ನಿಮ್ಮ ನಿವೃತ್ತಿಗಾಗಿ ಹಣ ಉಳಿತಾಯ ಮಾಡಬೇಕಾ? ಹೇಗೆ ಆರಂಭಿಸಬೇಕು ಇಲ್ಲಿ ತಿಳಿಯಿರಿ

ಬಹಳ ಜನರು ತಮ್ಮ ನಿವೃತ್ತಿಯ ನಂತರ ಹಣವನ್ನ ಕೂಡಿಡಲು ಬಯಸುತ್ತಾರೆ. ಅಲ್ಲದೆ ನಿವೃತ್ತಿಯ ನಂತರ ಸ್ವಾಲಂಬಿಯಾಗಿ ಜೀವನ ನಡೆಸಲು ಉಳಿತಾಯದ ಅವಶ್ಯಕತೆ ಹೆಚ್ಚಿರುತ್ತದೆ. ನೀವು ನಿವೃತ್ತಿ ಹೊಂದಿದರೂ ಕೂಡ ನಿಮ್ಮ ವೆಚ್ಚಗಳಿಗೆ ನಿವೃತ್ತಿಯಾಗುವುದಿಲ್ಲ. ನಿಮ್ಮ ವೆಚ್ಚಗಳು ಮತ್ತಷ್ಟು ಹೆಚ್ಚಾಗುತ್ತಲೇ ಹೋಗುತ್ತವೆ. ನಿವೃತ್ತಿಯ ನಂತರ ನೆಮ್ಮದಿಯ ಜೀವನವನ್ನ ನಡೆಸಲು ನಮಗೆ ಹಣದ ಅಗತ್ಯ ಹೆಚ್ಚಿರುತ್ತದೆ. ನಿವೃತ್ತಿಯ ನಂತರ ಯಾವುದೇ ಸ್ಥಿರ ಆದಾಯವಿಲ್ಲದೇ ಹಣಕಾಸು ನಿರ್ವಹಣೆ ಮಾಡುವುದು ಕಷ್ಟವಾಗಬಹುದು.

ಹೀಗಾಗಿ ನೀವು ನಿಮ್ಮ ನಿವೃತ್ತಿಗಾಗಿ ಈಗಲೇ ಹಣವನ್ನ ಉಳಿತಾಯ ಮಾಡಲು ಆರಂಭ ಮಾಡುವುದು ಉತ್ತಮ. ಆದ್ರೆ ಹೇಗೆ ಆರಂಭ ಮಾಡುವುದು ಎಂಬ ಗೊಂದಲ ನಮಗೆ ಹೆಚ್ಚಿರುತ್ತದೆ. ಅದಕ್ಕಾಗಿ ಇಲ್ಲಿ ತಿಳಿಯಯಿರಿ.

ನಿವೃತ್ತಿಗಾಗಿ ಹಣ ಉಳಿತಾಯ ಮಾಡಬೇಕಾ? ಹೇಗೆ ತಿಳಿಯಿರಿ

ಅನೇಕ ಜನರು ಈಗಾಗಲೇ ನಿವೃತ್ತಿಗಾಗಿ ಹಣವನ್ನ್ ಕೂಡಿಡಲು ಆರಂಭ ಮಾಡುತ್ತಿದ್ದಾರೆ. ಜೊತೆಗೆ ನಿವೃತ್ತಿಗಾಗಿ ತಯಾರಿಗಳನ್ನ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ಬಜಾರ್ ಮನಿಮೂಡ್ 2025ರ ಸಮೀಕ್ಷೆಯ ವರದಿ ಪ್ರಕಾರ ಈಗಾಗಲೇ ಶೇಕಡಾ 58 ರಷ್ಟು ಜನರು ನಿವೃತ್ತಿ ಕಾರ್ಪಸ್‌ ಅನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲದೆ ಇದು ಉತ್ತಮ ಸಭ್ಯಸವನ್ನ ಸೂಚಿಸುತ್ತದೆ. ಹಾಗೆ ಭಾರತದಲ್ಲಿ ಮೂರನೇ ಎರಡು ಭಾಗದಷ್ಟು ಜನರು ಸಧ್ಯದಲ್ಲೇ ನಿವೃತ್ತಯನ್ನ ಹೊಂದಲಿದ್ದಾರೆ ಎಂದು ವರದಿ ತಿಳಿಸಿದೆ.

ಸಮಯ ಮತ್ತು ಹಣ ಮುಖ್ಯವಾಗುತ್ತದೆ

ಈ ನಿವೃತ್ತಿ ಯೋಜನೆ ಎರಡು ಪ್ರಮುಖ ಅಂಶಗಳ ಮೇಲೆ ನಿಂತಿದೆ. ಒಂದು ಸಮಯ ಮತ್ತೊಂದು ಹಣ. ನಿವೃತ್ತಯ ವೇಳೆ ಉತ್ತಮ ಆಯೋಗ್ಯದ ಜೊತೆಜೊತೆಗೆ ಉತ್ತಮ ಆರ್ಥಿಕ ಸ್ಥಿರತೆಯನ್ನ ಕೂಡ ಕಾಪಾಡಿಕೊಳ್ಳಬೇಕು. ನಿವೃತ್ತಿಯ ಸಮಯದಲ್ಲಿ ನೆಮ್ಮದಿಯ ಜೀವನ ನಡೆಸಲು ನೀವು ನಿಮ್ಮ ಹಣವನ್ನ ಉಳಿತಾಯ ಮಾಡಲು ಬೇಗನೇ ಆರಂಭಿಸುವುದು ಮುಖ್ಯ.

ನಿಮ್ಮ ದಿನನಿತ್ಯದ ಜೀವನದಲ್ಲಿ ಸಾಕಷ್ಟು ತೊಂದರೆಗಳು ಎದುರಾಗಬಹುದು. ಅಲ್ಲದೆ ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಬಹುದು. ಇದರಿಂದಾಗಿ ನೀವು ಹಣದುಬ್ಬರಕ್ಕೆ ತುತ್ತಾಗಬಹುದು. ಅಂತಹ ಸಮಯದಲ್ಲಿ ಜನರು ಸಾಲದ ಮೊರೆ ಹೋಗಬಹುದು. ಅಂತಹ ಪರಿಸ್ಥಿತಿಗಳನ್ನ ತಪ್ಪಿಸಲು ಸುರಕ್ಷಿತ ಭವಿಷ್ಯಕ್ಕಾಗಿ ಸರಿಯಾದ ಕ್ರಮಗಳನ್ನ ತೆಗೆದುಕೊಳ್ಳುವುದು ಬಹಳ ಮುಖ್ಯ.

ಹೆಚ್ಚಿನ ಪ್ರಯೋಜನಗಳಿಗಾಗಿ ಬೇಗ ಆರಂಭಿಸಿ

ನೀವು ನಿಮ್ಮ 20 ಮತ್ತು 30ರ ದಶಕದಲ್ಲಿ ನಿಮ್ಮ ನಿವೃತ್ತಿ ದೂರವಿದೆ ಎನ್ನಿಸಬಹುದು ಆದ್ರೂ ಕೂಡ ನೀವು ಆವಾಗ್ಲೆ ಆರಂಭ ಮಾಡುವುದು ಉತ್ತಮ. ಕೆಲವರು ನಿವೃತ್ತಿ ಉಳಿತಾಯವನ್ನ ವಿಳಂಬಗೊಳಿಸುತ್ತಾರೆ. ಆದ್ರೆ ನೀವು ಎಷ್ಟು ಬೇಗ ಆರಂಭ ಮಡುತ್ತೀರೋ ಅಷ್ಟು ಪ್ರಯೋಜನಗಳನ್ನ ಗಳಿಸಬಹುದು. ಬೇಗ ಆರಂಭ ಮಾಡುವ ಮೂಲಕ ನೀವು ಹೆಚ್ಚಿನ ಆದಾಯವನ್ನ ಕೂಡ ಗಳಿಸಬಹುದು.

ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಿ

ನೀವು ನಿಮ್ಮ ನಿವೃತ್ತಿ ಹಣವನ್ನ ಉಳಿತಾಯ ಮಾಡುವ ಮೊದಲು ನಿಮ್ಮ ನಿವೃತ್ತಿಯ ಅಗತ್ಯಗಳ ಬಗ್ಗೆ ತಿಳಿಯಿರಿ. ಉತ್ತಮ ಜೀವನಶೈಲಿಗಾಗಿ ಬೇಕಾಗುವ ಕಾರ್ಪಸ್‌ ಅನ್ನು ಅಂದಾಜು ಮಾಡಿ. ನಂತರ ಹಣವನ್ನ ಉಳಿತಾಯ ಮಾಡಲು ಆರಂಭಿಸಿ. ವೈದ್ಯಕೀಯ ವೆಚ್ಚಗಳು, ಸಾಲಗಳು, ಹಣದುಬ್ಬರ ಸೇರಿದಂತೆ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ನಿವೃತ್ತಿಯ ಅಗತ್ಯಗಳನ್ನ ಅಂದಾಜಿಸಬೇಕು. ನಿಮಗೆ ಈಗ 30 ವರ್ಷ ಆಗಿದ್ದರೆ ನೀವು ಈಗ 50,000ಗಳನ್ನ ಖರ್ಚು ಮಾಡುತ್ತಿದ್ದರೆ, ನಿಮಗೆ 60 ವರ್ಷಗಳಾದ ಮೇಲೆ ಆ ಖರ್ಚು 2.22 ಲಕ್ಷಕ್ಕೆ ಏರಿಕೆಯಾಗಬಹುದು. ಅಲ್ಲದೆ ನಿಮ್ಮ ನಿವೃತ್ತಿಯ ನಂತರ ನಿಮ್ಮ ಅಗತ್ಯಗಳು ಹೆಚ್ಚಾಗಬಹುದು. ಹೀಗಾಗಿ ಸರಿಯಾಗಿ ಅಂದಾಜಿಸಿ ಉಳಿತಾಯವನ್ನ ಮಾಡಬೇಕು.

ಸರಿಯಾದ ಹೂಡಿಕೆ ಆಯ್ಕೆಯನ್ನ ಆರಿಸಿ

ನಿವೃತ್ತಿಗಾಗಿ ನಿಧಿಯನ್ನ ನಿರ್ಮಿಸುವಾಗ ಹೂಡಿಕೆಗಳನ್ನ ಆಯ್ಕೆ ಮಾಡುವುದು ಉತ್ತಮ ಅದರಲ್ಲೂ ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಭವಿಷ್ಯ ನಿಧಿ(PF): ಇದು ವಿಶ್ವಾಸಾರ್ಹ ಹೂಡಿಕೆ ಯೋಜನೆ ಇದಾಗಿದೆ. ಅಲ್ಲದೆ ದಿರ್ಘಕಾಲದ ಉಳಿತಾಯವನ್ನ ನೀಡುತ್ತದೆ.

ಇಕ್ವಿಟಿ ಹೂಡಿಕೆಗಳು (ಸ್ಟಾಕ್‌ಗಳು ಅಥವಾ SIPಗಳು): ಇದು ಕೂಡ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಇದು ಸಮಯಕಳೆದಂತೆ ಉತ್ತಮ ಆದಾಯವನ್ನ ನೀಡುತ್ತದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಇದು ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ತೆರಿಗೆ ಪ್ರಯೋಜನಗಳ ಜೊತೆಗೆ ಸರ್ಕಾರ ಬೆಂಬಲಿತ ಆಯ್ಕೆ ಇದಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ (PPF): ಸುರಕ್ಷಿತ ಹೂಡಿಕೆ ಆಯ್ಕೆ ಇದಾಗಿದೆ. ನಿವೃತ್ತಿಗಾಗಿ ಉಳಿತಾಯ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ.

ನೀವು ಹೂಡಿಕೆ ಮಾಡುವ ಮೂನ್ನ ತಿಳಿದ ತಜ್ಞರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಹಣಕಾಸಿನ ಗುರಿಗಳಿಗೆ ತಕ್ಕಂತೆ ನಿಮಗೆ ಹೂಡಿಕೆ ಮಾಡಲು ಸಹಾಯವಾಗುತ್ತದೆ.

ನಿಯಮಿತ ಮತ್ತು ಸ್ಥಿರವಾದ ಹೂಡಿಕೆ ಯೋಜನೆಗಳನ್ನ ಆಯ್ಕೆ ಮಾಡಿಕೊಂಡು ಹೂಡಿಕೆಯನ್ನ ಆರಂಭಿಸಬೇಕು. ಇದು ನಿಮಗೆ ಸಮಯ ಕಳೆದಂತೆ ಗಣನೀಯ ಕಾರ್ಪಸ್‌ ಅನ್ನು ಗಳಿಸಲು ಸಹಾಯ ಮಾಡುತ್ತದೆ. ಉತ್ತಮ ಯೋಜನೆಯೊಂದಿಗೆ ನೀವು ನಿಮ್ಮ ನಿವೃತ್ತಿಗಾಗಿ ಹಣವನ್ನ ಕೂಡಿಡುವ ಮೂಲಕ ನೀವು ನಿವೃತ್ತಿ ಸಮಯದಲ್ಲಿ ನೆಮ್ಮದಿಯ ಜೀವನವನ್ನ ಕಟ್ಟಿಕೊಳ್ಳಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+