Retirement Plans: 40 ವರ್ಷದಲ್ಲಿ ನಿವೃತ್ತಿ ಪಡೆಯೋ ಪ್ಲಾನ್‌ನಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಸಲಹೆ

ಕೆಲಸ ಮಾಡಬೇಕು, ಜೀವನ ಸಾಗಿಸಬೇಕೆಂಬುದು ಎಲ್ಲರ ಆಸೆ, ಕನಸು. ಆದ್ರೆ ಒಂದಿಷ್ಟು ವಯಸ್ಸಿನವರೆಗೆ ಕೆಲಸ ಮಾಡಬಹುದು. ಆ ನಂತರ ಕೆಲಸ ಮಾಡುವ ವಯಸ್ಸೇ ದಾಟಿರುತ್ತೆ. ಈ ಸಂದರ್ಭದಲ್ಲಿ ನಿವೃತ್ತಿ ಪಡೆಯೋದು ಅವಶ್ಯಕವಾಗಿರುತ್ತದೆ. ಅದೇ ಕಾರಣದಿಂದ ಹೆಚ್ಚಿನವರು ಬೇಗನೆ ಕೆಲಸಕ್ಕೆ ಬೈ ಹೇಳಿ, ನಿವೃತ್ತಿ ಜೀವನ (Retirement) ಶುರು ಮಾಡಿರುತ್ತಾರೆ.

40 ವರ್ಷದಲ್ಲಿ ನಿವೃತ್ತಿ ಪಡೆಯೋ ಪ್ಲಾನ್‌ನಲ್ಲಿದ್ದೀರಾ? ಇಲ್ಲಿದೆ ಸಲಹೆ

40ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಬೇಕೆಂಬುದು ಹಲವರ ಕನಸು. ಒಂದೆಡೆ ಆಫೀಸ್‌ ಟೆನ್ಷನ್‌, ಮತ್ತೊಂದೆಡೆ EMI, ಈ ಎಲ್ಲದರ ಚಿಂತೆ ಬಿಟ್ಟು, ಊರಿಗೆ ಬಂದು ಕಾಲ ಕಳೆಯೋದೆ ಸುಖ ಜೀವನ. ಈ ಪರಿಕಲ್ಪನೆಯನ್ನೇ 'FIRE - Financial Independence, Retire Early' ಎಂದು ಕರೆಯಲಾಗುತ್ತದೆ.

ನಿವೃತ್ತಿ ಸಮಯದಲ್ಲಿ, ಅಂದಾಜು 1.5 ಕೋಟಿಯಿಂದ 2 ಕೋಟಿ ರೂ. ಹಣ ನಿಮ್ಮಲ್ಲಿದ್ದರೆ ಹಾಗೂ ಪ್ರತಿ ತಿಂಗಳು ಸುಮಾರು 50,000 ರೂ. ಆದಾಯ ಬರುತ್ತಿದ್ದರೆ, ಒಂದು ಹಳ್ಳಿಯಲ್ಲೂ ಕೂತು ಆರಾಮದಾಯಕ ಜೀವನ ಸಾಗಿಸಬಹುದು.

ಈ 'FIRE' ಪ್ಲಾನ್‌, ಆಫೀಸ್‌ ಚಿಂತೆಯಿಂದ ಸ್ವಾತಂತ್ರ್ಯ ನೀಡುತ್ತದೆ. ಆದರೆ, ಹಣಕಾಸು ತಜ್ಞರು ಯಾವುದೇ ಸರಿಯಾದ ಲೆಕ್ಕಾಚಾರಗಳು ಮತ್ತು ಶಿಸ್ತಿನ ಹೂಡಿಕೆ ಇಲ್ಲದೆ ದಿಢೀರ್‌ ನಿವೃತ್ತಿ ಪಡೆಯುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಿಂಗಳ ಖರ್ಚಿನ ಬಗ್ಗೆ ಅಂದಾಜಿಸಿ:
ಸಣ್ಣ ಪಟ್ಟಣ ಅಥವಾ ಗ್ರಾಮೀಣ ಪ್ರದೇಶದಲ್ಲಿಯೂ ಜೀವನ ಸಾಗಿಸಬೇಕೆಂದರೆ ಕಮ್ಮಿಯಂದರೂ 50,000 ರೂ. ಅಗತ್ಯವಿದೆ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಈ ಲೆಕ್ಕಾಚಾರದಿಂದ ನಿವೃತ್ತಿ ಬದುಕಿಗಾಗಿ ಸರಿಯಾದ ಹೂಡಿಕೆ ಅಗತ್ಯವಾಗಿರುತ್ತದೆ.

ನಿವೃತ್ತಿ ಮೊದಲೇ ಹೀಗೆ ಲೆಕ್ಕಾಚಾರ ಮಾಡಿ:
40ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯುವುದಾದರೆ, 80 ವರ್ಷಗಳವರೆಗೆ ಬದುಕುವ ನಿರೀಕ್ಷೆಯಿದ್ದರೆ, ಅದು 40 ವರ್ಷಗಳು ಅಥವಾ 480 ತಿಂಗಳ ನಿವೃತ್ತಿ ನಂತರದ ವೆಚ್ಚಗಳನ್ನು ಒಳಗೊಂಡಿರುತ್ತದೆ. ವಾರ್ಷಿಕ 6% ರ ಸರಾಸರಿ ಹಣದುಬ್ಬರ ದರವನ್ನು ನಿರೀಕ್ಷಿಸಿದರೂ, ಇಂದು ₹50,000 ಪಡೆಯುವ ಆಯ್ಕೆಯೇ ತೀವ್ರವಾಗಿ ಕುಸಿಯುತ್ತದೆ. ಆದ್ದರಿಂದ, ಕೇವಲ ₹50,000 ಅನ್ನು 480 ತಿಂಗಳುಗಳಿಂದ ಗುಣಿಸುವುದು ಸಾಕಾಗುವುದಿಲ್ಲ; ನಿವೃತ್ತಿ ನಿಧಿಯು ಆದಾಯವನ್ನು ಗಳಿಸಬೇಕು ಮತ್ತು ಹಣದುಬ್ಬರವನ್ನು ಸರಿದೂಗಿಸಲು ಸಾಕಷ್ಟು ಬೆಳೆಯಬೇಕು.

ಸೇಫ್‌ ವಿಥ್‌ಡ್ರಾಯಲ್‌ ರೇಟ್‌:
ನಿವೃತ್ತಿಯ ನಂತರ ಕಾರ್ಪಸ್‌ನಿಂದ ಹಣ ವಿಥ್‌ ಡ್ರಾ ಮಾಡಿಕೊಂಡು ಜೀವನ ನಡೆಸಬೇಕು. ಅದಕ್ಕಾಗಿ ಅಮೆರಿಕಾದಲ್ಲಿ 4% ರೂಲ್‌ ಅಸ್ತಿತ್ವದಲ್ಲಿದೆ. ಆ ಪ್ರಕಾರ ಮೊದಲ ವರ್ಷದಲ್ಲಿ ನಿಮ್ಮ ಹೂಡಿಕೆಯ ನಿಧಿಯಿಂದ 4% ವಿಥ್‌ಡ್ರಾ ಮಾಡಬೇಕು. ನಂತರದ ವರ್ಷಗಳಲ್ಲಿ ವೆಚ್ಚದ ಆಧಾರದ ಮೇಲೆ ಹೆಚ್ಚಿಸಬಹುದು. ಇದರಿಂದ ಮುಂದಿನ 30 ವರ್ಷಗಳ ಕಾಲ ಹಣ ಖಾಲಿಯಾಗದಂತೆ ಜೀವನ ಸಾಗಿಸಬಹುದಾಗಿದೆ.

ಲೆಕ್ಕಾಚಾರ ಹೇಗೆ?
ತಿಂಗಳಿಗೆ 50,000 ರೂ. ಖರ್ಚು ಅಂದರೆ ವಾರ್ಷಿಕವಾಗಿ 6 ಲಕ್ಷ ಖರ್ಚು:
4% ರೇಟ್‌ನಲ್ಲಿ: 6 ಲಕ್ಷ ರೂ.÷ 0.04 = 1.5 ಕೋಟಿ ರೂ. ಕಾರ್ಪಸ್‌ ಬೇಕಾಗುತ್ತದೆ. ಇನ್ನು ಭಾರತದಲ್ಲಿ 3% ರೇಟ್‌ನಲ್ಲಿ 2 ಕೋಟಿವರೆಗೆ ನಿವೃತ್ತಿ ಬದುಕಿಗೆ ಕಾರ್ಪಸ್‌ ಬೇಕಾಗುತ್ತದೆ.

ಹಣಕಾಸು ಯೋಜಕರು ಸಾಮಾನ್ಯವಾಗಿ "ಸುರಕ್ಷಿತ ಹಿಂಪಡೆಯುವಿಕೆಯ ದರ" (Safe Withdrawal Rate) ಪರಿಕಲ್ಪನೆಯನ್ನು ಅವಲಂಬಿಸುತ್ತಾರೆ. ಜಾಗತಿಕವಾಗಿ, '4% ನಿಯಮ' ಸಾಮಾನ್ಯವಾಗಿ ಜನಪ್ರಿಯತೆ ಹೊಂದಿದೆ. ಇದು ವಾರ್ಷಿಕವಾಗಿ ಒಟ್ಟು ನಿಧಿಯ 4% ಅನ್ನು ಮಾತ್ರ ಹಿಂಪಡೆಯುವುದರಿಂದ ಉಳಿತಾಯವು ದಶಕಗಳವರೆಗೆ ಉಳಿಯುವಂತೆ ಮಾಡುತ್ತದೆ.

ಆದ್ದರಿಂದ 40 ವರ್ಷಕ್ಕೆ ನಿವೃತ್ತಿ ಪಡೆಯುವವರು, ಮೊದಲೇ ತಮ್ಮ ಹೂಡಿಕೆ ಯೋಜನೆಗಳನ್ನು ಆರಂಭಿಸಬೇಕು. ಎಫ್‌ಡಿ, ಎಸ್‌ಐಪಿ, ಹೀಗೆ ಹಲವು ಯೋಜನೆಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿಟ್ಟುಕೊಳ್ಳಬೇಕಾಗುತ್ತದೆ.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+