ಬ್ಯಾಂಕ್, ಪೋಸ್ಟ್ ಆಫೀಸ್ (Bank, Post Office) ಸಾರ್ವಜನಿಕರಿಗಾಗಿ ಹಲವಾರು ಹೂಡಿಕೆ ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ದರಿಂದ ಹೆಚ್ಚಿನವರು ಸುರಕ್ಷಿತ ಹೂಡಿಕೆಗಾಗಿ (Investment) ಪೋಸ್ಟ್ ಆಫೀಸ್ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಈ ಯೋಜನೆ ಮೂಲಕ ಪುರುಷರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಲವು ಪ್ರಯೋಜನಗಳನ್ನು, ಉತ್ತಮ ಆದಾಯವನ್ನು (Income) ಪಡೆಯಬಹುದು.

ಪೋಸ್ಟ್ ಆಫೀಸ್‌ನಲ್ಲಿರುವ ಹಲವು ಯೋಜನೆಗಳು ನಷ್ಟವಾಗುತ್ತೆ ಎಂಬ ಭಯವಿರುವುದಿಲ್ಲ, ನೀವು ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ನಿಮ್ಮ ಹಣಕ್ಕೆ ಆಕರ್ಷಕ ಬಡ್ಡಿ ದರಗಳು ಮತ್ತು ಸರ್ಕಾರದ ಅಧೀನದಲ್ಲೇ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಆದ್ದರಿಂದ ನೀವು ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಬಹುದು.
ಪೋಸ್ಟ್ ಆಫೀಸ್ ಜಾರಿಗೆ ತಂದ ಮಾಸಿಕ ಆದಾಯ ಯೋಜನೆ (MIS) ನಿವೃತ್ತ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಸೂಕ್ತವಾಗಿದೆ. ಈ ಯೋಜನೆಯಡಿ ಐದು ವರ್ಷಗಳ ಅವಧಿಗೆ ನಿಮಗೆ ಬೇಕಾದಷ್ಟು ಹಣವನ್ನು ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡಿದ ದಿನಾಂಕದಿಂದ ತಿಂಗಳಿಗೆ ಒಂದಷ್ಟು ಬಡ್ಡಿಯನ್ನು ನೀವು ಪಡೆಯಬಹುದು.
ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆ ಮೂಲಕ ಜನರು, ತಾವು ಹೂಡಿಕೆ ಮಾಡಿದ ಹಣಕ್ಕೆ 7.4% ಬಡ್ಡಿ ದರವನ್ನು ಪಡೆಯಬಹುದು. ಕೆಲವು ಬ್ಯಾಂಕುಗಳಿಗಿಂತಲೂ ಈ ಯೋಜನೆಯಲ್ಲಿ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು.
ಮಾಸಿಕ ಆದಾಯ ಯೋಜನೆ ಮೂಲಕ 1 ಲಕ್ಷ ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ ಸುಮಾರು 616 ರೂಪಾಯಿವರೆಗೆ ಪಡೆಯಬಹುದು. ಅದೇ ನಿಮ್ಮ ಹೂಡಿಕೆಯ ಮೊತ್ತ 5 ಲಕ್ಷ ರೂ.ಗೆ ಹೆಚ್ಚಿಸಿದರೆ, ನಿಮ್ಮ ತಿಂಗಳ ಆದಾಯ ರೂ. 3,083 ಪಡೆಯಬಹುದು. ಆದ್ದರಿಂದ ಮನೆಯಲ್ಲೇ ಕೂತು ತಿಂಗಳಿಗೆ ಸಾವಿರಗಟ್ಟಲೆ ಹಣ ಸಂಪಾದಿಸಬಹುದು.
ಆದರೆ ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದರ ಮೇಲೆ ನಿಮಗೆ ಸಿಗುವ ಬಡ್ಡಿ ನಿರ್ಧಾರವಾಗುತ್ತದೆ. ಅಲ್ಲದೇ ಈ ಯೋಜನೆಗೆ ನೀವು ವೈಯಕ್ತಿಕ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು. ವೈಯಕ್ತಿಕ ಖಾತೆಗೆ ಗರಿಷ್ಠ ಅಂದರೆ 9 ಲಕ್ಷ ರೂ. ಮತ್ತು ಇಬ್ಬರು ಅಥವಾ ಮೂವರು ವ್ಯಕ್ತಿಗಳ ಜಂಟಿ ಖಾತೆಗಳಿಗೆ, ಮಿತಿ 15 ಲಕ್ಷ ರೂ.
ಆದ್ದರಿಂದ ಒಂದೇ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ, ಪ್ರಸ್ತುತ 7.4% ಬಡ್ಡಿ ದರದಲ್ಲಿ ಪ್ರತಿ ತಿಂಗಳು 5,550 ರೂಪಾಯಿವರೆಗೆ ಆದಾಯ ಗಳಿಸಬಹುದು.


Click it and Unblock the Notifications