ಆದಾಯ ಸ್ವಲ್ಪವಾದ್ರೂ, ಉಳಿತಾಯ (Savings) ಮುಖ್ಯ ಅನ್ನೋದನ್ನು ಅನೇಕರು ಹೇಳುತ್ತಾರೆ. ಇಂದು ಮಾಡಿದ ಉಳಿತಾಯ, ಮುಂದೊಂದು ದಿನ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ. ಉಳಿತಾಯ ಮಾಡುವ ಅಭ್ಯಾಸ ತುಂಬಾನೇ ಒಳ್ಳೆಯದು. ವಿಶ್ವದ ಅತ್ಯಂತ ಶ್ರೀಮಂತರೂ ಸಹ ಅದೆಷ್ಟೋ ಯೋಜನೆಗಳಲ್ಲಿ, ಚಿನ್ನ, ಬೆಳ್ಳಿ ಮೇಲೆ ಹೂಡಿಕೆ (Investment) ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇಂದಿನ ಪ್ರತಿ ಸಣ್ಣ ಉಳಿತಾಯವು ನಾಳೆಯ ದೊಡ್ಡ ಆರ್ಥಿಕ ಸಹಾಯದ ಸಣ್ಣ ಮೆಟ್ಟಿಲು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಆದ್ದರಿಂದ ನಿಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು, ಹಣ ಉಳಿತಾಯ ಮಾಡಲು ಸಿಂಪಲ್ ಟಿಪ್ಸ್ ಇಲ್ಲಿದೆ. ಹೆಚ್ಚಿನ ಹಣಕಾಸು ತಜ್ಞರು ಶಿಫಾರಸು ಮಾಡುವ ಕೆಲವು ಹಣ ಉಳಿತಾಯ ಮಾಡುವ ಟ್ರಿಕ್ಸ್‌ಗಳಿವು:
ಅನಗತ್ಯ ವಸ್ತುಗಳ ಮೇಲೆ ಖರ್ಚು ಮಾಡುವುದನ್ನು ನಿಲ್ಲಿಸಿ:
ಅಗತ್ಯ ಮತ್ತು ಆಸೆ ನಡುವಿನ ವ್ಯತ್ಯಾಸವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಅದೇ ಕಾರಣದಿಂದ ಅಗತ್ಯವಿದ್ದಷ್ಟು ಮಾತ್ರ ಖರ್ಚು ಮಾಡಬೇಕು. ಆಹಾರ, ಔಷಧಗಳು, ಬಟ್ಟೆಗಳು ಮತ್ತು ಮನೆಗೆ ಬೇಕಾದ ಅಗತ್ಯತೆಗಳಿಗೆ ಮಾತ್ರ ಖರ್ಚು ಮಾಡಬೇಕು. ಐಷಾರಾಮಿ ಕಾರುಗಳು ಅಥವಾ ಪ್ರೀಮಿಯಂ ಗ್ಯಾಜೆಟ್‌ಗಳಂತಹ ಆಸೆಗಳು ಕ್ಷಣಿಕ. ಅದರಿಂದ ಹಣವ್ಯಯವೇ ಹೊರತು ಲಾಭಗಳಿಲ್ಲ. ಅದನ್ನು ಮೊದಲು ಅರ್ಥಮಾಡಿಕೊಳ್ಳಿ..
50-30-20 ನಿಯಮವನ್ನು ಫಾಲೋ ಮಾಡಿ: ಹಣ ಉಳಿತಾಯದಲ್ಲಿ ಈ ನಿಯಮ ಬಹಳ ಮುಖ್ಯ. ನಿಮ್ಮ ಆದಾಯವನ್ನು 50% ಅಗತ್ಯತೆಗಳಿಗೆ, 30% ಆಸೆಗಳಿಗೆ ಮತ್ತು 20% ಉಳಿತಾಯಕ್ಕ್ಕಾಗಿ ಮೀಸಲಿಡಿ. ನೀವು ಯುವಕರಾಗಿದ್ದು, ಕಡಿಮೆ ಆರ್ಥಿಕ ಜವಾಬ್ದಾರಿಗಳನ್ನು ಹೊಂದಿದ್ದರೆ, ನಿಮ್ಮ ಉಳಿತಾಯದ ಭಾಗವನ್ನು 40-50% ಕ್ಕೆ ಹೆಚ್ಚಿಸಿದರೆ ತುಂಬಾನೇ ಒಳ್ಳೆಯದು.
ದಿನಸಿ ಖರ್ಚುಗಳನ್ನು ಕಡಿಮೆ ಮಾಡಿ: ಕೈಗಾರಿಕಾ ವರದಿಯ ಪ್ರಕಾರ, ಸರಾಸರಿ ಭಾರತೀಯ ಕುಟುಂಬವು 2025 ರ ವೇಳೆಗೆ ತನ್ನ ಬಜೆಟ್‌ನ 35.3% ಅನ್ನು ಆಹಾರಕ್ಕಾಗಿ ಖರ್ಚು ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಮ್ಮ ಮಾಸಿಕ ದಿನಸಿ ಶಾಪಿಂಗ್‌ನಲ್ಲಿ ಆದಷ್ಟು ಉಳಿಸಲು ಪ್ರಯತ್ನಿಸಿ. ಇದು ದೊಡ್ಡ ಲಾಭವನ್ನು ತಂದುಕೊಡಲಿದೆ. ಉದಾಹರಣೆಗೆ, ಪ್ಯಾಕ್ ಮಾಡಿದ ತಿಂಡಿಗಳು ಅಥವಾ ಅನಗತ್ಯ ಖರೀದಿಗಳನ್ನು ಕಡಿಮೆ ಮಾಡುವುದರಿಂದ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರದೆ ಪ್ರತಿ ತಿಂಗಳು ಹೆಚ್ಚುವರಿ ಉಳಿತಾಯ ಮಾಡಬಹುದು.
ಮನೆ ಮತ್ತು ಯುಟಿಲಿಟಿ ಬಿಲ್‌ಗಳಲ್ಲಿ ಉಳಿತಾಯ ಮಾಡಿ: ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಉಳಿತಾಯವನ್ನು ನಿಮ್ಮ ಲೈಫ್‌ಸ್ಟೈಲ್‌ನಲ್ಲೇ ಅಭ್ಯಾಸ ಮಾಡಿಕೊಳ್ಳಬಹುದು. ನಿಮ್ಮ ವಿದ್ಯುತ್ ಬಿಲ್‌ನಿಂದ, ಹಿಡಿದು ಹಲವು ಬಿಲ್‌ಗಳಲ್ಲಿ ಉಳಿತಾಯ ಮಾಡಬಹುದು. ಅದರಲ್ಲೂ ಅನಗತ್ಯ ಫ್ಯಾನ್‌ಗಳು, ಲೈಟ್‌ಗು ಮತ್ತು ಎಸಿಗಳನ್ನು ಆಫ್ ಮಾಡಿ.
ಕೇವಲ ಖರ್ಚುಗಳನ್ನು ಕಡಿಮೆ ಮಾಡಿ ಹಣ ಉಳಿಸಿದರೆ ಸಾಲಲ್ಲ, ಆ ಉಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದೇವೆ ಎಂಬುದು ಕೂಡಾ ಇಲ್ಲಿ ಮುಖ್ಯವಾಗಿರುತ್ತದೆ. ಅದಕ್ಕಾಗಿ ಅವುಗಳನ್ನು ಎಸ್‌ಐಪಿ ಅಥವಾ ಎಲ್ಲಾದ್ರೂ ಹೂಡಿಕೆ ಯೋಜನೆಗಳಲ್ಲಿ ಇನ್ವೆಸ್ಟ್ ಮಾಡಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications