ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಅಂಚೆ ಕಚೇರಿಗಳು ಕೂಡ ಹೂಡಿಕೆ ಮಾಡಲು, ಉಳಿತಾಯ ಖಾತೆಯನ್ನು ತೆರೆಯಲು ಅತ್ಯಂತ ವಿಶ್ವಾಸಾರ್ಹವಾದ ಸ್ಥಳವಾಗಿವೆ. ಅಂಚೆ ಕಚೇರಿಯಲ್ಲಿ ಯಾವುದೇ ರಿಸ್ಕ್ ಇಲ್ಲದೇ ಸ್ಥಿರ ಆದಾಯವನ್ನು ಪಡೆಯಬಹುದಾಗಿದೆ. ಪೋಸ್ಟ್ ಆಫೀಸ್ ನಲ್ಲಿ ಅನೇಕ ಯೋಜನೆಗಳಿದ್ದು ಈ ಪೈಕಿ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಯೋಜನೆ ಕೂಡಾ ಒಂದು. ಇದನ್ನು ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಯೋಜನೆ ಖಾತೆ ಎಂದೂ ಕರೆಯುತ್ತಾರೆ, ಇದು ಸರ್ಕಾರದಿಂದ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಹಾಗಾದರೆ, ಏನಿದು ಯೋಜನೆ, ಇದರ ಪ್ರಯೋಜನಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ
ಇದು ಸರ್ಕಾರದ ಬೆಂಬಲವಿರುವ ಒಂದು ಉಳಿತಾಯ ಯೋಜನೆ. ಇಲ್ಲಿ ನೀವು ಒಂದು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ತಿಂಗಳು ನಿಗದಿತ ಬಡ್ಡಿ ಸಿಗುತ್ತದೆ. ಇದು ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ತರಹ, ಆದರೆ ಇಲ್ಲಿ ಬಡ್ಡಿಯನ್ನು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಅಂದರೆ ಇದು ಕಡಿಮೆ ಅಪಾಯದ ಮಾಸಿಕ ಆದಾಯ ಯೋಜನೆಯಾಗಿದೆದ್ದು ಸ್ಥಿರವಾದ ಆದಾಯವನ್ನು ನೀಡುತ್ತದೆ. POMIS ನಲ್ಲಿ ಹೂಡಿಕೆ ಮಾಡಲು ಕೆಲವೊಂದು ಅರ್ಹತೆಗಳಿದ್ದು ಅವುಗಳಲ್ಲಿ ಪ್ರಮುಖ ಅಂದ್ರೆ ನೀವು ಭಾರತದ ನಿವಾಸಿಯಾಗಿರಬೇಕು ಮತ್ತು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.

ಈ ಲೇಖನದಲ್ಲಿ, ನಾವು POMIS ನ ವೈಶಿಷ್ಟ್ಯಗಳು ಮತ್ತು ಅದರ ಪ್ರಯೋಜನಗಳನ್ನು ನೋಡೋಣ. ಈ ಯೋಜನೆಯಡಿಯಲ್ಲಿ ತಿಂಗಳಿಗೆ 9,250 ರೂ. ಗಳಿಸಲು ನೀವು ಎಷ್ಟು ಹೂಡಿಕೆ ಮಾಡಬೇಕೆಂದು ಕೂಡಾ ಮಾಹಿತಿ ಪಡೆಯಬಹುದು. ಅಂದಹಾಗೆ ಈ ಯೋಜನೆಯ ಪ್ರಸ್ತುತ ಬಡ್ಡಿದರ ಶೇಕಡಾ 7.4 ಆಗಿದೆ.
ಈ ಯೋಜನೆಯಲ್ಲಿ ಕನಿಷ್ಟ ಮತ್ತು ಗರಿಷ್ಟ ಹೂಡಿಕೆ ಎಷ್ಟು?
ಒಬ್ಬ ವ್ಯಕ್ತಿಯು ಕನಿಷ್ಠ 1,000 ರೂ. ಮೂಲಕ ಖಾತೆ ತೆರೆಯಬಹುದು.. ಆದರೆ ಒಬ್ಬ ವ್ಯಕ್ತಿಯ ಎಲ್ಲಾ ಖಾತೆ ಅಂದರೆ ಏಕ ಅಥವಾ ಜಂಟಿ ಖಾತೆ ಸೇರಿ ಒಟ್ಟು ಠೇವಣಿಗಳು ರೂ 9 ಲಕ್ಷಗಳನ್ನು ಮೀರುವಂತಿಲ್ಲ. ಜಂಟಿ ಖಾತೆಗಳು ರೂ 15 ಲಕ್ಷದವರೆಗೆ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹಾಗಾಗಿ ಖಾತೆದಾರರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಇನ್ನು ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕವಾಗಿ ಜಮಾ ಮಾಡಲಾಗುತ್ತದೆ. ಇನ್ನು ಪಾವತಿಗಳನ್ನು ECS ಮೂಲಕ ಸ್ವೀಕರಿಸಬಹುದು ಅಥವಾ ಲಿಂಕ್ ಮಾಡಲಾದ ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮಾಡಬಹುದು. ಬಡ್ಡಿ ಆದಾಯ ತೆರಿಗೆಗೆ ಒಳಪಡಲಿದೆ.
ಹೂಡಿಕೆದಾರರಿಗೆ ಬಡ್ಡಿ ಯಾವಾಗ ಸಿಗುತ್ತದೆ?
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ (POMIS) ಬಡ್ಡಿಯನ್ನು ನೀವು ಖಾತೆ ತೆರೆದ ದಿನಾಂಕದಿಂದ ಒಂದು ತಿಂಗಳು ಪೂರ್ಣಗೊಂಡ ನಂತರದಿಂದ ಹಿಡಿದು ಯೋಜನೆಯ ಮುಕ್ತಾಯದವರೆಗೆ ಪ್ರತಿ ತಿಂಗಳು ಪಾವತಿಸಲಾಗುತ್ತದೆ.
ಇದರರ್ಥ, ನೀವು ಏಪ್ರಿಲ್ 12 ರಂದು ಖಾತೆ ತೆರೆದರೆ, ಮೊದಲ ಬಡ್ಡಿ ಪಾವತಿಯು ಮೇ 12 ರ ನಂತರ ಆಗುತ್ತದೆ ಮತ್ತು ನಂತರ ಪ್ರತಿ ತಿಂಗಳು ಅದೇ ದಿನಾಂಕದಂದು (ಅಥವಾ ಅದು ರಜಾ ದಿನವಾಗಿದ್ದರೆ ಮುಂದಿನ ಕೆಲಸದ ದಿನದಂದು) ಪಾವತಿಯಾಗುತ್ತದೆ. ಇದು ಯೋಜನೆಯುದ್ದಕ್ಕೂ ಮುಂದುವರಿಯುತ್ತದೆ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (POMIS) ಸೇರಿ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ. ಅಂದರೆ ಖಾತೆದಾರರು ಸಾವನ್ನಪ್ಪಿದರೆ ಈ ಸಂದರ್ಭದಲ್ಲಿ ಪ್ರಯೋಜನಗಳನ್ನು ಪಡೆಯಬಹುದಾದ ನಾಮಿನಿ ಆಯ್ಕೆಯೂ ಇದೆ.
ಈ ಯೋಜನೆಯಲ್ಲಿ ಪ್ರತಿ ತಿಂಗಳು 9,250 ರೂ. ಗಳಿಸುವುದು ಹೇಗೆ?
ವೈಯಕ್ತಿಕ ಖಾತೆಯಲ್ಲಿ ನೀವು ಗರಿಷ್ಠ ಮೊತ್ತವಾದ 9 ಲಕ್ಷ ರೂ. ಹೂಡಿಕೆ ಮಾಡಿದ್ದರೆ, ನೀವು ಪ್ರಸ್ತುತ ಶೇ.7.40ರ ಬಡ್ಡಿದರದಲ್ಲಿ ಪ್ರತಿ ತಿಂಗಳು 5550 ರೂ. ಪಡೆಯುತ್ತಿರಿ. ಒಂದು ವೇಳೆ ನೀವು 5 ಲಕ್ಷ ರೂ. ಠೇವಣಿಯನ್ನು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು 3083 ರೂ. ಲಭ್ಯವಾಗಲಿದೆ. ನೀವು 3 ಲಕ್ಷ ಠೇವಣಿ ಇಟ್ಟರೆ, ನಿಮಗೆ ಪ್ರತಿ ತಿಂಗಳು 1850 ರೂ. ದೊರೆಯಲಿದೆ. 1,50,000 ರೂ. ಹೂಡಿಕೆ ಮಾಡಿದರೆ, ತಿಂಗಳಿಗೆ 962.50 ರೂ. ಸಿಗುತ್ತದೆ.
ದಂಪತಿಗಳು ಪತಿ - ಪತ್ನಿ ಹೆಸರಿನಲ್ಲಿ ಜಂಟಿ ಖಾತೆ ತೆರೆದು ಅದರಲ್ಲಿ ಗರಿಷ್ಠ 15 ಲಕ್ಷ ರೂ. ಠೇವಣಿ ಮಾಡಿದರೆ ಪ್ರತಿ ತಿಂಗಳು 9250 ರೂ. ದೊರೆಯಲಿದೆ. ಒಂದು ವೇಳೆ 12 ಲಕ್ಷ ಠೇವಣಿ ಹೂಡಿಕೆ ಮಾಡಿದರೆ ಮಾಸಿಕವಾಗಿ 7400 ರೂ. ದೊರೆಯಲಿದೆ.
Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.


Click it and Unblock the Notifications