂದು ವೇಳೆ ಎರಡನೇ ಮಗು ಹೆಣ್ಣು ಮಗುವಾಗಿದ್ದರೆ, ಈ ಯೋಜನೆ ಮೂಲಕ ಹೆಚ್ಚುವರಿಯಾಗಿ 6,000 ರೂಪಾಯಿಗಳ ಆರ್ಥಿಕ ನೆರವು ಪಡೆಯಬಹುದು. ಈ ಮೂಲಕ ಒಟ್ಟು 11 ಸಾವಿರ ರೂಪಾಯಿ ಆರ್ಥಿಕ ನೆರವನ್ನು ಪಡೆಯಬಹುದು.
ಮಗು ಜನಿಸಿದ 9 ತಿಂಗಳೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನ ಮಹಿಳೆಯರು, ಮತ್ತು ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು, ಹೀಗೆ ಎಲ್ಲಾ ವರ್ಗದ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
- ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಫಲಾನುಭವಿಯಾಗಲು, ಮಹಿಳೆಯರು ಮೊದಲು ಅಧಿಕೃತ ವೆಬ್‌ಸೈಟ್ pmmvy.wcd.gov.in ಗೆ ಭೇಟಿ ನೀಡಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಬೇಕು.
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಆಗಿರಬೇಕು.
- ಅರ್ಜಿ ಸಲ್ಲಿಸುವಾಗ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಐಡಿ ಕಾರ್ಡ್, ಗರ್ಭಧಾರಣೆಗೆ ಸಂಬಂಧಿಸಿದ ಹಾಸ್ಪಿಟಲ್ ರಿಪೋರ್ಟ್‌ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.


Click it and Unblock the Notifications