ಮಕ್ಕಳಿಗಾಗಿ, ಉದ್ಯೋಗಿಗಳಿಗಾಗಿ, ಹಿರಿಯ ನಾಗರಿಕರಿಗಾಗಿ ಪೋಸ್ಟ್ ಆಫೀಸ್, ಬ್ಯಾಂಕ್‌ಗಳಲ್ಲಿ (Post Office, Bank) ಹಲವಾರು ಹೂಡಿಕೆ ಯೋಜನೆಗಳಿವೆ. ಮಕ್ಕಳಿಗಾಗಿ ಸುಭದ್ರ ಭವಿಷ್ಯವನ್ನು ರೂಪಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯ ಎಂದು ಭಾವಿಸುತ್ತಾರೆ. ಅದೇ ಕಾರಣದಿಂದ ಮಕ್ಕಳ ಭವಿಷ್ಯಕ್ಕಾಗಿ ಅದೆಷ್ಟೋ ಮಂದಿ ಹೂಡಿಕೆ (Investment) ಆರಂಭಿಸುತ್ತಾರೆ. ಅದು ಶಿಕ್ಷಣ, ಮದುವೆಯಂತಹ ಸಂದರ್ಭದಲ್ಲಿ ಆರ್ಥಿಕ ತೊಂದರೆಯನ್ನು ತಪ್ಪಿಸಿ, ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ, ಆರ್ಥಿಕ ಭದ್ರತೆಯ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಲಾಗುತ್ತದೆ. ಅಲ್ಲದೇ ಕೇಂದ್ರ, ರಾಜ್ಯ ಸರ್ಕಾರಗಳು ಅದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಕೂಡಾ ಒಂದು.
ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂದರೇನು?
ಕೇಂದ್ರ ಸರ್ಕಾರ 2015 ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಪ್ರಯೋಜನಕ್ಕಾಗಿ ಪರಿಚಯಿಸಲಾದ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆಯಾಗಿದೆ. ಪೋಷಕರು ತಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹುಟ್ಟಿನಿಂದ 10 ವರ್ಷ ತುಂಬುವವರೆಗೆ ಖಾತೆಯನ್ನು ತೆರೆಯಬಹುದು. ಇದು ಮಗುವಿನ ಶಿಕ್ಷಣ ಮತ್ತು ಮದುವೆ ವೆಚ್ಚಗಳಿಗಾಗಿ ಕುಟುಂಬಗಳು ಆರ್ಥಿಕ ನಿಧಿಯನ್ನು ನಿರ್ಮಿಸುವುದಾಗಿದೆ.
ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನಿಯಮಿತ ಠೇವಣಿಗಳನ್ನು ಖಾತೆಗೆ ಹಾಕಬಹುದು. ಇದು ಹುಡುಗಿಗೆ 21 ವರ್ಷ ತುಂಬಿದಾಗ ಮೆಚೂರ್ ಆಗುತ್ತದೆ. ಇನ್ನು ಈ ಯೋಜನೆಯ ಬಡ್ಡಿದರ ಸಾಮಾನ್ಯವಾಗಿ, ಇತರ ಬ್ಯಾಂಕ್ ಎಫ್‌ಡಿಗಳಿಗೆ ಹೋಲಿಸಿದ್ರೆ ಹೆಚ್ಚು. ಅಲ್ಲದೇ ಈ ಯೋಜನೆಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಹೊಂದಿದೆ.
ಬಡ್ಡಿ ದರ ಮತ್ತು ಲಾಭ:
ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತದೆ. ಈ ದರವನ್ನು ಪ್ರತೀ ತ್ರೈಮಾಸಿಕದಲ್ಲಿ ಪರಿಶೀಲಿಸಲಾಗುತ್ತದೆ. ಆದರೆ ಕೆಲವು ವರ್ಷಗಳಿಂದ ಇದೇ ಬಡ್ಡಿದರಲ್ಲಿ ಮುಂದುವರೆದಿದೆ. ಹಾಗಿದ್ರೆ ಈ ಯೋಜನೆಯಲ್ಲಿ ಪ್ರತೀ ತಿಂಗಳು ಕೇವಲ 1,000 ರೂ. ಠೇವಣಿ ಮಾಡಿದರೆ 21 ವರ್ಷಗಳ ನಂತರ ಎಷ್ಟು ಮೊತ್ತ ನಿಮಗೆ ಸಿಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಒಟ್ಟು ಠೇವಣಿ ಮಾಡಿದ ಮೊತ್ತ: ತಿಂಗಳಿಗೆ 1 ಸಾವಿರದಂತೆ, ವರ್ಷಕ್ಕೆ 12,000 ರೂಪಾಯಿ.
12,000 x 21 = 2,52,000 ರೂ. ಆಗುತ್ತದೆ.
ಒಟ್ಟು ಬಡ್ಡಿ ಪಡೆಯುವ ಮೊತ್ತ: ಸುಮಾರು 4,18,301 ರೂ.
ಮೆಚ್ಯೂರಿಟಿ ಮೊತ್ತ (21 ವರ್ಷಗಳ ನಂತರ): 6,70,301 ರೂ. ಸಿಗುತ್ತದೆ.
ಅಂದರೆ ಈ ಯೋಜನೆಯಲ್ಲಿ ನೀವು ಕೇವಲ ನೀವು 21 ವರ್ಷಗಳ ಕಾಲ, ಹೆಣ್ಣು ಮಗುವಿನ ಹೆಸರಿನಲ್ಲಿ 2.52 ಲಕ್ಷ ಹಾಕಿದರೆ, ಸರ್ಕಾರದ ಬಡ್ಡಿ ದರದ ಪ್ರಕಾರ 6.70 ಲಕ್ಷ ರೂ. ನಿಮ್ಮ ಖಾತೆ ಸೇರುತ್ತದೆ. ವಿಶೇಷವೆಂದರೆ ಇದರಲ್ಲಿ ಬಡ್ಡಿಯೇ 4.18 ಲಕ್ಷ ರೂ. ಆಗಿರುತ್ತದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications