ಸದ್ಯ ದೇಶದಲ್ಲಿ ಹಣದುಬ್ಬರದ ಪರಿಸ್ಥಿತಿ ಎದುರಾಗುತ್ತಿದೆ. ಅದರಲ್ಲೂ ಉಳಿತಾಯಕ್ಕಿಂತ ಖರ್ಚುಗಳೇ ಜಾಸ್ತಿಯಾಗುತ್ತಿದೆ. ದಿನ ಹೋದಂತೆ ಆರ್ಥಿಕ ಪರಿಸ್ಥಿತಿಗಳು (Economic Situation) ಬದಲಾಗುತ್ತಿದೆ. ಆದ್ದರಿಂದ ಯಾವುದೇ ಒಂದು ವಸ್ತುವನ್ನು ಖರೀದಿಸೇಕೆಂದರೆ, ಉಳಿತಾಯ (Savings) ಮಾಡಬೇಕೆಂದರೂ ಸರಿಯಾದ ಪ್ಲಾನಿಂಗ್ ಮಾಡೋದು ಬಹಳ ಮುಖ್ಯ.

ಆದ್ದರಿಂದ ಎಲ್ಲಿಯಾದರೂ ಹೂಡಿಕೆ ಮಾಡುವ ಮುನ್ನ, ಯಾವುದನ್ನಾದರೂ ಖರೀದಿಸುವ ಮುನ್ನ ಆರ್ಥಿಕ ಸ್ಥಿತಿಗತಿಗಳನ್ನ ಮೊದಲು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ 2026ರಲ್ಲಿ ನೀವು ಮಾಡಬಾರದ ಕೆಲವು ತಪ್ಪುಗಳ ಬಗ್ಗೆ ಹೇಳುತ್ತೇವೆ ಕೇಳಿ.
ಹೊಸ ಕಾರುಗಳು ಮತ್ತು ವಾಹನ ಸಾಲಗಳು:
ಹೊಸ ವಾಹನ ಖರೀದಿಸಬೇಕೆಂಬ ಕನಸು ಹಲವರಿಗೆ ಇದೆ. ಆದರೆ ಇದೇ ಕಾರಣದಿಂದ ಹೆಚ್ಚಿನವರು ಸಾಲಕ್ಕೂ ಮುಂದಾಗುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬಗಳು ಇಂದು ಕಾರು ಖರೀದಿಸುವ ಆಸೆಯಿಂದ 6-7 ವರ್ಷಗಳ ವಾಹನ ಸಾಲ ಮಾಡುತ್ತಿದ್ದಾರೆ. ಆದ್ದರಿಂದ ಸುಖಾಸುಮ್ಮನೆ ದೀರ್ಘಾವಧಿಯ ವಾಹನ ಸಾಲ ಮಾಡೋದನ್ನು ತಪ್ಪಿಸಿ. ಆದಷ್ಟು ಇದ್ದ ಹಣದಲ್ಲಿ ವಾಹನ ಖರೀದಿಸುವ ಯೋಜನೆ ಮಾಡಿ.
ವಾರ್ಷಿಕ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್‌ಗಳು:
ಪ್ರತಿ ವರ್ಷ ಹೊಸ ಸ್ಮಾರ್ಟ್‌ಫೋನ್ ಖರೀದಿಸುವುದು ಅಗತ್ಯ ಎಂಬ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಆದರೆ, ಇದೇ ನಿರ್ಧಾರ ಆರ್ಥಿಕವಾಗಿ ದೊಡ್ಡ ಸಮಸ್ಯೆಯನ್ನು ನೀಡುತ್ತಿದೆ. ಆಧುನಿಕ ಸ್ಮಾರ್ಟ್‌ಫೋನ್‌ಗಳು ಹೊಸ ಹೊಸ ಬೆಲೆಯೊಂದಿಗೆ ಲಾಂಚ್ ಆಗುತ್ತವೆ. ಅಲ್ಲದೇ ಕೆಲವು ಸ್ಮಾರ್ಟ್‌ಫೋನ್‌ಗಳು ದುಬಾರಿಯಾಗಿರುತ್ತದೆ. ಆದ್ದರಿಂದ ಮೊಬೈಲ್‌ಗಾಗಿ ಹಣ ವ್ಯಯ ಮಾಡಬೇಡಿ.
ರೆಸ್ಟೋರೆಂಟ್ ಊಟ ಮತ್ತು ಆನ್‌ಲೈನ್ ಆರ್ಡರ್‌ಗಳು:
ಹೊರಗೆ ಊಟ ಮಾಡುವುದು ಹಲವು ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಟ್ರೆಂಡ್ ಆಗಿಬಿಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ರೆಸ್ಟೋರೆಂಟ್‌ಗಳ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದ್ದರೂ, ಆಹಾರದ ಪ್ರಮಾಣ, ಗುಣಮಟ್ಟ ಮತ್ತು ಸೇವೆಯು ಹೆಚ್ಚಾಗಿ ಕುಸಿದಿದೆ. ಅನುಕೂಲಕರವೆಂದು ತೋರುವ ಈ ಆಯ್ಕೆಯು, ತಿಂಗಳ ಖರ್ಚನ್ನು ಲೆಕ್ಕ ಮಾಡಿದರೆ, ಹೆಚ್ಚೇ ಇರುತ್ತದೆ..
ವಾರಕ್ಕೊಮ್ಮೆ ಹೋಗಿ ಹೊರಗೆ ಊಟ ಮಾಡಿದ್ರೆ, ತಿಂಗಳ ವೆಚ್ಚದಲ್ಲಿ ಎರಡನೇ ದಿನಸಿ ಬಿಲ್ಲಿನಷ್ಟಾಗುತ್ತದೆ. ಇದಕ್ಕೆ ಡೆಲಿವರಿ ಶುಲ್ಕಗಳು, ಸೇವಾ ಶುಲ್ಕಗಳು ಮತ್ತು ನಿರೀಕ್ಷಿತ ಸಲಹೆಗಳನ್ನು ಸೇರಿಸಿದರೆ ನಿಮ್ಮ ಜೀವನ ವೆಚ್ಚವೇ ದುಬಾರಿಯಾಗಬಹುದು.
ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ಸ್ ಮತ್ತು ಪ್ರೀಮಿಯಂ ಚಂದಾದಾರಿಕೆಗಳು:
ಕೇಬಲ್ ಟಿವಿಯಿಂದ ಹೊರ ಬಂದ ಜನರು ಸದ್ಯ ಒಟಿಟಿಯಲ್ಲಿದ್ದಾರೆ. ಆದರೆ ಪ್ರೀಮಿಯಂ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಗೆ ಪೇ ಮಾಡುವ ಮೊತ್ತವು, ಕುಟುಂಬಗಳು ಸಾಂಪ್ರದಾಯಿಕ ಟಿವಿ ರೀಚಾರ್ಜ್‌ಗಳಿಗೆ ಪಾವತಿಸಿದ್ದಕ್ಕಿಂತ ಹೆಚ್ಚಾಗಿರುತ್ತದೆ. ಪ್ರೀಮಿಯಂ ಸ್ಟ್ರೀಮಿಂಗ್ ಸೇವೆಗಳು, ಸಂಗೀತ ಪ್ಲಾಟ್‌ಫಾರ್ಮ್‌ಗಳು, ಕ್ಲೌಡ್ ಸ್ಟೋರೇಜ್, ಆನ್‌ಲೈನ್ ಡೆಲಿವರಿ, ಫಿಟ್‌ನೆಸ್ ಅಪ್ಲಿಕೇಶನ್‌ಗಳು, ಹೀಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮಧ್ಯಮ ವರ್ಗದ ಜನರ ದೊಡ್ಡ ಹೊರೆಯಾಗಿಬಿಟ್ಟಿದೆ.
ಆದ್ದರಿಂದ ಈ ಮೇಲೆ ತಿಳಿಸಿದ ಖರ್ಚುಗಳ ಬಗ್ಗೆ ಸರಿಯಾಗಿ ಗಮನಹರಿಸಿ. ಹಾಗಿದ್ದರೆ ಮಾತ್ರ ನೀವು ಹಣ ಉಳಿಸಲು ಸಾಧ್ಯವಾಗುತ್ತದೆ. ಖರ್ಚಿಗಿಂತ ಹೆಚ್ಚಾಗಿ ಉಳಿತಾಯ ಮಾಡೋದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಹಾಗಿದ್ದರೆ ನೀವೂ ಕೂಡಾ 2026 ರಲ್ಲಿ ಹಣ ಸಂಪಾದನೆ ಜೊತೆಗೆ, ಉತ್ತಮ ಉಳಿತಾಯವೂ ಮಾಡುತ್ತೀರಿ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications