ಆರ್‌ಬಿಐ ಬಡ್ಡಿದರ ಏರಿಕೆ: ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಬಚಾವಾಗಲು ಈ 3 ಟಿಪ್ಸ್ ಫಾಲೋ ಮಾಡಿ

ಅಕ್ಟೋಬರ್ ತಿಂಗಳ ಆರ್‌ಬಿಐ ನೀತಿಯಲ್ಲಿ ಬಡ್ಡಿದರವು 25 ಬೇಸಿಸ್ ಪಾಯಿಂಟ್‌ಗಳಷ್ಟು (bps) ಹೆಚ್ಚಾಗುವ ಸಾಧ್ಯತೆಯಿದೆ ಎಂದು ಈ ವಾರದ ಇತ್ತೀಚಿನ ಸಮೀಕ್ಷೆಗಳು ಸುಳಿವು ನೀಡಿವೆ. ಆಗಸ್ಟ್‌ನಿಂದ ಪಾಲಿಸಿ ರೆಪೊ ದರವು ಶೇ. 5.25 ರಷ್ಟೇ ಮುಂದುವರಿದಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (MPC) ಸಭೆಯು 2026 ರ ಅಕ್ಟೋಬರ್ 5 ರಿಂದ 7 ರವರೆಗೆ ನಡೆಯಲಿದೆ. ಹೀಗಾಗಿ, ಸಾಲಗಾರರು ತಮ್ಮ ಮಾಸಿಕ ಇಎಂಐ (EMI) ಹೊರೆಯನ್ನು ಸರಿದೂಗಿಸಿಕೊಳ್ಳಲು ಮತ್ತು ಉತ್ತಮ ಆಫರ್‌ಗಳನ್ನು ಲಾಕ್ ಮಾಡಲು ಈ ವಾರವೇ ಸೂಕ್ತ ಸಮಯ. ಮುಂದಿನ ತಿಂಗಳು ದರಗಳು ಬದಲಾಗುವ ಮುನ್ನವೇ ಅಗತ್ಯ ದಾಖಲಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಒಳಿತು.

ಈ ಬಡ್ಡಿ ಏರಿಕೆಯ ಬಿಸಿ ನಿಮ್ಮ ಮೇಲೆ ಎಷ್ಟು ಬೇಗ ತಟ್ಟಲಿದೆ? ಎಕ್ಸ್‌ಟರ್ನಲ್ ಬೆಂಚ್‌ಮಾರ್ಕ್‌ಗೆ (EBLR) ಲಿಂಕ್ ಆಗಿರುವ ಸಾಲಗಳ ಬಡ್ಡಿದರವು ಮುಂದಿನ 'ರಿಸೆಟ್' (reset) ದಿನಾಂಕದಂದೇ ಬದಲಾಗುತ್ತದೆ. ಈ ರಿಸೆಟ್ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಆಗಲೇಬೇಕು. ಆದರೆ, MCLR ಆಧಾರಿತ ಸಾಲಗಳಿದ್ದಲ್ಲಿ, ಅವುಗಳ ಒಪ್ಪಂದದ ರಿಸೆಟ್ ದಿನಾಂಕದಂದು ಮಾತ್ರ ದರ ಏರಿಕೆಯಾಗುತ್ತದೆ. ಅಂದರೆ, EBLR ಸಾಲಗಾರರಿಗೆ ಈ ಏರಿಕೆ ತಕ್ಷಣವೇ ಅನ್ವಯಿಸಿದರೆ, ಹಳೆಯ MCLR ಸಾಲಗಾರರಿಗೆ ಸ್ವಲ್ಪ ತಡವಾಗಿ ತಲುಪಲಿದೆ.

ಆರ್‌ಬಿಐ ಬಡ್ಡಿದರ ಏರಿಕೆ: ಇಎಂಐ ಹೊರೆ ತಗ್ಗಿಸುವುದು ಹೇಗೆ?

ಆರ್‌ಬಿಐ ಬಡ್ಡಿದರ ಏರಿಕೆ: ಇಎಂಐ ಮೇಲಾಗುವ ಪರಿಣಾಮ ಮತ್ತು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು

ನಿಮ್ಮ ಹಣಕಾಸಿನ ಯೋಜನೆಯನ್ನು ಜಾಣತನದಿಂದ ರೂಪಿಸಿ. ಕೈಯಲ್ಲಿ ಸದ್ಯಕ್ಕೆ ಹಣದ ಅಭಾವವಿದ್ದರೆ, ಮೊದಲು ಸಾಲದ ಅವಧಿಯನ್ನು (tenure) ಹೆಚ್ಚಿಸಿಕೊಳ್ಳಿ. ಆ ಬಳಿಕ ಪರಿಸ್ಥಿತಿಗೆ ತಕ್ಕಂತೆ ಹೆಚ್ಚಿನ ಇಎಂಐ ಪಾವತಿಸಬಹುದು. ಸಾಲದ ರಿಸೆಟ್ ದಿನಾಂಕಕ್ಕೂ ಮುನ್ನವೇ ಕೊಂಚ ಭಾಗಶಃ ಮರುಪಾವತಿ (part-prepayment) ಮಾಡಿದರೆ ಚಕ್ರಬಡ್ಡಿಯ ಭಾರ ಕಡಿಮೆಯಾಗುತ್ತದೆ. ಉದಾಹರಣೆಗೆ, 20 ವರ್ಷಗಳ ಸಾಲದ ಮೇಲೆ ಪ್ರತಿ 25 bps ಏರಿಕೆಗೆ ಲಕ್ಷಕ್ಕೆ ಸುಮಾರು ₹15 ರಷ್ಟು ಬಡ್ಡಿ ಹೆಚ್ಚಾಗುತ್ತದೆ. ನಿಮ್ಮ ಮಾಸಿಕ ಇಎಂಐ ಎಷ್ಟು ಏರಿಕೆಯಾಗಬಹುದು ಎಂಬುದನ್ನು ಅಳೆಯಲು ಕೆಳಗಿನ ಕೋಷ್ಟಕ ನೋಡಿ ಸೂಕ್ತ ನಿರ್ಧಾರ ತಗೊಳ್ಳಿ. ಸಾಧ್ಯವಿದ್ದಲ್ಲಿ, ಬಡ್ಡಿದರ ಏರಿಕೆಯ ರಿಸ್ಕ್‌ನಿಂದ ಬಚಾವಾಗಲು ಸೆಪ್ಟೆಂಬರ್ 30 ರೊಳಗಾಗಿ ಸಾಲದ ಹಣ ವಿತರಣೆ (disbursals) ಅಥವಾ ರೇಟ್ ಲಾಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಬಡ್ಡಿದರ ಏರಿಕೆಪ್ರತಿ ₹1 ಲಕ್ಷಕ್ಕೆ₹30 ಲಕ್ಷ (20 ವರ್ಷ) ಇಎಂಐ ಏರಿಕೆ₹50 ಲಕ್ಷ (20 ವರ್ಷ) ಇಎಂಐ ಏರಿಕೆ
25 bps~₹15/ತಿಂಗಳಿಗೆ~₹450~₹1,500
50 bps~₹30/ತಿಂಗಳಿಗೆ~₹900~₹3,000

ಬ್ಯಾಲೆನ್ಸ್ ಟ್ರಾನ್ಸ್‌ಫರ್, ಫಿಕ್ಸ್ಡ್ ವರ್ಸಸ್ ಫ್ಲೋಟಿಂಗ್ ಮತ್ತು ಎಫ್‌ಡಿ ಲ್ಯಾಡರಿಂಗ್

ಬೇರೆ ಬ್ಯಾಂಕ್‌ಗೆ ಸಾಲ ವರ್ಗಾವಣೆ (Refinancing) ಮಾಡುವ ಮುನ್ನ ಸರಿಯಾಗಿ ಲೆಕ್ಕಾಚಾರ ಹಾಕಿ. ಪ್ರೊಸೆಸಿಂಗ್ ಶುಲ್ಕ, ಲೀಗಲ್ ಮತ್ತು ವ್ಯಾಲ್ಯುಯೇಷನ್, CERSAI, ಮಾರ್ಟ್‌ಗೇಜ್ ಪತ್ರದ ಸ್ಟ್ಯಾಂಪ್ ಡ್ಯೂಟಿ, ಡಾಕ್ಯುಮೆಂಟೇಶನ್ ಮತ್ತು ಇನ್ಶೂರೆನ್ಸ್ ಪೋರ್ಟಬಿಲಿಟಿ ವೆಚ್ಚಗಳನ್ನು ಪರಿಗಣಿಸಲು ಮರೆಯಬೇಡಿ. ವ್ಯಕ್ತಿಗಳು ಪಡೆಯುವ ಫ್ಲೋಟಿಂಗ್ ರೇಟ್ ಸಾಲಗಳಿಗೆ ಯಾವುದೇ ಫೋರ್‌ಕ್ಲೋಸರ್ ಶುಲ್ಕ ಇರುವುದಿಲ್ಲ, ಆದರೆ ಫಿಕ್ಸ್ಡ್ ರೇಟ್ ಒಪ್ಪಂದಗಳಿಗೆ ಇದು ಅನ್ವಯಿಸಬಹುದು. ಸಾಲ ವರ್ಗಾವಣೆಯಿಂದ ಹೊಸ ಕ್ರೆಡಿಟ್ ತನಿಖೆಗಳು (enquiries) ನಡೆದು, ಸಿಬಿಲ್ ಸ್ಕೋರ್ ತಾತ್ಕಾಲಿಕವಾಗಿ ಕೊಂಚ ಕುಸಿಯಬಹುದು. ಇನ್ನು ಹಿರಿಯ ನಾಗರಿಕರು ಬಡ್ಡಿದರ ಏರಿಕೆಯ ಈ ಸಮಯದಲ್ಲಿ ಫಿಕ್ಸ್ಡ್ ಡೆಪಾಸಿಟ್‌ಗಳನ್ನು ಲ್ಯಾಡರಿಂಗ್ (FD laddering) ಮಾಡಬಹುದು ಮತ್ತು ಮಾಸಿಕ ಖರ್ಚುಗಳಿಗಾಗಿ ಆರ್‌ಡಿಗಳಲ್ಲಿ (RD) ಹಣ ತೊಡಗಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+