ಹೂಡಿಕೆದಾರರಿಗಾಗಿ ಪೋಸ್ಟ್ ಆಫೀಸ್ (Post Office) ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆರ್‌ಡಿ, ಎಫ್‌ಡಿ, ಸುಕನ್ಯಾ ಸಮೃದ್ಧಿ ಯೋಜನೆ ಕೂಡಾ ಒಂದು. ಇವುಗಳಲ್ಲಿ ಆರ್‌ಡಿ ಯೋಜನೆಯನ್ನು ಬೆಸ್ಟ್ ಎಂದು ಹಲವರು ಹೇಳುತ್ತಾರೆ. ಅಂಚೆ ಕಚೇರಿಯ ಈ ಆರ್‌ಡಿ (Recurring Deposit) ಯೋಜನೆಯಲ್ಲಿ ಕೇವಲ 100 ರೂಪಾಯಿಗಳಿಂದ ಹೂಡಿಕೆ (Invest) ಪ್ರಾರಂಭಿಸಬಹುದು. ಅಧಿಕ ಹಣವನ್ನೂ ಹಾಕಬೇಕಾಗಿಲ್ಲ. ಬದಲಿಗೆ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಜಮಾ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದು. ಇದೇ ಕಾರಣದಿಂದ ಪೋಸ್ಟ್ ಆಫೀಸ್ RD ಯೋಜನೆ ಸಾಮಾನ್ಯ ಜನರಿಗೆ ಉತ್ತಮ ಆಯ್ಕೆ ಎಂದು ಪರಿಗಣಿಸಲ್ಪಟ್ಟಿದೆ.

ಒಂದು ವೇಳೆ ನೀವು ಪ್ರತಿ ತಿಂಗಳು ಅಂಚೆ ಕಚೇರಿ ಆರ್‌ಡಿ ಯೋಜನೆ ಮೂಲಕ 50,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಬರೀ ಐದು ವರ್ಷಗಳಲ್ಲಿ ಹೆಚ್ಚಿನ ಹಣ ನಿಮ್ಮ ಖಾತೆ ಸೇರುತ್ತದೆ. 50 ಸಾವಿರದಂತೆ 5 ವರ್ಷಗಳಲ್ಲಿ ಒಟ್ಟು 30 ಲಕ್ಷ ರೂಪಾಯಿಗಳು ಜಮಾ ಆಗುತ್ತವೆ. ಇದರೊಂದಿಗೆ ದೊರೆಯುವ ಬಡ್ಡಿಯೊಂದಿಗೆ ನಿಮ್ಮ ಒಟ್ಟು ಮೊತ್ತವು 35 ಲಕ್ಷ ರೂಪಾಯಿಗಳವರೆಗೆ ನೀವು ಪಡೆಯಬಹುದು. ಅಂದರೆ ಐದು ಲಕ್ಷದವರೆಗೆ ನೀವು ಇಲ್ಲಿ ಬಡ್ಡಿಯನ್ನು ಪಡೆಯಬಹುದು.
ಸುರಕ್ಷಿತ ಯೋಜನೆ
ಈ ಯೋಜನೆಯು ಸರ್ಕಾರದ ಅಧೀನದಲ್ಲಿರುವುದರಿಂದ ತುಂಬಾ ಸೇಫ್ ಎಂದು ಪರಿಗಣಿಸಲ್ಪಟ್ಟಿದೆ. ಷೇರು ಮಾರುಕಟ್ಟೆ ಅಥವಾ ಮ್ಯೂಚುಯಲ್ ಫಂಡ್‌ಗಳಂತೆ ಇಲ್ಲಿ ಯಾವುದೇ ರೀತಿಯಲ್ಲಿ ಲಾಸ್ ಆಗುತ್ತೆ ಅನ್ನೋ ಭಯವಿಲ್ಲ. ನಿಮ್ಮ ಹೂಡಿಕೆ ಹಣಕ್ಕೆ ನಿಗದಿತ ಬಡ್ಡಿದರವೂ ಇರುತ್ತೆ, ಲಾಭವೂ ಸಿಗುತ್ತೆ.
ಇನ್ನು ತುರ್ತು ಅವಶ್ಯಕ್ಕಾಗಿ ಹಣ ವಿಥ್‌ಡ್ರಾ ಮಾಡಬೇಕು ಎಂದೆನಿಸದರೆ, ಒಂದು ವರ್ಷದ ನಂತರ ನಿಮ್ಮ ಜಮಾ ಮಾಡಿದ ಮೊತ್ತದ ಶೇಕಡಾ 50ರಷ್ಟು ಸಾಲವನ್ನು ಸಹ ಪಡೆಯಬಹುದು. ಈ ಮೂಲಕ ಖಾತೆಯನ್ನು ಕ್ಲೋಸ್ ಮಾಡದೆಯೇ ಹಣವನ್ನು ಹಿಂಪಡೆಯಬಹುದು ಮತ್ತು ಮತ್ತೆ ಹೂಡಿಕೆ ಮಾಡಬಹುದು.
ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ನೀವು 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯುವ ಅವಕಾಶವಿದೆ. ಅಂದರೆ, ನೀವು ಹೂಡಿಕೆಯ ಮೇಲೆ ತೆರಿಗೆ ಉಳಿತಾಯ ಸಹ ಮಾಡಬಹುದು, ಜೊತೆಗೆ ಸುರಕ್ಷಿತ ಗಳಿಕೆಯನ್ನೂ ಪಡೆಯಬಹುದು. ತೆರಿಗೆ ವಿನಾಯಿತಿಯಲ್ಲೂ ಈ ಯೋಜನೆ ಬೆಸ್ಟ್ ಎಂದು ಗುರುತಿಸಿಕೊಂಡಿದೆ.
ಪೋಸ್ಟ್ ಆಫೀಸ್ ಇದೇ ರೀತಿಯ ಹಲವು ಯೋಜನೆಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದೆ. ಈ ಮೂಲಕ ಸಾರ್ವಜನಿಕರು ಹಲವು ಪ್ರಯೋಜನಗಳನ್ನು ಪಡೆಯಬಹುದು. ಹುಡುಗಿಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು, ಪಿಪಿಎಫ್, ಎಫ್‌ಡಿ ಯೋಜನೆಗಳನ್ನು ಸಹ ನೀಡಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ, ಬಜೆಟ್ ಪ್ಲಾನ್ ಮಾಡಿಕೊಳ್ಳಿ. ಇದರಿಂದ ನಿಮ್ಮ ವೆಚ್ಚಗಳ ಬಗ್ಗೆಯೂ ಗಮನ ನೀಡಲು ಸುಲಭವಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications