ಪ್ರಸ್ತುತ ದಿನಗಳಲ್ಲಿ ಹೂಡಿಕೆ (Investment) ಮಾಡುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಕೆಲವರು ಹೂಡಿಕೆ ಮಾಡೋ ಹವ್ಯಾಸ ಹೊಂದಿದ್ದರೆ, ಇನ್ನೂ ಕೆಲವರಿಗೆ ಹೇಗೆ ಹೂಡಿಕೆ ಪ್ಲಾನ್ ಮಾಡ್ಬೇಕು ಅನ್ನೋದೆ ಗೊತ್ತಿರುವುದಿಲ್ಲ. ಆದರೆ ಇಂದು ಎಲ್ಲದರ ಬೆಲೆ ದುಬಾರಿಯಾಗುತ್ತಿರುವ ನಡುವೆ, ಮಧ್ಯಮ ವರ್ಗದವರಿಗೆ ಉಳಿತಾಯ (Savings) ಅನಿವಾರ್ಯ. ಸ್ಟಾಕ್ ಮಾರುಕಟ್ಟೆ ಅಪಾಯ, ಬೇರೆ ಖಾಸಗಿ ಹೂಡಿಕೆ ಯೋಜನೆಗಳನ್ನು ತಪ್ಪಿಸಿ, ಬ್ಯಾಂಕ್‌ಗಳಿಗಿಂತ ಉತ್ತಮ ಆದಾಯ ಮತ್ತು 100% ಸುರಕ್ಷತೆ ಬಯಸುವವರಿಗಾಗಿ ಅಂಚೆ ಕಚೇರಿ (Post Office) ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಹೂಡಿಕೆದಾರರು ದಿನಕ್ಕೆ ಕೇವಲ ₹200 ಉಳಿಸಿದರೆ, ಕೆಲವೇ ವರ್ಷಗಳಲ್ಲಿ ₹10 ಲಕ್ಷದವರೆಗೆ ಹಣ ಗಳಿಸಬಹುದು. ಯಾವುದೇ ಆತಂಕವಿಲ್ಲದೆ ಹಣವನ್ನು ಸುರಕ್ಷಿತವಾಗಿಡಲು ಬಯಸುವವರಿಗೆ ಇದು ಬೆಸ್ಟ್. ಹಾಗಿದ್ರೆ ಆ ಯೋಜನೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ.

'ಅಂಚೆ ಕಚೇರಿ ಆವರ್ತಕ ಠೇವಣಿ' (RD) ಯೋಜನೆ, ಇದು ಸಂಪೂರ್ಣ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಪೋಸ್ಟ್ ಆಫೀಸ್‌ನ ಈ ಯೋಜನೆಗಳು ನಿಮ್ಮ ಹಣಕ್ಕೆ 100% ಸುರಕ್ಷತೆ ನೀಡುತ್ತದೆ. ಮಾರುಕಟ್ಟೆಯ ಏರಿಳಿತಗಳಿಗೆ ಒಡ್ಡದೆ, ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿಯ ಮೂಲಕ ಗ್ಯಾರಂಟಿ ಆದಾಯ ನೀಡಲಾಗುತ್ತದೆ. ಸುರಕ್ಷತೆ ಮತ್ತು ಗ್ಯಾರಂಟಿ ಆದಾಯ ಬಯಸುವವರಿಗೆ ಇದು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ.
ಕೇವಲ ₹100ಕ್ಕೆ ಖಾತೆ ತೆರೆಯಬಹುದಾದ ಈ ಯೋಜನೆ ಅತ್ಯಂತ ಕೈಗೆಟಕುವ ಆಯ್ಕೆ. ಪ್ರಸ್ತುತ, ವಾರ್ಷಿಕ 6.7% ಬಡ್ಡಿ ದರ ನೀಡಲಾಗುತ್ತಿದೆ. 'ಚಕ್ರಬಡ್ಡಿ' (Compounding Interest) ಇದರ ಪ್ರಮುಖ ವೈಶಿಷ್ಟ್ಯವಾಗಿದೆ. ನಿಮ್ಮ ಬಡ್ಡಿಯ ಮೇಲೂ ಬಡ್ಡಿ ಸೇರಿಕೊಂಡು ಹಣ ವೇಗವಾಗಿ ಬೆಳೆಯುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿಯನ್ನು ಲೆಕ್ಕಹಾಕಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ನೀವು ಖಾತೆ ತೆರೆದ ಒಂದು ವರ್ಷದ ನಂತರ, ಅದರಲ್ಲಿರುವ ಮೊತ್ತದ 50% ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೂಡಾ ಪಡೆಯುವ ಅವಕಾಶವಿದೆ.
ಅವಧಿ ಎಷ್ಟು?
ಯೋಜನೆಯ ಸಾಮಾನ್ಯ ಅವಧಿ ಐದು ವರ್ಷ. ಇದನ್ನು ಇನ್ನೊಂದು ಐದು ವರ್ಷ ವಿಸ್ತರಿಸುವ ಅವಕಾಶವೂ ಇದೆ. ಮಧ್ಯದಲ್ಲಿ ಹಣದ ಅಗತ್ಯವಿದ್ದರೆ, ಮೂರು ವರ್ಷಗಳ ನಂತರ ಖಾತೆ ಮುಚ್ಚುವ ಸೌಲಭ್ಯವೂ ಇದೆ.
ದಿನಕ್ಕೆ ₹200 ಉಳಿಸಿದರೆ ಸಾಕು, ಅದು ತಿಂಗಳಿಗೆ ₹6,000 ಆಗುತ್ತದೆ. ನೀವು 5 ವರ್ಷಗಳ ಕಾಲ ನಿರಂತರವಾಗಿ ₹6,000 ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ ₹3,60,000 ಆಗುತ್ತದೆ. ಇದಕ್ಕೆ 6.7% ಬಡ್ಡಿ ದರದಲ್ಲಿ ₹68,197 ಸೇರಿ ಒಟ್ಟಾರೆಯಾಗಿ ₹4,28,197 ನಿಮ್ಮ ಕೈ ಸೇರುತ್ತದೆ.
ಒಂದು ವೇಳೆ ಐದು ವರ್ಷಗಳ ನಂತರ ಹಣವನ್ನು ತೆಗೆದುಕೊಳ್ಳದೆ, ಯೋಜನೆಯನ್ನು ಮತ್ತೊಂದು ಐದು ವರ್ಷಗಳ ಕಾಲ ವಿಸ್ತರಿಸಿದರೆ, ಹತ್ತು ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ₹7,20,000 ಆಗುತ್ತದೆ. ಬಡ್ಡಿ ರೂಪದಲ್ಲಿ ಸರಿಸುಮಾರು ₹3,05,131 ಸಿಗುತ್ತದೆ. ಯೋಜನೆ ಮುಗಿಯುವ ಹೊತ್ತಿಗೆ ನಿಮ್ಮ ಖಾತೆಯಲ್ಲಿ ₹10,25,131 ಪಡೆಯಬಹುದು.
ಅಪಾಯದಿಂದ ದೂರವಿರಲು ಇಚ್ಛಿಸುವ ಉದ್ಯೋಗಿಗಳು, ಮಹಿಳೆಯರಿಗೆ, ಯುವಕರಿಗೆ ಇದು ಬೆಸ್ಟ್ ಆಯ್ಕೆ. ಮಕ್ಕಳ ಶಿಕ್ಷಣ, ವಿವಾಹ ಅಥವಾ ಭವಿಷ್ಯದ ಅಗತ್ಯಗಳಿಗಾಗಿ ಯೋಜಿಸುವವರಿಗೆ ಈ ಯೋಜನೆ ಸೂಪರ್ ಆಯ್ಕೆ. ಆತಂಕವಿಲ್ಲದೆ ಹಣ ಉಳಿತಾಯ ಮಾಡಲು, ಇಂದೇ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆ ತೆರೆಯಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).
More From GoodReturns

Savings Tips: ವಯಸ್ಸು 30 ಆದ್ರೂ, ಹಣ ಉಳಿತಾಯ ಇನ್ನೂ ಮಾಡಿಲ್ವಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

Money Tips: ದಂಪತಿ ಜೊತೆಯಾಗಿ ಈ ರೀತಿ ಇಎಂಐ ಪಾವತಿಸಿ! ನಿಮ್ಮಷ್ಟು ಬುದ್ಧಿವಂತರು ಯಾರೂ ಇರಲ್ಲ

Retirement Plans: 40 ವರ್ಷದಲ್ಲಿ ನಿವೃತ್ತಿ ಪಡೆಯೋ ಪ್ಲಾನ್ನಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಸಲಹೆ

Wedding Loan: ಮದುವೆಗೆ ಲೋನ್ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?



Click it and Unblock the Notifications