ನವದೆಹಲಿ, ಜನವರಿ 20: ಅಲ್ಟ್ರಾ ಲಕ್ಸುರಿ ಕಾರು ತಯಾರಕ ಕಂಪೆನಿ ರೋಲ್ಸ್ ರಾಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಸ್ಪೆಕ್ಟರ್ ಅನ್ನು ಭಾರತದಲ್ಲಿ ರೂ 7.5 ಕೋಟಿಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ.
ಈ ದಶಕದ (2030) ಅಂತ್ಯದ ವೇಳೆಗೆ ಮಾರ್ಕ್ಯೂ ಬ್ರಿಟಿಷ್ ಬ್ರ್ಯಾಂಡ್ ರೋಲ್ಸ್ ರಾಯ್ಸ್ ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಲು ಆಕಾಂಕ್ಷೆ ಹೊಂದಿರುವುದರಿಂದ ಮೊದಲ ಬ್ಯಾಟರಿ ಚಾಲಿತ ನಾಲ್ಕು ಚಕ್ರ ವಾಹನ ಸ್ಪೆಕ್ಟರ್ ಬಿಡುಗಡೆ ಮಾಡಿದೆ.

ಹೊಸದಾಗಿ ಬಿಡುಗಡೆ ಮಾಡಿರುವ ಸ್ಪೆಕ್ಟರ್ ಬುಕ್ ಮಾಡಿದರೆ ಅದು ನಿಮ್ಮ ಕೈ ಸೇರುವ ಅವಧಿಯು ಸುಮಾರು 1 ವರ್ಷವಾಗಿರುತ್ತದೆ (ಕಸ್ಟಮೈಸೇಶನ್ ಮಟ್ಟವನ್ನು ಅವಲಂಬಿಸಿ). ಇದರರ್ಥ ಖರೀದಿದಾರನು ಬುಕಿಂಗ್ ಮಾಡಿದ ಸಮಯದಿಂದ ಮತ್ತು ವಿತರಣೆ ಪೂರ್ಣಗೊಂಡಾಗಿನಿಂದ ಒಂದು ಪೂರ್ಣ ವರ್ಷ ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ರೋಲ್ಸ್ ರಾಯ್ಸ್ ಕಾರುಗಳಿಗೆ ಸರಾಸರಿ ಕಾಯುವ ಅವಧಿಯು ಸುಮಾರು 6-8 ತಿಂಗಳುಗಳು ಇರುತ್ತದೆ.
ದೀರ್ಘ ಕಾಯುವ ಅವಧಿಯು ಹೆಚ್ಚಿನ ಮಟ್ಟದ ಗ್ರಾಹಕರನ್ನು ಸೆಳೆಯುವ ಕಾರಣವಾಗಿದೆ. ಏಕೆಂದರೆ ಪ್ರತಿಯೊಂದು ಯುನಿಟ್ ಅನ್ನು ಖರೀದಿದಾರರ ಇಚ್ಛೆಯಂತೆ ಮಾರ್ಪಟು ಮಾಡಲು ಸಮಯ ಬೇಕಾಗುತ್ತದೆ. ಕಸ್ಟಮೈಸೇಶನ್, ದುಬಾರಿ ವ್ಯವಹಾರ, ರೋಲ್ಸ್ ರಾಯ್ಸ್ ಕಾರುಗಳ ಬೆಲೆಯನ್ನು ಹತ್ತಾರು ಕೋಟಿಗಳವರೆಗೆ ಇರಿಸಬಹುದು. ಇದಕ್ಕೆ ಕಂಪನಿಯು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ತನ್ನ ಸೌಲಭ್ಯದಲ್ಲಿ ಪ್ರತಿವರ್ಷ ಈ ಕಾರುಗಳ ಸುಮಾರು 6,000 ಯುನಿಟ್‌ಗಳನ್ನು ಮಾತ್ರ ತಯಾರಿಸುತ್ತದೆ.
ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ನವದೆಹಲಿಯ ಡೀಲರ್ ಪ್ರಿನ್ಸಿಪಾಲ್ ಯದುರ್ ಕಪೂರ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಅಲ್ಟ್ರಾ ಐಷಾರಾಮಿ ಸೂಪರ್ ಕಾರುಗಳಿಗೆ ವಿಶೇಷವಾಗಿ ರೋಲ್ಸ್ ರಾಯ್ಸ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಾರಾಟದ ಸಂಖ್ಯೆಯನ್ನು ನೀಡದೆ 2022 ರ ಮಾರಾಟಕ್ಕೆ ಹೋಲಿಸಿದರೆ 2023 ರ ಕ್ಯಾಲೆಂಡರ್ ವರ್ಷದಲ್ಲಿ ರೋಲ್ಸ್ ರಾಯ್ಸ್‌ನ ಭಾರತದ ಮಾರಾಟವು ದ್ವಿಗುಣಗೊಂಡಿದೆ ಎಂದು ಹೇಳಿದರು.
"ನಾವು ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದ್ದೇವೆ. 2024 ಕ್ಕೆ ಅತ್ಯಂತ ಬಲವಾದ ಆರ್ಡರ್ ಅನ್ನು ಪಡೆದಿದ್ದೇವೆ. ನಮ್ಮ ಮಾರಾಟಕ್ಕೆ ಕಾರಣವಾಗುವ ಅಂಶಗಳು ಭಾರತೀಯ ಆರ್ಥಿಕತೆಯ ಬೆಳವಣಿಗೆ, ಸ್ಥಳೀಯ ಕಾರು ಮಾರುಕಟ್ಟೆಯು ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಕಪೂರ್ ಹೇಳಿದರು.
ರೋಲ್ಸ್ ರಾಯ್ಸ್ ಖರೀದಿದಾರರ ಸರಾಸರಿ ವಯಸ್ಸು ಸುಮಾರು 35 ವರ್ಷಗಳಿಗೆ ಇಳಿದಿದೆ. ನಮ್ಮ ಖರೀದಿದಾರರು ಚಿಕ್ಕವರಾಗಿದ್ದಾರೆ. ವಕೀಲರು ಮತ್ತು ವೈದ್ಯರಿಂದ ಹಿಡಿದು ಟೆಕ್ ಬಿಲಿಯನೇರ್‌ಗಳು ಮತ್ತು ಉದ್ಯಮಿಗಳವರೆಗೆ ನಮ್ಮ ಗ್ರಾಹಕರ ಪಟ್ಟಿ ತುಂಬಾ ವಿಸ್ತಾರವಾಗಿದೆ. ಅವರು ಬಹಳ ತಿಳಿವಳಿಕೆ ಹೊಂದಿದ್ದಾರೆ. ಅವರು ತಮ್ಮ ಕಾರುಗಳ ಬಗ್ಗೆ ತಿಳಿದಿದ್ದಾರೆ. ಅವರು ತಮ್ಮ ಕಾರಿನಲ್ಲಿ ಏನನ್ನು ಬಯಸುತ್ತಾರೆ ಎಂಬುದನ್ನು ನಿಖರವಾಗಿ ತಿಳಿದಿದ್ದಾರೆ. ಭೌಗೋಳಿಕವಾಗಿ, ಭಾರತದಾದ್ಯಂತ ಮಾರಾಟಗಳು ಹೆಚ್ಚಾಗುತ್ತಿವೆ ಎಂದು ಅವರು ಹೇಳಿದರು.
ರೋಲ್ಸ್ ರಾಯ್ಸ್ ಭಾರತದಲ್ಲಿ ಮೂರು ಶೋರೂಂಗಳನ್ನು ಹೊಂದಿದೆ. ದೆಹಲಿ, ಹೈದರಾಬಾದ್ ಮತ್ತು ಚೆನ್ನೈ. ಇಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಘೋಸ್ಟ್ ಮತ್ತು ಕುಲ್ಲಿನಾನ್ ಎಸ್‌ಯುವಿ ಸೇರಿವೆ. ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬೆಳೆದ ನಂತರ ಕಾರು ತಯಾರಕ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಹೆಚ್ಚಿಸಲಿದೆ.
ಮಾರುಕಟ್ಟೆಯಲ್ಲಿನ ಸವಾಲುಗಳನ್ನು ಉದ್ದೇಶಿಸಿ ಮಾತನಾಡಿದ ಕಪೂರ್, ಭಾರತದಲ್ಲಿನ ಕಾರು ಬೆಲೆಗಳ ಮೇಲೆ ಪರಿಣಾಮ ಬೀರುವ ಕರೆನ್ಸಿ ಕುಸಿತ (INR) ಮಾತ್ರ ಅವರ ಕಾಳಜಿಯಾಗಿದೆ. ಇನ್ನೊಂದು ಚಿಂತೆಯೆಂದರೆ ಸರ್ಕಾರವು ತೆರಿಗೆಗಳನ್ನು ಹೆಚ್ಚಿಸುವ ಬಗ್ಗೆಯಾಗಿದೆ. ಪ್ರಸ್ತುತ, ಸಂಪೂರ್ಣವಾಗಿ ನಿರ್ಮಿಸಿದ ಘಟಕಗಳಾಗಿ ಆಮದು ಮಾಡಿಕೊಳ್ಳುವ ಈ ದುಬಾರಿ ಯಂತ್ರಗಳು 200% ಕಸ್ಟಮ್ಸ್ ಸುಂಕವನ್ನು ಹೊಂದಿರುತ್ತವೆ.
ತೆರಿಗೆ ಕಡಿಮೆಯಾಗುವುದು ಉದ್ಯಮಕ್ಕೆ ಯಾವಾಗಲೂ ಒಳ್ಳೆಯದು. ಯುಕೆ ಜೊತೆಗಿನ ಎಫ್ಟಿಎ ಬೆಲೆಗಳ ಮೇಲೆ ಪರಿಣಾಮ ಬೀರಬೇಕು, ಆದರೆ ಏನಾಗಲಿದೆ ಮತ್ತು ಅದು ಯಾವಾಗ ಸಂಭವಿಸುತ್ತದೆ ಎಂಬುದರ ಕುರಿತು ಈಗ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಅದು ಸಂಭವಿಸಿದಾಗ ಅದು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸ್ಪೆಕ್ಟರ್‌ಗೆ ಬರುವುದಾದರೆ ಇವಿ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳಿಂದ ಚಾಲಿತವಾಗಿದ್ದು, ಅದು 576bhp ಮತ್ತು 900Nm ಟಾರ್ಕ್‌ನ ಸಂಯೋಜಿತ ಕಂಬೈನ್ಡ್‌ನ್ನು ಉತ್ಪಾದಿಸುತ್ತದೆ. ಕೂಪ್ 0-100 ಕಿಮೀ ವೇಗವನ್ನು 4.5 ಸೆಕೆಂಡುಗಳಲ್ಲಿ ತಲುಪಬಹುದು. ಇದು 102kWh ಬ್ಯಾಟರಿಯೊಂದಿಗೆ 530km ನಷ್ಟು ವೇಗವನ್ನು ಪಡೆಯುತ್ತದೆ.


Click it and Unblock the Notifications