ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಾಗಿದೆ. ಇದು ನಿಮಗೆ ಉತ್ತಮ ಹಾಗು ಲಾಭದಾಯಕ ಆಯ್ಕೆಯಾಗಿದೆ. ಪ್ರಸ್ತುತವಾಗಿ ಈ ಯೋಜೆಯನ್ನ ಸರ್ಕಾರ ನಡೆಸುತ್ತಿದ್ದು, ಇದು ನಮ್ಮ ಬಂಡವಾಳವನ್ನ ಸುರಕ್ಷಿತವಾಗಿಡುತ್ತದೆ. ಹಾಗೆ ಹೂಡಿಕೆದಾರರಿಗೆ ಉತ್ತಮ ಆದಾಯವನ್ನ ನೀಡುತ್ತದೆ. ಇನ್ನು ಈ ಯೋಜನೆ ಮೂಲಕ ನೀವೇನಾದ್ರು ಹೂಡಿಕೆ ಮಾಡಲು ಬಯಸಿದ್ರೆ ಇದು ನಿಮಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದು ಹೂಡಿಕೆದಾರರಿಗೆ ಉತ್ತಮ ಆದಾಯವನ್ನ ಕೂಡ ನೀಡುತ್ತದೆ.
ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ ಮೂಲಕ ಹೂಡಿಕೆ ಮಾಡಲು ಮೊದಲು ಕನಿಷ್ಠ 500 ರೂಗಳಿಂದ ಇದು ಆರಂಭವಾಗುತ್ತದೆ. ಹಾಗೆ ಇದು ಹೆಚ್ಚು ಸಣ್ಣ ಹೂಡಿಕೆದಾರರಿಗೂ ಆಕರ್ಷವಾಗಿದೆ.

ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ ಬಗ್ಗೆ ಇಲ್ಲಿ ತಿಳಿಯಿರಿ
ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಯೋಜನೆಯು ಸರ್ಕಾರಿ-ಬೆಂಬಲಿತ ಉಳಿತಾಯ ಯೋಜನೆಯಾಗಿದ್ದು ಅದು ವ್ಯಕ್ತಿಗಳಿಗೆ ತಮ್ಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಸುರಕ್ಷಿತ ಮತ್ತು ತೆರಿಗೆ-ಸಮರ್ಥ ಮಾರ್ಗವನ್ನು ನೀಡುತ್ತದೆ. ಇದು ಭಾರತದಾದ್ಯಂತ ಅಂಚೆ ಕಛೇರಿಗಳಲ್ಲಿ ಲಭ್ಯವಿದೆ ಮತ್ತು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಯೋಜನೆಯು 15 ವರ್ಷಗಳ ಅವಧಿಯನ್ನು ಹೊಂದಿದೆ, ಇದನ್ನು 5 ವರ್ಷಗಳ ಬ್ಲಾಕ್‌ಗಳಲ್ಲಿ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ.
PPF ಗೆ ಕೊಡುಗೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ ಮತ್ತು ಗಳಿಸಿದ ಬಡ್ಡಿಯು ತೆರಿಗೆ ಮುಕ್ತವಾಗಿರುತ್ತದೆ. ಬಡ್ಡಿ ದರವನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ನಿಗದಿಪಡಿಸುತ್ತದೆ ಮತ್ತು ವಾರ್ಷಿಕವಾಗಿ ಸಂಯೋಜಿಸಲ್ಪಡುತ್ತದೆ. ಪಿಪಿಎಫ್‌ಗೆ ಕನಿಷ್ಠ ವಾರ್ಷಿಕ ಕೊಡುಗೆ 500 ರೂ. ಆಗಿದ್ದು, ಗರಿಷ್ಠ ಮಿತಿ ₹1.5 ಲಕ್ಷ. PPF ಆಕರ್ಷಕ ಆದಾಯವನ್ನು ನೀಡುತ್ತದೆ ಮತ್ತು ಅದರ ಸರ್ಕಾರದ ಬೆಂಬಲದಿಂದಾಗಿ ಭದ್ರತೆಯನ್ನು ಒದಗಿಸುತ್ತದೆ. ಇದು ದೀರ್ಘಾವಧಿಯ ಹಣಕಾಸು ಯೋಜನೆಗೆ ಜನಪ್ರಿಯ ಆಯ್ಕೆಯಾಗಿದೆ. ಹೆಚ್ಚುವರಿಯಾಗಿ, ಹೂಡಿಕೆ ಮಾಡಿದ ಮೊತ್ತವು ಯೋಜನೆಯ ಅವಧಿಗೆ ಲಾಕ್-ಇನ್ ಆಗಿರುತ್ತದೆ, ಆದರೆ ಕೆಲವು ವರ್ಷಗಳ ನಂತರ ಭಾಗಶಃ ಹಿಂಪಡೆಯುವಿಕೆಗಳು ಮತ್ತು ಬಾಕಿಯ ವಿರುದ್ಧ ಸಾಲಗಳನ್ನು ಅನುಮತಿಸಲಾಗುತ್ತದೆ.
ಪಿಪಿಎಫ್‌ನ ಹೂಡಿಕೆಯ ಅವಧಿ
ಪೋಸ್ಟ್ ಆಫೀಸ್ ಪಿಪಿಎಪ್‌ನ ಯೋಜೆಯ ಹೂಡಿಕೆ ಅವಧಿ 15 ವರ್ಷಗಳಾಗಿರುತ್ತದೆ. ನೀವು 15 ವರ್ಷಗಳನ್ನ ಪೂರೈಸಿದ ನಂತರ ಇದನ್ನ 5-5 ವರ್ಷಗಳ ಅವಧಿಗೆ ವಿಸ್ತರಣೆ ಮಾಡಬಹುದು. ಈ ಯೋಜನೆಯು ಸಂಯೋಜೆಯ ಆದಾರದ ಮೇಲೆ ಇದು ಬಡ್ಡಿಯನ್ನು ನೀಡುತ್ತದೆ. ಹಾಗೆ ಇದು ದೀರ್ಘಾವಧಿಯಲ್ಲಿ ನಿಮ್ಮ ಹೂಡಿಕೆಯನ್ನ ಹೆಚ್ಚಳ ಮಾಡುತ್ತದೆ.
ಅಲ್ಲದೆ ಈ ಪಿಪಿಎಫ್ ಖಾತೆಯನ್ನು ತೆರೆಯುವುದು ಬಹಳ ಸುಲಭ ಹಾಗೆ ಈ ಖಾತೆಯನ್ನು ನೀವು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ತೆರೆಯಬಹುದು. ಹೀಗಾಗಿ ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶದ ಹಡಿಕೆದಾರರಿಗೆ ಇಬ್ಬರಿಗೂ ಕೂಡ ಪ್ರಯೋಜನಕಾರಿಯಾಗಿದೆ.
ಸರ್ಕಾರ ನಿಗಧಿಪಡಿಸಿದ ಬಡ್ಡಿ ದರ
ಪೋಸ್ಟ್ ಆಫೀಸ್ PPF ಯೋಜನೆಯ ಬಡ್ಡಿ ದರವನ್ನು ಸರ್ಕಾರ ನಿಗಧಿ ಮಾಡತ್ತದೆ ಮತ್ತು ಪ್ರತಿ ತ್ರೈಮಾಸಿಕದಲ್ಲಿ ಇದು ಬದಲಾಗುತ್ತದೆ. ಪ್ರಸ್ತುತ, ಈ ದರವು 7.1% ಇದೆ. ಈ ಬಡ್ಡಿ ದರವನ್ನು ಪ್ರತಿ ತಿಂಗಳ ಐದನೇ ದಿನದ ನಂತರ ಖಾತೆಯಲ್ಲಿ ಉಳಿಯುವ ಕನಿಷ್ಠ ಮೊತ್ತದ ಮೇಲೆ ಇದನ್ನ ಲೆಕ್ಕ ಮಾಡಲಾಗುತ್ತದೆ.
ಹೂಡಿಕೆದಾರರಿಗೆ PPF ಯೋಜನೆಯಲ್ಲಿನ ಬಡ್ಡಿದರದ ಉಪಯೋಗವನ್ನ ಸರ್ಕಾರ ಸಂಪೂರ್ಣ ಖಚಿತಪಡಿಸುತ್ತದೆ. ಅಲ್ಲದೆ ಇದು ಇತರೆ ಖಾಸಗಿ ಹೂಡಿಕೆ ಯೋಜನೆಗಳಿಗಿಂತ ಸುರಕ್ಷಿತವಾಗಿದೆ.
ಸಣ್ಣ ಹೂಡಿಕೆ ಮೂಲಕ ದೊಡ್ಡ ಮೊತ್ತವನ್ನ ಪಡೆಯಿರಿ
ಈ ಯೋಜನೆಯ ಮೂಲಕ ನೀವು ಸಣ್ಣ ಮೊತ್ತವನ್ನ ಹೂಡಿಕೆ ಮಾಡಿದರೆ ನೀವು ದೊಡ್ಡ ಮೊತ್ತವನ್ನ ಗಳಿಸಬಹುದು. ಹಾಗೆ ದೀರ್ಘಾವಧಿಯಲ್ಲಿ ಉತ್ತಮ ಫಂಡ್ ರಚಿಸಬಹುದು. ಉದಾಹರಣೆಗೆ, ನೀವು ಪ್ರತಿ ವರ್ಷ ₹ 40,000 ಠೇವಣಿ ಮಾಡಿದರೆ, ನೀವು 15 ವರ್ಷಗಳ ಕಾಲ ನಿರಂತರವಾಗಿ ನೀವು ನಿಮ್ಮ ಹೂಡಿಕೆಯನ್ನ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ನೀವು 7.1% ಬಡ್ಡಿದರದ ಆಧಾರದ ಮೇಲೆ, ನೀವು ಸುಮಾರು 10,84,856 ರೂ. ಮೊತ್ತವನ್ನು ಗಳಿಸುತ್ತೀರಿ.
ತೆರಿಗೆ ಪ್ರಯೋಜನ ಕೂಡ ಒಳಗೊಂಡಿದೆ
ಪಿಪಿಎಫ್ ಯೋಜನೆಯ ಮತ್ತೊಂದು ಪ್ರಯೋಜನವನ್ನ ನೋಡೋದಾದ್ರೆ ನೀವು ಈ ಮೂಕ ತೆರಿಗೆ ವಿನಾಯಿತಿಯನ್ನ ಪಡೆಯಬಹುದು. ಹೂಡಿಕೆದಾರರು ಈ ಯೋಜನೆಯ ಅಡಿಯಲ್ಲಿ, ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ. ಅಂದರೆ ಪಿಪಿಎಫ್‌ನಲ್ಲಿ ಮಾಡಿದ ಹೂಡಿಕೆಯು ಭವಿಷ್ಯಕ್ಕಾಗಿ ಉಳಿಸುವುದು ಮಾತ್ರವಲ್ಲದೆ ವರ್ತಮಾನದಲ್ಲಿ ನಿಮ್ಮ ತೆರಿಗೆಯನ್ನು ಉಳಿಸಲು ಕೂಡ ಇದು ಸಹಾಯ ಮಾಡುತ್ತದೆ.
ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆಯಲ್ಲಿ ಖಾತೆ ತೆರೆಯಲು ಬಯಸದ್ರೆ, ನೀವು ಅಂಚೆ ಕಚೇರಿ ಅಥವಾ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ, ಅಲ್ಲಿ ನೀವು ಅಗತ್ಯ ದಾಖಲೆಗಳನ್ನ ಸಲ್ಲಿಸಬೇಕು. ಅಂದರೆ ಅಗತ್ಯ ದಾಖಲೆಗಳಾದ ಗುರುತಿನ ಚೀಟಿ, ವಿಳಾಸ ಪುರಾವೆ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಸಲ್ಲಿಸಬೇಕು. ಖಾತೆಯನ್ನು ತೆರೆದ ಮೇಲೆ, ನೀವು ನಿಯಮಿತವಾಗಿ ಹೂಡಿಕೆ ಮಾಡಬಹುದು.
ಈ ಪೋಸ್ಟ್ ಆಫೀಸ್ ಯೋಜನೆಯು ನಿಗೆ ದೀರ್ಘಾವಧಿಯ ಹೂಡಿಕೆ ಮತ್ತು ಬಂಡವಾಳದ ಸುರಕ್ಷತೆಯನ್ನ ಖಚಿತಪಡಿಸುತ್ತದೆ. ಇದನ್ನು ಪಡಯಲು ನೀವು ಶಿಸ್ತುಬದ್ಧ ಹೂಡಿೆ ಮಾಡಬೇಕಾಗುತ್ತದೆ ಹಾಗೆ ನಿಗದಿತ ಅವಧಿಯವರೆಗೆ ಖಾತೆಯನ್ನು ನೀವು ಸಕ್ರೀಯವಾಗಿಟ್ಟುಕೊಳ್ಳಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications