Retirement Plan: ನಿವೃತ್ತಿ ಬದುಕಿನಲ್ಲೂ ಹ್ಯಾಪಿಯಾಗಿರಬೇಕಾ? ಹಾಗಿದ್ರೆ ಈ ಟ್ರಿಕ್ಸ್‌ ಫಾಲೋ ಮಾಡಿ

ಜೀವನದಲ್ಲಿ ದುಡಿದು ಸಂಪಾದನೆ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ನಿವೃತ್ತಿ ಪಡೆಯೋದು (Retirement) ಕೂಡಾ ಅಷ್ಟೇ ಮುಖ್ಯ. ಆದರೆ ನಿವೃತ್ತಿ ಪಡೆಯುವುದೆಂದರೆ ಸುಲಭದ ಮಾತಲ್ಲ, ಅದು ಆರ್ಥಿಕ ಹೊರೆಗೂ ಕಾರಣವಾಗಬಹುದು. ಆದ್ದರಿಂದ ಯಾರೇ ಆಗಲಿ ಸುರಕ್ಷಿತ ನಿವೃತ್ತಿ ಜೀವನಕ್ಕಾಗಿ ಹಲವಾರು ಯೋಜನೆಗಳನ್ನು ಮೊದಲೇ ಮಾಡಿಕೊಂಡಿರಬೇಕು. ಅದಕ್ಕಾಗಿ ಭಾರತದಲ್ಲಿ (India) ಹಲವರು ಆರ್ಥಿಕ ತಜ್ಞರು ಹೂಡಿಕೆ ತಂತ್ರಗಳ (Investment Plans) ಬಗ್ಗೆ ಅರಿವು ಮೂಡಿಸುತ್ತಲೇ ಇರುತ್ತಾರೆ.

ನಿವೃತ್ತಿ ಬದುಕಿನಲ್ಲೂ ಹ್ಯಾಪಿಯಾಗಿರಬೇಕಾ? ಈ ಟ್ರಿಕ್ಸ್‌ ಫಾಲೋ ಮಾಡಿ

ಇದೀಗ ಭಾರತದ ಪ್ರಮುಖ ಹಣಕಾಸು ತಜ್ಞರಾದ, ವೈಸ್‌ಇನ್ವೆಸ್ಟ್‌ನ ಸಿಇಒ ಹೇಮಂತ್‌ ರುಸ್ತಗಿ ಮತ್ತು ಮನಿ ಮಂತ್ರದ ಸಂಸ್ಥಾಪಕ ವಿರಲ್‌ ಭಟ್‌ ಅವರು, 2026 ರಲ್ಲಿ ನಿವೃತ್ತಿ ಹೊಂದುವವರಿಗೆ, ಹೇಗೆ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಿವೃತ್ತಿದಾರರು ಫಾಲೋ ಮಾಡಬೇಕಾದ ಟಿಪ್ಸ್:
ಖರ್ಚಿನ ಬಗ್ಗೆ ಲೆಕ್ಕ ಹಾಕಿ: ನಿಮ್ಮ ಪ್ರಸ್ತುತ ಖರ್ಚುಗಳು, ಹಣದುಬ್ಬರ, ಆರೋಗ್ಯ ವೆಚ್ಚಗಳು, ಜೀವನಶೈಲಿಯನ್ನೆಲ್ಲಾ ಲೆಕ್ಕ ಹಾಕಿಕೊಂಡು ನಿವೃತ್ತಿ ನಂತರ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಬೇಕು. ಪ್ರತೀ ತಿಂಗಳು 1 ಲಕ್ಷ ಖರ್ಚು ಇದ್ದರೆ, ಮುಂದಿನ 30 ವರ್ಷಗಳ ಅವಧಿಗೆ ಎಷ್ಟು ಬೇಕಾಗುತ್ತದೆ ಎಂದು ಲೆಕ್ಕಹಾಕಿ, ನಿವೃತ್ತಿ ಯೋಜನೆಯನ್ನು ಅರ್ಥಮಾಡಿಕೊಳ್ಳಬಹುದು.

ಉತ್ತಮ ಹೂಡಿಕೆ ಯೋಜನೆಗಳನ್ನು ಸೆಲೆಕ್ಟ್‌ ಮಾಡಿ: ಇನ್ನು ನಿವೃತ್ತಿ ಪಡೆಯುತ್ತೀರಿ ಎಂದು ನಿರ್ಧಾರವಾದ್ರೆ, ಸರಿಯಾದ ಹೂಡಿಕೆ ಯೋಜನೆಗಳ ಬಗ್ಗೆ ಗಮನಹರಿಸುವುದು ಮುಖ್ಯ. ಈಕ್ವಿಟಿ ಮ್ಯೂಚುವಲ್‌ ಫಂಡ್‌ (SIP), NPS, PPF, LIC ಪೆನ್ಷನ್‌ ಸ್ಕೀಮ್‌, ಪೋಸ್ಟ್‌ ಆಫೀಸ್‌ ಹೀಗೆ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಿಟ್ಟರೆ ಉತ್ತಮ.

ಹೂಡಿಕೆ ತಂತ್ರಗಳಿವು:
ಉದ್ಯೋಗದಲ್ಲಿರುವಾಗಲೇ ಹೂಡಿಕೆ ಆರಂಭಿಸಿ: ನೀವು ಉದ್ಯೋಗಕ್ಕೆ ಜಾಯಿನ್‌ ಆದಾಗಿನಿಂದಲೇ, ಹೂಡಿಕೆ ಮಾಡಲು ಆರಂಭಿಸಬೇಕು. ಅದರಲ್ಲೂ 20-30 ವರ್ಷ ವಯಸ್ಸಿನಲ್ಲಿ ತಿಂಗಳಿಗೆ 10,000-15000 ಎಸ್‌ಐಪಿ ಮಾಡಿದರೆ, 12 ರಿಟರ್ನ್ಸ್‌ ಪಡೆದರೆ, ಉತ್ತಮ ಆದಾಯ ಪಡೆಯಬಹುದು.

ತೆರಿಗೆ ಉಳಿತಾಯ ಮಾಡಿ: ಎನ್‌ಪಿಎಸ್‌, ಪಿಪಿಎಫ್‌, ಇಎಲ್‌ಎಸ್‌ ಮೂಲಕ ಸೆಕ್ಷನ್‌ 80C ಅಡಿಯಲ್ಲಿ 1.5 ಲಕ್ಷ ಉಳಿಸಿ. ಈ ಮೂಲಕ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು.

ಹೆಲ್ತ್‌ ಇನ್ಸೂರೆನ್ಸ್‌ ಮಾಡಿಕೊಳ್ಳಿ: ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಎದುರಾಗೋದು ಸಾಮಾನ್ಯ. ಅದಕ್ಕಾಗಿ ಹೆಲ್ತ್‌ ಇನ್ಸೂರೆನ್ಸ್‌ನಲ್ಲೂ ಹೂಡಿಕೆ ಮಾಡುವುದು ಮುಖ್ಯ.

ಈ ತಪ್ಪು ಮಾಡಲೇಬೇಡಿ:
ಹೂಡಿಕೆ ಮಾಡುಲು, ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ.
ಎಲ್ಲಾ ಹೂಡಿಕೆ ಮೊತ್ತವನ್ನು ಒಂದೇ ಜಾಗದಲ್ಲಿ ಇಡಬೇಡಿ.
ಮಾರುಕಟ್ಟೆ ಏರಿಳಿತಗಳ ಬಗ್ಗೆ ಭಯಪಡುವುದನ್ನು ನಿಲ್ಲಿಸಿ.
ಸರಿಯಾದ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡದೇ ಇರುವುದು.

ನಿಮ್ಮ ವಯಸ್ಸು, ಸಂಬಳಕ್ಕೆ ತಕ್ಕಂತೆ ಹೂಡಿಕೆ ಮಾಡಲು ಪ್ಲಾನ್‌ ಮಾಡಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ, ಎಲ್ಲಿಯೂ ಹೂಡಿಕೆ ಮಾಡಲು ಮುಂದಾಗಬೇಡಿ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+