ಮಕ್ಕಳಿಗಾಗಿ, ಯುವಕರಿಗಾಗಿ, ಹಿರಿಯ ನಾಗರಿಕರಿಗಾಗಿ ಪೋಸ್ಟ್ ಆಫೀಸ್ (Post Office), ಬ್ಯಾಂಕ್‌ಗಳಲ್ಲಿ ಹಲವಾರು ಹೂಡಿಕೆ ಯೋಜನೆಗಳಿವೆ. ಈ ಯೋಜನೆಗಳು ಹೂಡಿಕೆ ಜೊತೆಗೆ, ಲಾಭವನ್ನೂ ಹೆಚ್ಚು ನೀಡುತ್ತದೆ. ಆದ್ರೆ ಸರಿಯಾದ ಯೋಜನೆಗಳನ್ನು ಆಯ್ಕೆ ಮಾಡಿದ್ರೆ, ವರ್ಷಗಳ ನಂತರ ಉತ್ತಮ ಆದಾಯ ಕೂತಲ್ಲೇ ಗಳಿಸಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ನಿವೃತ್ತಿ ಹೊಂದಿದವರಿಗೆ ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ.

ಹಿರಿಯ ನಾಗರಿಕರಿಗಾಗಿ ಪೋಸ್ಟ್ ಆಫೀಸ್‌ನಲ್ಲಿ ಜಾರಿಗೆ ತಂದಿರುವ ಈ ಯೋಜನೆ, ಸರ್ಕಾರಿ ಸ್ವಾಮ್ಯದ ಅಡಿಯಲ್ಲಿ ಬರುತ್ತದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ವಾರ್ಷಿಕವಾಗಿ 8.2% ಬಡ್ಡಿ ದರವನ್ನು ಪಡೆಯಬಹುದು. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು, ತ್ರೈಮಾಸಿಕ ಪಾವತಿಗಳು ಮತ್ತು ಮಾಸಿಕ 20,000 ರೂ.ಗಿಂತ ಹೆಚ್ಚು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಉತ್ತಮ ಆದಾಯ, ಬೆಸ್ಟ್ ಯೋಜನೆ!
ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಉತ್ತಮ ಆದಾಯ ನೀಡುವ ಸರ್ಕಾರಿ ಯೋಜನೆಯಾಗಿ ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ (SCSS) ಬಹಳ ಉತ್ತಮವೆಂದು ಗುರುತಿಸಿಕೊಂಡಿದೆ. ಈ ಯೋಜನೆಯಲ್ಲಿ ಪ್ರಸ್ತುತ 8.2% ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತದೆ. ಪ್ರತೀ ಮೂರು ತಿಂಗಳಿಗೊಂಮೆ ಬಡ್ಡಿ ಜಮಾ ಮಾಡಲಾಗುತ್ತದೆ. ಇನ್ನು ಬ್ಯಾಂಕ್ ಎಫ್‌ಡಿಗಳಿಗೆ ಹೋಲಿಸಿದ್ರೆ, ಈ ಯೋಜನೆಯಲ್ಲಿ ಉತ್ತಮ ಬಡ್ಡಿ ಗಳಿಸಬಹುದು ಎಂದು ಹೇಳಲಾಗುತ್ತದೆ.
ಯೋಜನೆಯ ವಿವರ:
- ಬಡ್ಡಿ ದರ: 8.2% ವಾರ್ಷಿಕ.
- ಗರಿಷ್ಠ ಟೇವಣಿ ಮೊತ್ತ: 30 ಲಕ್ಷ ರೂ.
- ಕನಿಷ್ಠ ಠೇವಣಿ: 1000 ರೂ.
- ಅವಧಿ: 5 ವರ್ಷಗಳು (3 ವರ್ಷ ವಿಸ್ತರಿಸುವ ಸೌಲಭ್ಯ)
- ಅರ್ಹತೆ: 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ
ಅಷ್ಟೇ ಅಲ್ಲದೇ ಸ್ವಯಂ ನಿವೃತ್ತಿ ಯೋಜನೆ (VRS) ಅಥವಾ ವಿಶೇಷ VRS ಆಯ್ಕೆ ಮಾಡಿಕೊಂಡ 55 ರಿಂದ 60 ವರ್ಷದೊಳಗಿನ ನಿವೃತ್ತ ವ್ಯಕ್ತಿಗಳು ಸಹ ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ.
20,000 ತಿಂಗಳ ಆದಾಯ ಹೀಗೆ ಗಳಿಸಿ!
SCSS ಮೂಲಕ ತಿಂಗಳಿಗೆ 20,000 ರೂ.ಗಿಂತ ಹೆಚ್ಚು ಆದಾಯ ಗಳಿಸಬಹುದು. ಅದಕ್ಕಾಗಿ ನೀವು ಸರಿಯಾದ ಹೂಡಿಕೆ ಮೊತ್ತವನ್ನು ನಿಗದಿಪಡಿಸಬೇಕು. ನೀವು ನಿವೃತ್ತಿಯ ಸಂದರ್ಭದಲ್ಲಿ ಉತ್ತಮ ಹಣ ಹೊಂದಿದ್ದರೆ, ಅಂಚೆ ಕಚೇರಿ ಅಥವಾ ಬ್ಯಾಂಕಿನಲ್ಲಿ SCSS ಖಾತೆಯನ್ನು ತೆರೆದು ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಬಹುದು.
ವಾರ್ಷಿಕ 8.2% ಬಡ್ಡಿ ದರದಲ್ಲಿ, 30 ಲಕ್ಷ ರೂ. ಹೂಡಿಕೆಯು ವಾರ್ಷಿಕ 2.46 ಲಕ್ಷ ರೂ. ಬಡ್ಡಿಯನ್ನು ಗಳಿಸುತ್ತದೆ. ಇದು ಮಾಸಿಕವಾಗಿ ನಿಮಗೆ 20,500 ರೂ. ಆದಾಯವನ್ನು ತಂದುಕೊಡುತ್ತದೆ. ಇದು ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಪರಿಣಾಮಕಾರಿ ಮಾರ್ಗವಾಗಿದೆ.
SCSS ನಲ್ಲಿ ಮಾಡಿದ ಹೂಡಿಕೆಗಳು 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಗಳಿಗೂ ಅರ್ಹವಾಗಿರುತ್ತದೆ. ಹೂಡಿಕೆದಾರರು SCSS ಠೇವಣಿಗಳ ಮೇಲೆ 1.5 ಲಕ್ಷ ರೂ. ವರೆಗೆ ಟ್ಯಾಕ್ಸ್ ಕಡಿತವನ್ನು ಕ್ಲೈಮ್ ಮಾಡಬಹುದು.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications