ಅನೇಕ ಯುವಕರು ಇತ್ತೀಚೆಗೆ ಹೂಡಿಕೆಯತ್ತ (Investment) ಮುಖ ಮಾಡುತ್ತಿದ್ದಾರೆ. ಆದರೂ ಇತ್ತೀಚೆಗೆ ಚಿನ್ನ ಮತ್ತು ಷೇರು ಮಾರುಕಟ್ಟೆಗಳಲ್ಲಿ ಏರಿಳಿತಗಳಾಗುತ್ತಿದೆ.ಅದೇ ಕಾರಣದಿಂದ ಭಾರತದ ಶ್ರೀಮಂತ ಹೂಡಿಕೆದಾರರು ತಮ್ಮ ಹೂಡಿಕೆ ತಂತ್ರವನ್ನೇ ಬದಲಾಯಿಸುತ್ತಿದ್ದಾರೆ. ಅಂದರೆ ಹೂಡಿಕೆದಾರರು ಲುಟಿಯೆನ್ಸ್ ಬಂಗಲೆ ವಲಯ, ಮುಂಬೈ, ಗುರುಗ್ರಾಮ್ ಮತ್ತು ಬೆಂಗಳೂರಿನಂತಹ ಪ್ರೀಮಿಯಂ ರಿಯಲ್ ಎಸ್ಟೇಟ್‌ನಲ್ಲಿ (Real Estate) ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನೈಟ್ ಫ್ರಾಂಕ್ ಮತ್ತು ಸಿಬಿಆರ್‌ಇ ವರದಿಗಳು ಈ ಬದಲಾವಣೆಯನ್ನು ಎತ್ತಿರ ತೋರಿಸಿದೆ.

ಬಂಗಾರದ ಬೆಲೆಗಳ (Gold Price) ಏರಿಳಿತಗಳು ಮತ್ತು ಷೇರು ಮಾರುಕಟ್ಟೆಯ ಭಯದಿಂದಾಗಿ ದೇಶದ ಶ್ರೀಮಂತ ಹೂಡಿಕೆದಾರರನ್ನು ಹೊಸ ಹೂಡಿಕೆಯತ್ತ ಮುಖ ಮಾಡುವಂತೆ ಮಾಡಿದೆ. ಹೆಚ್ಚಿನ ಹಣವಂತರು, ದೊಡ್ಡ ದೊಡ್ಡ ಕುಟುಂಬಗಳು, ಅನಿವಾಸಿ ಭಾರತೀಯರು ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರು ಈಗ ರಿಯಲ್ ಎಸ್ಟೇಟ್ ಅನ್ನು ತಮ್ಮ ಸಂಪತ್ತಿನ ಸುರಕ್ಷತೆಗೆ ಉತ್ತಮ ಆಶ್ರಯವೆಂದು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಲ್ಟ್ರಾ-ಐಷಾರಾಮಿ ವಸತಿ ಪ್ರದೇಶಗಳು ಮತ್ತು ಪ್ರೀಮಿಯಂ ಕಮರ್ಷಿಯಲ್ ಕಟ್ಟಡಗಳು ಈಗ ಭಾರತದಲ್ಲಿ "ಹೊಸ ಬ್ಲೂ-ಚಿಪ್ ಹೂಡಿಕೆ ವರ್ಗ" ಆಗಿ ಹೊರಹೊಮ್ಮಿವೆ. ಸ್ಟಾಕ್ ಮಾರುಕಟ್ಟೆಯಲ್ಲಿ ಬ್ಲೂ-ಚಿಪ್ ಷೇರುಗಳು ಎಷ್ಟು ಸುರಕ್ಷಿತವೋ, ಈಗ ಪ್ರೀಮಿಯಂ ರಿಯಲ್ ಎಸ್ಟೇಟ್ ಅನ್ನು ಅಷ್ಟೇ ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತಿದೆ.
ನೈಟ್ ಫ್ರಾಂಕ್ ಮತ್ತು ಸಿಬಿಆರ್‌ಇ ವರದಿಗಳ ಪ್ರಕಾರ, ದೇಶದ ಅತ್ಯಂತ ಅಪರೂಪದ ಮತ್ತು ಐಷಾರಾಮಿ ಪ್ರದೇಶಗಳತ್ತ ಶ್ರೀಮಂತರು ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗಿದೆ. ದೆಹಲಿಯ ಲುಟಿಯೆನ್ಸ್ ಬಂಗಲೆ ವಲಯ, ಮುಂಬೈನ ಕಡಲತೀರದ ಪ್ರದೇಶಗಳು, ಗುರುಗ್ರಾಮ್ ಗಾಲ್ಫ್ ಕೋರ್ಸ್ ರಸ್ತೆಯ ಬೃಹತ್ ಕಟ್ಟಡಗಳು ಮತ್ತು ಬೆಂಗಳೂರಿನ ಶ್ರೀಮಂತರ ವಸತಿ ಪ್ರದೇಶಗಳು ಹೂಡಿಕೆಗೆ ಅತ್ಯಂತ ಮೌಲ್ಯಯುತ ತಾಣಗಳೆಂದು ಗುರುತಿಸಿಕೊಂಡಿದೆ
ಈ ಪ್ರದೇಶಗಳಲ್ಲಿನ ಖರೀದಿಯು ಭದ್ರತೆ, ಆಸ್ತಿಯ ಮೌಲ್ಯ ಮತ್ತು ಭವಿಷ್ಯದಲ್ಲಿ ದೊಡ್ಡ ಲಾಭವನ್ನು ತಂದು ಕೊಡುವ ಮೂರು ಪ್ರಮುಖ ಪ್ರಯೋಜನಗಳನ್ನು ನೀಡಲಿದೆ ಎಂದು ತಜ್ಞರು ಹೇಳುತ್ತಾರೆ. ಈ ಬೆಳವಣಿಗೆಗೆ ಪ್ರಮುಖ ಕಾರಣ ಭೂಮಿಯ ಕೊರತೆ. ಈ ಪ್ರೀಮಿಯಂ ವಲಯಗಳಲ್ಲಿ ಹೊಸ ಕಟ್ಟಡಗಳಿಗಾಗಿ ಅಗತ್ಯವಾದ ಭೂಮಿ ಲಭ್ಯವಿಲ್ಲ, ಲಭ್ಯವಿರುವ ಹೆಚ್ಚಿನ ಭಾಗದಲ್ಲಿ ಈಗಾಗಲೇ ನಿರ್ಮಿಸಲಾಗಿದೆ. ಆದ್ದರಿಂದ ಬೇಡಿಕೆಯೂ ಹೆಚ್ಚಾಗಿದೆ.
ಕಡಿಮೆ ಪೂರೈಕೆ ಮತ್ತು ಭಾರೀ ಬೇಡಿಕೆಯಿಂದಾಗಿ ಬೆಲೆಗಳು ಕೂಡ ಏರಿಕೆಯಾಗಿದೆ. ಭವಿಷ್ಯದಲ್ಲಿ ಈ ಮೌಲ್ಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಹೂಡಿಕೆದಾರರು ಕೂಡಾ ಇದೇ ಕಾರಣದಿಂದ ಹೂಡಿಕೆ ಹೆಚ್ಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶಗಳಲ್ಲಿ ಹೂಡಿಕೆದಾರರು ಈ ಪ್ರದೇಶಗಳಲ್ಲಿ ಹೆಚ್ಚಿನ ಆದಾಯವನ್ನು ಸಂಪಾದಿಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ ಕಮರ್ಷಿಯಲ್ ರಿಯಲ್ ಎಸ್ಟೇಟ್ ಕೂಡ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದೆ. ವಿಶೇಷವಾಗಿ ಗ್ರೇಡ್-ಎ ಕಚೇರಿ ಕಟ್ಟಡಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಗುತ್ತಿಗೆಗೆ ನೀಡಲಾದ ಕಚೇರಿಗಳು ಪ್ರತಿ ವರ್ಷ 6-10% ಬಾಡಿಗೆ ಆದಾಯವನ್ನು ನೀಡುತ್ತಿವೆ. ಈ ಆದಾಯವು ಷೇರು ಮಾರುಕಟ್ಟೆಗಿಂತ ಸುರಕ್ಷತೆಯನ್ನು ಹೊಂದಿರುವುದರಿಂದ, ಹೂಡಿಕೆದಾರರು ಕೂಡಾ ಇದರ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ.


Click it and Unblock the Notifications