ಹೆಚ್ಚಿನವರು ಹೂಡಿಕೆ ಯೋಜನೆಗಳ (Investing Schemes) ಬಗ್ಗೆ ಹುಡುಕುತ್ತಲೇ ಇರುತ್ತಾರೆ. ಅದರಲ್ಲೂ ಯಾವ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಿದ್ರೆ, ಎಷ್ಟು ಲಾಭ ಪಡೆಯಬಹುದು. ಹೀಗೆಲ್ಲಾ ಲೆಕ್ಕ ಮಾಡಿಕೊಂಡು ತಾವು ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ (Money Invest) ಮಾಡುತ್ತಾರೆ. ಇಂದು ನಾವು ಹೇಳುವ ಮಾಹಿತಿ, ಸಣ್ಣ ಹೂಡಿಕೆದಾರರಿಗೆ ತುಂಬಾನೇ ಪ್ರಯೋಜನವಾಗಲಿದೆ. ಸಣ್ಣ ಮಟ್ಟದಲ್ಲಿ ಹೂಡಿಕೆ ಮಾಡುವವರು ತಮ್ಮ ಬಂಡವಾಳದಲ್ಲಿ ನಷ್ಟ ಅನುಭವಿಸಲು ತಯಾರಿರುವುದಿಲ್ಲ. ಅದಕ್ಕಾಗಿಯೇ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್‌ಗಳು (Bank vs Post Office) ಹಲವಾರು ಠೇವಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸುರಕ್ಷತೆ, ಲಭ್ಯತೆ ಮತ್ತು ಒಟ್ಟಾರೆ ವಿಶ್ವಾಸಾರ್ಹತೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಯಾವುದು ಬೆಸ್ಟ್?
ಪೋಸ್ಟ್ ಆಫೀಸ್ ಸ್ಕೀಮ್‌ಗಳು: ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC), ಮತ್ತು ಆರ್‌ಡಿ, ಎಫ್‌ಡಿ, ಹೀಗೆ ಮಾಸಿಕ ಆದಾಯ ಯೋಜನೆಗಳನ್ನು ಪೋಸ್ಟ್ ಆಫೀಸ್ ಹೊಂದಿದೆ. ಅಲ್ಲದೇ ಇದು ಸಂಪೂರ್ಣವಾಗಿ ಸರ್ಕಾರಿ ಅಧೀನದಲ್ಲಿರುತ್ತದೆ. ಆದ್ದರಿಂದ ಯಾವುದೇ ಹಣ ನಷ್ಟವಾಗುತ್ತೆ ಅನ್ನೋ ಭಯವಿರುವುದಿಲ್ಲ. ಪೋಸ್ಟ್ ಆಫೀಸ್‌ನ ಯೋಜನೆಗಳಿಂದ ಬರುವ ಬಹುತೇಕ ಆದಾಯ ಸುರಕ್ಷಿತವಾಗಿರುತ್ತದೆ ಮತ್ತು ಹೆಚ್ಚಿನ ಬಡ್ಡಿದರವನ್ನೂ ನೀಡುತ್ತದೆ.
ಬ್ಯಾಂಕ್ ಹೂಡಿಕೆಗಳು: ಪೋಸ್ಟ್ ಆಫೀಸ್ ಬಿಟ್ಟರೆ ಹೆಚ್ಚಿನವರು ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಕೆಲವು ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿದರವನ್ನು ನೀಡುವುದರಿಂದ ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ. ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು ಸಣ್ಣ ಹೂಡಿಕೆದಾರರಿಗೆ ಬೆಸ್ಟ್ ಅಂತಾನೆ ಹೇಳಬಹುದು. ಇನ್ನು ಬ್ಯಾಂಕ್ ಮೂಲಕ 5 ಲಕ್ಷ ರೂಪಾಯಿವರೆಗೆ ಹಣ ಡೆಪಾಸಿಟ್ ಮೂಲಕ, ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ನಿಂದ ವಿಮೆ ಮಾಡಲಾಗುತ್ತದೆ. ಆದ್ದರಿಂದ, ಬ್ಯಾಂಕ್ ತೊಂದರೆಯಲ್ಲಿದ್ದರೂ ಸಹ, ವಿಮಾ ಮೊತ್ತದವರೆಗಿನ ನಿಮ್ಮ ಹೂಡಿಕೆ ಮೊತ್ತ ಸೇಫ್ ಆಗಿರುತ್ತೆ. ಹೆಚ್ಚಿನ ಅಂಚೆ ಕಚೇರಿ ಯೋಜನೆಗಳಿಗೆ ಹೋಲಿಸಿದರೆ, ಬ್ಯಾಂಕ್ ಎಫ್‌ಡಿ ಯೋಜನೆಗಳಲ್ಲಿ ಸುಲಭವಾಗಿ ವಿಥ್ ಡ್ರಾ ಮಾಡಬಹುದು.
ಆದಾಯ ಮತ್ತು ಬಡ್ಡಿದರದ ವಿಷಯದಲ್ಲಿ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎರಡೂ ಸೇಫ್ ಎಂದು ಪರಿಗಣಿಸಲಾಗಿದೆ. ಬ್ಯಾಂಕ್ ಯೋಜನೆಗಳಿಗೆ ಹೋಲಿಸಿದ್ರೆ, ಅಂಚೆ ಕಚೇರಿ ಯೋಜನೆಗಳು ಕೆಲವೊಮ್ಮೆ ಸ್ವಲ್ಪ ಉತ್ತಮ ಬಡ್ಡಿ ದರಗಳನ್ನು ನೀಡುತ್ತವೆ, ವಿಶೇಷವಾಗಿ PPF ನಂತಹ ದೀರ್ಘಾವಧಿಯ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿದರಗಳನ್ನು ನೀಡಲಾಗುತ್ತದೆ. ಇನ್ನು ಲಭ್ಯತೆ ಬಗ್ಗೆ ಹೇಳಬೇಕೆಂದರೆ, ಅಂಚೆ ಕಚೇರಿ ಯೋಜನೆಗಳಲ್ಲಿ ಯಾವುದೇ ವಹಿವಾಟುಗಳನ್ನು ಮಾಡಬೇಕೆಂದರೂ ಅಂಚೆ ಕಚೇರಿಗೆ ಹೋಗಬೇಕಾಗುತ್ತದೆ. ಆದರೆ ಬ್ಯಾಂಕ್ ಎಫ್‌ಡಿ ಅಥವಾ ಇನ್ಯಾವುದೇ ಯೋಜನೆಗಳನ್ನು ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಮಾಡಿ ಮುಗಿಸಬಹುದು.
ನಿಮ್ಮ ಆಯ್ಕೆಗಳಿಗೆ ತಕ್ಕಂತೆ ನೀವು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಯೋಜನೆ ಯಾವುದರಲ್ಲೂ ಹೂಡಿಕೆ ಮಾಡಬಹುದು. ಅತ್ಯುನ್ನತ ಭದ್ರತೆ, ದೀರ್ಘಾವಧಿಯ ಹೂಡಿಕೆ, ಮತ್ತು ಸ್ವಲ್ಪ ಹೆಚ್ಚಿನ ಆದಾಯ ಪಡೆಯಬೇಕೆಂದುಕೊಂಡರೆ ಪೋಸ್ಟ್ ಆಫೀಸ್ ಬೆಸ್ಟ್. ಆದರೆ ಹಣವನ್ನು ಹಿಂಪಡೆಯಬೇಕು, ಲಭ್ಯತೆ, ಮತ್ತು ವಿಮೆಯ ಜೊತೆಗೆ ಲೈಫ್‌ಗೆ ರಕ್ಷಣೆ ಪಡೆಯಬೇಕೆಂದರೆ, ಬ್ಯಾಂಕ್ ಜೊತೆ ಇನ್ವೆಸ್ಟ್ ಮಾಡೋದು ಉತ್ತಮ ಆಯ್ಕೆ. ಆದರೆ ಆಯ್ಕೆ ನಿಮ್ಮದು, ಮಾಹಿತಿ ಮಾತ್ರ ನಮ್ಮದು.
(ಈ ವಿಶ್ಲೇಷಣೆ ಮತ್ತು ಶಿಫಾರಸುಗಳು ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ "ನಾವು" ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆಗೆ ಖಾತರಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟವನ್ನು ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸ್ವತಂತ್ರವಾಗಿ ಪರಿಶೀಲಿಸಬೇಕು.)


Click it and Unblock the Notifications