ಹೂಡಿಕೆದಾರರಿಗಾಗಿ ಅಂಚೆಕಚೇರಿ (Post Office Investment) ಹಲವಾರು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ಕಾಲದಲ್ಲಿ ಕೇವಲ ಸಂದೇಶ ರವಾನಿಸಲು, ಮಾಹಿತಿ ರವಾನಿಸಲು ಪತ್ರದ ಮೂಲಕ ಜನಪ್ರಿಯವಾಗಿದ್ದ ಪೋಸ್ಟ್ ಆಫೀಸ್, ಇಂದು ಜನಪ್ರಿಯ ಹೂಡಿಕೆ ಸಂಸ್ಥೆಗಳಲ್ಲಿ ಒಂದಾಗಿದೆ. ಸರ್ಕಾರಿ ಸ್ವಾಮ್ಯದಡಿಯಲ್ಲಿ ಕಾರ್ಯನಿರ್ವಹಿಸುವ ಪೋಸ್ಟ್ ಆಫೀಸ್, ಹೂಡಿಕೆದಾರರಲ್ಲಿ ಭಯದ ವಾತಾವರಣವನ್ನು ದೂರ ಮಾಡುತ್ತದೆ. ಅದೇ ರೀತಿ ಇಂದು ನಾವು ನಿಮಗರ ಪೋಸ್ಟ್ ಆಫೀಸ್‌ನ ಎರಡು ಬೆಸ್ಟ್ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ ನೋಡಿ.

ಮಾಸಿಕ ಆದಾಯ ಯೋಜನೆ:
ಮಾಸಿಕ ಆದಾಯ ಗಳಿಸಲು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಉತ್ತಮ ಹೂಡಿಕೆ ಆಯ್ಕೆಯಾಗಿದೆ. 10 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ತಮ್ಮ ಹೆಸರಿನಲ್ಲಿ ವೈಯಕ್ತಿಕ ಅಥವಾ ಜಂಟಿ ಖಾತೆಯನ್ನು ಇಲ್ಲಿ ಓಪನ್ ಮಾಡಬಹುದು. ಕನಿಷ್ಠ ₹1000 ರಿಂದ ಹೂಡಿಕೆ ಆರಂಭಿಸಬಹುದಾದ ಯೋಜನೆ ಇದಾಗಿದ್ದು, ವೈಯಕ್ತಿಕ ಖಾತೆಗೆ ₹9 ಲಕ್ಷ ಹಾಗೂ ಜಂಟಿ ಖಾತೆಗೆ ₹15 ಲಕ್ಷದವರೆಗೆ ಗರಿಷ್ಠ ಹೂಡಿಕೆ ಮಿತಿ ಇದೆ. ಈ ಮಾಸಿಕ ಆದಾಯದ ಜೊತೆಗೆ ಹೆಚ್ಚಿನ ಲಾಭ ಗಳಿಸಬೇಕೆಂದರೆ, ನೀವು ಆವರ್ತಕ ಠೇವಣಿ (RD) ಯೋಜನೆಯನ್ನು ಸಂಯೋಜಿಸುವುದು ಉಪಯುಕ್ತ.
ಎಂಐಎಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸ್ಥಿರ ಬಡ್ಡಿ ಸಿಗುವುದಂತೂ ಪಕ್ಕಾ. ನಿಮ್ಮ ಉಳಿತಾಯ ಖಾತೆಯಲ್ಲಿ ಬಡ್ಡಿ ಹಣವನ್ನು ಹಾಗೆಯೇ ಬಿಡುವುದರಿಂದ ಯಾವುದೇ ಹೆಚ್ಚುವರಿ ಲಾಭ ಸಿಗುವುದಿಲ್ಲ. ಆದರೆ, ಈ ಆದಾಯವನ್ನು ಅಂಚೆ ಕಚೇರಿಯ ಆರ್.ಡಿ.ಯಲ್ಲಿ ಮರು-ಹೂಡಿಕೆ ಮಾಡಿದ್ರೆ ನಿಮ್ಮ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ. ಇದು ಡಬಲ್ ಲಾಭ ಪಡೆಯಲು ಸಹಕಾರಿಯಾಗಲಿದೆ.
ಪ್ರಸ್ತುತ, ಅಂಚೆ ಕಚೇರಿ ಎಂಐಎಸ್ ಯೋಜನೆಯಲ್ಲಿ ವಾರ್ಷಿಕವಾಗಿ 7.40% ಬಡ್ಡಿ ದರವನ್ನು ನೀಡುತ್ತದೆ. ಅದರ ಇದರ ಹೂಡಿಕೆ ಅವಧಿ 5 ವರ್ಷಗಳು. ಉದಾಹರಣೆಗೆ, ನೀವು ₹5 ಲಕ್ಷವನ್ನು ಎಂಐಎಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹3,084 ರೂ. ಬಡ್ಡಿ ಲಭಿಸುತ್ತದೆ. 5 ವರ್ಷಗಳಲ್ಲಿ, ಒಟ್ಟು ₹1.85 ಲಕ್ಷ ಬಡ್ಡಿ ಸಿಗಲಿದೆ. ಈ ಮಾಸಿಕ ಬಡ್ಡಿಯನ್ನು ಆರ್.ಡಿ.ಗೆ ವರ್ಗಾಯಿದರೆ ಇದರಿಂದ ಮತ್ತಷ್ಟು ಆದಾಯ ಗಳಿಸಬಹುದು.
ಅಂಚೆ ಕಚೇರಿ ಆರ್‌ಡಿ ಯೋಜನೆ ಮೂಲಕ ಪ್ರಸ್ತುತ 6.7% ಬಡ್ಡಿದರವನ್ನು ನೀಡಲಾಗುತ್ತಿದೆ. ಆದ್ದರಿಂದ ನೀವು ಎಂಐಎಸ್‌ನಿಂದ ಬರುವ ಮಾಸಿಕ ₹3,000 ರೂ. ಆದಾಯವನ್ನು ಆರ್.ಡಿ.ಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಮೆಚೂರಿಟಿ ಸಮಯದಲ್ಲಿ ಒಟ್ಟು ₹2,14,097 ರೂ. ನಿಮಗೆ ಸಿಗುತ್ತದೆ. . ಇದರಲ್ಲಿ ₹1.80 ಲಕ್ಷ ನಿಮ್ಮ ಹೂಡಿಕೆ ಮೊತ್ತವಾಗಿದ್ದು, ₹34,097 ರೂ. ಬಡ್ಡಿಯಿಂದ ಬಂದ ಆದಾಯವಾಗಿರುತ್ತದೆ.
ನಿಯಮ ಕಡ್ಡಾಯ
ಎಂಐಎಸ್ ಯೋಜನೆಯಿಂದ ಬಂದ ಬಡ್ಡಿಯನ್ನು ನೇರವಾಗಿ ಆರ್.ಡಿ ಅಕೌಂಟ್‌ಗೆ ವರ್ಗಾಯಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅಲ್ಲಿ ಬಂದ ಬಡ್ಡಿಯನ್ನು ಮೊದಲು ಅಂಚೆ ಕಚೇರಿ ಉಳಿತಾಯ ಖಾತೆಗೆ ಜಮಾ ಮಾಡಿ, ನಂತರ ಅಲ್ಲಿಂದ ಆರ್.ಡಿ. ಖಾತೆಗೆ ವರ್ಗಾಯಿಸಬಹುದು. ಈ ರೀತಿಯ ಹೂಡಿಕೆ ಐಡಿಯಾವು ಎಂಐಎಸ್‌ನ ₹1.85 ಲಕ್ಷ ರೂ. ಹಾಗೂ ಆರ್.ಡಿ.ಯ ₹34,097 ರೂ. ಬಡ್ಡಿ ಸೇರಿ, ಮೆಚೂರಿಟಿ ಅವಧಿಯಲ್ಲಿ ಒಟ್ಟು ₹2,19,097 ರೂ. ಆದಾಯ ಪಡೆಯಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications