ಕಡಿಮೆ ಹೂಡಿಕೆ, ಹೆಚ್ಚು ಆದಾಯ ಗಳಿಸುವ ಹೂಡಿಕೆ ಯೋಜನೆ (Investment Plans) ಹುಡುಕುತ್ತಾ ಇದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ. ಪೋಸ್ಟ್ ಆಫೀಸ್‌ನ (Post Office) ಈ ಯೋಜನೆಯಿಂದ ಲಾಭವೂ ಹೆಚ್ಚು, ನಿಮ್ಮ ಹಣವೂ ಸೇಫ್ ಆಗಿರುತ್ತೆ. ಇನ್ನು ಈ ಯೋಜನೆಗೆ 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆಯು ಹೂಡಿಕೆ ಮಾಡಬಹುದು. ನಿವೃತ್ತಿ ನಂತರದ ಜೀವನಕ್ಕೆ ಸ್ಥಿರ ಆದಾಯ ಪಡೆಯಲು ಪ್ಲಾನ್ ಮಾಡಿರುವವರಿಗೆ ಇದು ಬೆಸ್ಟ್.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಫಿಕ್ಸೆಡ್ ಡೆಪಾಸಿಟ್‌ನಂತೆಯೇ ಕೆಲಸ ಮಾಡುತ್ತದೆ. ಅಂದರೆ ಒಂದೇ ಬಾರಿ ಹಣ ಹೂಡಿಕೆ ಮಾಡುವ ಮೂಲಕ ಉತ್ತಮ ಬಡ್ಡಿ ಜೊತೆಗೆ ಆದಾಯವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪ್ರತಿ ತಿಂಗಳು ₹9,250 ಪಡೆಯಬಹುದು. ನಿಗದಿತ ವರ್ಷದವರೆಗೆ ಹಣ ಹೂಡಿಕೆ ಮಾಡಿ, ಅವಧಿ ಮುಗಿದ ನಂತರ ಬಡ್ಡಿ ಮೇಲೆ ಆದಾಯ ಪಡೆಯಿರಿ. ಸದ್ಯ, ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಈ ಮಾಸಿಕ ಆದಾಯ ಯೋಜನೆಯ ಬಡ್ಡಿ ದರ 7.4% ಆಗಿದೆ.
ಎಷ್ಟು ಅವಧಿ?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಅವಧಿ 5 ವರ್ಷಗಳು. ಹೂಡಿಕೆ ಮಾಡಿದ ದಿನಾಂಕದಿಂದ 5 ವರ್ಷಗಳವರೆಗೆ ಪ್ರತಿ ತಿಂಗಳು ನೀವು ಇನ್ವೆಸ್ಟ್ ಮಾಡಿದ ಹಣಕ್ಕೆ ಬಡ್ಡಿ ಸಿಗಲಿದೆ. ಇದು ಸ್ಥಿರ ಆದಾಯವಾಗಿದ್ದು, 5 ವರ್ಷಗಳ ಕಾಲ ನಿಮ್ಮ ಖಾತೆಗೆ ಬಡ್ಡಿ ಹಣ ಜಮಾ ಆಗುತ್ತಿರುತ್ತದೆ.
ಹೂಡಿಕೆ ಎಷ್ಟು ಮಾಡಬಹುದು?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಂಟಿ ಖಾತೆ ಮತ್ತು ಜಂಟಿ ಖಾತೆ ಎಂಬ ಎರಡು ರೀತಿಯಲ್ಲಿ ಖಾತೆ ಓಪನ್ ಮಾಡಬಹುದು. ನೀವು ತೆರೆಯುವ ಖಾತೆಯ ಪ್ರಕಾರದ ಮೇಲೆ ನೀವು ಎಷ್ಟು ಹೂಡಿಕೆ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ. ಒಂಟಿ ಖಾತೆದಾರರು ಗರಿಷ್ಠ ₹9 ಲಕ್ಷದವರೆಗೆ ಹೂಡಿಕೆ ಮಾಡಬಹುದು, ಆದರೆ ಜಂಟಿ ಖಾತೆದಾರರು ಗರಿಷ್ಠ ₹15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಸಂಗಾತಿಯೊಂದಿಗೆ ಹೂಡಿಕೆ ಯೋಜನೆ ಪ್ರಾರಂಭಿಸಬೇಕೆಂದುಕೊಂಡವರಿಗೆ ಇದು ಉತ್ತಮ ಯೋಜನೆ.
ಹೂಡಿಕೆದಾರ ಮರಣ ಹೊಂದಿದರೆ ಹಣ ಏನಾಗುತ್ತೆ?
ಒಂದು ವೇಳೆ ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು ಅವಧಿ ಪೂರ್ಣಗೊಳ್ಳುವ ಮೊದಲು ಮರಣ ಹೊಂದಿದರೆ, ಅವರ ಹಣ ಯಾರಿಗೆ ಸೇರುತ್ತದೆ ಎಂಬುದು ಹಲವರ ಪ್ರಶ್ನೆ? ಒಂದು ವೇಳೆ ಅಂತಹ ಅನಾಹುತ ಸಂಭವಿಸಿದರೆ, ಮರಣ ಹೊಂದಿದವರ ಕಾನೂನುಬದ್ಧ ವಾರಸುದಾರರಿಗೆ ಈ ಹಣ ನೀಡಲಾಗುತ್ತದೆ. ಇದಕ್ಕಾಗಿ, ಖಾತೆ ತೆರೆಯುವಾಗ ನಾಮಿನಿಯನ್ನು ನೇಮಿಸುವುದು ಕೂಡಾ ಕಡ್ಡಾಯವಾಗಿರುತ್ತದೆ.
ತೆರಿಗೆ ವಿನಾಯಿತಿ ಇದ್ಯಾ?
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗೆ ಯಾವುದೇ ತೆರಿಗೆ ವಿನಾಯಿತಿಗಳು ಅನ್ವಯವಾಗುವುದಿಲ್ಲ. ಆದ್ದರಿಂದ, ನಿಮ್ಮ ಹೂಡಿಕೆಯಿಂದ ಬರುವ ಆದಾಯವು ತೆರಿಗೆಗೆ ಒಳಪಟ್ಟಿರುತ್ತದೆ.
ಒಮ್ಮೆ ಹೂಡಿಕೆ, ತಿಂಗಳಿಗೆ 9,250 ರೂ. ಆದಾಯ!
ಜಂಟಿ ಖಾತೆಯಲ್ಲಿ ನೀವು ₹15 ಲಕ್ಷ ಹೂಡಿಕೆ ಮಾಡಿದರೆ, ಪ್ರಸ್ತುತ 7.40% ಬಡ್ಡಿ ದರದ ಪ್ರಕಾರ ವಾರ್ಷಿಕವಾಗಿ ₹1,11,000 ಆದಾಯ ಗಳಿಸಬಹುದು. ಅಂದರೆ, ಪ್ರತಿ ತಿಂಗಳು ₹9,250 ಸಿಗುತ್ತದೆ. 5 ವರ್ಷಗಳ ಅವಧಿಯಲ್ಲಿ ಒಟ್ಟು ಬಡ್ಡಿ ಆದಾಯ ₹5,55,000 ಆಗುತ್ತದೆ. ಈ ಮೂಲಕ ಬರೀ ಐದು ವರ್ಷದಲ್ಲಿ ಒಳ್ಳೆಯ ಆದಾಯ ಪಡೆಯಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications