RD Vs SIP : ತಿಂಗಳಿಗೆ ₹5500ದಂತೆ 5 ವರ್ಷ ಹೂಡಿಕೆ ಮಾಡಿದ್ರೆ ಯಾವುದ್ರಲ್ಲಿ ಲಾಭ ಅಧಿಕ? ಹೋಲಿಕೆ ಇಲ್ಲಿದೆ

ಹಣಕಾಸು ವಿಚಾರದಲ್ಲಿ ನಾವು ಹೆಚ್ಚಾಗಿ ತಲೆಕೆಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವತ್ತ, ಸಾಲದ ಸಮಸ್ಯೆಯಿಂದ ಮುಕಿ ಹೊಂದಲು ಹೆಚ್ಚಾಗಿ ಚಿಂತಿಸುತ್ತಿರುತ್ತೇವೆ. ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಬೇಕಾದ್ರೆ ಇದ್ದ ಹಣವನ್ನು ಸದುಪಯೋಗಪಡಿಸಿಕೊಂಡು ಹೂಡಿಕೆಯತ್ತ ಚಿಂತಿಸಿದರೆ ಒಳಿತು. ಆದ್ರೆ ಹೂಡಿಕೆ ಮಾಡುವುದಿದ್ದರೂ ಯಾವುದರಲ್ಲಿ ಹೆಚ್ಚಾಗಿ ಲಾಭ ಬರುತ್ತೆ ನಾವು ಯೋಚಿಸುತ್ತಿರುತ್ತೇವೆ. ಒಮ್ಮೆಲೇ ಹಣ ಗಳಿಸುವ ಆಸೆಯಲ್ಲಿ ಹಣ ದುಪ್ಪಟ್ಟು ಮಾಡಿ ಕೊಡುವ ಸ್ಕೀಂ ಗಳ ಮೊರೆ ಹೋಗದೆ, ನಮಗೆ ಅತ್ಯಂತ ವಿಶ್ವಾಸವಿರುವ ಬ್ಯಾಂಕ್ ಆರ್ ಡಿ, ಅಂಚೆ ಕಚೇರಿ ಯೋಜನೆ, SIP, ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡುವುದು ಬುದ್ದಿವಂತಿಕೆ.

ಇವತ್ತಿನ ಲೇಖನದಲ್ಲಿ SIP vs RD ಯಾವುದರಲ್ಲಿ ಅಧಿಕ ಲಾಭ ಎಂಬ ಮಾಹಿತಿ ಒದಗಿಸಿದ್ದೇವೆ. ದಂಪತಿಗಳಾಗಿದ್ದರೆ ಇಬ್ಬರು ಸೇರಿ ಒಂದಷ್ಟು ಸೇರಿಸಿ ಹಣ ಉಳಿತಾಯ ಮಾಡಿದ್ರೆ ಮುಂದೆ ಈ ನಿಧಿ ನಿಮ್ಮ ಅಗತ್ಯಕ್ಕೆ ಬರುತ್ತದೆ. ಬ್ಯಾಚುಲರ್ ಆಗಿದ್ರೆ ಇನ್ನು ಸುಲಭ ಜವಬ್ದಾರಿಗಳು ಹೆಗಲೇರುವ ಮೊದಲೇ ಹೂಡಿಕೆ ಮಾಡಿ.

SIP Vs RD: 5 ವರ್ಷ ₹5500 ಮಾಸಿಕ ಹೂಡಿಕೆ ಲಾಭ ಹೆಚ್ಚು ಎಲ್ಲಿ?

ನೀವು ಪ್ರತಿ ತಿಂಗಳು ಅಂದಾಜು 5,500 ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಿ ಎಂದರೆ, SIP ಅಥವಾ RD ಯಲ್ಲಿ ಹೂಡಿಕೆ ಮಾಡುವುದು ಒಂದು ಉತ್ತಮ ನಿರ್ಧಾರ. ಒಂದು ವೇಳೆ ನಿಮಗೆ ಇವುಗಳ ಬಗ್ಗೆ ಗೊಂದಲವಿದ್ದರೆ ಎಸ್‌ಐಪಿ ಮತ್ತು ಆರ್‌ಡಿ ಯೋಜನೆಯ ನಡುವಿನ ವ್ಯತ್ಯಾಸವನ್ನು ನೀಡಿದ್ದೇವೆ.

ಮರುಕಳಿಸುವ ಠೇವಣಿ (RD):

ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿ ಹೂಡಿಕೆ ಯೋಜನೆಯಾಗಿದ್ದು ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತವನ್ನು ಪ್ರತಿ ತಿಂಗಳು ಸ್ವಯಂಚಾಲಿತವಾಗಿ ವರ್ಗಾಯಿಸಲಿ ಇಲ್ಲಿ ಸೌಲಭ್ಯವಿದೆ. ಬ್ಯಾಂಕ್ ಗಳು ಅಥವಾ ಅಂಚೆ ಕಚೇರಿಗಳು ಆರ್‌ಡಿ ಮೇಲೆ ಖಾತರಿಪಡಿಸಿದ ಬಡ್ಡಿ ದರವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ತೀರಾ ಕಡಿಮೆ ಅಪಾಯದ ಹೂಡಿಕೆಯಾಗಿದೆ. ಬ್ಯಾಂಕ್ ಠೇವಣಿಗಳಿಗೆ ಸರ್ಕಾರಿ ಗ್ಯಾರಂಟಿ ಇರುವುದರಿಂದ, ಆರ್‌ಡಿಗಳು ಹೆಚ್ಚು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.

ಪ್ರಸ್ತುತ ಬಡ್ಡಿ ದರ: ವಾರ್ಷಿಕ 6.7% ಬಡ್ದಿ ದರವಿದೆ. ಆದರೆ ಈ ಬಡ್ಡಿ ದರವು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗಬಹುದು. ನೀವು ಮಾಸಿಕವಾಗಿ 5,500 ರೂ ಹೂಡಿಕೆ ಮಾಡಿದ್ರೆ ಅವುಗಳ ಮೆಚ್ಯುರಿಟಿ ಮೌಲ್ಯ, ಹೂಡಿಕೆ ಮೊತ್ತ ಎಷ್ಟು ಎಂಬಿತ್ಯಾದಿ ವಿವರ ನೋಡೋಣ..

ನೀವು 5 ವರ್ಷಗಳ ಕಾಲ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ 5,500 ರೂಪಾಯಿಗಳನ್ನು ಮಾಸಿಕ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಈ ಅವಧಿಯಲ್ಲಿ ನೀವು ಒಟ್ಟು 3,30,000 ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ. ಈ ಯೋಜನೆಯು ನಿಮಗೆ ಸುಮಾರು 62,509 ರೂಪಾಯಿಗಳಷ್ಟು ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಅಂದರೆ, 5 ವರ್ಷಗಳ ನಂತರ ನೀವು ನಿಮ್ಮ ಹೂಡಿಕೆಯ ಮೇಲೆ ಒಟ್ಟು 3,92,509 ರೂಪಾಯಿಗಳನ್ನು ಪಡೆಯಬಹುದು

ಖಾತೆ ತೆರೆಯಲು ಇರುವ ಅರ್ಹತೆ: ಈ ಯೋಜನೆಯಲ್ಲಿ ಖಾತೆ ತೆರೆಯಲು ಎಲ್ಲರೂ ತೆರಯಬಹುದು. ಮಾನಸಿಕ ಅಸ್ವಸ್ಥರ ಪರವಾಗಿ ಪೋಷಕರು ಮತ್ತು 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಖಾತೆ ತೆರೆಯಲು ಅರ್ಹರಾಗಿದ್ದಾರೆ. ಪ್ರತಿ ತಿಂಗಳು ಕನಿಷ್ಠ 100 ರೂಪಾಯಿಗಳನ್ನು ಠೇವಣಿ ಮಾಡಬಹುದಾಗಿದೆ.

RDಯನ್ನು 3 ವರ್ಷಗಳ ನಂತರ ಯೋಜನೆಯನ್ನು ಮುಕ್ತಾಯಗೊಳಿಸಲು ಅವಕಾಶವಿದೆ, ಆದರೆ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಮುಂಚಿತವಾಗಿ ಮುಕ್ತಾಯಗೊಳಿಸಿದರೆ, ಉಳಿತಾಯ ಖಾತೆಯ ಬಡ್ಡಿದರದಲ್ಲಿ ಬಡ್ಡಿಯನ್ನು ಹಿಂಪಡೆಯಲಾಗುತ್ತದೆ. 12 ಠೇವಣಿಗಳ ನಂತರ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇಕಡಾ 50 ರಷ್ಟು ಮೊತ್ತದವರೆಗೆ ಸಾಲವನ್ನು ಪಡೆಯಬಹುದು. ಸಾಲದ ಮೇಲಿನ ಬಡ್ಡಿದರವು ಆರ್‌ಡಿ ಬಡ್ಡಿದರಕ್ಕಿಂತ ಶೇಕಡಾ 2 ಹೆಚ್ಚಿರುತ್ತದೆ.

ವ್ಯವಸ್ಥಿತ ಹೂಡಿಕೆ ಯೋಜನೆ (SIP) ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಎನ್ನುವುದು ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳು ಸ್ಥಿರ ಮೊತ್ತವನ್ನು ಹೂಡಿಕೆ ಮಾಡುವ ಒಂದು ಯೋಜನೆಯಾಗಿದೆ. ಇಲ್ಲಿ ಕೂಡಾ ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ನಿಗದಿತ ಮೊತ್ತವನ್ನು ನಿಮ್ಮ ಆಯ್ಕೆಯ ಮ್ಯೂಚುವಲ್ ಫಂಡ್‌ಗೆ ವರ್ಗಾಯಿಸಲಾಗುತ್ತದೆ. ಈ ಹೂಡಿಕೆಯಿಂದ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಅನುಸರಿಸಿ ಆದಾಯವನ್ನು ಗಳಿಸಬಹುದು. ಪ್ರತಿ ಹೂಡಿಕೆಯೊಂದಿಗೆ ಹೆಚ್ಚುವರಿ ಘಟಕಗಳನ್ನು ಸೇರಿಸುವುದರಿಂದ ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ಪಡೆಯಬಹುದು. ಉದಾಹರಣೆಗೆ, ನೀವು ಪ್ರತಿ ತಿಂಗಳು 5,500 ರೂಪಾಯಿಗಳನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ಒಟ್ಟು 3,30,000 ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗುತ್ತದೆ ಮತ್ತು ಸುಮಾರು 1,23,675 ರೂಪಾಯಿಗಳಷ್ಟು ಆದಾಯವನ್ನು ಪಡೆಯಬಹುದು. ಹೀಗೆ ಒಟ್ಟು ಮೆಚ್ಯೂರಿಟಿ ಮೌಲ್ಯವು 4,53,675 ರೂಪಾಯಿ ಆಗಿರುತ್ತದೆ.

SIP ಪ್ರಾರಂಭಕ್ಕೆ ಇರಬೇಕಾದ ಅರ್ಹತೆ ಏನು?

SIP ಅನ್ನು ನೀವು ಯಾವುದೇ ವಯಸ್ಸಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ಪ್ರಾರಂಭಿಸಬಹುದು. ನಿಮಗೆ ಮನೆ ಖರೀದಿ, ವಿವಾಹ ಮುಂತಾದ ದೀರ್ಘಕಾಲೀನ ಹಣಕಾಸಿನ ಗುರಿಗಳಿದ್ದರೆ, SIP ಹೇಳಿಮಾಡಿದಂತಹ ಆಯ್ಕೆಯಾಗಿದೆ. ಒಂದು ಸಣ್ಣ ಮೊತ್ತದ ಹಣವನ್ನು ಪ್ರತಿ ತಿಂಗಳು ಹೂಡಿಕೆ ಮಾಡುವ ಮೂಲಕ, ನೀವು ನಿಮ್ಮ ಗುರಿಗಳನ್ನು ಸಾಧಿಸಲು ಹತ್ತಿರವಾಗಬಹುದು. ಆರಂಭದಲ್ಲಿ ಮಾಡುವ ಹೂಡಿಕೆಗಳು ಕಾಲಕ್ರಮೇಣ ಬೆಳೆಯುತ್ತವೆ ಮತ್ತು ನಿಮಗೆ ಹೆಚ್ಚಿನ ಆದಾಯವನ್ನು ನೀಡುತ್ತವೆ.

ಹೋಲಿಕೆ ಮಾಡಿ

RD ಯೋಜನೆಯು ನಿಮಗೆ ಖಾತರಿಯ ಆದಾಯವನ್ನು ನೀಡುತ್ತದೆ. ಇಲ್ಲಿ ಕಡಿಮೆ ಅಪಾಯದವಿದ್ದು ನೀವು ಪಡೆಯುವ ಒಟ್ಟು ಮೊತ್ತವು SIP ಯೋಜನೆಯಿಂದ ಪಡೆಯುವ ಮೊತ್ತಕ್ಕಿಂತ(3,92,509 ರೂ) ಕಡಿಮೆ ಇರುತ್ತದೆ. ಆದರೆ SIP ಯೋಜನೆ ಹಾಗಲ್ಲ. ಆರ್.ಡಿಗೆ ಹೋಲಿಸಿದರೆ ಇಲ್ಲಿ ಮಾರುಕಟ್ಟೆಯ ಕಾರ್ಯಕ್ಷಮತೆಯನ್ನು ಅನುಸರಿಸಿ ಹೆಚ್ಚಿನ ಆದಾಯವನ್ನು (Rs 4,53,675) ನೀಡುವ ಸಾಧ್ಯತೆ ಇರುತ್ತದೆ. ಅದೇ ರೀತಿ SIP ಯೋಜನೆಯು ಹೆಚ್ಚಿನ ಅಪಾಯವನ್ನು ಹೊಂದಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮಗೆ ಬೇಕಾದ ಯೋಜನೆಗಳನ್ನು ಆಯ್ಕೆ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+