ಮಕ್ಕಳಿಗಾಗಿ ಪೋಷಕರು ಹೇಗೆ ಪಿಗ್ಗಿ ಬ್ಯಾಂಕ್ ನಲ್ಲಿ ಹಣ ಹಾಕಲು ಹೇಳುತ್ತಾರೋ ಅದೇ ರೀತಿ ಈ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿನ ಆರ್‌ಡಿ ಕೂಡಾ. ಒಂಥರಾ ಹಣ ಉಳಿಕೆಯ ಹುಂಡಿಯಂತೆ ಕೆಲಸ ಮಾಡುತ್ತದೆ. ಇಲ್ಲಿ ಉಳಿತಾಯ ತುಂಬಾ ಸರಳ. ಉಳ್ಳವರು ದೊಡ್ಡ ಮೊತ್ತ ಉಳಿತಾಯ ಮಾಡಿದ್ರೆ ಇಲ್ಲದವರು ಸಣ್ಣ ಮೊತ್ತದಿಂದ ಆರಂಭಿಸಿದರೆ ಆಯಿತು. ಇಲ್ಲಿ ಉಳಿತಾಯಕ್ಕಾಗಿ ಮನಸ್ಸು ಮಾಡುವುದು ಮುಖ್ಯವಾಗಿರುತ್ತದೆ. ದಿನಕ್ಕೆ 100 ರೂ. ಉಳಿತಾಯ ನಮ್ಮಿಂದ ಸಾಧ್ಯವಿಲ್ಲವೇ ಹೇಳಿ.
ಆರ್‌ಡಿ ಮೂಲಕ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಹೂಡಿಕೆ ಮಾಡಿದ್ರೆ ಬಹಳಷ್ಟು ಅನುಕೂಲಗಳಿವೆ. ನೀವು ಪಿಗ್ಗಿ ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿ ಮಾಡಿದ್ರೆ ಬಡ್ಡಿಯನ್ನು ಸಿಗೋದಿಲ್ಲ. ಇಲ್ಲಿ ನೀವು ಉಳಿತಾಯವನ್ನು ಮಾತ್ರ ಪಡೆಯುತ್ತೀರಿ. ಆದರೆ ನೀವು RD ನಲ್ಲಿ ಹೂಡಿಕೆ ಮಾಡಿದರೆ, ಮುಕ್ತಾಯದ ನಂತರ ಈ ಯೋಜನೆಯು ಬಡ್ಡಿಯೊಂದಿಗೆ ಹಣವನ್ನು ಹಿಂದಿರುಗಿಸುತ್ತದೆ. ಸಣ್ಣ ಉಳಿತಾಯವನ್ನು ಹೂಡಿಕೆ ಮಾಡುವ ಮತ್ತು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಬಯಸದ ಜನರಿಗೆ ಈ ಯೋಜನೆಯು ತುಂಬಾ ಒಳ್ಳೆಯದು.

ಒಂದು ವೇಳೆ ನೀವು ಆರ್‌ಡಿಯಲ್ಲಿ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತಿದ್ದರೆ, ನೀವು ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಲಾಗುತ್ತದೆ. ಪ್ರತಿದಿನ 100 ರೂಪಾಯಿ ಉಳಿಸಿ ಆರ್‌ಡಿಯಲ್ಲಿ ಹೂಡಿಕೆ ಮಾಡಿದರೆ 5 ವರ್ಷಗಳಲ್ಲಿ 2,14,097 ರೂ. ಸಿಗುತ್ತದೆ.! ಹೀಗಾಗಿ ನಿಮಗೆ ಅರಿವಿಲ್ಲದೇ ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಒಂದು ದೊಡ್ಡ ಮೊತ್ತ ಉಳಿತಾಯವಾಗುತ್ತದೆ. ಮುಂದೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಈ ಮೊತ್ತವನ್ನು ಎಲ್ಲಿ ಬೇಕಾದರೂ ಬಳಸಬಹುದು.
₹100 ರೂ. ಉಳಿಸಿ ₹2,14,097 ಗಳಿಸೋ ಲೆಕ್ಕಚಾರ ಹೀಗಿದೆ
ನೀವು ಪ್ರತಿದಿನ 100 ರೂ.ಗಳನ್ನು ಉಳಿಸುತ್ತೀರಿ ಅಂದುಕೊಳ್ಳೋಣ.. ಇದನ್ನು ಒಂದು ತಿಂಗಳಿಗೆ ಲೆಕ್ಕಚಾರ ಹಾಕಿದ್ರೆ 3,000 ರೂ. ಉಳಿಸುತ್ತೀರಿ. ಈ ರೀತಿಯಾಗಿ, ನೀವು ಅಂಚೆ ಕಚೇರಿಯ ಆರ್‌ಡಿ ಯೋಜನೆಯಲ್ಲಿ ಪ್ರತಿ ತಿಂಗಳು 3,000 ರೂ. ಹಾಕುತ್ತಾ ಹೋದ್ರೆ ನೀವು ವಾರ್ಷಿಕವಾಗಿ ರೂ 36,000 ಠೇವಣಿ ಮಾಡುತ್ತೀರಿ. ಇದೇ ರೀತಿಯಾಗಿ, ನೀವು 5 ವರ್ಷಗಳಲ್ಲಿ ಒಟ್ಟು 1,80,000 ರೂ. ಉಳಿಸುತ್ತೀರಿ. ಪ್ರಸ್ತುತ ಈ ಯೋಜನೆಗೆ 6.7% ಬಡ್ಡಿ ನೀಡಲಾಗುತ್ತಿದೆ. ಇದರ ಪ್ರಕಾರ, ನೀವು 5 ವರ್ಷಗಳಲ್ಲಿ 34,097 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಹಣವನ್ನು ಪಡೆಯುತ್ತೀರಿ. ಆರ್ಡ್.ಡಿ ಮೆಚ್ಯೂರಿಟಿಯಾದಾಗ ನೀವು 2,14,097 ರೂಪಾಯಿಗಳನ್ನು ಪಡೆಯುತ್ತೀರಿ. ಈ ರೀತಿಯಾಗಿ, ಸಣ್ಣ ಉಳಿತಾಯದಿಂದ ಆರಂಭಿಸಿ ನೀವು ಉತ್ತಮ ಮೊತ್ತವನ್ನು ಪಡೆಯುತ್ತೀರಿ. ನಿಮಗೆ ಅರಿಯದೇ ನೀವು ದೊಡ್ಡ ಮೊತ್ತದ ಉಳಿತಾಯಕ್ಕೆ ಅಡಿಪಾಯ ಹಾಕಿರುತ್ತೀರಿ. ಪೋಸ್ಟ್ ಆಫೀಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಆರ್‌ಡಿ ಖಾತೆಯನ್ನು ಅಂಚೆ ಕಚೇರಿಯಲ್ಲಿ 100 ರೂಪಾಯಿಗಳೊಂದಿಗೆ ತೆರೆಯಬಹುದುದಾಗಿದೆ. ಗರಿಷ್ಟ ಹೂಡಿಕೆಗೆ ಮಿತಿಯಿಲ್ಲದ ಕಾರಣ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.
ಒಂದು ವೇಳೆ ಮೆಚ್ಯೂರಿಟಿಯಾಗಿ 5 ವರ್ಷಗಳ ನಂತರವೂ RDಯ ಪ್ರಯೋಜನವನ್ನು ಮತ್ತಷ್ಟು ಪಡೆಯಲು ಬಯಸಿದ್ರೆ ನೀವು ಅದನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಬಹುದು. ವಿಸ್ತೃತ ಖಾತೆಯಲ್ಲಿ, ಖಾತೆಯನ್ನು ತೆರೆಯುವ ಸಮಯದಲ್ಲಿ ಅನ್ವಯಿಸುವ ಅದೇ ಬಡ್ಡಿಯು ಲಭ್ಯವಿರುತ್ತದೆ. ವಿಸ್ತೃತ ಖಾತೆಯನ್ನು ವಿಸ್ತರಣೆಯ ನಂತರ ಯಾವುದೇ ಸಮಯದಲ್ಲಿ ಮುಚ್ಚಬಹುದು. ಇದರಲ್ಲಿ, ಆರ್‌ಡಿ ಖಾತೆಯ ಬಡ್ಡಿ ದರವು ಪೂರ್ಣ ವರ್ಷಗಳಿಗೆ ಅನ್ವಯಿಸುತ್ತದೆ.
ಒಂದು ವೇಳೆ ಒಂದು ವರ್ಷಕ್ಕಿಂತ ಕಡಿಮೆ ವರ್ಷವಾಗಿದ್ರೆ ಉಳಿತಾಯ ಖಾತೆಯ ಪ್ರಕಾರ ಬಡ್ಡಿಯನ್ನು ನೀಡಲಾಗುತ್ತದೆ. ಉದಾಹರಣೆಗೆ, ನೀವು 2 ವರ್ಷ 6 ತಿಂಗಳ ನಂತರ ವಿಸ್ತೃತ ಖಾತೆಯನ್ನು ಮುಚ್ಚಿದರೆ, ನಂತರ 2 ವರ್ಷಗಳಲ್ಲಿ ನೀವು ಶೇಕಡಾ 6.7 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಆದರೆ ಉಳಿದ 6 ತಿಂಗಳಿಗೆ ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಪ್ರಕಾರ ಬಡ್ಡಿಯನ್ನು ಪಡೆಯುತ್ತೀರಿ ಅಂದರ 4% ರಿಂದ ನೀವು ಬಡ್ಡಿಯನ್ನು ಪಡೆಯುತ್ತೀರಿ.
ಅವಧಿಯ ಮೊದಲು ಮುಚ್ಚಿದ್ರೆ?
ನಿಮಗೆ ತೀರಾ ಅಗತ್ಯವಿದ್ದರೆ ಪೋಸ್ಟ್ ಆಫೀಸ್ ಆರ್‌ಡಿಯನ್ನು 5 ವರ್ಷಗಳ ಮೊದಲು ಮುಚ್ಚಬಹುದು. ಖಾತೆ ತೆರೆದ ದಿನಾಂಕದಿಂದ ಮೂರು ವರ್ಷಗಳ ನಂತರ ನೀವು ಈ ಸೌಲಭ್ಯವನ್ನು ಪಡೆಯುತ್ತೀರಿ. ಆದರೆ ನೀವು ಮೆಚ್ಯೂರಿಟಿ ಅವಧಿಗೆ ಒಂದು ದಿನ ಮುಂಚಿತವಾಗಿ ಖಾತೆಯನ್ನು ಮುಚ್ಚಿದರೆ, ನಿಮಗೆ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಸಮಾನವಾದ ಬಡ್ಡಿಯನ್ನು ನೀಡಲಾಗುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.


Click it and Unblock the Notifications